BBMP Chief Commissioner
ತುಷಾರ್ ಗಿರಿ ನಾಥ್ ಐಎಎಸ್, ಮುಖ್ಯ ಆಯುಕ್ತರು, ಬಿಬಿಎಂಪಿ
Tushar Giri Nath IAS, Chief Commissioner, BBMP
ಮುಂಬರುವ ಸಾರ್ವತ್ರಿಕಾ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರು ನಗರದ ಮತ ಎಣಿಕೆ ಕೇಂದ್ರವಾದ ಸೆಂಟ್ ಜೋಸೆಫ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಈ ವೇಳೆ ಬೆಂಗಳೂರು ನಗರದ ಅಪರ ಜಿಲ್ಲಾ ಚುನಾವಣಾಧಿಕಾರಿಯಾದ ಡಾ. ದಯಾನಂದ್, ಚುನಾವಣಾ ವಿಭಾಗದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Chief Electoral Officer Karnataka
ಮುಂಬರುವ ಸಾರ್ವತ್ರಿಕಾ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರು ದಕ್ಷಿಣದ ಮತ ಎಣಿಕೆ ಕೇಂದ್ರವಾದ ಜಯನಗರದ ಎಸ್.ಎಸ್.ಎಂ.ಆರ್.ವಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಈ ವೇಳೆ ಬೆಂಗಳೂರು ನಗರದ ಅಪರ ಜಿಲ್ಲಾ ಚುನಾವಣಾಧಿಕಾರಿಯಾದ ವಿನೋತ್ ಪ್ರಿಯಾ, ಚುನಾವಣಾ ವಿಭಾಗದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Election Commission of India Chief Electoral Officer Karnataka
ಮುಂಬರುವ ಸಾರ್ವತ್ರಿಕಾ ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರು ಕೇಂದ್ರದ ಮತ ಎಣಿಕೆ ಕೇಂದ್ರವಾದ ವಸಂತನರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಈ ವೇಳೆ ಬೆಂಗಳೂರು ಕೇಂದ್ರದ ಅಪರ ಜಿಲ್ಲಾ ಚುನಾವಣಾಧಿಕಾರಿಯಾದ ಡಾ. ಕೆ. ಹರೀಶ್ ಕುಮಾರ್, ಚುನಾವಣಾ ವಿಭಾಗದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Election Commission of India Chief Electoral Officer Karnataka
ಮಾಚ್೯ 3ರಿಂದ 6 ರವರೆಗೆ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪೋಷಕರು 5 ವರ್ಷದೊಳಗಿನ ಮಕ್ಕಳನ್ನು ನಿಮ್ಮ ಹತ್ತಿರದ ಬೂತ್‌ಗೆ ಕರೆತಂದು ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ.
ಎರಡು ಹನಿಗಳು ಪೋಲಿಯೊ ವಿರುದ್ಧ ನಿರಂತರ ಗೆಲುವು.
DK Shivakumar Dinesh Gundu Rao
ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳ ಮಾಹಿತಿಗಳನ್ನು ಕಡ್ಡಾಯವಾಗಿ ಸ್ವಯಂ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಪೋರ್ಟಲ್ https://bbmp.oasisweb.in/TankerManagement/SelfRegistration.aspx ಗೆ ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರು ಭೇಟಿ ನೀಡಿ ದಿನಾಂಕ: 01-03-2024 ರಿಂದ 07-03-2024 ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
DK Shivakumar
ನಗರದಲ್ಲಿ ದಿನಾಂಕ: 03-03-2024 ರಿಂದ 06-03-2024 ರವರೆಗೆ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪೋಷಕರು 5 ವರ್ಷದೊಳಗಿನ ಮಕ್ಕಳನ್ನು ನಿಮ್ಮ ಹತ್ತಿರದ ಬೂತ್‌ಗೆ ಕರೆತಂದು ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ.
ಎರಡು ಹನಿಗಳು ಪೋಲಿಯೊ ವಿರುದ್ಧ ನಿರಂತರ ಗೆಲುವು.
