iammanjuh
ನಾವು ಹಸಿದವರ ಪರ, ದಲಿತರ ಪರ, ಹಿಂದುಳಿದವರ ಪ?

Nice words
ಮೀಸಲಾತಿಯ ವಿರುದ್ಧವಾಗಿರುವಂತಹ ಸರ್ಕಾರಗಳು ಅಸ್ತಿತ್ವದಲ್ಲಿರುವ ಈ ಸಂದರ್ಭದಲ್ಲಿ ಉದ್ಯೋಗದಲ್ಲಿ ಮೀಸಲಾತಿಯು ಮೂಲಭೂತ ಹಕ್ಕಲ್ಲ ಎಂಬುದಾಗಿ ಬಂದಿರುವ ನ್ಯಾಯಲಯದ ತೀರ್ಪು ದುರದೃಷ್ಟಕರ.
ಈ ಹಿಂದೆಯೂ ಸಹ ಇಂತಹ ಆತಂಕಕಾರೀ ಸಂದರ್ಭಗಳು ಎದುರಾದಾಗ ಹಲವು ನ್ಯಾಯವಾದಿಗಳು ತಾವೇ ಸ್ವಯಂ ಆಗಿ ನ್ಯಾಯಾಂಗ ಹೋರಾಟ ನಡೆಸುವಂತಹ ಕೆಲಸ ಮಾಡಿದ್ದರು. ಆದರೆ ಇದೀಗ ಆಳುವ ಪ್ರಭುತ್ವವೇ ಮೀಸಲಾತಿ ವಿರುದ್ಧವಾದ ಧೋರಣೆಯನ್ನು ಹೊಂದಿದ್ದು ಈ ದೇಶದ ಶೋಷಿತರ ಪರವಾದಂತಹ ಸಂಗತಿಗಳನ್ನು ಒಂದೊಂದಾಗಿಯೇ ನಾಶ ಮಾಡುತ್ತಾ ಬರಲಾಗುತ್ತಿದೆ ಎಂಬುದು ಈ ಮೂಲಕ ಸ್ಪಷ್ಟವಾಗುತ್ತಾ ಸಾಗಿದ್ದು ಎಲ್ಲರಲ್ಲೂ ಹೋರಾಟದ ಶಕ್ತಿಯನ್ನು ಸರ್ವಾಧಿಕಾರದ ಮೂಲಕ ನಾಶಪಡಿಸುತ್ತಿದ್ದಾರೆ
ಇನ್ನು ಶೋಷಿತ ವರ್ಗದ ಯುವ ಜನರೂ ಸಹ ಮನುವಾದಿಗಳ ತಾತ್ಕಾಲಿಕ ಬಣ್ಣದ ಮಾತುಗಳಿಗೆ ಮರುಳಾದಂತೆ ತೋರುತ್ತಿದ್ದು ತಮ್ಮದೇ ಸಮುದಾಯಗಳ ಮೇಲಿನ ಐತಿಹಾಸಿಕ ಅವಮಾನ ಹಾಗೂ ಅಮಾನವೀಯ ಪರಂಪರೆಯ ಬಗ್ಗೆ ತಿಳುವಳಿಕೆ ಹೊಂದದೇ ಇರುವವರಂತೆ ವರ್ತಿಸುತ್ತಿರುವುದ್ದು ಅವರೇ ಮನುವಾದಿ ಸಮುದಾಯಗಳ ಶೋಷಣೆ ಆಹಾರವಾಗುವ ಜನ ಎಂಬುದನ್ನು ಸಂಪೂರ್ಣವಾಗಿ ಮರೆತಿದ್ದಾರೆ.
ಅಪಾಯಕ್ಕೆ ಮುನ್ನ ಎಚ್ಚೆತ್ತುಕೊಂಡು ಹೋರಾಡಬೇಕಾದ್ದು ಇಂದಿನ ಪೀಳಿಗೆಯ ಅನಿವಾರ್ಯ ಸನ್ನಿವೇಶಗಳಲ್ಲಿ ಒಂದು. ನೈಜ ಅಪಾಯಗಳು ಒದಗಿದಾಗಲೂ ಸಹ ಸುಮ್ಮನಿದ್ದರೆ ಮುಂದೊಮ್ಮೆ ಹೋರಾಟ ನಡೆಸುವುದಿರಲಿ, ನೆಮ್ಮದಿಯ ಬದುಕೂ ಕೂಡಾ ಕಷ್ಟವಾಗುತ್ತದೆ. ಆಗ ಎದೆ ಬಡಿದುಕೊಂಡರೆ ಎದೆಗೆ ನೋವಾಗುತ್ತದೆಯೇ ವಿನಃ ಇನ್ಯಾವುದೇ ಪ್ರಯೋಜನ ಆಗದು.
Click here to claim your Sponsored Listing.
Videos (show all)
Category
Contact the public figure
Telephone
Website
Address
Hubli