Akshra Mantapa
ಅಕ್ಷರಗಳ ಪೋಣಿಸುವ ನಿಮ್ಮದೇ ಮಂಟಪವಿದು....
ಅತಿ ಬುದ್ಧಿವಂತಿಕೆಯ ಪ್ರಾಣಿ ಎಂದೇ ಗುರುತಿಸಿಕೊಂಡಿರುವ ಆನೆಗಳ ಬಗ್ಗೆ ಎಷ್ಟು ತಿಳಿದುಕೊಂಡರೂ, ಎಷ್ಟೇ ಓದಿದರೂ ಕಡಿಮೆಯೇ. ಅವು ಮನುಷ್ಯರಂತೆ ಭಾವನೆಗಳಿಗೆ ಸ್ಪಂದಿಸುವ ಪ್ರಾಣಿಗಳು. ಇಂಥಾ ಆನೆಗಳ ಬದುಕು, ಜೀವನ ಪ್ರೀತಿ ಮನುಷ್ಯನಿಗಿಂತಲೂ ಅಪಾರವೆಂದೇ ಹೇಳಬಹುದು. ಈ ಆನೆಗಳ ಬಗ್ಗೆ ಸದ್ಯಕ್ಕೆ ಬರೋಬ್ಬರಿ ನಾಲ್ಕು ಪುಸ್ತಕಗಳು ಲೋಕಾರ್ಪಣೆಯಾಗುತ್ತಿವೆ.
ಆನೆಗಳ ಜಗತ್ತನ್ನು ತೆರೆದಿಡುವ ‘ಆನೆ ಲೋಕದ ವಿಸ್ಮಯ’, ದಸರಾ ಅಂಬಾರಿ ಹೊರುವ ಅಭಿಮನ್ಯುವಿನ ಬದುಕಿನ ‘ಅಭಿಮನ್ಯು ದಿ ಗ್ರೇಟ್’, ಕೊಡಗಿನಲ್ಲಿ ನಡೆದ ಆನೆಗಳ ನೈಜ ಪ್ರೇಮ ಪ್ರಕರಣ ಆಧರಿಸಿದ ‘ಕುಶಾ ಕೀ ಕಹಾನಿ’ ಮತ್ತು ಆನೆ ಲೋಕದ ವಿಸ್ಮಯ ಸಾರುವ ಇಂಗ್ಲಿಷ್ ಭಾಷೆಯ ‘ದಿ ಟಾಕಿಂಗ್ ಎಲಿಫೆಂಟ್’ ಪುಸ್ತಕಗಳು ಮುಂದಿನ ತಿಂಗಳ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಅಂದಹಾಗೆ ಇಷ್ಟೂ ಕೃತಿಗಳನ್ನು ಓದುಗರಿಗೆ, ಸಾಹಿತ್ಯ ಲೋಕಕ್ಕೆ ಕೊಟ್ಟವರು ವರದಿಗಾರರಾದ ಐತಿಚಂಡ ರಮೇಶ್ ಉತ್ತಪ್ಪ.
ಈ ನಾಲ್ಕು ಪುಸ್ತಕಗಳಲ್ಲಿ ರೋಚಕತೆಯನ್ನು ಉತ್ತೇಜಿಸುತ್ತಿರುವ ಕುಶಾ ಕೀ ಕಹಾನಿ ಪುಸ್ತಕಕ್ಕೆ ಕನ್ನಡದ ಖ್ಯಾತ ಗೀತಸಾಹಿತಿ, ನಿರ್ದೇಶಕ ಕವಿರಾಜ್ ಮುನ್ನುಡಿ ಬರೆದಿದ್ದಾರೆ. ‘ಗೆಳೆಯ ಎನಲೆ, ಇನಿಯ ಎನಲೆ…’, ‘ಗಗನವೇ ಬಾಗಿ.. ಭುವಿಯನು ಕೇಳಿದ ಹಾಗೆ..’ ಇಂಥಾ ಅತ್ಯದ್ಭುತ ಗೀತೆಗಳನ್ನು ಕೊಟ್ಟ ಕವಿರಾಜ್ ಅವರ ಪ್ರೇಮಗೀತೆಗಳನ್ನು ಆನೆ ಕುಶ ಸಹ ಹಾಡಿ, ಆನಂದಿಸಿ, ಪ್ರೇಮಿಯಾಗಿರುವಂತೆ ಕಂಡುಬರುತ್ತಿದೆ.
ಆನೆ ಕುಶನ ಪ್ರೇಮ್ ಕಹಾನಿ ಯಾವ ಮನುಷ್ಯರ ಪ್ರೀತಿಗೂ ಕಡಿಮೆಯಿಲ್ಲ. ತಾನಿದ್ದ ಸ್ಥಳವನ್ನೇ ಬಿಟ್ಟು ಪ್ರೀತಿಸಿದವಳ ಕೈಹಿಡಿಯಲು ಓಡಿಹೋದ ಕುಶನ ಪ್ರೀತಿಗೆ ಸರಿಸಾಟಿ ಉಂಟೇ..! ಎಲ್ಲಾ ಪ್ರೇಮಿಗಳ ಲೈಫಲ್ಲಿ ಒಬ್ಬ ವಿಲನ್ ಇರುವಂತೆ ಈ ಕುಶನ ಬದುಕಲ್ಲೂ ವಿಲನ್ ಇರುವುದು ಇನ್ನೂ ರೋಚಕ. ಪ್ರಿಯತಮೆಗಾಗಿ ಓಡಿಹೋದ ಕುಶನ ಬಾಳಲ್ಲಿ ಬಂದ ಆ ವಿಲನ್ ಯಾರು..? ಲವ್ ಸ್ಟೋರಿ ಸಕ್ಸಸ್ ಆಗುತ್ತಾ..? ಅಥವಾ ಕುಶ ತನ್ನ ಪ್ರೇಮನಿವೇದನೆ ಹೇಳದೆ ಸೋತುಬಿಟ್ನಾ..? ಏನಾದರೂ ದುರಂತ ಸಂಭವಿಸಿಬಿಡ್ತಾ..? ಈ ಎಲ್ಲಾ ಅತಿರೋಚಕ ನೈಜ ವಿವರ ಕುಶಾ ಕೀ ಕಹಾನಿ ಪುಸ್ತಕದಲ್ಲಿದೆ.
ಯಾವುದೇ ವಯಸ್ಸಿನ ಓದುಗರು ಸಲೀಸಾಗಿ ಓದಬಲ್ಲ ಸರಳ ನಿರೂಪಣೆ ರಮೇಶ್ ಉತ್ತಪ್ಪನವರದ್ದು. ಇಂಥದ್ದೊಂದು ಚೆಂದನೆಯ ಕೃತಿಗೆ ಕವಿರಾಜ್ ಮುನ್ನುಡಿ ಬರೆದಿರುವುದು ನಿಜಕ್ಕೂ ಖುಷಿಯ ವಿಚಾರವಲ್ಲವೇ
ಪ್ರತಿಗಳಿಗಾಗಿ
ಚೇತನ್ ಕಣಬೂರ್
ಅಕ್ಷರ ಮಂಟಪ
#1667, 6ನೇ ಅಡ್ಡರಸ್ತೆ, 6ನೇ ಸಿ ಮುಖ್ಯರಸ್ತೆ,
ಹಂಪಿನಗರ, ಬೆಂಗಳೂರು - 560104
ಮೊಬೈಲ್: 99861 67684
ಪ್ರತಿಗಳಿಗಾಗಿ....
No matter how much you know about the elephant who are identified as the most intelligent animal , how much you read it is less
ಜಂಬೂಸವಾರಿ ಹೊತ್ತ ಅಭಿಮನ್ಯುವಿನ ಕಥೆ ಗೊತ್ತಾ? ಅದರ ಹುಟ್ಟು, ಅನುಭವಗಳು, ನಡೆದು ಬಂದ ದಾರಿ ಎಲ್ಲವನ್ನು ಐತಿಚಂಡ ರಮೇಶ್ ಉತ್ತಪ್ಪ ತಮ್ಮ 'ಅಭಿಮನ್ಯು' ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಲ್ಲಿಯವರೆಗೂ ಆನೆಗಳನ್ನ ಕಂಡ ನೀವು... ಆನೆಗಳ ಕಥೆಯನ್ನು ಒಮ್ಮೆ ಕೇಳಿ...
ಹೊಸ ವಿಚಾರ. ಹೊಸ ಪುಸ್ತಕ..
ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ರಚನೆಯಾದ 'ಪಾಶ್ಚಿಮಾತ್ಯ ರಾಜಕೀಯ ಚಿಂತನೆ ಮತ್ತು ಭಾರತದ ರಾಷ್ಟ್ರೀಯ ಚಳುವಳಿ ಹಾಗೂ ಸಂವಿಧಾನಾತ್ಮಕ ಬೆಳವಣಿಗೆ' ಈ ಪುಸ್ತಕವನ್ನು ರಾಜ್ಯಶಾಸ್ತ್ರ ಅತಿಥಿ ಉಪನ್ಯಾಸಕರಾದ ಶಶಿಕಲಾ ರಾ ನಾಡಗೌಡ ಬರೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ..
ಥ್ಯಾಂಕ್ಯು ನ್ಯೂಸ್ ಫಸ್ಟ್
ಸರಿಸುಮಾರಿ 9 ತಿಂಗಳು ಕಾಯ್ದು ಕಡೆಗೂ "ಅಕ್ಕರೆಯ ಅಪ್ಪುಗೆ" ಪುಸ್ತಕ ಇಂದು ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಧಿಯ ಬಳಿ ಅಭಿಮಾನಿಗಳಿಂದಲೇ ಬಿಡುಗಡೆಯಾಯಿತು.
ಸಪ್ನ ಬುಕ್ ಹೌಸ್, ನವ ಕರ್ನಾಟಕ, ಅಂಕಿತ ಸೇರಿದಂತೆ ಪ್ರಮುಖ ಪುಸ್ತಕ ಮಳಿಗೆಗಳಲ್ಲೂ ಸಚಿನ್ ಕೃಷ್ಣ ಅವರ "ಅಕ್ಕರೆಯ ಅಪ್ಪುಗೆ" ಪುಸ್ತಕ ಲಭ್ಯ. ನೇರವಾಗಿ ಪ್ರಕಾಶಕರಿಂದಲೂ ಪುಸ್ತಕವನ್ನು ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ..
