Naveen Raghu official

Naveen Raghu official

Actor @ KFI

09/01/2023

Dr. Raj Cup memories @ Dubai

06/11/2021

ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಷಯಗಳು ❤️

28/10/2020

ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದಂತೆ ತಿಪಟೂರು ರಘು ಮತ್ತು ಎ.ಟಿ. ರಘು ಈ ಇಬ್ಬರು ನಿರ್ದೇಶಕರ ಹೆಸರುಗಳನ್ನು ತುಂಬ ಜನ ಕನ್ ಫ್ಯೂಸ್ ಮಾಡಿಕೊಳ್ತಾ ಇರ್ತಾರೆ. ರಾಜೇಂದ್ರ ಸಿಂಗ್ ಬಾಬು ಮತ್ತು ರಾಜೇಂದ್ರ ಬಾಬು ಅವರ ಹೆಸರುಗಳನ್ನು ಕನ್ ಫ್ಯೂಸ್ ಮಾಡಿಕೊಳ್ಳೋ ಹಾಗೆ!
ಎ.ಟಿ. ರಘು ಅಂದ್ರೆ ಅಂಬರೀಶ್ ನಟನೆಯ ಚಿತ್ರಗಳಿಗೆ ನಿರ್ದೇಶನ ಮಾಡಿದವರು. ಗಡ್ಡಧಾರಿ. ಮಂಡ್ಯದ ಗಂಡು, ಮಿಡಿದಹೃದಯಗಳು ಸೇರಿದಂತೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಚಿತ್ರ ನಿರ್ದೇಶಿಸಿದರು. ಅದರಲ್ಲಿ ಅಂಬರೀಶ್ ಚಿತ್ರಗಳೇ ಹೆಚ್ಚು. ಈಗೊಂದು ನಾಲ್ಕುವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿ, ಆರ್ಥಿಕಸಂಕಷ್ಟಕ್ಕೂ ಸಿಲುಕಿದರು. ಶಿವಣ್ಣನ ಶಿವಸೈನ್ಯದಲ್ಲಿ ಕಳ್ಳಸ್ವಾಮಿಯಾಗಿ ನಟಿಸಿದವರು ಅಂದ್ರೆ ಮುಖ ನೆನಪಿಗೆ ಬರಬಹುದು.