DK Shivakumar
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿ ಫೆಬ್ರವರಿ 2024ರ ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ವೇಳೆ ಉಪ ಆಯುಕ್ತರಾದ ಮಂಜುನಾಥ್ ಸ್ವಾಮಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
DK Shivakumar
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2024-25ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಸರ್. ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್) ದಲ್ಲಿ ಇಂದು ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಶಿವಾನಂದ ಕಲಕೇರಿ ರವರು ಪ್ರಸ್ತುತಿ ಪಡಿಸಿದರು.
2024-25ನೇ ವರ್ಷದಲ್ಲಿ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 12,371.63 ಕೋಟಿ ರೂ.ಗಳಷ್ಟು ಇದ್ದು, ಒಟ್ಟು ಖರ್ಚು 12,369.46 ಕೋಟಿ ರೂ. ಇರಲಿದೆ.
ಈ ವೇಳೆ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್ ರವರು ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಬಿಎಂಪಿಯ 2024-25ನೇ ಸಾಲಿನ ಆಯವ್ಯಯ ಅಂದಾಜುಗಳ ಪ್ರಸ್ತುತಿ ನೇರಪ್ರಸಾರ
BBMP Budget 2024-25 BBMP Budget 2024-25
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಅಭಾವ ಕುರಿತು ಬೆಂಗಳೂರು ಜಲಮಂಡಳಿ ಅದ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ರವರ ಜೊತೆಗೂಡಿ ಜಲಮಂಡಳಿಯ ಕಾವೇರಿ ಭವನದ ಸಭಾಂಗಣದಲ್ಲಿ ಜಂಟಿ ಸುದ್ಧಿಗೋಷ್ಠಿಯನ್ನು ನಡೆಸಲಾಯಿತು.
ಈ ವೇಳೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್, ಸಾರಿಗೆ ವಿಭಾಗದ ಜಂಟಿ ಆಯುಕ್ತರಾದ ಶೋಭಾರಾಣಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
DK Shivakumar
'ಮಾರ್ಗಸೂಚಿ ಮೌಲ್ಯ ಆಧಾರಿತ ಆಸ್ತಿತೆರಿಗೆಯ ಪದ್ಧತಿಯ ಪ್ರಮುಖ ಅಂಶಗಳು'
(1) ಮಾರ್ಗಸೂಚಿ ಮೌಲ್ಯ ಆಧಾರಿತ ಆಸ್ತಿ ತೆರಿಗೆ ಪದ್ಧತಿಗೆ ಬದಲಾವಣೆಯ ಗುರಿಯು ಆಸ್ತಿತೆರಿಗೆಯನ್ನು ಸರಳ ಮತ್ತು ತರ್ಕಬದ್ಧವಾಗಿಸುವುದಕ್ಕಾಗಿಯೇ ಹೊರತು, ಬಿಬಿಎಂಪಿಯು ತೆರಿಗೆಯ ಹೊರೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿಲ್ಲ.
ಕರ್ನಾಟಕ ರಾಜ್ಯದ ಎಲ್ಲಾ ಪಾಲಿಕೆ, ನಗರ ಸಭೆ, ಪುರಸಭೆಗಳು 2003 ರಿಂದ ಮಾರ್ಗಸೂಚಿ ಮೌಲ್ಯ ಆಧಾರಿತ ಆಸ್ತಿ ತೆರಿಗೆಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಬಿಬಿಎಂಪಿ ಮಾತ್ರ ಇದಕ್ಕೆ ಹೊರತಾಗಿರುತ್ತದೆ.
(2) ಹೊಸ ವಿಧಾನದ ಪ್ರಕಾರ ತೆರಿಗೆಯನ್ನು 2016ರ ದರಗಳ ತೆರಿಗೆಗಿಂತ ಶೇ. 20 ಹೆಚ್ಚಳಕ್ಕೆ ಮಿತಿಗೊಳಿಸಲಾಗಿದೆ. ಆದ್ದರಿಂದ ಯಾವುದೇ ಆಸ್ತಿಯು ಶೇ. 20 ಕ್ಕಿಂತ ಹೆಚ್ಚು ಏರಿಕೆ ಅಗುವುದಿಲ್ಲ. ಅನೇಕ ತೆರಿಗೆದಾರರಿಗೆ ಯಾವುದೇ ಹೆಚ್ಚಳ ಆಗುವುದಿಲ್ಲ.