ಪ್ರಕಾಶಕರು: ಅಕ್ಷರ ಮಂಟಪ
ಮೊ: 9986167684
ನವಕರ್ನಾಟಕ ವೆನ್ ಸೈಟಿಗೂ ಭೇಟಿ ಕೊಡಬಹುದು
https://www.navakarnatakaonline.com/akkareya-appi-46-personalities-of-puneet-raj-kumar
ಸಪ್ನ ಬುಕ್ ಹೌಸ್ ವೆಬ್ ಸೈಟಿಗೂ ಭೇಟಿ ಕೊಡಬಹುದು
https://www.sapnaonline.com/books/akkareya-appuge-46-personalities-talking-sachin-krishna-8195562450-9788195562459
Akkareya Appuge : 46 Personalities Talking About A Soul A Smile A Mountain Flower Akkareya Appuge : 46 Personalities Talking About A Soul A Smile A Mountain Flower by Sachin Krishna. our price 414 ,Save Rs.46. Buy Akkareya Appuge : 46 Personalities Talking About A Soul A Smile A Mountain Flower online, free home delivery. ISBN : 8195562450, 9788195562459
ಬರೋಬ್ಬರಿ 9 ತಿಂಗಳ ಪರಿಶ್ರಮದ ನಂತರ 'ಅಕ್ಕರೆಯ ಅಪ್ಪುಗೆ' ಪುಸ್ತಕದ ಲೋಡು ಆಫೀಸಿಗೆ ಬಂದಿದೆ. ಹೇಳಲು ಬಹಳಷ್ಟು ವಿಚಾರಗಳಿವೆ. ಸದ್ಯದಲ್ಲೇ ಎಲ್ಲವನ್ನು ಹೇಳ್ತೀವಿ. ಸದ್ಯ 'ಅಕ್ಕರೆಯ ಅಪ್ಪುಗೆ'ಯನ್ನು ಆನಂದಿಸುವುದಷ್ಟೇ ನಮ್ಮ ಪಾಲಿನದ್ದು. ಮಿಕ್ಕಿದ್ದೆಲ್ಲವೂ ಆಮೇಲೆ. ಪುಸ್ತಕದ ಬಿಡುಗಡೆ ಅಪ್ಪು ಅವರ ಸಮಾಧಿಯ ಬಳಿ ಮಾಡಬೇಕೆಂಬ ಮಹದಾಸೆ ನಮ್ಮದು. ಅದೂ ಅಚ್ಚರಿಯ ಅತಿಥಿಯ ಕೈನಲ್ಲಿ. ಏನು, ಎತ್ತ, ಯಾವಾಗ ಅಂತಲೂ ಹೇಳ್ತೀವಿ. ಇನ್ನು ಈ ಪುಸ್ತಕ ರೂಪುಗೊಳ್ಳಲು ಸಹಕರಿಸಿದ ಎಲ್ಲರಿಗೂ ನಮ್ಮ ಸಾಷ್ಟಾಂಗ ನಮಸ್ಕಾರಗಳು. ಆಸಕ್ತರು ಪ್ರತಿಗಳಿಗಾಗಿ ವಾಟ್ಸ್ ಅಪ್ ಮಾಡಬಹುದು.
ಪ್ರಕಾಶಕರು: ಅಕ್ಷರ ಮಂಟಪ
ಮೊ: +91 99861 67684
ದೈಹಿಕವಾಗಿ ವ್ಯಕ್ತಿ ನಮ್ಮಿಂದ ಅಗಲಿದರೂ ಆ ವ್ಯಕ್ತಿಯ ನೆನಪು, ಅವರೊಂದಿಗಿನ ಅನುಭವ, ಆತ ಮಾಡಿದ ಸೇವೆ ಎಲ್ಲವೂ ಚಿರಕಾಲ ಉಳಿಯುತ್ತದೆ. 2021 ಕನ್ನಡಿಗರ ಪಾಲಿಗಂತು ಬ್ಯಾಡ್ ಇಯರ್. ನಮ್ಮೆಲ್ಲರ ಅಚ್ಚುಮೆಚ್ಚಿನ ಅಪ್ಪು ನಮ್ಮನ್ನು ಹಠಾತ್ ಬಿಟ್ಟುಹೋದರು. ಆ ದುಃಖ ಇನ್ನೂ ಕಾಡುತ್ತಲೇ ಇದೆ. ಪ್ರತಿಬಾರಿ ಅವರ ಸಮಾಧಿಯನ್ನು ಕಂಡಾಗಲೆಲ್ಲ ನಿಜಕ್ಕೂ ಇದು ನಿಜವೇ ಅನ್ನಿಸುತ್ತದೆ. ನಮ್ಮೊಳಗಿನ ದುಃಖವನ್ನು ನಾವೇ ನುಂಗಿ ಬದುಕು ದೂಡಬೇಕು. ಅಭಿಮಾನಿಗಳ ಸ್ಥಿತಿಯೇ ಈ ಮಟ್ಟಿನದಾದರೆ ಇನ್ನು ಅವರ ಕುಟುಂಬದ್ದು ಹೇಳತೀರದ ಸಂಕಟ. ವಿಷಯ ಏನಂದ್ರೆ ಅಪ್ಪು ಅವರ ನೆನಪಿನಲ್ಲಿಯೇ ಅಕ್ಷರ ಮಂಟಪ "ಅಕ್ಕರೆಯ ಅಪ್ಪುಗೆ" ಎಂಬ ಸಂಪಾದಿತ ಕೃತಿಯೊಂದನ್ನು ಪ್ರಕಟಿಸಲಿದೆ. ಇದರ ಕುರಿತಾದ ಮಿಕ್ಕ ವಿಚಾರಗಳನ್ನು ಸದ್ಯದಲ್ಲಿಯೇ ತಿಳಿಸಲಿದ್ದೇವೆ.
ಪ್ರತಿಗಳಿಗಾಗಿ
ಅಕ್ಷರ ಮಂಟಪ
9986167684
ಅಕ್ಷರ ಮಂಟಪ ಹೆಮ್ಮೆಯಿಂದ ಪ್ರಕಟಿಸಿದ ಸದಾಶಿವ ಸಂಕಲ್ಪ ಅವರ ಬೃಹತ್ ಕಾದಂಬರಿ "ಆನಂದಪುಷ್ಬ" ಕೃತಿಗೆ ಪ್ರಶಸ್ತಿಯ ಗರಿ. ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್, ಪಾಳಾ, ಗುಲ್ಬರ್ಗ ಅವರಿಂದ 'ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರಶಸ್ತಿ' ಲಭಿಸಿದೆ. ಸದಾಶಿವ ಸಂಕಲ್ಪ ಅವರಿಗೆ ಅಕ್ಷರ ಮಂಟಪ ಮತ್ತು ಸಿಬ್ಬಂದಿ, ಓದುಗ ವೃಂದದ ಕಡೆಯಿಂದ ಶುಭಾಶಯಗಳು. ಮತ್ತಷ್ಟು ಪುಸ್ತಕಗಳನ್ನು ಬರೆಯುವಂತಾಗಲಿ ಎಂದು ಹಾರೈಸೋಣ. ಓದಿ ಓದಿ ಮರವಾಗೋಣ...
ಪ್ರತಿಗಳಿಗಾಗಿ ಸಂಪರ್ಕಿಸಿ
ಅಕ್ಷರ ಮಂಟಪ
9986167684
ಬರುವ ವಾರ ಮೈಸೂರಿನಲ್ಲಿ ನಾಡಹಬ್ಬ ದಸರಾ ಶುರುವಾಗಲಿದೆ. ದೇಶ ವಿದೇಶಗಳಿಂದ ದಸರಾ ಉತ್ಸವವನ್ನು ನೋಡಲು ಲಕ್ಷಾಂತರ ಪ್ರವಾಸಿಗರು ಬರುವುದು ರೂಢಿ. ಸಾಮಾನ್ಯವಾಗಿ ದಸರಾ ಎಂದಾಕ್ಷಣ ನೆನಪಿಗೆ ಬರುವುದು ವಿದ್ಯುತ್ ದೀಪಾಂಲಕೃತಗೊಂಡು ಜಗಮಗಿಸುವ ಮೈಸೂರು ಅರಮನೆ, ಮಾತೆ ಚಾಮುಂಡೇಶ್ವರಿ, ಚಿನ್ನದ ಅಂಬಾರಿ ಅದನ್ನೊತ್ತ ಗಜರಾಜ. ಅರೇ ಹೇಳೋದೆ ಮರೆತಿದ್ದೆ. ನಮ್ಮ ಅಕ್ಷರಮಂಟಪದ ವತಿಯಿಂದ ಪ್ರಕಾಶಿಸಿರುವ ಮೈಸೂರಿನ ವಿಜಯ ಕರ್ನಾಟಕದ ಮುಖ್ಯವರದಿಗಾರರು ಮತ್ತು ಲೇಖಕರಾದ ಐತಿಚಂಡ ರಮೇಶ್ ಉತ್ತಪ್ಪನವರು ಈ ಆನೆಗಳ ಕುರಿತಾಗಿಯೇ ಕಥೆಗಳು, ತಮ್ಮ ಅನುಭವಗಳನ್ನು ಪುಸ್ತಕ ರೂಪಕ್ಕಿಳಿಸಿದ್ದಾರೆ. ಅದೂ ಒಂದೆರಡಲ್ಲ ಬರೋಬ್ಬರಿ ನಾಲ್ಕು ಪುಸ್ತಕಗಳು. ಇವು ಇದೇ ಸೋಮವಾರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ಗಣ್ಯಾತಿಗಣ್ಯರಿಂದ ಬಿಡುಗಡೆಯೂ ಆಗಲಿದೆ. ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೆ ಬಲಿಯಾಗಿ ಬದುಕಿನ ಸಂತಸದ ಕ್ಷಣಗಳನ್ನೇ ಮರೆತಿದ್ದ ನಮಗೆಲ್ಲ ದಸರಾ ಹೊಸ ಹುರುಪನ್ನು ತರಲಿದೆ. ಅದಕ್ಕೆ ಮುನ್ನುಡಿ ಎಂಬಂತೆ ಆನೆಗಳು ತಮ್ಮ ಕಥೆ ಹೇಳಲು ಪುಸ್ತಕ ರೂಪದಲ್ಲಿ ಬರುತ್ತಿವೆ. ಸಾಧ್ಯವಾದರೆ ಬನ್ನಿ...
