Ellu nine ellellu neene
Hi friends, we have devloped skills and your health with your laughing motivetinol speech for your
Add profile photo
jai hanuma
ನಿತ್ಯ ದೇವರ ಪೂಜೆ ಮಾಡ ಬಯಸುವವರು. ಹಾಗು ಕಾಲದ ಒತ್ತಡ ಇರುವವರು ಮೂವತ್ತು ನಿಮಿಷಗಳಲ್ಲಿ ಈ ಕೆಳಕಂಡಂತೆ ದೇವರ ಪೂಜೆಯನ್ನು ಮಾಡಬಹುದು. (ಸಂಗ್ರಹ)
1. ಪ್ರಾರ್ಥನೆ
ಅಪವಿತ್ರ: ಪವಿತ್ರೊ ವಾ ಸರ್ವಾವಸ್ಥಾಂ ಗತೊಪಿ ವಾ |
ಯ: ಸ್ಮರೆತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರ-ಸುಚಿ: ||
2. ದೀಪವನ್ನು ಹಚ್ಚುವುದು ನಂತರ ಆಚಮನ ಮಾಡುವುದು. ಕೇಶವಾದಿ ನಾಮಗಳನ್ನು ಹೇಳಿ ಪ್ರಾಣಾಯಾಮ ಮಾಡುವುದು
ಓಂ ಅಗ್ನಿನಾಗ್ನಿಃ ಸನಿಧ್ಯತೇ ಕವಿರ್ಗೃಹ ಪತಿರ್ಯುವಾ ಹವ್ಯವಾಡ್ ಜುಹ್ವಾಸ್ಯಃ
3 ಸಂಕಲ್ಪ
ಓಂ ಶ್ರಿಮದ್ ಭಗವಥೊ ಮಹ ಪುರುಶಸ್ಯ ವಿಶ್ಣೊರಾಜ್ಞಾಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ
ದ್ವಿತೀಯ ಪರಾರ್ಧೆ ಶ್ರೀ ಶ್ವೆತವರಾಹ ಕಲ್ಪೆ ವೈವಸ್ವತ ಮನ್ವಂತರೇ
ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ
ಭರತಖಂಡೇ ದಂಡಕಾರಣ್ಯೇ ಗೊದಾವರ್ಯಾಃ ದಕ್ಶಿಣೆ ಪಾರ್ಶ್ವೆ ಶಾಲೀವಾಹನಶಕೆ
ಭೌದ್ಧಾವತಾರೆ ರಾಮಕ್ಷೆತ್ರೆ ಅಸ್ಮಿನ್ ವರ್ತಮಾನೇನ ಚಾಂದ್ರಮಾನೇನ ಅಸ್ಯ ಶ್ರೀ
……. ನಾಮ ಸಂವತ್ಸರೇ ……ಆಯನೇ ………ಋತೌ ……ಮಾಸೇ ……ಪಕ್ಷೇ
…….ತಿಥೌ ……ವಾಸರೇ ……ನಕ್ಷತ್ರೇ ಶುಭಯೊಗ ಶುಭಕರಣ ಎವಂಗುಣ
ವಿಶೇಶಣ ವಿಶಿಷ್ಟಾಯಾಂ ಶುಭತಿಥೌ
ಅಸ್ಮದ್ಗುರೂಣಾಂ ಶ್ರೀಮನ್ಮಧ್ವಾಚಾರ್ಯಾಣಾಂ ಹೃತ್ಕಮಲಮಧ್ಯನಿವಾಸೀ
ಶ್ರೀ ಭಾರತೀರಮಣಮುಖ್ಯಪ್ರಾಣಾಂತರ್ಗತ
ಶ್ರೀ ಲಕ್ಶ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್ಶ್ಮೀನಾರಾಯಣ ಪ್ರೀತ್ಯರ್ಥಂ
ಯತಾ ಶಕ್ತಿ ದಾನಾ ಅವಾಹನಾದಿ ಷೊಡೋಷ ಫೂಜಾಂ ಕರಿಷ್ಯೆ
4. ಕಲಶ ಪೂಜೆ
ಕಲಶಸ್ಯ ಮುಖೇ ವಿಷ್ಣುಃ ಕಂಟೇ-ರುದ್ರ-ಸಮಸ್ರಿತಃ ಮುಲೆ-ತತ್ರಸ್ತಿತೊ ಬ್ರಂಹ
ಮಧ್ಯೆ ಮಾತ್ರು-ಗಣಃ-ಸ್ಮ್ರುತಃ ಕುಕ್ಷೊವ್ತು-ಸಾಗರ-ಸರ್ವೇ ಸಪ್ತ-ದ್ವಿಪ-ವಸುಂಧರ
ಋಗ್-ವೇದೋ ಯಜುರ್-ವೇದಹ ಸಾಮ-ವೇದೋ-ಹ್ಯಾಧರ್ವಣಾ
ಅಂಗೈಶ್ಚ-ಸಹಿತ-ಸರ್ವೇ ಕಲಶಂತು ಸಮಶ್ರಿತ: ಅತ್ರ ಗಾಯತ್ರಿ ಸಾವಿತ್ರಿ ಶಾಂತಿ: ಪುಶ್ಠಿ-ಕರೀತತಾ||