ತಿಪಟೂರು ರಘು ಅಂದ್ರೆ ವಿಷ್ಣುವರ್ಧನ್ ಅವರ ನಾಗ ಕಾಳ ಭೈರವ, ಕಲ್ಲುವೀಣೆ ನುಡಿಯಿತು, ಬೆಂಕಿ ಬಿರುಗಾಳಿ ಥರದ ಸೂಪರ್ ಹಿಟ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದವರು. ತಿಪಟೂರು ರಘು ಕೂಡ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆದರೆ ಆರ್ಥಿಕ ಸಹಾಯಕ್ಕಾಗಿ ಇನ್ನೊಬ್ಬರೆದುರು ಎಂದೂ ನಿಲ್ಲದ ಸ್ವಾಭಿಮಾನಿ. ಆ ಸ್ವಾಭಿಮಾನ ಉಳಿಸಿಕೊಳ್ಳಲು ಕಾರಣವಿದೆ. ಅವರು ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದವರು. ಒಳ್ಳೆಯ ವಿದ್ಯೆ ಸಂಸ್ಕಾರ ಕಲಿಸಿಕೊಟ್ಟು ಬೆಳೆಸಿ ಒಂದು ಹಂತಕ್ಕೆ ತಂದು ನಿಲ್ಲಿಸಿದರು. ಅದಕ್ಕೆ ಪ್ರತಿಯಾಗಿ ಮಕ್ಕಳು ಈಗ ತಂದೆಯ ಅನಾರೋಗ್ಯದ ಹೊತ್ತಿನಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ.
ಬಹುಶಃ ತಿಪಟೂರು ರಘು ಎಲ್ಲಿದ್ದಾರೆ, ಹೇಗಿದ್ದಾರೆ ಏನು ಎತ್ತ ಇವೆಲ್ಲ ನನಗೆ ಗೊತ್ತಾಗುತ್ತಲೇ ಇರಲಿಲ್ಲ. ಬಹುಶಃ ಅಕಾರಣ ನೆನಪಾಗುತ್ತಲೂ ಇರಲಿಲ್ಲ. ಆದರೆ ಅವರ ಮಗ ನವೀನ್ ಈಗೊಂದು ನಾಲ್ಕು ವರ್ಷಗಳ ಹಿಂದೆ ಕ್ರಿಕೆಟ್ ಗ್ರೌಂಡಿನಲ್ಲಿ ಪರಿಚಯವಾದ. ಹಾಗೆಯೇ ಒಟ್ಟಾಗಿ ಆಡುವ ಟೀಮ್ ಮೇಟ್ಸ್ ಆದೆವು. ಅದರಾಚೆಗೂ ಗೆಳೆಯರಾದೆವು. ನೋಡೋಕೆ ಚೆಂದವಿದ್ದ. ಒಳ್ಳೆಯ ಹೈಟು ಪರ್ಸನಾಲಿಟಿ. ಕನ್ನಡ ಚೆನ್ನಾಗಿತ್ತು. ಇಷ್ಟೇ ಗೊತ್ತಿದ್ದಿದ್ದು. ಅವ್ನೂ ನಾನು ಡೈರೆಕ್ಟರ್ ಮಗ ಅಂತಾಗ್ಲೀ ಸಿನಿಮಾ ಇಂಡಸ್ಟ್ರಿಗೆ ಕನೆಕ್ಟ್ ಆಗಿರೋವ್ನು ಅಂತಾಗ್ಲಿ ಯಾವತ್ತೂ ಹೇಳ್ಕೊಂಡಿರಲಿಲ್ಲ.

ಕ್ರಿಕೆಟ್ ಅಂದ್ರೆ ಅವನಿಗೆ ಪಂಚಪ್ರಾಣ. ಅದ್ಭುತವಾಗಿ ಆಡ್ತಾನೆ ಕೂಡ. ಇತ್ತೀಚಿನ ದಿನಗಳಲ್ಲಿ ಪದೇಪದೆ ಕ್ರಿಕೆಟ್ ಗೆ ಬರೋದು ಮಿಸ್ ಮಾಡುತ್ತಿದ್ದ. ಯಾಕೆ ಅಂತ ಕೇಳಿದಾಗ... ತಂದೆ ಜೊತೆ ಇರ್ಬೇಕು.. ಆಸ್ಪತ್ರೆಗೆ ಕರ್ಕೊಂಡ್ ಹೋಗೋದಿದೆ. ಅವ್ರೊಬ್ರೇ ಮನೇಲಿರ್ತಾರೆ. ಜೊತೆಲಿರ್ಬೇಕು... ಹೀಗೆಲ್ಲ ಹೇಳ್ದಾಗಲೇ ಗೊತ್ತಾಗಿದ್ದು ಅವರ ತಂದೆಗೆ ಹುಷಾರಿಲ್ಲ. ಅಂತ. ಏನು ಅಂತ ಕೇಳಿದಾಗ ಹೀಗ್ ಹೀಗೆ ಅಂತ ಹೇಳ್ದ. ಏನ್ ಮಾಡ್ತಾರೆ ನಿಮ್ ತಂದೆ ಅಂತ ಅವರ ಉದ್ಯೋಗದ ಬಗ್ಗೆ ಕೇಳ್ದಾಗ್ಲೇ ಗೊತ್ತಾಗಿದ್ದು ನಂಗೆ... ಅಂದಿನ ಕಾಲದ ಖ್ಯಾತ ನಿರ್ದೇಶಕರ ಮಗ ಎಂದು! ರಾಘವೇಂದ್ರ ರಾಜ್ ಕುಮಾರ್ ಅನಾರೋಗ್ಯದ ಹೊತ್ತಲ್ಲಿ ಅವರನ್ನು ನೋಡಿಕೊಳ್ತಿದ್ದ ವಿನಯ್ ನೆನಪಾದರು. ಅವರು ತಂದೆಯನ್ನು ನೋಡ್ಕೊಳ್ತಿದ್ದ ರೀತಿ ಬಹಳಷ್ಟು ಬಾರಿ ಕಂಡಿದ್ದೆ. ಅದೇ ದೃಶ್ಯಗಳು ನವೀನ್ ಬಾಬು ತಿಪಟೂರು ರಘು ಪಾತ್ರದಲ್ಲಿ ಕಣ್ಮುಂದೆ ಬಂದು ಹೋದವು.