ಸರಸಕ್ಕನ ಸವಾರಿ
ಶ್ರೀಮತಿ ಶಕುಂತಲಾ ಪಿ. ಹಿರೇಮಠ ಇವರು ಸಮಾಜಮುಖಿ ಚಿಂತನೆಗಳನ್ನೊಳಗೊಂಡ ಬರಹಗಳನ್ನು `ಸರಸಕ್ಕನ ಸವಾರಿ’ ಎಂಬ
ತಮ್ಮ ಈ ಕೃತಿಯ ಮೂಲಕ ಓದುಗರಿಗೆ ನೀಡುತ್ತಿರುವುದು ನಿಜವಾಗಿಯೂ ಹರ್ಷದಾಯಕ ವಿಷಯ. ಸರಸಕ್ಕನ ಸವಾರಿ ಕೃತಿಯಲ್ಲಿ
ಒಟ್ಟು ಹದಿಮೂರು ಬಿಡಿ ಲೇಖನಗಳಿವೆ. ಈ ಎಲ್ಲಾ ಲೇಖನಗಳಲ್ಲಿ ಹಳ್ಳಿಯ ಪರಿಸರ ಎದ್ದು ಕಾಣುತ್ತದೆ. ಇಂಥ ಹಳ್ಳಿಯಲ್ಲಿ
ಪ್ರಜ್ಞಾವಂತ ಸಮಾಜಸೇವಕಿ ಸರಸಕ್ಕ ಅನ್ನೋ ಪಾತ್ರ ಪ್ರತಿಬಿಂಬಿತವಾಗಿದೆ. ಇವರ ಪ್ರತಿಯೊಂದು ಲೇಖನದಲ್ಲಿ ವೈವಿದ್ಯತೆ ಇದೆ.
ದೈನಂದಿನ ಬದುಕಿನಲ್ಲಿನ ಮೂಲಭೂತ ಸಮಸ್ಯೆಗಳಾಗಿ ಮೌಲ್ಯ, ಭ್ರಷ್ಟಾಚಾರ, ಮೋಸ, ವಂಚನೆ ಮುಂತಾದ ಅನಿಷ್ಟಗಳ ವಿರುದ್ಧ
ಹೋರಾಡುವ ಪ್ರಗತಿಪರ ವಿಚಾರಗಳನ್ನು ಲೇಖಕಿ ತಮ್ಮ ಲೇಖನಗಳ ಮೂಲಕ ವ್ಯಕ್ತಪಡಿಸಿರುವರು. ಇವರ ಸವಾರಿಯ ರಥಕ್ಕೆ ಸರಸಕ್ಕನೇ ಸಾರಥಿ, ಸೇನಾಧಿಪತಿ, ದಂಡನಾಯಕಿ ಎಲ್ಲವೂ. ಕಲ್ಲರಳಿ ಹೂವಾಗಿ ಎಂಬ ಲೇಖನದಿಂದ ಆರಂಭಗೊಂಡು ಇಂದಿನ ಮಹಾಮಾರಿ ಕೊರೋನಾವರೆಗೂ ಇವರ ಲೇಖನಗಳು ವಿಸ್ತಾರಗೊಂಡಿವೆ.
ಮೂಲ: ಮುನ್ನುಡಿಯಿಂದ
ಪ್ರಕಾಶಕರು: ಶ್ರೀಸಾಯಿ ಸಾಹಿತ್ಯ
ಬೆಲೆ: 80 ರೂಪಾಯಿ
ಪ್ರತಿಗಳಿಗಾಗಿ ಸಂಪರ್ಕಿಸಿ/ವಾಟ್ಸ್ ಅಪ್ ಮಾಡಿ
9986167684
ಸಂತೋಷದ ಬದುಕಿನ ಸಪ್ತಸ್ವರಗಳು
ಕಥೆ, ಕವನ, ವೈಚಾರಿಕ ಲೇಖನ ಹಾಗೂ ಮಕ್ಕಳ ನೀತಿ ಕಥಾ ಸಂಕಲನವನ್ನು ಪ್ರಕಟಿಸಿ ಈಗಾಗಲೇ ಸಹೃದಯ ಓದುಗರ
ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡಿರುವ ಗೋಕಾಕದ ಸಹೋದರಿ ಶ್ರೀಮತಿ ಶಕುಂತಲಾ ಪಿ ಹಿರೇಮಠ ಹೊಸ ವೈಚಾರಿಕ
ಲೇಖನಗಳ ಸಂಕಲನವೇ, ಸಂತೋಷದ ಬದುಕಿಗೆ ಸಪ್ತಸ್ವರಗಳು. ಇತ್ತೀಚಿಗಷ್ಟೇ ಕನ್ನಡ ಉಪನ್ಯಾಸಕ ವೃತ್ತಿಯಿಂದ
ನಿವೃತ್ತಿಯಾಗಿರುವ ಶಕುಂತಲಾ ಹಿರೇಮಠರು ವಿದ್ಯಾರ್ಥಿ ಪ್ರೀತಿ ಶಿಕ್ಷಕಿಯರೆಂದೂ ವಿದ್ಯಾರ್ಥಿ ವಲಯದಲ್ಲಿ ಪ್ರಸಿದ್ಧರಾದವರು.
ಕಾಲೇಜಿನಲ್ಲಿ ಕಲಿಸುವಿಕೆಯಂತೆಯೇ ಅವರ ಬರಹವೂ ತುಂಬ ಪ್ರಭಾವ ಪೂರ್ಣವಾಗಿವೆ. ಓದಿದವರ ಮನಸ್ಸಿಗೆ, ಹೃದಯಕ್ಕೆ
ನಾಟುವಂತಿವೆ. ಈ ಸಂಕಲನದಲ್ಲಿ ಒಟ್ಟು ಒಂಭತ್ತು ವೈಚಾರಿಕ ಲೇಖನಗಳಿವೆ. ಇವುಗಳಲ್ಲಿ ಮೂರು ಲೇಖನಗಳು ಹನ್ನೆರಡನೆಯ
ಶತಮಾನದಲ್ಲಿ ಕನ್ನಡ ನಾಡಿನಲ್ಲಿ ನಡೆದ ಬಸವ ಕ್ರಾಂತಿಗೆ ಸಂಬಂಧಪಟ್ಟರೆ, ಇನ್ನೊಂದು ಲೇಖನವು ಕನ್ನಡ ಸಾಹಿತ್ಯ ಸಾಹಿತ್ಯಕ್ಕೆ
ಸಂಬಂಧಪಟ್ಟಿದೆ. ಮಗದೊಂದು ಲೇಖನದಲ್ಲಿ ಸರ್ವಜ್ಞನ ಇತಿಹಾಸವನ್ನೇ ಲೇಖಕಿಯು ಇಲ್ಲಿ ಅನಾವರಣಗೊಳಿಸಿದ್ದಾರೆ. ಇನ್ನು
ಮೂರು ಲೇಖನಗಳು ಜೀವನದಲ್ಲಿ ವ್ಯಕ್ತಿ ಉನ್ನತಿಯನ್ನು ಸಾಧಿಸಬೇಕಾದರೆ ಆತ ಹೇಗೆ ಇರಬೇಕೆಂಬ ಜೀವನಮೌಲ್ಯದ
ಸಂದೇಶವನ್ನು ನೀಡುತ್ತವೆ. ಮಗದೊಂದು ಲೇಖನವು ಮಹಿಳಾ ಸಬಲೀಕರಣ ಅಥವಾ ಸ್ತ್ರೀ ಸಶಕ್ತೀಕರಣದ ಬಗ್ಗೆ ಮಾತನಾಡುತ್ತದೆ.
ಹೀಗೆ ಎಲ್ಲವನ್ನು ಸೇರಿಸಿ ಬಡಿಸಿದ ಭಕ್ಷ್ಯ ಸಂತೋಷದ ಬದುಕಿನ ಸಪ್ತಸ್ವರಗಳು.
ಮೂಲ: ಮುನ್ನುಡಿ
ಪ್ರಕಾಶಕರು: ಶ್ರೀಸಾಯಿ ಸಾಹಿತ್ಯ
ಬೆಲೆ: 100 ರೂಪಾಯಿ
ಪ್ರತಿಗಳಿಗಾಗಿ ಸಂಪರ್ಕಿಸಿ
9986167684
ಕನ್ಮಡ ಕವಿ ಚರಿತ್ರೆ ಸಂಪುಟ-ಎರಡು
ಕನ್ನಡ ಕವಿ ಚರಿತ್ರೆ ಹೆಸರು ಬಲುಜನಪ್ರಿಯವಾದುದು. ಅದು ಸರಸರವಾಗಿ ಪತ್ರಿಕೆಯಲ್ಲಿ ಹರಿದು ಬಂದು ಬಹಳ ವರ್ಷಗಳಾದ ಮೇಲೆ ಸದ್ಯ ಗ್ರಂಥರೂಪದಲ್ಲಿ ಹೊರಬರುತ್ತಿದೆ. ಒಂದು ಸಾವಿರ ಪುಟಗಳ ಬೃಹತ್ ಗ್ರಂಥ, ಈ ಗ್ರಂಥವನ್ನು ಎರಡು ಸಂಪುಟಗಳಲ್ಲಿ
ತರಬೇಕೆಂದು ತೀರ್ಮಾನಿಸಿದಾಗ, ಹೇಗೆ ವಿಭಾಗ ಮಾಡಿ ಭಾಷೆ, ಛಂದಸ್ಸು, ವಸ್ತು, ಶೈಲಿ ಮತ್ತು ಕವಿಗಳನ್ನು
ಆಧಾರವಾಗಿಟ್ಟುಕೊಂಡು ಭಾಗಿಸಲಾಗಿದೆ. ಚಂಪೂಯುಗದಲ್ಲಿ ಷಟ್ಪದಿಗಳು ಬಂದಿವೆ. ಷಟ್ಪದಿಯಗದಲ್ಲಿ ಚಂಪು ಬಂದಿವೆ,
ಸಾಂಗತ್ಯ ಅಲ್ಲಲ್ಲಿ ಸಂಗತವಾಗಿದೆ ಹೀಗಾಗಿ ಛಂದಸ್ಸಿನ ಹೆಸರಲ್ಲಿ ವಿಭಜಿಸಲು ಅಸಾಧ್ಯವಾಗಿದ್ದು ನಿಜ. ಭಾಷೆಯಿಂದ ಹಳಗನ್ನಡ
ನಡುಗನ್ನಡ, ಹೊಸಗನ್ನಡ ಎಂದು ಭೇದಿಸಬಹುದಾದರೂ ಪೂರ್ವದ ಹಳಗನ್ನಡ, ಹೊಚ್ಚ ಹೊಸಗನ್ನಡ ಎಂಬ ಎರಡು
ವಿಭಜನೆಗೆ ಬರಲಾಗಿದೆ. ಹೀಗಾಗಿ ಪ್ರಸಿದ್ಧ ಕವಿ ಮತ್ತು ಛಂದೋ ರೂಪವನ್ನು ಈ ಸಂಪುಟದಲ್ಲಿ ಗುರಿಯಾಗಿಸಿಕೊಳ್ಳಲಾಗಿದೆ.