ಆಯಂತು ದೇವ ಪುಜಾರ್ಥಮ್ ದುರಿಥಕ್ಷಯ ಕಾರಕ: ಸರ್ವೇ ಸಮುದರಾ: ಶ್ರಿಥಹ: ತೀರ್ಥಾನಿ ಜಲ ಧನದಹ ಅತ್ರ ಸನ್ನಿಥ ಸಂತು:
ಗಂಗೇಚ-ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು-ಕಾವೇರಿ ಜಲೆಸ್ಮಿನ್ ಸನಿಧಂ-ಕುರು:
ವಿಖ್ಯತ: ಪಂಚಗಂಗಾ ಪ್ರಕಿರ್ತಿತ: ಕಲಶೋದಕೇಣ ಪುಜಾ ದ್ರವಯಾನಿ ಸಮ್ಪ್ರೊಕ್ಶ್ಯ, ದೇವಂ, ಅತ್ಮಂಚ ಸಮ್ಪ್ರೊಕ್ಶ್ಯ
5. ಶಂಖಪೂಜೆ ಮಾಡಿ ನಿರ್ಮಾಲ್ಯವನ್ನು ತೆಗೆಯುವುದು.
ಪಾಂಚಜನ್ಯಯ ವಿದ್ಮಹೇ ಪಾವಮಾನಾಯ ಥೀಮಹೀ, ತನೌ: ಶಂಕ: ಪ್ರಚೋದಯಾತ್
6. ನಂತರ ಸಾಲಿಗ್ರಾಮ, ದೇವರ ವಿಗ್ರಹಗಳನ್ನು ಅಭಿಷೇಖದ ತಟ್ಟೆಯಲ್ಲಿಟ್ಟು ಅಭ್ಭೃಣೀ ಸೂಕ್ತವನ್ನು ಹೇಳುವುದು ಕಲಶದ ನೀರಿನಿಂದ ಅಭಿಷೇಖ ಮಾಡುವುದು.
ಹರಿ: ಓಂ ||
ಅಹಂ ರುದ್ರೇಭೀರ್ವಸುಬಿಶ್ಚರಾಮ್ಯಹಮಾದಿತೈರುತ ವಿಶ್ವದೇವೈ:
ಅಹಂ ಮಿತ್ರಾ ವರುಣೋಭಾಬಿ ಭರ್ಮ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ||
ಅಹಂ ಸೋಮಮಾ ಹನಸಂ ಭಿಭರ್ಮ್ಯಹಂ ತ್ವಷ್ಟಾರಮುತ ಪೂಷಣಂ ಭಗಮ್|
ಅಹಂ ದಧಮಿ ದ್ರವಿಣಂ ಹವಿಷ್ಮ ತೇ ಸುಪ್ರಾವ್ಯೇ ಯೆ ಯೆ ಯಜಮಾನಾಯ ಸುನ್ಚತೇ|
ಅಹಂ ರಷ್ಟ್ರೀಸಂಗಮನೀ ವಸುನಾಂ ಚೀಕಿತುಷೀ ಪ್ರಥಮಾ ಯಜ್ಞೀಯಾನಾಂ|
ತಾಂ ಮಾ ದೇವಾ ವ್ಯದಧು: ಪುರುತ್ರಾಭೂರಿಸ್ಧಾತ್ರಾಂ ಭೂರ್ಯಾವೇಶಯಂತಿಮ್||
ಮಯಾಸೋ ಅನ್ನಮತ್ತಿಯೋವಿಪಶ್ಯತಿ ಯ: ಪ್ರಾಣಿತಿಯ ಈಂಶೃಣೋತ್ಯುಕ್ತಮ್|
ಅಮಂತವೋಮಾಂತ ಉಪಕ್ಷೀಯಂತಿ ಶೄಧಿ ಶ್ರುದ್ದಿವಂತೇ ವದಾಮಿ||
ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿ:|
ಯಂ ಕಾಮಯೇ ತಂತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್ || ೧||
ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೆ ಶರವೇ ಹಂತವಾ ಉ|
ಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾ ಪೃಥಿವೀ ಅವಿವೇಶ|
ಅಹಂ ಸ್ಯ್ವೇ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಮ್ತ: ಸಮುದ್ರೇ|
ತತೋ ವಿತಿಷ್ಠೇಭುವನಾನು ವಿಶ್ವೋ ತಾಮೂಂಧ್ಯಾಂವರ್ಷ್ಮಣೋಪಸ್ಪೃಶಾಮಿ||
ಅಹಮೇವ ವಾತ ಇವ ಪ್ರವಾಮ್ಯಾರಭಮಾನಾ ಭುವನಾನಿ ವಿಶ್ವಾ|
ಪರೋ ದಿವಾ ಪರ ಏನಾ ಪೃಥಿವೈ ತಾವತೀ ಮಹಿನಾ ಸಂಬಭೂವ|| ೨ ||
ಇತ್ಯಂಭೃಣೀಸೂಕ್ತಂ ಸಂಪೂರ್ಣಮ್
ಅಭಿಷೇಖ ಮಾಡಿದ ನೀರನ್ನು ಬೇರೆ ತೆಗೆದಿಡುವುದು ಇದು ನಿರ್ಮಾಲ್ಯ ತೀರ್ಥ.