(3) 2016 ರ ದರಕ್ಕಿಂತ ಸರಾಸರಿ ಹೆಚ್ಚಳವು ಶೇ. 10 ಕ್ಕಿಂತ ಕಡಿಮೆ ಇರುತ್ತದೆ ಹಾಗೂ 2016 ನೇ ಸಾಲಿನಿಂದ ತೆರಿಗೆ ದರಗಳಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ.
(4) 2008 ರ ದರಗಳಿಗಿಂತ 2016 ರಲ್ಲಿ ವಸತಿ ತೆರಿಗೆಯನ್ನು ಶೇ. 20 ಮತ್ತು ವಸತಿಯೇತರ ತೆರಿಗೆಯನ್ನು ಶೇ. 25 ರಷ್ಟು ಹೆಚ್ಚಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.
(5) ಪ್ರಸ್ತುತ ತೆರಿಗೆ ವ್ಯವಸ್ಥೆಯು 17 ವರ್ಗಗಳನ್ನು ಹೊಂದಿದ್ದು, ಪ್ರತಿ ವರ್ಗವನ್ನು 6 ವಲಯಗಳಾಗಿ ವಿಂಗಡಿಸಲಾಗಿದೆ. ಹಲವು ಉಪಯೋಗದ ಸ್ವತ್ತುಗಳನ್ನು ಒಂದಕ್ಕಿಂತ ಹೆಚ್ಚಿನ ವರ್ಗಗಳಲ್ಲಿ ಸೂಚಿಸಲಾಗಿತ್ತು. ಸದರಿ ವ್ಯವಸ್ಥೆಯು ತುಂಬಾ ಕ್ಲಿಷ್ಟಕರವಾಗಿದ್ದು, ಬಿಬಿಎಂಪಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸಾಕಷ್ಟು ವಿವೇಚನೆಗೆ ಅವಕಾಶ ನೀಡಿತು.
(6) ಹೊಸ ಮಾರ್ಗಸೂಚಿ ಮೌಲ್ಯ ಆಧಾರಿತ ತೆರಿಗೆಯು ಕೇವಲ 6 ಸ್ಪಷ್ಟ ಮತ್ತು ನಿಸ್ಸಂದಿಗ್ಧವಾದ ವರ್ಗಗಳನ್ನು ಹೊಂದಿದೆ.
(1) ವಸತಿ
(2) ವಸತಿಯೇತರ (ಕೈಗಾರಿಕಾ ಮತ್ತು ಸ್ಟಾರ್ ಹೋಟೆಲ್‌ಗಳನ್ನು ಹೊರತುಪಡಿಸಿ)
(3) ಸ್ಟಾರ್ ಹೋಟೆಲ್‌ಗಳು
(4) ಕೈಗಾರಿಕೆಗಳು
(5) ವಿನಾಯಿತಿಗೆ ಒಳಪಡುವ ಸ್ವತ್ತುಗಳು.
(6) ಗುಡಿಸಲುಗಳು ಮತ್ತು ಬಿಡವರಿಗಾಗಿ ವಸತಿ ಘಟಕಗಳು.
'Salient Points on Guidance Value based Property Tax'
(1) Aim of change to Guidance Value based property tax is to make it simpler and rational and BBMP isn’t aiming to increase tax burden.
All municipalities in Karnataka use GV based property tax since 2003. Bangalore was only exception.
(2) Tax as per new method is capped at 20% increase over tax as per 2016 rates. So no property will see increase more than 20%. Many will see no increase at all.
(3) Avg increase over 2016 rate is less than 10%. There has been zero increase in tax rates since 2016.