ಕನ್ನಡ ಕವಿ ಚರಿತ್ರೆ ಸಂಪುಟ 1 ಮತ್ತು ಸಂಪುಟ 2 ಹೆಸರಿಸಿ ವಿಭಜಿಸಿ ಎರಡು ಸಂಪುಟಗಳಲ್ಲಿ ತರಲಾಗಿದೆ. ಇದುವರೆಗೆ ಈ
ರೀತಿಯ ಕನ್ನಡ ಸಾಹಿತ್ಯ ಪರಿಚಯ ಮತ್ತು ವಿಭಜನೆ ವಿನೂತನವೇ. ಇದರಿಂದ ಸಾಹಿತ್ಯ ಅಭ್ಯಾಸಿಗಳಿಗೆ ಬಹು ಅನುಕೂಲ ಆಗಿದೆ,
ಆಗುತ್ತಿದೆ.
ಮೂಲ: ಮುನ್ನುಡಿ
ಪ್ರಕಾಶಕರು: ಅಕ್ಷರ ಮಂಟಪ
ಬೆಲೆ: 300 ರೂಪಾಯಿ
ಪ್ರತಿಗಳಿಗಾಗಿ ಸಂಪರ್ಕಿಸಿ/ವಾಟ್ಸ್ ಅಪ್ ಮಾಡಿ
9986167684
ಸಾಹಿತ್ಯ ಜನಜೀವನದ ಪ್ರತಿಬಿಂಬವಾದರೆ, `ಕನ್ನಡ ಕವಿಚರಿತ್ರೆ’ ಸಾಹಿತ್ಯದ ಬಿಂಬ. ಕನ್ನಡ ನಿಘಂಟಿಗೆ ಪದಗಳನ್ನು ಆಯ್ಕೆ
ಮಾಡಿಕೊಳ್ಳುವಾಗ ಅನಿವಾರ್ಯವಾಗಿ ಕಾವ್ಯಗ್ರಂಥಗಳನ್ನು ಓದಬೇಕಾಯಿತು. ಶಬ್ದ ಸಂಗ್ರಹದ ಜೊತೆಗೆ ಸಾಹಿತ್ಯ ವಿಷಯಗಳನ್ನು
ಸಂಗ್ರಹಿಸಿಕೊಂಡೆ 1962ನೆಯ ಜೂನ್ 24ನೆಯ ಭಾನುವಾರದ ತಾಯಿನಾಡು ಪತ್ರಿಕೆಯ ವಾರದ ವಾಙ್ಮಯದಲ್ಲಿ ಕವಿರಾಜಮಾರ್ಗ
ಪ್ರಕಟವಾಯಿತು. ಅಂದಿನಿಂದ ಚಾಚೂ ತಪ್ಪದೆ ಕನ್ನಡ ಸಾಹಿತ್ಯ ಪರಿಚಯದ ಒಂದು ನೂರನೆಯದೆಂದು ಲೇಖನ ಅಭಿನವ ಕಾಳಿದಾಸ
ಬಸವಪ್ಪ ಶಾಸ್ತ್ರಿಗಳ ಲೇಖನ 1964ನೆಯ ನವೆಂಬರ್ 13ನೆಯ ಭಾನುವಾರ ಮುಕ್ತಾಯವಾಯಿತು. ಸುಮಾರು ಎರಡೂವರೆ
ವರ್ಷಗಳ ಭಾನುವಾರ ಅಂದರೆ ನೂರಿಪ್ಪತ್ತು ವಾರ ಕನ್ನಡ ಸಾಹಿತ್ಯ ಪರಿಚಯ `ತಾಯಿನಾಡು’ ಪತ್ರಿಕೆಯಲ್ಲಿ ರಾರಾಜಿಸಿತು. ಈ
ರಾರಾಜನೆಗೆ ಕಾರಣವೆಂದರೆ ಅಂದು ಸಂಪಾದಕರಾಗಿದ್ದ ಶ್ರೀ ಸಿದ್ಧಪ್ಪನವರು, ಉಪಸಂಪಾದಕರಾಗಿದ್ದ ಶ್ರೀ. ಹಿ.ಮ. ನಾಗಯ್ಯನವರು ಅವರಿಬ್ಬರೂ ಇಂದಿಲ್ಲ ಆದರೆ ಅವರ ಪ್ರೋತ್ಸಾಹ ಈ ಕೃತಿಯ ಲೇಖಕರಾದ ಹೀ.ಚಿ. ಶಾಂತವೀರಯ್ಯನವರನ್ನು ಕೈ ಹಿಡಿಸಿ
ನಡೆಸಿದ್ದು ಅಕ್ಷರಶಃ ಸತ್ಯ. ಸಾಹಿತ್ಯದ ಇತಿಹಾಸವನ್ನು ಅರ್ಥೈಸುವಲ್ಲಿ ಕನ್ನಡ ಕವಿ ಚರಿತ್ರೆ ಸಂಪುಟ ಒಂದು ಸಹಕಾರಿ.
ಕನ್ನಡ ಕವಿ ಚರಿತ್ರೆ ಸಂಪುಟ 1 ಮತ್ತು ಸಂಪುಟ 2 ಹೆಸರಿಸಿ ವಿಭಜಿಸಿ ಎರಡು ಸಂಪುಟಗಳಲ್ಲಿ ತರಲಾಗಿದೆ. ಇದುವರೆಗೆ ಈ
ರೀತಿಯ ಕನ್ನಡ ಸಾಹಿತ್ಯ ಪರಿಚಯ ಮತ್ತು ವಿಭಜನೆ ವಿನೂತನವೇ. ಇದರಿಂದ ಸಾಹಿತ್ಯ ಅಭ್ಯಾಸಿಗಳಿಗೆ ಬಹು ಅನುಕೂಲ
ಆಗಿದೆ, ಆಗುತ್ತಿದೆ.
ಮೂಲ: ಮುನ್ನುಡಿಯಿಂದ
ಪ್ರಕಾಶಕರು: ಅಕ್ಷರ ಮಂಟಪ
ಬೆಲೆ: 250 ರೂಪಾಯಿ
ಪ್ರತಿಗಳಿಗಾಗಿ ಸಂಪರ್ಕಿಸಿ/ವಾಟ್ಸ್ ಅಪ್ ಮಾಡಿ
9986167684
ಈಗಾಗಲೇ ಕನ್ನಡದಲ್ಲಿ ಕತೆಗಳನ್ನು ಇಂಗ್ಲಿಷಿನಲ್ಲಿ ಕವಿತೆಗಳನ್ನು ಬರೆದು ಪ್ರಕಟಿಸಿರುವ ಆದರ್ಶ ಅಧ್ಯಾಪಕಿ, ಸದು ವಿನಯ ಮತ್ತು ಸೌಜನ್ಯ ಸನ್ಮೂರ್ತಿಯಾಗಿರುವ ಶ್ರೀಮತಿ ಯಮುನಾ ಕಂಬಾರ ಅವರದು ಲವಲವಿಕೆಯ ವ್ಯಕ್ತಿತ್ವ. ದಣಿವರಿಯದ ಬರವಣಿಗೆ. ಸಾತ್ವಿಕತೆಯಮೈವೆತ್ತ ನಡೆನುಡಿ. ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗುವ ಬೆಳಕು ಕಂಡು ಓದುಗ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿರುವ ಹಲವಾರು ಕವನಗಳನ್ನು ಸಾಹಿತಿ ಯಮುನಾ ಅವರ ಪ್ರೀತಿ ಅಂದರ.. ಎನ್ನುವ ಶೀರ್ಷಿಕೆಯೊಂದಿಗೆ ಪ್ರಕಟಿಸಲು ಅಣಿಗೊಳಿಸಿದ್ದು ಸಂತಸದ ಸಂಗತಿ. ಮನುಕುಲದ ಅಂದ ಆನಂದಗಳಿಗೆ ತಮ್ಮ ಅಮೂಲ್ಯ ಕಾಣ್ಕೆ ನೀಡುತ್ತಿರುವ ಕೃಷಿ, ಸೈನಿಕ ಮತ್ತು ಧರ್ಮಬೋಧಕರ ಬಗೆಗೆ ಸಮಾಜ ಬಾಂಧವರ ಪ್ರತಿನಿಧಿಯಿಂದ ಕವಯಿತ್ರಿಗೆ ಅಪಾರ ಹೆಮ್ಮೆ, ಕೃತಜ್ಞತೆ ತುಂಬಿದ ಪ್ರೀತಿ ಗೌರವ. ಅವರ ಸೇವೆಯನ್ನು ನೆನೆಯುವುದರಲ್ಲಿ ಸಾರ್ಥಕ ಭಾವವನ್ನು, ಧನ್ಯತೆಯ ಸಂತಸವನ್ನು ಕವಯಿತ್ರಿ ಈ ಕೃತಿಯಲ್ಲಿ ಅನುಭವಿಸಿರುವುದನ್ನು
ಕಾಣಬಹುದು.