7. ಅಭಿಷೇಖ - ಕಲಶದ ನೀರನ್ನು ಶಂಖದಿಂದ ತಟ್ಟೆಯಲ್ಲಿರುವ ವಿಗ್ರಹಗಳು ಮತ್ತು ಸಾಲಿಗ್ರಾಮಕ್ಕೆ
ಪುರುಷ ಸೂಕ್ತದಿಂದ
ಹರಿಃ ಓಂ
ತಚ್ಚಂ ಯೋರಾವೃಣೀಮಹೇ| ಗಾತುಂ ಯಜ್ಞಾಯ|
ಗಾತುಂಯಜ್ಞಾಪತಯೇ ದೈವೀ ಸ್ವಸ್ತಿರಸ್ತುನಃ
ಸ್ವಸ್ತಿರ್ಮಾನುಷೇಭ್ಯಃ
ಊರ್ಧ್ವಂ ಜಿಗಾತು ಬೇಷಜಮ್|
ಶಂ ನೋ ಅಸ್ತುದ್ವಿಪದೇ|
ಶಂ ಚತುಷ್ಪದೇ|
ಓಂ ಶಾಂತಿಃ ಶಾಂತಿಃ ಶಾಂತಿಃ
ಓಂ ಸಹಸ್ರಾ ಶೀರ್ಷ ಪುರುಷಃ ಸಹಸ್ರಾಕ್ಷಃ ಸಹಸ್ರಪತ್
ಸ ಭೂಮಿಂ ವಿಶ್ವತೋ ವ್ರುತ್ವಾ ಅತ್ಯತಿಷ್ಟದ್ದಷಂಗುಲಮ್|
ಪುರುಷ ಏವೇದಂ ಸರ್ವಮ್ ಯದ್ಭೂತಂ ಯಚ್ಚಭವ್ಯಮ್
ಉತಾಮೃತತ್ವಸ್ಯೇಶಾನ್ಯೋಯಧನ್ನೆನಾತಿರೋಹತಿ|
ಏತವಾನಸ್ಯ ಮಹಿಮಾ ಅತೋಜ್ಯಾಯಾಂಗ್ ಶ್ಚಒಪೂರುಷ:
ಪಾದೋಸ್ಯ ವಿಶ್ವಾ ಭೂತಾನಿತ್ರಿಪಾದಸ್ಯಾಮೃತಂ ದಿವಿ|
ತ್ರಿಪಾದೂರ್ಧ್ವ ಉದೈತ್ಪುರುಷಃ ಪಾದೋಸ್ಯೇಹಾಭವಾತ್ಪುನಃ
ತತೋ ವಿಶ್ವಜ್ವ್ಯ್ಕ್ರಾಮತ್ಸಾಶನಾನಶನೇ ಅಭಿ|
ತಸ್ಮಾದ್ವಿರಾಡಜಾಯತ ವಿರಜೋ ಅಧಿ ಪುರುಷಃ
ಸ ಜತೋ ಅತ್ಯರಿಚ್ಯತಪಶ್ಚಾದ್ಭೂಮಿಮಥೋ ಪುರಃ|
ಯತ್ಪುರುಷೇಣಹವಿಷಾದೇವಯಜ್ಙ್ನ್ಮಾತನ್ವತ
ವಸಂತೋಅಸ್ಯಸೀದಾಜ್ಯಂಗ್ರೀಷ್ಮ ಇಧ್ಮಃ ಶರದ್ಧವಿಃ|
ತಂಯ್ಯಜ್ಞ್ಂಬರ್ಹಿಷಿಪ್ರೋಕ್ಷನ್ ಪುರುಷ್ಂಜಾತಮಗ್ರತಃ
ತೇನದೆವಾಆಯಜಂತಸಾಧ್ಯಾಋಷಯಶ್ಚಯೇ|
ತಸ್ಮಾದ್ಯಜ್ಞಾತ್ಸರ್ವಹುತಃಸಂಪ್ರಷದಾಜ್ಯಮ್
