V Help Grameena mattu Nagarabhivruddhi Samsthe

V Help Grameena mattu Nagarabhivruddhi Samsthe

Contact information, map and directions, contact form, opening hours, services, ratings, photos, videos and announcements from V Help Grameena mattu Nagarabhivruddhi Samsthe, Non-Governmental Organization (NGO), .

V Help works on a motto that "If you educate a man, you educate an individual, but if you educate a woman, you educate a nation" with 50 beneficiaries in and around Mandya district, Karnataka.

22/11/2023

ನಮ್ಮ ಸಂಸ್ಥೆಯು ಈ ಹಿಂದೆ ಕಾರ್ಯಕ್ರಮ ಆಯೋಜನೆ ಮಾಡಿದ್ದಂತಹ ವಿಡಿಯೋ ತುಣುಕು. https://m.facebook.com/story.php?story_fbid=146544819309754&id=100018627090003&mibextid=Nif5oz

Photos from V Help Grameena mattu Nagarabhivruddhi Samsthe's post 25/02/2023

ನಮ್ಮ ಸಂಸ್ಥೆಯಾದ ವಿ ಹೆಲ್ಪ್ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ ಮಂಡ್ಯ (ರಿ) ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಇವೆರಡರ ಸಹಯೋಗದಲ್ಲಿ ಮಂಡ್ಯ ತಾಲ್ಲೋಕಿನ ತುಂಬಕೆರೆ ಗ್ರಾಮದಲ್ಲಿ ಮಹಿಳೆಯರಿಗಾಗಿ 3 ತಿಂಗಳ ಉಚಿತ ಹೊಲಿಗೆ ತರಬೇತಿಯನ್ನು ಆಯೋಜಿಸಿ ನಡೆಸುತ್ತಿರುವುದು.

27/07/2022

ಇಂದು ಶಿಕ್ಷಣ ಇಲಾಖೆಯ ಬಿಇಓರವರಾದ ಚಂದ್ರಕಾಂತರವರನ್ನು ಭೇಟಿ ಮಾಡಿ ಹಳೇಬೂದನೂರು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಪ್ರಗತಿ ಕುರಿತು ಚರ್ಚೆ ನಡೆಸಲಾಯಿತು.

Photos from V Help Grameena mattu Nagarabhivruddhi Samsthe's post 21/07/2022

ಇಂದು ಅಂದರೆ ದಿನಾಂಕ 21/7/22ರಂದು ಮಂಡ್ಯ ತಾಲ್ಲೋಕಿನ ಎ,ಹುಲ್ಕೆರೆ ಗ್ರಾಮದಲ್ಲಿ ಮಹಿಳೆಯರಿಗೆ ಸರ್ಕಾರದ ಯೋಜನೆಗಳನ್ನು ಕುರಿತು ಮಾಹಿತಿ ನೀಡಲಾಯಿತು.

14/07/2022

ಇಂದು ಮಂಡ್ಯ ತಾಲ್ಲೋಕಿನ ಹಬ್ಬದ ಮಾರನಹಳ್ಳಿ ಗ್ರಾಮದಲ್ಲಿ ಮಹಿಳೆಯರಿಗೆ ಕಿರುಉದ್ಯಮ ಹಾಗೂ ಕಿರುಉದ್ಯಮಗಳಿಗೆ ಸರ್ಕಾರದಿಂದ ಸಿಗುವಂತ ಸವಲತ್ತುಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಲಾಯಿತು.

Photos from V Help Grameena mattu Nagarabhivruddhi Samsthe's post 28/06/2022

ಇಂದು ಮಂಡ್ಯ ತಾಲ್ಲೋಕಿನ ಮಾಡಲ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ನಕ್ಷತ್ರ ಜ್ಞಾನವಿಕಾಸ ಕೇಂದ್ರದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮೊಬೈಲ್ ಬಳಕೆ ಹಾಗೂ ಮಕ್ಕಳ ಶಾಲಾ ಹಂತದ ಶಿಕ್ಷಣದಲ್ಲಿ ಪೋಷಕರ ಪಾತ್ರ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಲಾಯಿತು.

Photos from V Help Grameena mattu Nagarabhivruddhi Samsthe's post 01/05/2022

ನೆನ್ನೆ ‌ಭಾರತ್ ಪೆಟ್ರೋಲಿಯಂ ಲಿಮಿಟೆಡ್ ಹಾಗೂ ಜನಜಾಗೃತಿ ಸಂಸ್ಥೆ ಮೈಸೂರುರವರುಗಳ ಸಹಯೋಗದಲ್ಲಿ 7 ದಿನಗಳ ಕಾಲ ಮಂಡ್ಯದಲ್ಲಿ ನಡೆಯುತ್ತಿರುವ ಇಡಿಪಿ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು ಹಾಗೂ ಅದೇ ಸಂದರ್ಭದಲ್ಲಿ ಶಿಬಿರಾರ್ಥಿಗಳೊಟ್ಟಿಗೆ ತೆಗೆದ ಗುಂಪು ಭಾವಚಿತ್ರ.