ಮೂಲ: ಪುಸ್ತಕದ ಮುನ್ನುಡಿಯಿಂದ
ಪ್ರಕಾಶಕರು: ಶ್ರೀ ಸಾಯಿ ಸಾಹಿತ್ಯ
ಬೆಲೆ: 100 ರೂಪಾಯಿ
ಪ್ರತಿಗಳಿಗಾಗಿ ಸಂಪರ್ಕಿಸಿ/ವಾಟ್ಸ್ ಅಪ್ ಮಾಡಿ
9986167684
ದಲಿತಕೇರಿಯ ಬೆಳಕು ಮತ್ತು ಅಮ್ಮ ಈ ಎರಡೂ ಕಾದಂಬರಿಗಳಲ್ಲಿನ ಪಾತ್ರ ಮತ್ತು ಪರಿಸರ ನಮ್ಮ ನಡುವೆಯೇ ಇದ್ದವುಗಳು. ರಂಗಾಪುರ ಎನ್ನುವ ಕಾಲ್ಪನಿಕ ಹೆಸರನ್ನು ವಾಸ್ತವಿಕತೆಯ ಶರಾವತಿ ನದಿ ದಂಡೆಯ ಮೇಲೆ ಕುಳ್ಳಿರಿ ದಲಿತ
ಕೇರಿಯ ಮೈಲಿಗೆಯನ್ನು ಶರಾವತಿ ತೊಳೆದು ಹೊಸಬಾಳಿಗೆ ದಾರಿಮಾಡಿಕೊಡುವ ದಲಿತ ಕೇರಿಯ ಕಥೆ ಮತ್ತು ವ್ಯಥೆಯನ್ನು
ನವಿರಾಗಿ ಓದುಗರ ಮನಮುಟ್ಟುವಂತೆ ಹೆಣೆಯುವಲ್ಲಿ ಸುಧಾ ಭಂಡಾರಿಯವರು ಸಫಲರಾಗಿದ್ದಾರೆ. ಶರಾವತಿ ಧುಮ್ಮಿಕ್ಕಿ ಹರಿದು
ಒಮ್ಮೊಮ್ಮೆ ಪ್ರವಾಹದಲ್ಲಿ ದಂಡೆಯಲ್ಲಿದ್ದವರ ಬದುಕನ್ನು ಮೂರಾಬಟ್ಟೆಯಾಗಿಸಿದರೂ ನಾಡಿಗೆ ಬೆಳಕು ನೀಡುತ್ತಿದ್ದಾಳೆ. ರಂಗಾಪುರದಲ್ಲಿ ಬೆಳೆದ ಹನುಮಂತ ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ಉದ್ಯೋಗ ಮಾಡುತ್ತಲೇ ಅಮರಾವತಿಯಂತೆ ಬೆಳಕು ನೀಡಲು ತಾನು ಬೆಳೆದ ನೆಲಕ್ಕೆ, ತನ್ನ ಜನಕ್ಕೆ ಏನಾದರೂ ಮಾಡುವ ಸದುದ್ದೇಶದಿಂದ ಹಾತೊರೆದು ಯುವಕರ ಪಡೆ ಕಟ್ಟುವಲ್ಲಿ
ಲೇಖಕಿಯ ದೂರದೃಷ್ಟಿ ಹಾಗೂ ತುಳಿತಕ್ಕೊಳಗಾದವರ ಸಮುದಾಯದ ಬಗ್ಗೆ ಕಾಳಜಿ ಇಲ್ಲವೇ ತಾವೇ ಉಂಡ ನೋವನ್ನು ಈ
ರೀತಿ ಹೊರಹಾಕುತ್ತಿದ್ದಾರೆಯೇ ಎಂಬ ಭಾವನೆ ಓದುಗರಿಗೆ ಮೂಡುವುದು ಸಹಜವೇ. ನಿಮಗೂ ಇಂತಹ ಅನುಭವ ಆಗದೇ
ಇರಲಿಕ್ಕಿಲ್ಲ.
ಮೂಲ: ಪುಸ್ತಕದ ಮುನ್ನುಡಿಯಿಂದ
ಪ್ರಕಾಶಕರು: ಅಕ್ಷರಮಂಟಪ
ಬೆಲೆ: 60 ರೂಪಾಯಿ
ಪ್ರತಿಗಳಿಗಾಗಿ ಸಂಪರ್ಕಿಸಿ/ವಾಟ್ಸ್ ಅಪ್ ಮಾಡಿ
9986167684
`ಅಲಂಕಾರ' ಇದು ಸಂಕಲ್ಪ ಕಾವ್ಯನಾಮದ ಶ್ರೀ ಸದಾಶಿವ ಅವರ ಮೊದಲನೆಯ ಕವನ ಸಂಕಲನ. ಒಟ್ಟು 43 ಕವನಗಳಲ್ಲಿ ಕವಿಯ ಭರವಸೆಯ ಸಾಲುಗಳಿರುವ ಕವನಗಳು ಕಂಡುಬರುತ್ತವೆ. ಇಲ್ಲಿನ ಕವನಗಳನ್ನು ಅವಲೋಕಿಸಿದಾಗ, ಒಬ್ಬ ಕವಿಯ ಮೊದಲ ಸಂಕಲನದಲ್ಲಿರಬಹುದಾದ ಕೊರತೆಗಳು ಕಂಡುಬರುವುದು ಸಹಜವೇ ಆಗಿದೆ. ಆದರೆ ಇದರಲ್ಲಿನ ಕವನಗಳು, ಕವನದ
ಸಾಲುಗಳು, ಕವಿಯ ಭಾವನೆಗಳನ್ನು ಹಿಡಿದಿಡುವಲ್ಲಿ ಸಾರ್ಥಕತೆ ಪಡೆದಿದೆ.
ಹಣೆಬರಹ, ಬದಲಾಗು, ಜೋಕಾಲಿ, ಹೊಸತನ, ಯಾರು, ಸಾಕು ಮಾಡು ಮನವೆ, ಕಲಿಕೆ, ಮೌನ, ಭರವಸೆ, ನಾ ಕಂಡ ಜನರು, ಹಸಿವು ಮುಂತಾದ ಕವಿತೆಗಳು ಕವಿಹೃದಯದ ತುಡಿತವನ್ನು ಅಭಿವ್ಯಕ್ತಿಸುವಲ್ಲಿ ಯಶದ ಹಾದಿಯಲ್ಲಿ ಸಾಗಿವೆ
ಎನ್ನಬದುದು. ಈ ಕವನಗಳಲ್ಲಿರುವ ಅರ್ಥಪೂರ್ಣ ಸಾಲುಗಳು ಕವಿಯ ಜಾಡನ್ನು ತೋರಿಸುತ್ತವೆ. ಇನ್ನಷ್ಟು ಅಧ್ಯಯನ
ಕೈಗೊಂಡರೆ ಮುಂದೆ ಇನ್ನೂ ಉತ್ತಮವಾದ ಕವಿತೆಗಳನ್ನು ಕಾವ್ಯಜಗತ್ತಿಗೆ ಈ ಕವಿ ನೀಡಬಲ್ಲರೆಂಬ ಭರವಸೆಯನ್ನು
ಮೂಡಿಸುತ್ತಾರೆ.
ಮೂಲ: ಪುಸ್ತಕದ ಮುನ್ನುಡಿಯಿಂದ
ಪ್ರಕಾಶಕರು: ಚೇತನ್ ಬುಕ್ಸ್
ಬೆಲೆ: 100 ರೂಪಾಯಿ
ಪ್ರತಿಗಳಿಗಾಗಿ ಸಂಪರ್ಕಿಸಿ/ವಾಟ್ಸ್ ಅಪ್ ಮಾಡಿ
9986167684
ಮಹಿಳೆಯ ಚರಿತೆ ಮೌನ ಚರಿತೆ. ಅವಳ ಇತಿಹಾಸದ ಪುಟ ಖಾಲಿ ಪುಟ. ಚರಿತ್ರೆಯುದ್ಧಕ್ಕೂ ಅವಳು ತನ್ನ ಬಗೆಗಾಗಲಿ, ತನ್ನಂಥವರ ಬಗೆಗಾಗಲಿ ಎಲ್ಲಿಯೂ ಏನನ್ನೂ ಹೇಳಿಕೊಳ್ಳಲಿಲ್ಲ. ಕಾರಣ ಪುರುಷ ಪ್ರಧಾನ ವ್ಯವಸ್ಥೆಯ ಸ್ಥಾಪಿತ ತಾತ್ತ್ವಿಕ ನಿಷೇಧಾಜ್ಞೆಗಳು, ಶತಮಾನಗಳುದ್ದಕ್ಕೂ ಅಡಿಗೆ ಮನೆಯಲ್ಲಿಯೇ ಅವಳ ಜೀವಿತದ ಮೊದಲ ಮತ್ತು ಅಂತಿಮ ಗುರಿಯಾಗಿ,
ಗೃಹಕೃತ್ಯಗಳೇ ದೈನಂದಿನ ಕರ್ತವ್ಯಗಳಾಗಿ, ಹಿರಿಯರ, ಅತಿಥಿ ಅಭ್ಯಾಗತರ ಆರೈಕೆ, ಉಪಚಾರಗಳೇ ಪುಣ್ಯ ಗಳಿಕೆಯ
ಮಾಧ್ಯಮಗಳಾಗಿ ನಡೆದುಕೊಂಡು ಬಂದವು. ಹೊರಜಗತ್ತಿನ, ಸಂಪರ್ಕದಿಂದ ವಂಚಿತಳಾಗಿ ಉಳಿದ ಅವಳ ಬೌದ್ಧಿಕ ಕ್ಷಿತಿಜ ವಿಸ್ತರಿಸಲಿಲ್ಲ. ವ್ಯಕ್ತಿತ್ವ ವಿಕಸನದ ದ್ವಾರ ತೆರೆಯಲಿಲ್ಲ. ಪುರುಷನ ನೆರಳಾಗಿ ಉಳಿದ ಅವಳು ಅಸ್ಮಿತೆಯ ಅರಿವಿನಿಂದ ದೂರ ಉಳಿದಳು. ಕಂಡರಿಯದ ಭೌತಿಕ ಚಲನವಲನಗಳ ನಿಷೇಧ ಮತ್ತು ಮಾನಸಿಕ ಗುಲಾಮತನದಿಂದಾಗಿ ಪಂಜರದ ಗಿಳಿಯಂತೆ ಬಳಲಿದಳು. ಅವಳ `ಮೌನವೇ ನಿನ್ನ ಆಭರಣ, ನಿನ್ನ ಮುಗುಳ್ನಗೆಯೇ ಶಶಿಕಿರಣ' ಎನ್ನುವ ಪುಸಲಾಯಿಸುವ ಜಾಣ್ಮಗೆ
ತಲೆದೂಗಿದಳು. ತಲೆಬಾಗಿದಳು. ತನ್ನ ಅಸ್ಥಿತ್ವದ ಪ್ರಜ್ಞೆಯನ್ನೇ ಕಳೆದುಕೊಂಡಳು. ಇದು ಅವಳ ಇರುವಿಕೆಯ ದುರಂತದ ಭಾಗ್ಯ ಬರೆಯಿತು. ಆದರೆ ಮಹಿಳೆಯ ಸ್ಥಿತಿ ಹಾಗಿದ್ದರೂ ಅದರಿಂದ ಹೊರಬರುವುದು ಅಸಾಧ್ಯವೇನಲ್ಲ ಎಂದು ಧೈರ್ಯ ತುಂಬಿ ಮಹಿಳೆಯರಿಗೂ ಒಂದು ವೇದಿಕೆಯನ್ನು 12ನೇ ಶತಮಾನದ ಬಸವಾದಿ ಶರಣರು ಅವಕಾಶ ಕಲ್ಪಿಸಿಕೊಟ್ಟರು. ಹೀಗೆ
ಮುಂದುವರೆದ ಮಹಿಳೆಯರ ಅಭಿವ್ಯಕ್ತಿ ಪ್ರಸ್ತುತ ಪುರುಷರಿಗೆ ಸಮನಾಗಿ ನಿಲ್ಲುವ ಮಟ್ಟಿಗೆನಿಂತ ಹಂತವಾಗಿ ಬೆಳೆಯುತ್ತಾ ಬಂದಿದೆ. ಇಂತಹುದೇ ತುಡಿತಕ್ಕಾಗಿ ತಮ್ಮ ಭಾವಾಭಿವ್ಯಕ್ತಿಯನ್ನು ಅನಾವರಣಗೊಳಿಸುವ ಕೆಲಸವನ್ನು ಡಾ. ಗುರುದೇವಿ ಹುಲೆಪ್ಪನವರ ಮಠ `ಬರಿಯಾಕ ಬಂದ ಬಾ ಅಂತ ಕರದಾರ' ಎಂಬ ಕೃತಿಯ ಮೂಲಕ ಮಾಡಿದ್ದಾರೆ. ಈ ಕೃತಿಯಲ್ಲಿ
ಅರವತ್ತೊಂದು ಬರಹಗಾರ್ತಿಯರ ಒಂದೊಂದು ಪ್ರಾತಿನಿಧಿಕ ಕೃತಿಯ ರಸವಿಮರ್ಶೆಯನ್ನು ಔಪಚಾರಿಕವಾಗಿ ಮಾಡಲಾಗಿದೆ.