ತಿಪಟೂರು ರಘು ಅವರಿಗೆ ನವೀನ್ ನಟನಾಗಲಿ ಎಂಬ ಕನಸಿತ್ತಂತೆ. ಬಹುಶಃ ಅವರು ಸದೃಢವಾಗಿ ಇದ್ದಿದ್ರೆ ತಮ್ಮದೇ ನಿರ್ದೇಶನ ನಿರ್ಮಾಣದಲ್ಲಿ ಲಾಂಚ್ ಮಾಡುತ್ತಿದ್ದರೇನೋ. ಅನಾರೋಗ್ಯದಿಂದಾಗಿ ಅದು ಸಾಧ್ಯವಾಗಲಿಲ್ಲ. ಹಾಗಂತ ನನ್ನ ಮಗನಿಗೊಂದು ಅವಕಾಶ ಕೊಡಿ ಎಂದು ಎಲ್ಲೂ ಕೇಳಲಿಲ್ಲ. ನವೀನ್ ಕೂಡ ನಾನು ಇಂಥವರ ಮಗ ನಂಗೊಂದು ಅವಕಾಶ ಕೊಡಿ ಎಂದು ಕೇಳಲಿಲ್ಲ. ಐಬಿಎಂ ನಲ್ಲಿ ಕೈತುಂಬ ದುಡಿಯುತ್ತಿದ್ದ ನವೀನ್, ಸಿನಿಮಾ ಸ್ಕೂಲಿನಲ್ಲಿ ಕಲಿತು ಬಂದ. ಸ್ವಯಂ ಉದ್ಯೋಗವಾಗಿ ಒಂದು ಕಂಪನಿ ತೆರೆದು, ದುಡಿಯುತ್ತಲೇ ಜೊತೆಜೊತೆಗೆ ಸಿನಿಮಾ ಕನಸಿಗೆ ನೀರೆರೆಯತೊಡಗಿದ.

ಈಗ ಆ ಕನಸು ನನಸಾಗುವ ದಿನ ಬಂದಿದೆ.

ಭ್ರಮೆ ಎಂಬ ಚಿತ್ರದ ಮೂಲಕ.

ಚರಣ್ ರಾಜ್ ನಿರ್ದೇಶನದ ಈ ಚಿತ್ರ ಮೆಡಿಕಲ್ ಮಾಫಿಯಾ ಕುರಿತ ನೈಜ ಘಟನೆಯನ್ನು ಬೇಸ್ ಮಾಡಿಕೊಂಡು ಬರುತ್ತಿದೆಯಂತೆ.

ಆಸ್ಪತ್ರೆಯಲ್ಲಿ ಲೇಡಿ ನರ್ಸ್ ಗಳನ್ನ ಸಿಸ್ಟರ್ ಅಂತ ಕರೀತಾರಲ್ಲ... ಗಂಡು ನರ್ಸ್ ಗಳನ್ನ ಏನ್ ಕರೀತಾರೆ.. ಅಸಲಿಗೆ ಮೇಲ್ ನರ್ಸ್ ಇರ್ತಾರಾ ಅಂತೆಲ್ಲ ಪ್ರಶ್ನೆಗಳಿದ್ವು ನನ್ನಲ್ಲಿ. ಉತ್ತರ ಸಿಕ್ಕಿದೆ. ಮೇಲ್ ನರ್ಸ್ ಪಾತ್ರದಲ್ಲಿ ನವೀನ್ ನಟಿಸಿದ್ದಾನೆ ಸಿಸ್ಟರ್ ಅನ್ನೋ ಹಾಗೆ ಬ್ರದರ್ ಬ್ರದರ್ ಅಂತ ಕರೀತಾರೆ ಈ ಹೀರೋನನ್ನು. ಇದು ಟ್ರೇಲರ್ ನಲ್ಲಿ ಗೊತ್ತಾದ ಸಂಗತಿ. . ಭ್ರಮೆ ಚಿತ್ರಕ್ಕೆ ಈತನೇ ನಾಯಕ. ಆದರೆ ನಾನು ಹೀರೋ ಅಲ್ಲ. ಕಥೇನೇ ಹೀರೋ ಅಂತಾನೆ ನವೀನ್.