V Help Grameena mattu Nagarabhivruddhi Samsthe 24/04/2022

https://vhelp.1ngo.in/
My Organation website

V Help Grameena mattu Nagarabhivruddhi Samsthe V-Help Rural and Urban Development organization is a non-governmental organization registered under Karnataka Society Registration 1960 based in Halebudhanur village, Mandya district of Karnataka. The organization was established in the year 2014.We aim to act as a catalyst for bringing about social...

Photos from V Help Grameena mattu Nagarabhivruddhi Samsthe's post 20/03/2022

ನೆನ್ನೆ ಅಂದರೆ ದಿನಾಂಕ 19/3/22ರಂದು ಮಂಡ್ಯ ತಾಲ್ಲೂಕಿನ ಹನಕೆರೆ,ತುಂಬಕೆರೆ ಹಾಗೂ ಹಳೇಬೂದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ #ಶಿಕ್ಷಣಹಕ್ಕುಕಾಯ್ದೆ ಯೋಜನೆಯಡಿಯಲ್ಲಿ ಶಾಲೆಗಳಿಗೆ ಭೇಟಿ ನೀಡಿ #ಶಾಲೆಗಳಗುಣಾತ್ಮಕಶಿಕ್ಷಣ ಕುರಿತು ಎಸ್ ಡಿಎಂಸಿ ಸಮಿತಿ ಸದಸ್ಯರು,ಹಾಗೂ ಶಿಕ್ಷಕ ವೃಂದದವರ ಸಹಕಾರದೊಟ್ಟಿಗೆ ಪಡಿ ಸಂಸ್ಥೆಯ ಮೈಸೂರು ವಿಭಾಗಾಧಿಕಾರಿಗಳಾದ ರಾಜೇಶ್ವರಿಯವರೊಟ್ಟುಗೂಡಿ #ಮೌಲ್ಯಮಾಪನ ಮಾಡಲಾಯಿತು.

Photos from V Help Grameena mattu Nagarabhivruddhi Samsthe's post 25/02/2022

ದಿನಾಂಕ 23/2/22 ರಂದು ಮಂಡ್ಯ ತಾಲ್ಲೂಕಿನ ಹಳೇಬೂದನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಪಡಿ ಸಂಸ್ಥೆಯ ಸಹಯೋಗದಲ್ಲಿ ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಕ್ಲಸ್ಟರ್ ಮಟ್ಟದಲ್ಲಿ 4 ನೇ ಹಂತದ ತರಬೇತಿಯನ್ನು ನೀಡಲಾಯಿತು.

Photos from V Help Grameena mattu Nagarabhivruddhi Samsthe's post 04/02/2022

ನೆನ್ನೆ ಮಂಡ್ಯ ತಾಲ್ಲೂಕಿನ ಹೊಸಬೂದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡಿ ಸಂಸ್ಥೆ,ಮಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಇವರುಗಳ ಸಹಯೋಗದಲ್ಲಿ ನಡೆದಂತಹ ಎಸ್ ಡಿ ಎಂ ಸಿ ಮಾರ್ಗದರ್ಶಿ 2020-2023 ರ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಲಾಯಿತು.ಹಾಗೂ ಶಾಲೆಯಲ್ಲಿರುವ 150 ಮಕ್ಕಳಿಗೂ ಮಾಸ್ಕ್ ವಿತರಿಸಲಾಯಿತು.

Photos from V Help Grameena mattu Nagarabhivruddhi Samsthe's post 07/01/2022

ನೆನ್ನೆ ಅಂದರೆ ದಿನಾಂಕ 06/01/22ರಂದು ಮಂಡ್ಯ ತಾಲ್ಲೂಕಿನ ಶ್ರೀನಿವಾಸಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ್ ಶಿಕ್ಷಣ ಪಡೆ - #ಮಕ್ಕಳಉದ್ದೇಶಿತ ಆಯವ್ಯಯ 2021-22 ತಯಾರಿಕೆ ಕುರಿತು ನಡೆದಂತಹ ಎಸ್ ಡಿಎಂಸಿ ಸದಸ್ಯರ ತರಬೇತಿ ಕಾರ್ಯಕ್ರಮದಲ್ಲಿ ಪೋಷಕರ ಜವಬ್ದಾರಿ ಕುರಿತು ಮಾಹಿತಿ ನೀಡಲಾಯಿತು.