ಪಷೋನ್ತಾಂಶ್ಚಕ್ರೇವಾಯವ್ಯಾನಾರಣ್ಯಾನ್ ಗ್ರಾಮ್ಯಾಶ್ಚಯೇ|
ತಸ್ಮಾದ್ಯಜ್ಞ್ನಾತ್ ಸರ್ವಹುತಋಚಃಸಾಮಾನಿಜಜ್ಞಿರೇ
ಛಂದಾಂಸಿಜಜ್ಞರೇತಸ್ಮಾದ್ಯಜುಸ್ತಸ್ಮಾದಜಾಯತ|
ತಸ್ಮಾದಶ್ವಾಅಜಾಯಂತಯೇಕೇಚೋಭಯಾದತಃ
ಗಾವೋಹಜಜ್ಞಿರೇತಸ್ಮಾತ್ತಸ್ಮಾಜ್ಜಾತಾಅಜಾವಯಃ|
ಯತ್ಪುರುಷ್ಂವ್ಯದಧುಃಕತಿಧಾವ್ಯಕಲ್ಪಯನ್
ಮುಖಂಕಿಮಸ್ಯಕೋಬಾಹೂಕಾಊರೂಪಾದಾಉಚ್ಯೇತೇ|
ಬ್ರಾಹ್ಮಣೋಸ್ಯಮುಖಮಾಸೀದ್ಬಾಹೂರಾಜನ್ಯಃಕೃತಃ
ಊರೂತದಸ್ಯದ್ವೈಶ್ವಃಬದ್ಬ್ಯಾಂಶೂದ್ರೋಅಜಾಯತ|
ಚಂದ್ರಮಾಮನಸೋಜಾಶ್ಚಕ್ಷೊಃಸುರ್ಯಾಅಜಾಯತ
ಮುಖಾದಿಂದ್ರಶ್ಚಾಗ್ನಿಶ್ಚಪ್ರಣಾದ್ವಾಯುರಜಯತ|
ನಾಭ್ಯಾಅಸೀದಂತರಿಕ್ಷಂಶೀರ್ಷ್ನೋದ್ಯೋಃಸಮವರ್ತತ
ಪದ್ಭ್ಯಾಂಭೂಮಿರ್ದಿಶಃಶ್ರೋತ್ರತ್ತಥಾಲೋಕಾಂಅಕಲ್ಪಯನ್|
ಸಪ್ತಾಸ್ಯಾಸನ್ಪರಿಧಯಸ್ತ್ರಿಃಸಪ್ತಹಮಿಧಃಕೃತಾಃ
ದೇವಾಯದ್ಯಜ್ಞಂತನ್ವಾನಾಅಬಧ್ನನ್ ಪುರುಷಂಪಶುಮ್|
ಯಜ್ಞೇನಯಜ್ಞಮಯಜಂತದೇವಾಸ್ತಾನಿಧರ್ಮಾಣಿಪ್ರಥಮಾನ್ಯಾಸನ್
ತೇಹನಾಕಂಮಹಿಮಾನಃಸಚಂತಯತ್ರಪೂರ್ವೇಸಾಧ್ಯಾಃಸಂತಿದೇವಾಃ
ಓಂ
ಓಂ
ತಚ್ಚಂ ಯೋರಾವೃಣೀಮಹೇ| ಗಾತುಂ ಯಜ್ಞಾಯ|
ಗಾತುಂಯಜ್ಞಾಪತಯೇ ದೈವೀ ಸ್ವಸ್ತಿರಸ್ತುನಃ
ಸ್ವಸ್ತಿರ್ಮಾನುಷೇಭ್ಯಃ
ಊರ್ಧ್ವಂ ಜಿಗಾತು ಬೇಷಜಮ್|
ಶಂ ನೋ ಅಸ್ತುದ್ವಿಪದೇ|
ಶಂ ಚತುಷ್ಪದೇ|
ಓಂ ಶಾಂತಿಃ ಶಾಂತಿಃ ಶಾಂತಿಃ
ಈ ನೀರನ್ನು ತೆಗೆದು ಬೇರೆ ಇಡಿ ಇದು ತೀರ್ಥ.