(4) Pls note that in 2016 the residential tax was increased by 20% and non residential by 25% over 2008 rates.
(5) 2016 ARV Tax System had 17 categories with each category further divided into 6 zones. Many categories are overlapping. System was complicated and gave a lot of discretion to BBMP staff and officers.
(6) New GV based tax has only 6 clear and unambiguous categories
(1) Residential
(2) Commercial (except Industies and Star Hotels)
(3) Star Hotels
(4) Industries
(5) Exempted
(6) Hutments and Poor Housing units
DK Shivakumar
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಅಭಾವ ಕುರಿತು ಮಾನ್ಯ ಆಡಳಿತಗಾರರು ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ಶ್ರೀ ರಾಕೇಶ್ ಸಿಂಗ್ ರವರ ಜೊತೆಗೂಡಿ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಿ ಅಗತ್ಯ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಜಲಮಂಡಳಿಯ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್, ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಎಲ್ಲಾ ವಲಯ ಆಯುಕ್ತರುಗಳು, ವಲಯ ಜಂಟಿ ಆಯುಕ್ತರು, ಪಾಲಿಕೆ/ಜಲಮಂಡಳಿ ಅಧಿಕಾರಿಗಳು ಹಾಜರಿದ್ದರು.
DK Shivakumar
ಪ್ರಿಯ ನಾಗರಿಕರೇ,
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಮಾಲೀಕರಿಗಾಗಿ ‘ಒನ್ ಟೈಮ್ ಸೆಟ್ಲ್ ಮೆಂಟ್’(ಒಟಿಎಸ್) ಅನ್ನು ಆನ್‌ಲೈನ್ ಮೂಲಕ ಪಾವತಿಸಲು ಅವಕಾಶ:
ಬಿಬಿಎಂಪಿಯು ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ OTS GO ಅನ್ನು ಜಾರಿಗೆ ತಂದಿದೆ. ಒಟಿಎಸ್ ಅನ್ನು ತಕ್ಷಣವೇ ಪಾವತಿಸಿ. ಬಡ್ಡಿ ಮನ್ನಾ, ದಂಡ ಕಡಿತ ಮತ್ತು ಬಾಕಿಯ ಮೇಲಿನ 5-ವರ್ಷದ ಮಿತಿ(ವಸತಿ ಮತ್ತು ಮಿಶ್ರ ಬಳಕೆಗಾಗಿ) ಸಂಪೂರ್ಣ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಿ.
ದಯವಿಟ್ಟು ಆನ್‌ಲೈನ್‌ನಲ್ಲಿ ಪಾವತಿಸಿ.
https://bbmptax.karnataka.gov.
Dear Citizens,
OTS GO on Property Tax Implemented in Software — All Citizens can now Pay Online taking full benefit of OTS
BBMP has implemented the OTS GO in ONLINE Proeprty Tax Payment System.
All are welcome to pay immediately and take full benefit of interest waiver and penalty reduction plus 5-year limitation on arrears (for residential and mixed use).