ಕುಂದಾಪುರ ಕನ್ನಡದಲ್ಲಿ ಮಾತಾಡೋ ನಾಯಕಪಾತ್ರದ ಟ್ರೇಲರ್ ಒಂಥರಾ ಮಜವಾಗಿತ್ತು. ಕಮರ್ಶಿಯಲ್ ಕಾರಣಗಳಿಗೆ ಟ್ರೇಲರ್ ಕೆಲವು ದ್ವಂದ್ವಾರ್ಥ ಸಂಭಾಷಣೆಯ ಮೊರೆಹೊಗಿರಬಹುದು. ಆದರೆ ಸಿನಿಮಾ ಹಾರರ್ ಕಾಮಿಡಿಯೋ ಸೈಕಾಲಾಜಿಕಲ್ ಥ್ರಿಲ್ಲರೋ ಇರುವಂತಿದೆ.

ಕಮ್ಮಿ ಬಜೆಟ್ ಸಿನಿಮಾ ಅಂತ ಶುರುವಾಗಿ ದೊಡ್ಡ ಸಿನಿಮಾವಾದದ್ದಿದು. ಕೋವಿಡ್ ಇಲ್ಲದಿದ್ದರೆ ಥಿಯೇಟರ್ ಗಳಲ್ಲೇ ರಿಲೀಸ್ ಆಗ್ತಿತ್ತೇನೋ. ಆಗಿದ್ರೆ ಚೆನ್ನಾಗಿರ್ತಿತ್ತೇನೋ ಅಂತೆಲ್ಲ ನಾವು ಯೋಚ್ನೆ ಮಾಡ್ತಾ ಇದ್ದರೆ, ತಂಡ ಕೋವಿಡ್ ಇದ್ರೂ ಇಲ್ದಿದ್ರೂ ಇದನ್ನ ಓಟಿಟಿಲೇ ರಿಲೀಸ್ ಮಾಡೋದು ಎಂದು ಯಾವತ್ತೋ ಡಿಸೈಡ್ ಮಾಡ್ಕೊಂಡುಬಿಟ್ಟಿತ್ತು.

ಹಾಗಂತ ನೆಟ್ ಫ್ಲಿಕ್ಸು ಅಮೇಜಾನ್ ಅಂತ ಬೇಡ್ಕೊಂಡು, ಬ್ರೋಕರ್ ಗಳ ಕೈಕಾಲು ಹಿಡಿದು ಟೈಮು ದುಡ್ಡು ಎಲ್ಲ ವೇಸ್ಟ್ ಮಾಡ್ಕೊಳೋ ಬದಲು, ನಮ್ಮದೇ ನಾಡಿನ ನಮ್ಮ ಫ್ಲಿಕ್ಸ್ ಮೂಲಕ ಬಿಡುಗಡೆ ಮಾಡಲು ಭ್ರಮೆ ತಂಡ ಸಿದ್ಧವಾಗಿದೆ.

ಇದೇ ನವೆಂಬರ್ ಒಂದಕ್ಕೆ ನಮ್ಮ ಫ್ಲಿಕ್ಸ್ ಮೂಲಕ ಸಿನಿಮಾ ರಿಲೀಸು.