ಮತ್ತಷ್ಟು ಕೆಲಸಗಳನ್ನು ಮಾಡುವ ತುಡಿತ ಲೇಖಕಿಯದ್ದು.
ಮೂಲ: ಪುಸ್ತಕದ ನನ್ನ ನುಡಿಯಿಂದ
ಪ್ರಕಾಶಕರು: ಶ್ರೀ ಸಾಯಿ ಸಾಹಿತ್ಯ
ಬೆಲೆ: 250 ರೂಪಾಯಿ
ಪ್ರತಿಗಳಿಗಾಗಿ ಸಂಪರ್ಕಿಸಿ/ವಾಟ್ಸ್ ಅಪ್ ಮಾಡಿ
9986167684
‘ಜ್ಞಾನದ ಬಲದಿಂದ.....’ ಕೃತಿಯ ಕರ್ತೃ ಸಜಾನಂದ ಡಿ. ಕೆಂಗಲಗುತ್ತಿ. ಬಾಗಲಕೋಟೆಯ ಬಿ.ವ್ಹಿ.ವ್ಹಿ. ಸಂಘದ ಬಸವೇಶ್ವರ
ವಿಜ್ಞಾನ ಮಹಾವಿದ್ಯಾಲಯದ ಕ್ರಿಯಾಶೀಲ ಕನ್ನಡ ಅಧ್ಯಾಪಕ. ಇವರು ಅಧ್ಯಯನ ಮಾಡುತ್ತಲೇ ಅಧ್ಯಾಪನದಲ್ಲಿ ಕಲಿಸುವುದಕ್ಕಿಂತ
ಕಲಿತದ್ದೇ ಹೆಚ್ಚು. ಎನ್ನುವ ಹಂಬಲವುಳ್ಳ ಅಧ್ಯಾಪಕ, ಯುವ ವಿದ್ವಾಂಸ. ಈ ಕೃತಿಯ ಮೊದಲ ಐದು ಲೇಖನದಲ್ಲಿ ಪ್ರಾಚೀನ
ಕನ್ನಡ ಸಾಹಿತ್ಯದ ಹೊಸ ಹರಿವು, ಮಾರ್ಗ-ದೇಸೀಯತೆ, ಜೈನ ಪುರಾಣ ಪರಂಪರೆ, ಅಲ್ಲಿನ ಶಿಕ್ಷಣ ವಿಚಾರ ಇತ್ಯಾದಿ ಕುರಿತು,
ಧ್ಯಾನಿಸುತ್ತಾರೆ. ಈ ಧ್ಯಾನ ಎಷ್ಟು ಆಳವಾದದ್ದು ಎಂಬುದನ್ನು ಇಲ್ಲಿನ ಲೇಖನ ಓದಿಯೇ ಸವಿಯಬೇಕು. “ಜೀವನಕ್ಕೆ ಅವಶ್ಯಕವಾದ
ತಾಯಿ ಬೇರಾದ ದೇಸೀಯ ಸತ್ವವೆಂಬ ಬೇರು ಅತಿ ಮುಖ್ಯ. ಈ ಬೇರು ಇಲ್ಲದಿದ್ದರೆ ಜೀವನಕ್ಕೆ ಬೇಕಾದಂತಹ ಅಸ್ತಿತ್ವವೇ
ಇಲ್ಲದಂತಾಗುತ್ತದೆ.” ಎನ್ನುವ ಲೇಖಕ ಪ್ರಾಚೀನ ಕನ್ನಡ ಸಾಹಿತ್ಯದ ಜೀವಸೆಲೆಯನ್ನು ಗುರುತಿಸುತ್ತಾರೆ. ಮುಂದುವರಿದು
“ದೇಸೀ-ಮಾರ್ಗಗಳ ಸಂಘರ್ಷಗಳು ಕೇವಲ ಶೈಲಿಕ ಸಂಬಂಧಗಳನ್ನು ಮಾತ್ರ ವಿವರಿಸುವುದಿಲ್ಲ. ಅದು ಅಂದಿನ ಕಾಲದ ಬದುಕಿನ
ಕ್ರಮವೂ” ಆಗಿರುವುದನ್ನು ದರ್ಶಿಸುತ್ತಾರೆ. ಮಹಾಭಾರತದ ಕಥೆಯನ್ನು ಕವಿ ಪಂಪ ಕನ್ನಡಕ್ಕೆ ತರುವಾಗ ಕನ್ನಡತನದ
ಸ್ಪರ್ಶತುಂಬಿರುವುದನ್ನು ಲಕ್ಷಿಸುತ್ತಾರೆ. ಕರ್ಣ ಮತ್ತು ಭಾನುಮತಿ ಪಗಡೆಯಾಡುವ ಸಂದರ್ಭದ ಘಟನೆ ಉದ್ಧರಿಸಿ ಮುತ್ತಿನಹಾರ
(ಲಂಬಣ) ಹರಿದಾಗ ದುರ್ಯೋಧನನಪ್ರವೇಶ, ಆತನ ವರ್ತನೆ, ಸ್ನೇಹ ಬಾಂಧವ್ಯದ ಗಟ್ಟಿತನ ಅದು ಕರುನಾಡಿನ ತತ್ವ ಮತ್ತು
ಶಕ್ತಿ ಇಲ್ಲಿನ ಜೀವನ ವಿಧಾನವೆಂಬುದನ್ನು ಅರಿತಕ್ಕೆ ತರುತ್ತಾರೆ. ಹಾಗೆಯೇ ಪಂಪ ಬಳಸಿರುವ ಆ ಕಾಲದ ದೇಸೀ ಮಾರ್ಗಗಳನ್ನು
ಉದ್ಧರಿಸಿ ನಿರೂಪಿಸಿರುವುದು ಗಮನಾರ್ಹವಾಗಿದೆ.