8. ಅಲಂಕಾರ ಅಲಂಕಾರ ಮಾಡುವಾಗ ಹೂಗಳು, ಅಕ್ಷತೆ ತುಳಸಿಯಿಂದ, ಕೇಶವ ನಾಮಗಳನ್ನು ಹೇಳುತ್ತಾ ಹಾಕಬೇಕು. ಸಮಯವಿದ್ದರೆ ವಿಷ್ಣು ಸಹಸ್ರನಾಮ, ಕೃಷ್ಣಾಷ್ಟಕ, ದ್ವಾದಶ ಸ್ತೋತ್ರ ಹೇಳಬಹುದು.
9. ಧೂಪ
ವನಸ್ಪತ್ಯುದ್ಭವೊಂ ದಿವ್ಯೋ ಗಂಧಾಢ್ಯೋಗಂಧ ಊತ್ತಮ|
ಅಘ್ರೇಯಸ್ಸರ್ವ ದೇವನಾಂ ಧೂಪೊಯಂ ಪ್ರತಿಗೃಹ್ಯತಾಂ||
10. ದೀಪ ದೀಪವನ್ನು ಹಚ್ಚುವುದು.
ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾ ಯೊಜಿತಂ ಮಯಾ|
ದೀಪಂ ಗ್ರುಹಾಣ ದೇವೇಶ ತ್ರೈಲೋಕ್ಯ ತಿಮಿರಾಪಹ||
11. ನೈವೇದ್ಯ ದೇವರ ಮುಂದೆ ಚೌಕಾಕಾರ ಮಂಡಲವನ್ನು ಮಾಡಿ ಅದರ ಮಧ್ಯದಲ್ಲಿ ಓಂ ಶ್ರೀ ಎಂದು ಬರೆದು ಅದರಮೇಲೆ ನೈವೇದ್ಯವನ್ನು (ತಟ್ಟೆ ಅಥವಾ ತಟ್ಟೆಯಲ್ಲಿ ಬಾಳೆ ಎಲೆಯಮೇಲೆ ) ಇಡಬೇಕು.
ಶ್ರೀ ವಾಸುದೇವನು ಅನ್ನದಲ್ಲಿ, ಸಂಕರ್ಷಣನು ಇತರ ಭಕ್ಷಗಳಲ್ಲಿ , ಪ್ರದ್ಯುಮ್ನನು ಪಾಯಸದಲ್ಲಿ, ಅನಿರುದ್ಧನೂ ತುಪ್ಪದಲ್ಲಿ, ನಾರಾಯನು ಎಲ್ಲದರಲ್ಲಿ ಇದ್ದಾನೆಂದು ಮನಸ್ಸಿನಲ್ಲಿ ಅಂದುಕೊಳ್ಳಬೇಕು.
12. ಪರಿಶಿಂಚಾಮಿ ನೈವೇದ್ಯದಮೇಲೆ ಕಳಸದ ನೀರನ್ನು ಉದ್ಧರಣೆಯಿಂದ ಹಾಕಿಕೊಂಡು. ಪ್ರತಿಭಾರಿ.
ಓಂ ಸತ್ಯಂತ್ವರ್ತೇನ ಪರಿಶೀಚಾಮಿ.
ಓಂ ಅಮೃತಾಪಿ ಸ್ತರಣಮಸಿಶ್ಚಾಹ
ಓಂ ಪ್ರಾಣಾಯಾಸ್ವಾಹ ಶ್ರೀ ಅನಿರುದ್ಧಾಯ ಇದಂ ನಮಮ
ಓಂ ಅಪಾನಾಯಸ್ವಾಹ ಶ್ರೀ ಪ್ರದ್ಯುಮ್ನಅಯ ಇದಂ ನಮಮ
ಓಂ ವ್ಯಾನಾಯಸ್ವಾಹಾ ಶ್ರೀ ಸಂಕರ್ಷಣಾಯ ಇದಂ ನಮಮ
ಓಂ ಉದಾನಾಯಸ್ವಾಹ ಶ್ರೀ ವಾಸುದೇವ ಇದಂ ನಮಮ
ಓಂ ಸಮಾನಾಯಸ್ವಾಹ ಶ್ರೀ ನಾರಾಯಣ ಇದಂ ನಮಮ
ಓಂ ಅಮೃತಾಪಿ ದಾನಮಪಿ ಸ್ವಾಹಾ
ಉತ್ತರಾಪೋಶಮ್ ಸಮರ್ಪಯಾಮಿ
ಹಸ್ತಪ್ರಕ್ಷಾಲನಂ ಸಮರ್ಪಯಾಮಿ
ಅಚಮನೀಯನಮ್ ಸಮರ್ಪಯಾಮಿ
ತಾಂಬೂಲಮ್ ಸಮರ್ಪಯಾಮಿ
ಹಿರಣ್ಯಂ ಸಮರ್ಪಯಾಮಿ