ನಮ್ಮ ಗೆಳೆಯರ ತಂಡ ಈಗಾಗಲೇ ಒಂದು ಥಿಯೇಟರ್ ತುಂಬುವಷ್ಟು ಜನರಿದ್ದೇವೆ. ಈಗಾಗಲೇ ಟಿಕೆಟ್ ಕೂಡ ಖರೀದಿಸಿದ್ದೇವೆ. ಮನೇಲೆ ಥಿಯೇಟರ್ ರೇಂಜಿಗೆ ಫೀಲ್ ಮಾಡ್ಕೊಂಡು ಈ ಸಿನಿಮಾ ನೋಡೋದು ಅಂತ ಡಿಸೈಡ್ ಮಾಡ್ಕೊಂಡಿದ್ದೇವೆ.

ಸಿನಿಮಾ ನೋಡಿ ಆದ ಮೇಲೆ... ಗೆಳೆಯನ ಸಿನಿಮಾ ಎಂಬ ಮುಲಾಜೂ ಇಲ್ಲದೆ ವಸ್ತುನಿಷ್ಠ ಅಭಿಪ್ರಾಯ ತಿಳಿಸಲು ನವೀನ್ ತಿಳಿಸಿದ್ದಾನೆ. ಅದನ್ನು ಖಂಡಿತ ಮಾಡುತ್ತೇವೆ. ಇಲ್ಲಾಂದ್ರೆ ನಾವ್ಯಾವ ಸೀಮೆ ಗೆಳೆಯರು!?

ಲವ್ ಮಾಕ್ ಟೇಲ್ ಎಂಬ ಸಿನಿಮಾ ಬಂದಾಗ, ಅಯ್ಯೋ ಏನ್ ಟೈಟ್ಲು ಇದು ಅಂತ ಸಿನಿಮಾ ಬಗ್ಗೆ ಆಸಕ್ತಿ ತೋರಿರಲಿಲ್ಲ. ಡಾರ್ಲಿಂಗ್ ಕೃಷ್ಣನ ನಟನೆ ಬಗ್ಗೆ ನಂಬಿಕೆ ಇದ್ದರೂ ಆತ ನಟಿಸಿದ ಕೆಟ್ಟ ಚಿತ್ರಗಳ ಹಿಸ್ಟರಿ ನನಗೆ ಲವ್ ಮಾಕ್ ಟೇಲ್ ಬಗ್ಗೆ ಯಾವ ನಿರೀಕ್ಷೆಯನ್ನೂ ಹುಟ್ಟಿಸಿರಲಿಲ್ಲ. ಆಗ ನವೀನ್ ಬಾಬು ಈ ಸಿನಿಮಾ ಬಗ್ಗೆ ತುಂಬ ಹೊಗಳಿ ಮಾತಾಡಿದ್ದ. ನವೀನ್ ಬಾಬು ಹೇಳಿದ ಮರುದಿನವೇ ಹೋಗಿ ನೋಡಿದ್ದೆ. ಎಷ್ಟೊಳ್ಳೆ ಚಿತ್ರ ಪೂರ್ವಗ್ರಹಕ್ಕೀಡಾಗಿ ಮಿಸ್ ಮಾಡ್ಕೊಳ್ತಿದ್ನಲ್ಲ ಅಂತ ನವೀನ್ ಬಾಬುಗೆ ಥ್ಯಾಂಕ್ಸ್ ಹೇಳಿದ್ದೆ.

ಈಗ ನವೀನ್ ಬಾಬುದೇ ಸಿನಿಮಾ ಬರ್ತಿದೆ. ಪೂರ್ವಗ್ರಹವಿಲ್ಲದೇ ಗೆಳೆಯನಿಗೆ ಬೆಂಬಲ ನೀಡೋ ಸಲುವಾಗಿ ನೋಡಲು ರೆಡಿಯಾಗಿದ್ದೇನೆ. ನನ್ನೊಂದಿಗೆ ನನ್ನ ಇನ್ನಿತರ ಗೆಳೆಯರೂ ಸಿನಿಮಾ ನೋಡಲು ಬರುತ್ತಿದ್ದಾರೆ. ನಮ್ಮ ನಮ್ಮ ಮನೆಯಲ್ಲೇ ಕೂತು ನೋಡಬಹುದಾದ ಸಿನಿಮಾ.