31/12/2021

ಇಂದು ಅಂದರೆ ದಿನಾಂಕ 31/12/21ರಂದು ಮಂಡ್ಯ ತಾಲ್ಲೂಕಿನ ಶ್ರೀನಿವಾಸಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಶಾಲಾ ಹಂತದ ಪ್ರಗತಿ ಕುರಿತು ಸುಗಮಗಾರಿಕೆಯ ವರದಿ ಮಾಡಲಾಯಿತು.

31/12/2021

ಇಂದು ಮಂಡ್ಯ ತಾಲ್ಲೂಕಿನ ಶಿವಳ್ಳಿ ಗ್ರಾಮದಲ್ಲಿ ಕಿರು ಸಾಲ ಯೋಜನೆ ಕುರಿತು ಸ್ವಸಹಾಯ ಸಂಘಗಳ ಸದಸ್ಯರಿಗೆ ಮಾಹಿತಿ ನೀಡಲಾಯಿತು.

30/12/2021

ಇಂದು ಮಂಡ್ಯ ತಾಲ್ಲೂಕಿನ ಹನಕೆರೆ,
ತುಂಬಕೆರೆ,ಹಾಗೂ ಹೊಸಬೂದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಶಾಲಾ ಹಂತದ ಪ್ರಗತಿ ಕುರಿತು ಸುಗಮಗಾರಿಕೆಯ ವರದಿ ಮಾಡಲಾಯಿತು.

Photos from V Help Grameena mattu Nagarabhivruddhi Samsthe's post 29/12/2021

ಇಂದು ಅಂದರೆ ದಿನಾಂಕ 29/12/21ರಂದು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಮಂಡ್ಯ ತಾಲ್ಲೂಕಿನ ಎಂ,ಜಿ,ಬಡಾವಣೆಯ ಜ್ಞಾನ ವಿಕಾಸ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪೌಷ್ಟಿಕ ಆಹಾರ ಕುರಿತು ಮಹಿಳೆಯರಿಗೆ ಮಾಹಿತಿ ನೀಡಲಾಯಿತು.

Photos from V Help Grameena mattu Nagarabhivruddhi Samsthe's post 19/12/2021

ಇಂದು ಮಂಡ್ಯ ತಾಲ್ಲೂಕಿನ ಶಿವಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿಯು ಅಸಂಘಟಿತ ಕಾರ್ಮಿಕ ಮಹಿಳೆಯರಿಗಾಗಿ ಆಯೋಜಿಸಿ ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಲಾಯಿತು.

Photos from V Help Grameena mattu Nagarabhivruddhi Samsthe's post 17/12/2021

ದಿನಾಂಕ 15/12/21ರಂದು ಮಂಡ್ಯ ತಾಲ್ಲೂಕಿನ ಕೆ. ಗೌಡಗೆರೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನೆವತಿಯಿಂದ ಒಕ್ಕೂಟದ ಸದಸ್ಯರಿಗಾಗಿ ಪೌಷ್ಟಿಕ ಆಹಾರ ತಯಾರಿಕೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಲಾಯಿತು.

Photos from V Help Grameena mattu Nagarabhivruddhi Samsthe's post 25/11/2021

ಇಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮದಲ್ಲಿ ನಡೆದಂತಹ ಪರಮಪೂಜ್ಯ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬ ಆಚರಣೆ ಹಾಗೂ ಜ್ಞಾನ ವಿಕಾಸ ಕ್ಷೇತ್ರ ಉದ್ಘಾಟನಾ ಕಾರ್ಯಕ್ರಮದ ಪ್ರಯುಕ್ತ ನಡೆದಂತಹ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಹಿಳೆಯರಿಗೆ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಲಾಯಿತು.

24/11/2021

ನೆನ್ನೆ ಜಾನಪದಜನ್ನೆ ಟ್ರಸ್ಟ್ ವಾರ್ಷಿಕೋತ್ಸವದ ಅಂಗವಾಗಿ ನಡೆದಂತಹ ಜಾನಪದಜನ್ನೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದಂತಹ ಪತ್ರಿಕಾ ಪ್ರಕಟಣೆ ಪ್ರತಿ.