ಅನೇನ ಯಥಶಕ್ತಿ ಯಥಾಮತಿ ಸಂಪಾದಿತ ದ್ರವ್ಯೈ: ನೈವೇದ್ಯಾರ್ಪಣೇನ್ ಸಶ್ರಿಕಃ ಸಪರಿವಾರಃ ಶ್ರೀ ಸಿಲಕ್ಷ್ಮಿನಾರಯನಾ ಪ್ರೀಯತಾಂ ಸುಪ್ರೀತೋ ವರದೋ ಭವತು|
ಶ್ರೀ ಕೃಷ್ಣಾರ್ಪಣಮಸ್ತು|
13. ರಾಮಾ ನೈವೇದ್ಯ. ತಟ್ಟೆಯಲ್ಲಿ ದೇವರಿಗೆ ಅರ್ಪಿಸಿದ ಭಕ್ಷಗಳನ್ನು. ಇನ್ದಡೋದರಲ್ಲಿ ಹಾಕಿ. ಇದನ್ನು ಹೇಳಿ
ರಮಾ ಬ್ರಹ್ಮಾದಯೋ ದೇವಃ ಸನಕಾದ್ಯ ಶುಕಾದಯಃ |
ಶ್ರೀ ನೃಸಿಂಹಃ ಪ್ರಸದೋಯಂ ಸರ್ವೇ ಗ್ರುಹ್ಣಂತುವೈಷ್ಣವಾಃ ||
14. ಮಂಗಳಾರತಿ
ವೆಂಕಟೆಶೋ ವಾಸುದೇವಃಪ್ರದ್ಯುಮ್ನೋಮಿತ ವಿಕ್ರಮಃ|
ಸಂಕರ್ಷ್ಣೋನಿರುದ್ಧಶ್ಚ ಶೆಷಾದ್ರಿ ಪತಿರೇವಚ||
ಜನಾರ್ಧ್ನಃ ಪದ್ಮನಾಭೋ ವೆಂಕಟಾಚಲವಾಸನಃ|
ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ||
ಕಲ್ಯಾಣದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ|
ಶ್ರೀ ಮದ್ವೇಂಕಟನಥಾಯ ಶ್ರೀನಿವಾಸಾಯತೇ ನಮಃ||
ಓಂ ನಮೋ ನಾರಾಯಣಾಯ ಮಂಗಳಂ ನೀರಾಜನಂ ಸಮರ್ಪಯಾಮಿ||
ಭಗವತೆ ಇಧಮ್ ನಮಮ
15. ಸಮರ್ಪಣಾ ತುಳಸೀ ದಳ , ಅಕ್ಷತೆ, ಹೂವನ್ನು ಕೈಯಲ್ಲಿ ಹಿಡಿದು ಮಂತ್ರವನ್ನು ಹೇಳಿ ಪಾದಕ್ಕೆ ಹಾಕುವುದು.
ಯಸ್ಯಸ್ಮೃತ್ಯಾಚ ನಾಮೋಕ್ತ್ಯಾ ತಪೇಪೂಜಾಕ್ರಿಯಾದಿಷು ನ್ಯೂನಂ ಸಂಪೂರ್ಣ
ತಾಂಯಾತಿ ಸದ್ಯೋವಂದೇ ತಮಚ್ಯುತಂ ಮಂತ್ರಹೀನಂ ಕ್ರಿಯಾಹಿನಂ ಭಕ್ತಿಹಿನಂ ರಮಾಪತೇ|
ಯತ್ಕೃತಂತು ಮಯಾದೇವ ಪರಿಪೂರ್ಣಂ ತದಸ್ತುಮೆ||
ಕಾಯೇನವಾಚಾ ಮನಸೇಂದ್ರಿಯ್ಯೆರ್ವಾ ಬುಧ್ಯಾತ್ಮನಾವಾ ಪ್ರಕೃತೇಃ ಸ್ವಭವಾತ್
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಯೇತಿಸಮರ್ಪಯಾಮಿ||
ಅನಯಾ ಪೂಜಯಾ ಶ್ರೀ ಭರತೀರಮಣ ಮುಖ್ಯಪ್ರಾಣಂತರ್ಗತ ಶ್ರೀ ಲಕ್ಷ್ಮೀವೆಂಕಟೇಶಾತ್ಮಕ ಶ್ರೀ ನರಸಿಂಹಾತ್ಮಕ ಶ್ರೀ ಲಕ್ಷ್ಮಿನಾರಾಯಣಃ ಪ್ರೀಯ ತಾಂ ಪ್ರಿತೋಭವತು
ಶ್ರೀಕೃಶ್ಣರ್ಪಣ್ಮಸ್ತು.||
ತೀರ್ಥ, ತುಳಸಿ , ಗಂಧ, ಅಕ್ಷತೆಯನ್ನು ದೇವರ ಪ್ರಸಾದವೆಂದು ಸ್ವೀಕರಿಸಬಕು.