Please pay online at
https://bbmptax.karnataka.gov.in
BBMP Property Tax System Calculate and Pay your BBMP property tax online
ಸಾರ್ವತ್ರಿಕಾ ಲೋಕಸಭಾ ಚುನಾವಣೆ-2024ರ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪಾಲಿಕೆ ಕೇಂದ್ರ ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚುನಾವಣಾ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ್, ಎಂ.ಸಿ.ಸಿ ನೋಡಲ್ ಅಧಿಕಾರಿಯಾದ ಮುನೀಶ್ ಮೌದ್ಗಿಲ್, ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಬೆಂಗಳೂರು ನಗರ/ಕೇಂದ್ರ/ದಕ್ಷಿಣ/ಉತ್ತರದ ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಂ.ಸಿ.ಸಿ ತಂಡದ ನೋಡಲ್ ಅಧಿಕಾರಿಗಳು, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
Chief Electoral Officer Karnataka
ಮುಂಬರುವ ಸಾರ್ವತ್ರಿಕಾ ಲೋಕಸಭಾ ಚುನಾವಣೆ-2024ರ ಸಿದ್ದತೆಗಳ ಕುರಿತು ಪೂರ್ವಭಾವಿ ಸಭೆಯಲ್ಲಿ ಚುನಾವಣಾ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಬೆಂಗಳೂರು ನಗರ/ಕೇಂದ್ರ/ದಕ್ಷಿಣ/ಉತ್ತರದ ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಂ.ಸಿ.ಸಿ ತಂಡದ ನೋಡಲ್ ಅಧಿಕಾರಿಗಳು, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
Chief Electoral Officer Karnataka Election Commission of India
ಮುಂಬರುವ 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರನ್ನು ಜಾಗೃತಿಗೊಳಿಸಲು ನಡೆದ ಸಭೆಯಲ್ಲಿ SVEEP ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ಸ್ವೀಪ್ ನೋಡಲ್ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂದು "ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂಬ ಅಡಿಬರಹವಿರುವ ಶ್ರೀ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಶಿವಾನಂದ ಕಲ್ಕೆರೆ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಪ್ರತಿಭಾ, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಲಕ್ಷ್ಮಿದೇವಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.
ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಇಂದು ವಸಂತನರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮತಗಟ್ಟೆಗೆ ಭೇಟಿ ನೀಡಿ ಮತದಾನ ನಡೆಯುವ ಪ್ರಕ್ರಿಯೆಯನ್ನು ಪರಿಶೀಲಿಸಿದೆ.
Chief Electoral Officer Karnataka
ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಇಂದು ಮತಗಟ್ಟೆ ಸಂಖ್ಯೆ 27(ಗಾಂಧಿನಗರ ವಿಧಾನಸಭಾ ಕ್ಷೇತ್ರ) ಶೇಷಾದ್ರಿಪುರಂ ಕಾಲೇಜಿನಲ್ಲಿ ಮತದಾನ ನಡೆಯುವ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದೆ.
ಈ ಸಂದರ್ಭದಲ್ಲಿ ಮತದಾರರ ನೋಂದಣಾಧಿಕಾರಿ ಎಂ. ಶ್ರೀನಿವಾಸ್, ಸೆಕ್ಟರ್ ಅಧಿಕಾರಿ ರೇವಣ್ಣ ರವರು ಹಾಜರಿದ್ದರು.
Chief Electoral Officer Karnataka
ಬೆಂಗಳೂರು(ಕೇಂದ್ರ), (ಉತ್ತರ), (ದಕ್ಷಿಣ) ಹಾಗೂ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಒಟ್ಟು 43 ಮತಗಟ್ಟೆಗಳಲ್ಲಿ ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ನಾಳೆ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿರುವ ಆವರಣದಲ್ಲಿ ಇರುವ ಸರ್ಕಾರಿ / ಅರೇ ಸರ್ಕಾರಿ / ಖಾಸಗಿ ಶಾಲಾ ಕಾಲೇಜುಗಳು ಹಾಗೂ ಕಛೇರಿಗಳಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಿಸಿದೆ.
ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಬಗ್ಗೆ ಕೆನಡಾದ ಹೈ ಕಮಿಷನ್ ವಾಣಿಜ್ಯ ಸಚಿವರಾದ ಶ್ರೀಮತಿ ಜೆನ್ನಿಫರ್ ಡೌಬೆನಿ ರವರು ಜೊತೆ ಸಭೆ ನಡೆಸಲಾಯಿತು.