Photos from V Help Grameena mattu Nagarabhivruddhi Samsthe's post 23/11/2021

ನೆನ್ನೆ ಅಂದರೆ ದಿನಾಂಕ 22/11/2021ರಂದು ಮಂಡ್ಯ ಜಿಲ್ಲೆ,ಮಂಡ್ಯ ತಾಲ್ಲೂಕಿನ ಜಿ ಮಲ್ಲಿಗೆರೆ ಗ್ರಾಮದಲ್ಲಿ ನಡೆದಂತಹ ಜಾನಪದ ಜನ್ನೆ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆಯಲ್ಲಿ ಭಾಗವಹಿಸಿದ್ದು....

Photos from V Help Grameena mattu Nagarabhivruddhi Samsthe's post 13/08/2021

ದಿನಾಂಕ 11/8/21ರ ಬುಧವಾರದಂದು #ಪಡಿ ಮಂಗಳೂರುರವರ ಸಹಯೋಗದಲ್ಲಿ ಮಂಡ್ಯ ತಾಲ್ಲೂಕಿನ ಹಳೇಬೂದನೂರು ಕ್ಲಸ್ಟರ್ ನ #ಹನಕೆರೆ ಹಾಗೂ #ತುಂಬಕೆರೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೋವೀಡ್ -19ರ ಪ್ರಯುಕ್ತ ಶಾಲೆಗಳ ಪುನರಾರಂಭದ ಹಿನ್ನೆಲೆಯಲ್ಲಿ ಕೋವೀಡ್ ನಿಂದ ಮಕ್ಕಳನ್ನು ಸಂರಕ್ಷಣೆ ಮಾಡಲು ಇರುವಂತ ಮೂಲ ಸೌಕರ್ಯಗಳ ಲಭ್ಯತೆಗಳನ್ನು ಕುರಿತಂತೆ ಶಾಲಾಭಿವೃದ್ದಿ ಸಮಿತಿಯವರೊಟ್ಟಿಗೆ ಚರ್ಚಿಸುವುದರ ಮೂಲಕ ಸಮೀಕ್ಷೆ ನಡೆಸಲಾಯಿತು.

19/07/2021

ಎಂದೂ ಮಾಸದ ಸವಿನೆನಪು....

Photos from V Help Grameena mattu Nagarabhivruddhi Samsthe's post 16/06/2021

ಇಂದು ಹಳೇಬೂದನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಿಡಿಓ ಅವರೊಂದಿಗೆ ಕೋವೀಡ್ -19 ಕುರಿತು ಒಂದಷ್ಟು ಚರ್ಚೆ ನಡೆಸಿ ಕೋವೀಡ್ ಆಕ್ಟಿವ್ ಕೇಸ್ ಗಳ ಬಗ್ಗೆ ಮಾಹಿತಿ ಪಡೆಯಲಾಯಿತು.

Photos from V Help Grameena mattu Nagarabhivruddhi Samsthe's post 10/04/2021

ದಿನಾಂಕ:-06/4/2021ರಂದು ಪಡಿ,ಮಂಗಳೂರು ರವರ ಸಹಯೋಗದಲ್ಲಿ ಮಂಡ್ಯ ತಾಲ್ಲೂಕಿನ ಶ್ರೀನಿವಾಸಪುರ ಸರ್ಕಾರಿ ಶಾಲೆಯಲ್ಲಿ ಎಸ್ ಡಿ ಎಂ ಸಿ ಸದಸ್ಯರಿಗೆ ನಡೆದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತರಬೇತಿ ನೀಡಲಾಯಿತು.