ವಿ.ಸೂ : 16 ತರಹದ ಕ್ರಿಯೆಗೆ ಷೋಡಶ ಉಪಚಾರ ಪೂಜೆ ಎಂದು ಕರೆಯುತ್ತಾರೆ. ಧ್ಯಾನ, ಆವಾಹನ, ಆಸನ, ಪಾದ್ಯ , ಅರ್ಘ್ಯ, ಆಚಮನ, ಸ್ನಾನ, ವಸ್ತ್ರ ಯಜ್ನೋಪವೀತ, ಗಂಧ, ಪುಷ್ಪ , ಧೂಪ, ದೀಪ, ನೈವೇದ್ಯ, ತಾಂಬೂಲ, ನೀರಾರ್ಜನ.
***
ಪ್ರಾಣ ಬಂದ ಮನೆಗೆ ........ಶ್ರೀರಾಮನಾಮ ದ್ವನಿಗೆ.......
ಹನುಮನೆಂದರೆ .......ಸಾಕು ...ಬರುವಾ ನಮ್ಮ ಬಳಿಗೆ.....
ಮುಚ್ಚುಗ(ಟಚ್ಮಿ ನಾಟ್ ): ಇದರಲ್ಲಿ ಮೂರು ವಿಧ ಹೊರಮುಚ್ಚುಗ ಒಳ ಮುಚ್ಚುಗ ಮತ್ತು ಮುಳ್ಳು ಇಲ್ಲದ ಮುಚ್ಚುಗ ಇದು ಮೆಡಿಸಿನ್ ಗೆ ಬರುವುದಿಲ್ಲ ಆದರೆ ತೋಟಗಾರಿಕೆ ಯಲ್ಲಿ ಇದನ್ನು ಹಬ್ಬಿಸಿದರೆ ಬೇರೆ ಯಾವ ಕಳೆಯೂ ಏಳುವುದಿಲ್ಲ ನಂತರ ಕಟಾವು ಮಾಡಿದರೆ ಯಾವುದೇ ಕಳೆನಾಶಕದ ಬಳಕೆ ಇಲ್ಲದೆ ಭೂಮಿಯ ಫಲವತ್ತತೆ ಹೆಚ್ಚಿಸುತ್ತದೆ.
ಮುಳ್ಳುಇರುವ ಮುಚ್ಚುಗ ದ ಪಂಚಾಂಗ (ಬೇರು,ಕಾಂಡ,ಎಲೆ,ಹೂವು, ಕಾಯಿ)ವೂ ಮೆಡಿಸಿನ್ ನಲ್ಲಿ ಬಳಕೆ ಆಗುತ್ತದೆ.
1)ಮುಚ್ಚುಗ ದ ಎಲೆ ರಸ ತೆಗೆದು ಗೋ ಮೂತ್ರದಲ್ಲಿ ಸೇರಿಸಿ ಕಣ್ಣಿಗೆ ಅಂಜನ ಹಾಕಿದರೆ ಕಣ್ಣಿನ ಒಳಗಡೆ ಬೆಳೆದ ಮಾಂಸ ವೃದ್ಧಿ ಕರಗಿ ಗುಣವಾಗುತ್ತದೆ.
2)ಇದರ ಪಂಚಾಂಗದ ಕಷಾಯ ವನ್ನು ದಿನವೂ ಕುಡಿಯುತ್ತಿದ್ದರೆ ಮೂತ್ರದ ಕಲ್ಲು ಚಿಕ್ಕದಿದ್ದರೆ ಗುಣವಾಗುತ್ತದೆ.
3) ಇದರ ಎಲೆ ರಸವನ್ನು ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಕೆಮ್ಮು ಗುಣವಾಗುತ್ತದೆ.
4)ಇದರ ಪಂಚಾಂಗದ ಕಷಾಯ ಮಾಡಿ ಕುಡಿದರೆ ಪಿತ್ತ ಜ್ವರ ಗುಣವಾಗುತ್ತದೆ.
5)ಹೊರ ಮುಚ್ಚುಗ ದಿಂದ ತಯಾರಿಸಿದ ಮೆಡಿಸಿನ್ ಪ್ರಥಮ ಹಂತದಲ್ಲಿ ಗರ್ಭ ಕೋಶದ ಜಾರುವಿಕೆ ಗುಣಪಡಿಸುತ್ತದೆ.
6)ಹೊರಮುಚ್ಚುಗ ಪಶು ರೋಗಗಳು ಗುಣಪಡಿಸಲು ಸಹಕಾರಿ.