ಭಾರತ ಹಾಗೂ ಕೆನಡಾದ ಜಂಟಿ ಸಹಯೋಗದಲ್ಲಿ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆಯ ನಿರ್ವಹಣೆಗೆ ವಿವಿಧ ಮಾರ್ಗಗಳ ಕುರಿತು ಚರ್ಚಿಸಲಾಯಿತು. ಸಂಸ್ಕರಿಸಿದ ಲೀಚೆಟ್ ಅನ್ನು ರಸಗೊಬ್ಬರಗಳಾಗಿ ಪರಿವರ್ತಿಸಲು ಪರಿಹಾರವನ್ನು ನೀಡುವ ಕೆನಡಾದ ಕ್ಲೀನ್‌ಟೆಕ್ ಕಂಪನಿಗಳು ನೀಡುವ ಬಗ್ಗೆ ಹಾಗೂ ಘನತ್ಯಾಜ್ಯ ನಿರ್ವಹಣೆ ಸಂಬಂಧಿಸಿದಂತೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರಿನ ಭಾರತದ ಕೆನಡಾ ಕಾನ್ಸುಲೇಟ್ ಜನರಲ್ ಆಯುಕ್ತರಾದ ಶ್ರೀಮತಿ ಅಭಿ ಮಲಿಕ್ ರವರು ಉಪಸ್ಥಿತರಿದ್ದರು.
A meeting was held with Ms.Jennifer Daubeny, Minister of commerce, High Commission of Canada regarding strengthening bilateral cooperation between India and Canada.
Various approaches to sustainability and managing climate change under joint collaboration were discussed. How Canadian cleantech companies would be useful to present solutions for converting the treated leachate into fertilizers and treatment of solid waste was also discussed.
Ms. Abhi Malik, commissioner, Consulate General of Canada to India in Bangalore was also present on this occasion.
DK Shivakumar
ನಗರದಲ್ಲಿ ಹೂ/ಹೂಗುಚ್ಛ ಮಾರಾಟ ಮಳಿಗೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು, ಪಾಲಿಕೆಯ ತಂಡವು 13 - 14ನೇ ಫೆಬ್ರುವರಿಯಲ್ಲಿ 959 ಹೂವಿನ ಅಂಗಡಿಗಳನ್ನು ಪರಿಶೀಲಿಸಿತು. ಈ ವೇಳೆ ನಿಷೇಧಿತ ಬಳಕೆ ಮತ್ತು ತ್ಯಾಜ್ಯವನ್ನು ಪ್ರತ್ಯೇಕಿಸದ ಕಾರಣ 2 ದಿನಗಳಲ್ಲಿ ಒಟ್ಟು Rs2,46,000/- ದಂಡ ವಿಧಿಸಲಾಗಿದ್ದು, ಪ್ಲಾಸ್ಟಿಕ್ ನಿಷೇಧ ಮತ್ತು ತ್ಯಾಜ್ಯವನ್ನು ಪ್ರತ್ಯೇಕಿಸಲು ಮಾರಾಟಗಾರಿಗೆ ಎಚ್ಚರಿಕೆ ನೀಡಲಾಗಿದೆ.
DK Shivakumar
To control banned plastic/NWPP use by florists, BBMP team inspected & fined 959 flower shops on 13 - 14 Feb, total Rs2,46,000/- for banned use & non-segregation. Florists are warned to comply year-round with plastic ban & segregate waste. DKShivakumar-DCM,FC
ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆ-2024ರ ಸಂಬಂಧ ಇಂದು ರಾಜಕೀಯ ಪಕ್ಷದ ಪ್ರತಿನಿಧಿಗಳ ಜೊತೆ ನಡೆದ ಸಭೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಯ ಅಂತಿಮ ಹಂತದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ತಿಳಿಸಲಾಯಿತು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Chief Electoral Officer Karnataka Election Commission of India
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕೆ-100(ನಾಗರಿಕ ಜಲಮಾರ್ಗ) ಯೋಜನೆ ಅಭಿವೃದ್ಧಿ ಕಾಮಗಾರಿಯನ್ನು ಮಾನ್ಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಶಾಲಿನಿ ರಜನೀಶ್ ರವರೊಟ್ಟಿಗೆ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಕೆ-100 ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ವೇಳೆ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಶ್ರೀ ದಯಾನಂದ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಹ್ಲಾದ್, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನಿಮ್ಮ ಸುತ್ತಮುತ್ತಲಿನ ಕೆರೆ ಹಾಗೂ ಪಾರ್ಕ್'ಗಳ ಮೇಲ್ವಿಚಾರಣೆಗಾಗಿ ಕೆರೆ ಮಿತ್ರ ಹಾಗೂ ಹಸಿರು ಮಿತ್ರರಾಗಲು ನೋಂದಣಿ ಅವಧಿಯನ್ನು ದಿನಾಂಕ 12.02.2024 ರವರೆಗೆ ವಿಸ್ತರಿಸಲಾಗಿದೆ.