Photos from V Help Grameena mattu Nagarabhivruddhi Samsthe's post 05/04/2021

ಇಂದು #ಪಡಿ ಸಂಸ್ಥೆ,ಮಂಗಳೂರು #ವಿಹೆಲ್ಪ್ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮಂಡ್ಯ (ರಿ),ಹಾಗೂ ಮಂಡ್ಯ ಜಿಲ್ಲಾ #ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ ಇವರುಗಳ ಸಹಯೋಗದಲ್ಲಿ #ಶಿಕ್ಷಣಹಕ್ಕು ಕಾಯ್ದೆ 2009ರ ಅನುಷ್ಠಾನದಲ್ಲಿ ನೆಟ್ ವರ್ಕ್ ಗಳ ಪಾತ್ರ ಕುರಿತು ಜಿಲ್ಲಾ ಮಟ್ಟದ ಕಾರ್ಯಗಾರವನ್ನು ಹಮ್ಮಿಕೊಂಡು ನಡೆಸಲಾಯಿತು. ಕಾರ್ಯಾಗಾರದ ಅಧ್ಯಕ್ಷತೆಯನ್ನು #ಮಹೇಶ್ ಚಂದ್ರಗುರುರವರು ವಹಿಸಿದ್ದರು.ಪ್ರಾಸ್ತಾವಿಕ ನುಡಿಗಳನ್ನು ಪಡಿ ಸಂಸ್ಥೆ ಹಾಗೂ ವಿ ಹೆಲ್ಪ್ ಸಂಸ್ಥೆ ಪರವಾಗಿ #ರಾಣಿಚಂದ್ರಶೇಖರ್ ರವರು ಮಾತಾಡಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಹಾಗೂ ಸಂಘಟನೆಗಳ ಪಾತ್ರ ಕುರಿತು ಮಾತಾನಾಡಿದರು.
ಕಾರ್ಯಾಗಾರದಲ್ಲಿ #ಅಜಿತ್ ಪ್ರೇಮ್ ಜೀ ಫೌಂಡೇಷನ್ ನ #ಗುರುರಾಜ್ ರವರು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ಮಾಹಿತಿ ನೀಡಿದರು.ಹಾಗೂ ಅಜಿತ್ ಪ್ರೇಮ್ ಜೀ ಫೌಂಡೇಶನ್ ನ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾದಂತಹ #ಶಿವಕುಮಾರ್ ಕಾರ್ಯಾಗಾರ ಕುರಿತು ಮಾಹಿತಿ ಹಂಚಿಕೊಂಡರು.ಕಾರ್ಯಾಗಾರದಲ್ಲಿ ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ,ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಗೂ ಶಿಕ್ಷಣಾಸಕ್ತರು,ಮಾಧ್ಯಮ ಮಿತ್ರರು ಭಾಗವಹಿಸಿದ್ದರು.

Photos from V Help Grameena mattu Nagarabhivruddhi Samsthe's post 04/03/2021

ದಿನಾಂಕ 1/3/21ರಂದು ಮಂಡ್ಯ ಸಾಹಿತ್ಯ ಲಯನ್ಸ್ ಹಾಗೂ ನಮ್ಮ ಸಂಸ್ಥೆ ವಿ ಹೆಲ್ಪ್ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮಂಡ್ಯ (ರಿ) ಸಹಯೋಗದಲ್ಲಿ ಜ್ಞಾನಸಿಂಧೂ ಟ್ರಸ್ಟ್ ನ ಸ್ವಾಧಾರ ಕೇಂದ್ರದಲ್ಲಿರುವ ಮಹಿಳೆಯರಿಗಾಗಿ #ಗೃಹೋಪಯೋಗಿ ವಸ್ತುಗಳ ತಯಾರಿಕಾ ತರಬೇತಿಯನ್ನು ಯೋಚಿಸಿ ನಡೆಸಲಾಯಿತು.
ನಾನು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.
ವೇದಿಕೆಯಲ್ಲಿ ಆತ್ಮೀಯರು ಹಾಗೂ ಸಾಹಿತ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷರು ಆದಂತಹ ಶ್ರೀಮತಿ ಅಂಜನಾ ಶ್ರಿಕಾಂತ್ ,ಲಯನ್ಸ್ ಕ್ಲಬ್ ನ ಆನಂದ್ ರವರು ಹಾಗೂ ಜ್ಞಾನ ಸಿಂಧೂ ಟ್ರಸ್ಟ್ ನ ಸಿಬ್ಬಂದಿಗಳಾದ ಸುವರ್ಣರವರಿದ್ದರು.

04/03/2021

ವಿ ಹೆಲ್ಪ್ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಮಂಡ್ಯ (ರಿ).

Photos from V Help Grameena mattu Nagarabhivruddhi Samsthe's post 24/02/2021

ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು.
ಕರ್ನಾಟಕ ಉದ್ಯಮಶೀಲತೆ ಕೇಂದ್ರ ಧಾರವಾಡ.
ವಲಯ ಕೃಷಿ ಸಂಶೋಧನ ಕೇಂದ್ರ. ವಿಸಿ ಫಾರಂ. ಹಾಗೂ
ಜಿಲ್ಲಾ ಕೈಗಾರಿಕಾ ಕೇಂದ್ರ ಮಂಡ್ಯ ಇವರಗಳ ಸಹಯೋಗದಲ್ಲಿ ನಡೆಯುತ್ತಿರುವಂತ 30 ದಿನಗಳ ಕೌಶಲ್ಯಾಧಾರಿತ ಉದ್ಯಮಶೀಲತಾ ತರಬೇತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ, ಉದ್ಯಮಶೀಲತೆ ಗುಣಲಕ್ಷಣಗಳು ಹಾಗೂ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ ಕುರಿತು ತರಬೇತಿ ನೀಡಲಾಯಿತು.