7)ಮುಚ್ಚುಗದ ಎಲೆಗಳನ್ನು ಕಾಳುಮೇಣಸನ್ನು ಉಪ್ಪು ಹಾಕಿ ಚೆನ್ನಾಗಿ ಅರೇದು ಉಂಡೆ ಮಾಡಿ ಹಲ್ಲು ನೋವಿನ ಜಾಗದಲ್ಲಿ ಒತ್ತಿ ಕಚ್ಚಿ ಹಿಡಿದಿಟ್ಟುಕೊಂಡರೆ ಹಲ್ಲು ನೊವು ಮಾಯವಾಗುತ್ತದೆ.ಹಲ್ಲು ಹುಳುತಿಂದು ಆಳವಾಗಿದ್ದರೆ ನೋವು ನಿವಾರಣೆ ಆದನಂತರ ಕಿಳಿಸುವುದು ಉತ್ತಮ.
ಹಲ್ಲು ಗಟ್ಟಿಯಾಗಿ ಹುಳುಕಾಗದೇ ಇರಲು ಹಲ್ಲುಪುಡಿ ತಯಾರಿಕಾ ವಿಧಾನ ; ಮುಚ್ಚುಗ, ಪೆಪ್ಪರ್ ಮಿಂಟ್, ಪಚ್ಚೆ ಕರ್ಪುರ ಅಜ ವಾನ(ಓಂ ಕಾಳು) ಲವಂಗ, ಏಲಕ್ಕಿ,ತೇಜ ಪತ್ರ, ದಾಲ್ಚಿನ್ನಿ,ಚಂದನ,ಜಾಪತ್ರೆ ಜಾಯಿಕಾಯಿ,ಕರಿ ಮೆಣಸು,ಕಮಲದ ಹೂ, ಅಶ್ವಗಂಧ,ಸೋಮ ಲತಾ,ಪುನರ್ನವಾ, ಆಡುಸೋಗೆ, ಶುದ್ಧ ಮಾಡಿದ ಚಿತ್ರ ಮೂಲಾ, ಅಮೃತ ಸತ್ವ, ನೆಲನೆಲ್ಲಿ, ಶ್ವೇತ ಚಂದನ, ಹಿಪ್ಪಲಿ, ಚಿಕ್ಕ ಹಿಪ್ಪಲಿ,ಚವ್ಯ, ಶುಂಠಿ,ಕೊನ್ನಾರಿ ಗಡ್ಡೆ,ಸೋಂಪು,ಬಿಳಿ ಮತ್ತಿ,ಶಂಖ ಪುಷ್ಪ,ಜಾಲಿ, ಬೇವು,ಬಕುಳ,ನೇಪಾಳಿಧನಿಯಾ,ಪಟಿಗಾರ,ಕರಿಉಪ್ಪು,ಸಮುದ್ರ ನೊರೆ,ಸೈದವಲವಣ ಇಷ್ಟೆಲ್ಲಾ ವಸ್ತು ಗಳನ್ನು ಪುಡಿ ಮಾಡಿ ಡಬ್ಬಿ ತುಂಬಿ ಗಾಳಿ ಆಡಿದಂತೆ ಇಡಿ . ಹೋತ್ತಿಗೆ ಒಂದು ಚಿಟಿಕೆ ಕೈಗೆತ್ತಿಕೊಂಡು ಬ್ರಶ್ ಅಥವಾ ತೋರುಬೆರಳಿನಿಂದ ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕಿದರೆ ಸುಂದರ ಆರೋಗ್ಯ ವಂತ ಹಲ್ಲು ನಿಮ್ಮದಾಗುತ್ತದೆ.ತಯಾರಿಕೆ ಕಷ್ಟಸಾಧ್ಯ ಎನಿಸಿದರೆ ನನ್ನಲ್ಲಿ ತಯಾರಿಕೆ ಇದೆ ತರಿಸಿ ಕೊಳ್ಳಬಹುದು.🖋 ಸುಮನಾ ಮಳಲಗದ್ದೆ.9980182883.
Click here to claim your Sponsored Listing.
Videos (show all)
Category
Contact the place of worship
Telephone
Website
Address
Shimoga
Kudli
Shimoga, 577227
JAGADGURU SRIMAN MADHWACHARYA MOOLA MAHA SAMSTHANA, SRI KUDLI ARYA AKSHOBHYA TEERTH MATHA. (Official page)
Behind Tunga Nagara Police Station, Kelagina Tunga Nagara
Shimoga, 577202
Sri Ganapathi Temple
Shimoga, 577204
ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಪರ್ಕಿಸಿ....
Hosalli, Heddur, Thirthahalli
Shimoga, 577205
Somavarasanthe is a beautiful, auspicious Temple, Goddess Adhishakthi is the presiding deity of Thi