ನಾಗರಿಕರು ಕೆರೆ ಮಿತ್ರ ಹಾಗೂ ಹಸಿರು ಮಿತ್ರರಾಗಲು ಕೆಳಗಿನ ಲಿಂಕ್'ಗಳನ್ನು ಕ್ಲಿಕ್ ಮಾಡಿ.
ಹಸಿರು ಮಿತ್ರ
https://hasirumithra.bbmpgov.in/registration
ಕೆರೆಮಿತ್ರ
https://keremithra.bbmpgov.in/registration
The registration period to be as Kere Mitra and Hasiru Mitra has been extended till 12.02.2024 for monitoring maintenance of lakes and parks around you under BBMP.
Register Now
DK Shivakumar
ಬೆಂಗಳೂರು ಅಭಿವೃದ್ಧಿ ಹಾಗೂ ನಾಗರಿಕ ಸಮಸ್ಯೆಗಳ ಕುರಿತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ(FKCCI)ಯು ಏರ್ಪಡಿಸಿದ್ದ ಸಭೆಯಲ್ಲಿ ಕೈಗಾರಿಕಾ ಸಂಸ್ಥೆಯ ಪ್ರತಿನಿಧಿಗಳಿಗೆ ಅಗತ್ಯ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಚಂದ್ರ ಲಹೊಟಿ, ಹಿರಿಯ ಉಪಾಧ್ಯಕ್ಷರಾದ ಎಂ.ಜಿ ಬಾಲಕೃಷ್ಣ, ಉಪಾಧ್ಯಕ್ಷೆಯಾದ ಉಮಾ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸರ್ವೋದಯ ದಿನಾಚರಣೆ ಅಂಗವಾಗಿ ಮಾನ್ಯ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್ ರವರೊಂದಿಗೆ ನಗರದ ಮಹಾತ್ಮ ಗಾಂಧೀಜಿ ರಸ್ತೆಯಲ್ಲಿರುವ ಗಾಂಧೀಜಿ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದೆ.
ಈ ವೇಳೆ ಮಾಜಿ ಸಚಿವರಾದ ಶ್ರೀ ರಾಮಚಂದ್ರಗೌಡ, ಮಾಜಿ ಮಹಾಪೌರರಾದ ಶ್ರೀ ರಾಮಚಂದ್ರ, ಶ್ರೀ ಹುಚ್ಚಪ್ಪ, ಶ್ರೀ ಬಿ.ಎಸ್ ಸತ್ಯನಾರಾಯಣ, ಶ್ರೀಮತಿ ಪದ್ಮಾವತಿ, ವಲಯ ಆಯುಕ್ತರಾದ ಸ್ನೇಹಲ್, ಜಂಟಿ ಆಯುಕ್ತರಾದ ಪಲ್ಲವಿ ಸೇರಿದಂತೆ ಇನ್ನಿತರೆ ಗಣ್ಯರುಗಳು ಉಪಸ್ಥಿತರಿದ್ದರು.
day
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಇಂದು 75ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಮಾನ್ಯ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್ ರವರ ಜೊತೆಗೂಡಿ ಧ್ವಜಾರೋಹಣ ನೆರವೇರಿಸಲಾಯಿತು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಹರೀಶ್ ಕುಮಾರ್, ಶಿವಾನಂದ್ ಕಲ್ಕೆರೆ, ಪ್ರೀತಿ ಗೆಹ್ಲೋಟ್, ಪೂರ್ವ ವಲಯ ಆಯುಕ್ತರಾದ ಸ್ನೇಹಲ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.