ಮೂಲ: ಪುಸ್ತಕದ ಮುನ್ನುಡಿಯಿಂದ
ಪ್ರಕಾಶಕರು: ಚೇತನ್ ಬುಕ್ಸ್
ಬೆಲೆ: 150 ರೂಪಾಯಿ
ಪ್ರತಿಗಳಿಗಾಗಿ ಸಂಪರ್ಕಿಸಿ/ವಾಟ್ಸ್ ಅಪ್ಅಪ್
9986167684
ಕನ್ನಡ ಸಾಹಿತ್ಯದೊಳಗೆ ಮಾರ್ಗ-ದೇಸೀಯ ಪರಿಕಲ್ಪನೆ ಬಗೆಗಿನ ಅರಿವು, ಪ್ರಾಚೀನ ಕಾವ್ಯ ಪರಂಪರೆಯಲ್ಲಿ ಕಾಣುತ್ತದೆ. ಇವೆರಡರ ಹದವಾದ ಬೆರೆಕೆಯಿಂದಾಗಿ ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಒಂದು ಗಟ್ಟಿಯಾದ ನೆಲೆ ದೊರೆತಂತಾಗಿದೆ. ಈ
ತಿಳುವಳಿಕೆ ಮಧ್ಯಕಾಲೀನ ಸಾಹಿತ್ಯದೊಳಗೆ ಇನ್ನಷ್ಟು ಆಳವಾಗಿ ತನ್ನ ಬೇರುಗಳನ್ನು ಚಾಚಿರುವುದು ಗೋಚರವಾಗುತ್ತದೆ. ಈ
ದೇಸೀ ಪರಂಪರೆ ಆಧುನಿಕ ಕನ್ನಡ ಸಾಹಿತ್ಯದಲ್ಲೂ ಮುಂದುವರೆದಿದೆ. ಅಂದರೆ ದೇಸೀ ಎನ್ನುವುದು ನಮ್ಮ ಜನಗಳ ಬದುಕಿನ ಚಹರೆಯಾಗಿದೆ. ಅದನ್ನು ಹೊರಗಿಟ್ಟು ಸಾಹಿತ್ಯ ಕೃತಿಗಳನ್ನು ಸೃಷ್ಟಿಸುವುದು ಸಾಧ್ಯವಿಲ್ಲವೆಂಬ ತಿಳುವಳಿಕೆಯನ್ನು ನಮ್ಮ ಕವಿಗಳು
ಹೊಂದಿದ್ದಾರೆ. ಅದಕ್ಕಾಗಿಯೇ ದೇಸೀ ಬದುಕನ್ನು ತಮ್ಮ ಕಾವ್ಯದೊಳಗೆ ಎರಕಹೊಯ್ಯಲು ಯತ್ನಿಸಿದ್ದಾರೆ. ಆ ಮೂಲಕ ಕನ್ನಡಿಗರ ಅಸ್ತಿತ್ವವನ್ನು ಎತ್ತಿಹಿಡಿಯಲು ಪ್ರಯತ್ನಿಸಿದ್ದಾರೆ. ಕನ್ನಡ ಸಾಹಿತ್ಯ ಸೃಷ್ಟಿಗೆ ಬುನಾದಿ ಹಾಕಿದ ಪಂಪ, ಪೊನ್ನ, ರನ್ನ ಮೊದಲಾದ ಜೈನ ಕವಿಗಳು ದೇಸೀ ಪರಂಪರೆಯನ್ನು ಎತ್ತಿಹಿಡಿದರು. ಅನಂತರದ ಜೈನ ಕವಿಗಳು ಈ ದೇಸೀ ಪರಂಪರೆಯನ್ನು
ವ್ಯಾಪಕವಾಗಿ ಪ್ರತಿಬಿಂಬಿಸಲು ಪ್ರಯತ್ನಿಸಿದ್ದಾರೆ. ಈಗಿನ ಜಾಗತೀಕರಣದ ಸಂದರ್ಭದಲ್ಲಿ ದೇಸೀ ಪರಂಪರೆಯು ಕಣ್ಮರೆಯಾಗುತ್ತಿದೆ. ಅದನ್ನು ಉಳಿಕೊಳ್ಳಲು ಸರ್ವಪ್ರಯತ್ನಗಳು ಮುಂದುವರೆದಿವೆ. ಈ ನಿಟ್ಟಿನಲ್ಲಿ `ದೇಸೀ ಎಂಬ ಬೆಡಗು' ಕೃತಿಯ ಮೂಲಕ ಕನ್ನಡ ಮಧ್ಯಕಾಲೀನ ಜೈನ ಕಾವ್ಯಗಳಲ್ಲಿಯ ದೇಸೀ ಪರಂಪರೆಯನ್ನು ಹುಡುಕುವ, ಅದರ ಸ್ವರೂಪವನ್ನು
ಕಟ್ಟಿಕೊಡುವ ನಿಟ್ಟಿನಲ್ಲಿ ಡಾ. ಎಸ್.ಡಿ. ಕೆಂಗಲಗುತ್ತಿಯವರು ಕೈಗೊಂಡ ಈ ಸಂಶೋಧನೆ ಮಹತ್ವದ್ದಾಗಿದೆ. ಕನ್ನಡ ಸಾಹಿತ್ಯ
ಪರಂಪರೆಯ ಆಳ ಅಗಲವನ್ನು ಒಮ್ಮೆ ಪರಿಚಯಿಸಿಕೊಳ್ಳಲಾದರೂ ಈ ಕೃತಿಪುಷ್ಫವನ್ನು ಓದಲೇಬೇಕು.
ಮೂಲ: ಪುಸ್ತಕದ ಮುನ್ನುಡಿಯಿಂದ
ಪ್ರಕಾಶಕರು: ಚೇತನ್ ಬುಕ್ಸ್
ಬೆಲೆ: 285 ರೂಪಾಯಿ
ಪ್ರತಿಗಳಿಗಾಗಿ ಸಂಪರ್ಕಿಸಿ/ವಾಟ್ಸ್ ಅಪ್ ಮಾಡಿ
9986167684
ತಿರುಗಾಟ ಎನ್ನುವುದು ಅನೇಕರಿಗೆ ಪ್ರಿಯವಾದ ಸಂಗತಿ. ಒಬ್ಬರು ಪ್ರವಾಸ ಹೋಗಿಬಂದುದರ ಅನುಭವವನ್ನು ಹೇಳುತ್ತಿದ್ದರೆ ಕೇಳುಗರ ಮೈ ನವಿರೇಳಿಸುತ್ತದೆ. ಪ್ರವಾಸ, ಅನುಭವವನ್ನು ಕಟ್ಟಿಕೊಡುತ್ತದೆ. ಅನುಭವ ಸಂಪಾದನೆಗಾದರೂ ಪ್ರವಾಸ ಹೋಗಿ ಬರಬೇಕು. ಜ್ಞಾನ ವಿಜ್ಞಾನದ ಸಂಪಾದನೆಯಾಗುತ್ತಿತ್ತು. ವ್ಯಕ್ತಿತ್ವ ವಿಕಸನಕ್ಕೂ ಪ್ರವಾಸ ಮಾಡುವುದು ಅಗತ್ಯ ಎನಿಸುತ್ತದೆ. ಅದೇ ನಿಟ್ಟಿನಲ್ಲಿ 'ಸಿಂಗಾಪುರ ಟು ಮಲೇಶಿಯಾ'ದಲ್ಲಿ ಲೇಖಕಿ ಶ್ರೀಮತಿ ಪ್ರೇಮಲತಾ ಅವರು ತಮ್ಮ ಮೊದಲ ವಿದೇಶಿ ಪ್ರವಾಸದ ಅನುಭವವನ್ನು ಸೊಗಸಾಗಿ ಬಣ್ಣಿಸಿದ್ದಾರೆ. ಪ್ರಾಮಾಣಿಕವಾದ ತಮ್ಮ ಅನಿಸಿಕೆಗಳನ್ನು ಪ್ರವಾಸದಲ್ಲಿ ನಡೆದ ಎಲ್ಲ ಸಂಗತಿಗಳನ್ನು ತಮ್ಮ ಸರಳ ಶೈಲಿಯಲ್ಲಿ ಬಿಚ್ಚಿಟ್ಟಿದ್ದಾರೆ. ಒಮ್ಮೆ ಓದಿ ನಿಮಗೂ ಇಷ್ಟವಾಗಬಹುದು....
ಮಾಹಿತಿ: ಪುಸ್ತಕದ ಮುನ್ನುಡಿಯಿಂದ
ಪ್ರಕಾಶಕರು: ಚೇತನ್ ಬುಕ್ಸ್
ಬೆಲೆ: 150
ಪ್ರತಿಗಳಿಗಾಗಿ ಸಂಪರ್ಕಿಸಿ/ ವಾಟ್ಸ್ ಅಪ್ ಮಾಡಿ
9986167684
ಶ್ರೀಮತಿ ಸುಮಾವೀಣಾ ಅವರು ಈಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಲೇಖಕಿ. ಅವರು ಈ ವರ್ಷ ಕಾಣಿಸಿಕೊಂಡ ಕೊರೊನಾ ಕಾಲದಲ್ಲಿ ಬರೆದ ಕೆಲವು ಪ್ರಬಂಧಗಳು ಇರುವಂತೆ; 2017ರ ನಂತರ ಬರೆದ ಇನ್ನಷ್ಟು ಪ್ರಬಂಧಗಳು ಇಲ್ಲಿವೆ. ಇಲ್ಲಿ ಒಟ್ಟು ಇಪ್ಪತ್ತೊಂದು ಪ್ರಬಂಧಗಳಿವೆ. ಎಲ್ಲಾ ಪ್ರಬಂಧಗಳೂ ಒಂದೇ ರೀತಿ ಇಲ್ಲ. ಅವು ಭಿನ್ನ ಭಿನ್ನ ಧಾಟಿಗಳನ್ನು ಹಿಡಿದಿವೆ.
ಇಲ್ಲಿಯ ಪ್ರಬಂಧಗಳ ವಸ್ತುವಿಷಯಗಳಂತೂ ಬೇರೆ ಬೇರೆಯೇ. ಕೊರೊನಾ ಸಂಬಂಧ ಎರಡು ಪ್ರಬಂಧಗಳಿದ್ದರೆ; ಇಡ್ಲಿ-ಕಾಫಿ-ಉಪ್ಪಿಟ್ಟು ಈ ವಿಷಯಗಳಿಗೆ ಸಂಬಂಧಿಸಿದ ಪ್ರಬಂಧಗಳೂ ಇಲ್ಲಿವೆ. ಅಜ್ಜಿಯ ಜತೆಗಿನ ನೆನಪನ್ನು ಕುರಿತ ಎರಡು ಪ್ರಬಂಧಗಳಲ್ಲಿ ‘ಅಜ್ಜಿಯ ರೈಲು ಚೆಂಬು’ ಮತ್ತು ‘ಹೋಗಿ ಬರುತ್ತೇವೆ ಆ ಬೆಟ್ಟಕೆ’ ನನಗೆ ಇಷ್ಟವಾದ ಪ್ರಬಂಧಗಳು.
ಲಲಿತ ಪ್ರಬಂಧಗಳು ಹೆಸರೇ ಸೂಚಿಸುವಂತೆ, ಜೀವನದಲ್ಲಿ ಕಾಣಿಸಿಕೊಳ್ಳುವ, ನಡೆಯುವ ಸೂಕ್ಷ್ಮಸಂಗತಿಗಳನ್ನು ‘ವಾಸ್ತವ’ಕ್ಕೆ ಅನುಗುಣವಾಗಿ ಲೇಖಕನೊಬ್ಬ ಕಾಣಿಸುವ ಸಾಹಿತ್ಯರೂಪ. ಇದು ಒಂದೊಂದು ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಸುತ್ತದೆ.
ಪ್ರಬಂಧಗಳ ಭಾಷೆ, ನಿರೂಪಣೆ, ಸಂವಹನ ಓದುಗರನ್ನು ಸೆರೆಹಿಡಿದು ನಿಲ್ಲಿಸುತ್ತವೆ. ನಾವು ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಗಳಾದಾಗ ನಮ್ಮ ಅಜ್ಜಿಯರು ಕಣ್ಮರೆಯಾದರು. ನಮ್ಮ ನಮ್ಮ ಮನೆಗಳಲ್ಲಿ ಅಜ್ಜಿಯರಿಲ್ಲ. ಇದು ಆಧುನಿಕ ಪ್ರಪಂಚದ ಬಿಕ್ಕಟ್ಟು ಮತ್ತು ಇಕ್ಕಟ್ಟು. ಇನ್ನು ರಜೆ, ಹಾವು, ಕನ್ನಡಿ, ಕನಸು, ಎಲೆ ಅಡಿಕೆ ಚೀಲ-ಹೀಗೆ, ಹಲವು ವಿಷಯಗಳನ್ನು ಕುರಿತಾದ ಪ್ರಬಂಧಗಳೂ ಇಲ್ಲುಂಟು.
ಮಾಹಿತಿ: ಪುಸ್ತಕದ ಮುನ್ನುಡಿಯಿಂದ
ಪ್ರಕಾಶಕರು: ಅಕ್ಷರ ಮಂಟಪ
ಬೆಲೆ: 125
ಪ್ರತಿಗಳಿಗಾಗಿ ಸಂಪರ್ಕಿಸಿ/ ವಾಟ್ಸ್ ಅಪ್ ಮಾಡಿ
9986167684
ಈಗಾಗಲೇ ಹಲವು ಕೃತಿಗಳ ಮೂಲಕ ಕನ್ನಡನಾಡಿನ ಓದುಗರಿಗೆ ಪರಿಚಿತರಾಗಿರುವ ವಿದ್ವಾಂಸರು,
ಹೆಸರಾಾಂತ ಸಾಹಿತಿಗಳಾದ ಡಾ. ಅಶೋಕ ನರೋಡೆಯವರು ‘ಅಥಣಿಯಿಂದ ಅಬುಧಾಬಿಗೆ’ ಎನ್ನುವಪ್ರವಾಸ ಕಥನವನ್ನು ರಚಿಸಿದ್ದಾರೆ. ‘ದೇಶ ಸುತ್ತು ಕೋಶ ಓದು’ ಇದು ಕನ್ನ ಡದ ಪ್ರಸಿದ್ಧ ಗಾದೆ. ಗಾದೆ
ಚಿಕ್ಕದಾದರೂ ಇದರೊಳಗಿರುವ ಅನುಭವ ಅಪಾರವಾದುದು. ಏಕೆಂದರೆ ನಾವು ಬದುಕುವ
ಪ್ರದೇಶವೇ ಜಗತ್ತು ಎಂದುಕೊಂಡರೆ ಅದು ಕೂಪಮಂಡೂಕ ಬುದ್ಧಿ ಮಿತವಾದ
ಅನುಭವದೊಳಗೆ ಅಹಂಕಾರದ ಅಜ್ಞಾನದಲ್ಲಿ ಕುಬ್ಜರಾಗಿ ಹೋಗುತ್ತೇವೆ. ನಮ್ಮ ಪ್ರದೇಶವನ್ನು
ಬಿಟ್ಟು ಹೊರಗಿನ ಪ್ರದೇಶಗಳಿಗೆ ನಾವು ಹೋದಷ್ಟು ಅನ್ಯ ಬದುಕಿನ ಪರಿಚಯ ನಮಗಾಗುತ್ತದೆ.
ಪ್ರತಿಯೊಂದು ಪ್ರದೇಶಕ್ಕೂ ಅದರದೇ ಆದ ಭೂವೈಲಕ್ಷಣ್ಯ, ಹವಾಮಾನ ಇರುವಂತೆ
ಅದಕ್ಕನುಗುಣವಾಗಿ ಕಟ್ಟಿಕೊಂಡ ಬದುಕು ಬೇರೆ ಪ್ರದೇಶಗಳಿಗಿಂತ ಭಿನ್ನವಾಗಿರುತ್ತದೆ. ಭಾಷೆ, ಆಚಾರ, ವಿಚಾರ, ಧರ್ಮ, ಸಂಸ್ಕೃತಿ, ನಾಗರಿಕತೆ ಪರಂಪರೆ ಎಲ್ಲವೂ ಆನೆಲದ್ದೇ ಆದ ಆಪ್ತತೆಯೊಂದಿಗೆ ಮೈತಾಳಿರುತ್ತದೆ. ಹೀಗಾಗಿ ಪ್ರತಿಯೊಂದು ದೇಶವೂ, ಪ್ರತಿಯೊಂದುಪ್ರದೇಶವೂ ಭಿನ್ನತೆಯೊಳಗೆ ಕಟ್ಟುಕೊಂಡ ಬದುಕಾಗಿ ಈ ಭೂಮಿಯ ಬಹುತ್ವದ ಸಾಕ್ಷಿ ರೂಪಗಳಾಗಿಬೆಳೆದಿರುತ್ತವೆ. ಒಂದು ದೇಶದ ಚರಿತ್ರೆ, ಪುರಾಣ, ಅಲ್ಲಿ ವಾಸಿಸುವ ಜನರ ಬದುಕಿನ ಸಂಕಷ್ಟಗಳೇಆಗಿರುತ್ತದೆ. ಹೀಗಾಗಿ ನಾವು ನಮ್ಮ ಪ್ರದೇಶದ ಮಿತಿಯೊಳಗೇ ಇದ್ದರೆ ಈ ವೈವಿಧ್ಯಗಳು ನಮ್ಮ ಗಮನಕ್ಕೆ ಬರುವುದಿಲ್ಲ.ನಾವು ಕಾಣದ ಕೇಳದ ಎಷ್ಟೋ ಸಂಗತಿಗಳು, ವಸ್ತುಗಳು ನಮಗೆ ಗೋಚರವಾಗಿ ದಿಗ್ಭ್ರಮೆ ಹುಟ್ಟಿಸುತ್ತವೆ.ನಮ್ಮ ತಿಳುವಳಿಕೆಯೇ ಸತ್ಯವೆಂದುಕೊಂಡಿದ್ದರೆ ಅದರಾಚೆಗೆ ಆ ತಿಳುವಳಿಕೆಯನ್ನು ಪಲ್ಲಟಗೊಳಿಸಿದ
ರೀತಿಯೊಳಗೆ ಬದುಕಿನ ವಿನ್ಯಾಸಗಳಿರುತ್ತವೆ. ಹೀಗಾಗಿ ದೇಶಗಳನ್ನು ವಿದೇಶಗಳನ್ನು
ಸುತ್ತುವುದರ ಮೂಲಕ ನಮಗೆ ಬದುಕಿನ ಅಪಾರತೆ ಅರಿವಾಗುತ್ತದೆ. ಹಲವು ಸಂಸ್ಕೃತಿ, ಹಲವು
ಪರಂಪರೆಗಳ ಬದುಕಿನ ವಿನ್ಯಾಸಗಳ ಪರಿಚಯವಾಗುತ್ತದೆ. ನಿಸರ್ಗ ಜಗತ್ತಿನ ಕೌತುಕಗಳ ಪರಿಚಯದ ಜೊತೆಗೆಜೀವಜಗತ್ತಿನ ಪರಿಚಯಗಳೂ ಆಗುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ‘ದೇಶ ಸುತ್ತು’ ಎನ್ನುವ
ಗಾದೆಯ ಅರ್ಧ ವಾಕ್ಯ ಅನುಭವದ ಅಪಾರತೆಯನ್ನು ಕುರಿತು ಹೇಳಿದ ಮಾತಾಗಿದೆ. ನರೋಡೆಯವರು
ಈ ಗಾದೆಯ ಮಾತನ್ನು ತಮ್ಮ ಕೃತಿಯಲ್ಲಿ ಅಕ್ಷರಶಃ ಪಾಲಿಸಿದ್ದೂ, ಪುಸ್ತಕದುದ್ದಕ್ಕೂ ಅಬುಧಾಬಿಯ
ಅನುಭವವನ್ನು ತಮ್ಮದೇ ಖಾಯಂ ಶೈಲಿಯಲ್ಲಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಓದುಗರಿಗೆ
ಇದೊಂದು ಸ್ವಪ್ರವಾಸದ ಅನುಭವವನ್ನು ನೀಡುವುದರಲ್ಲಿ ಅನುಮಾನವಿಲ್ಲ.
ಮಾಹಿತಿ: ಪುಸ್ತಕದ ಮುನ್ನುಡಿಯಿಂದ
ಪ್ರಕಾಶಕರು: ಚೇತನ್ ಬುಕ್ಸ್
ಬೆಲೆ: 200
ಪ್ರತಿಗಳಿಗಾಗಿ ಸಂಪರ್ಕಿಸಿ/ ವಾಟ್ಸ್ ಅಪ್ ಮಾಡಿ
9986167684
Click here to claim your Sponsored Listing.
Category
Contact the business
Telephone
Website
Address
254, 1st Floor, 5th Main, 6th Cross, Indiranagar 1st Stage
Bangalore, 560038
The official page of Nihodo Media Pvt Ltd - An Indo-Japanese cross-media entertainment comp
M. G Road. M. G Road Interstate A Popular Shopping Street In Bangalore
Bangalore, 560002
EconomicTemp Stock Market & Finance 1M views Brings the Latest News headlines. Up-to-date news
# 1541, 16th Main Road M. C. Layout, Vijayanagar
Bangalore, 560040
Vikasa Prakashana
3C-503, Arya Hamsa Apartment
Bangalore, 560083
Writer, Poet, Photographer, Music Lover and a Creative freak
Bangalore, 560078
Spark Publication invites you with an intention to ignite your inner passion for writing and give yo
Whitefield
Bangalore
Thesis dissertation writing, article publication, research paper writing and publication
Bangalore
Tempat menerbitkan naskah menjadi sebuah buku Tanpa seleksi naskah pasti terbit
Maqamerahamat
Bangalore, 560029
Assalamw Alaikum to All and welcome to Maqam E Rahmat our mission is join to you Dargah's, Mosque's,