ನನ್ನ ಗೆಳೆಯನಿಗೆ ನಿಮ್ಮ ಸಪೋರ್ಟ್ ಬೇಕು..

ನೀವು ಮನೇಲೇ ಕೂತು ಈ ಸಿನಿಮಾ ನೋಡಿ, ಆತನನ್ನು ಗೆಲ್ಲಿಸಬೇಕಿದೆ.

ಮೊದಲೆಲ್ಲ ಥಿಯೇಟರ್ ಗೆ ಬನ್ನಿ ಎಂದು ಕರೀಬೇಕಿತ್ತು. ಅಯ್ಯೋ ಯಾರ್ ಹೋಗ್ತಾರೆ ಎಂಬ ಪ್ರಾಕ್ಟಿಕಲ್ ಕಷ್ಟಗಳು ನಿಮಗಿರ್ತಿದ್ದವು. ಈಗ ಮನೇಲೇ ಕೂತು ನೋಡಿ ಅಂತ ಕೇಳ್ಕೋತಿದೀವಿ. ಪ್ಲೀಸ್ ನಮ್ಮ ಫ್ಲಿಕ್ಸ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ ಇನ್ ಸ್ಟಾಲ್ ಮಾಡ್ಕೊಳ್ಳಿ.
ಟಿಕೆಟ್ ಖರೀದಿಸಿ ಸ್ಕ್ಯಾನ್ ಮಾಡಿ. ಸಿನಿಮಾ ಓಪನ್ ಆಗುತ್ತೆ. ನೋಡಿ.
ನಿಮಗೇನನಿಸುತ್ತೆ ಹೇಳಿ.

ಟಿಕೆಟ್ ತಗೊಳೋದಕ್ಕೆ, ಅಪ್ಲಿಕೇಶನ್ ಡೌನ್ ಲೋಡ್ ಮಾಡ್ಕೊಳೋಕೆ ಐದು ನಿಮಿಷ ಸಾಕಷ್ಟೇ. ಇಲ್ಲಿ ಕೊಟ್ಟಿರೋ ಲಿಂಕ್ ಗಳನ್ನ ಕ್ಲಿಕ್ ಮಾಡಿ.

Link to the app: https://nammaflix.app.link/GlOkp87dcab
Link to PAY for ticket in India - INR 99 ONLY : https://rzp.io/l/Jj0vVWk
US and International pay just $2.99 with PayPal and International Debit/Credit Card : https://rzp.io/l/iI8B0t8M63

ನವೀನ್ ಗೊಂದು ಆಲ್ ದ ಬೆಸ್ಟ್ ಹೇಳಿ.

21/10/2020

Countdown begins...ಭ್ರಮೆ World Premiere...10 Days to go... Streaming On Namma Flix From November 1st... Book your Tickets now
https://rzp.io/l/Jj0vVWk

ನವೆಂಬರ್ 1ರಂದು ಓಟಿಟಿಯಲ್ಲಿ ಭ್ರಮೆ ರಿಲೀಸ್ | Suddi Nota 16/10/2020

ನವೆಂಬರ್ 1ರಂದು ಓಟಿಟಿಯಲ್ಲಿ ಭ್ರಮೆ ರಿಲೀಸ್ | Suddi Nota CINI NOTAfeatured ನವೆಂಬರ್ 1ರಂದು ಓಟಿಟಿಯಲ್ಲಿ ಭ್ರಮೆ ರಿಲೀಸ್ ಮೂಲಕ HARSHA - October 13, 2020 0 109 Facebook Twitter Google+ Pinterest WhatsApp ಕನ್ನಡದ ಹಲವು ಚಿತ್ರಗಳಿಗೆ ಮತ್ತು ಒಂದು...

13/10/2020

This Thursday..."The Great Villains" 💪... watch it live on M Sports Channel on YouTube..

Photos from Naveen Raghu official's post 07/10/2020

On TV9 programme regarding our movie Audio launch

Official Trailer :
https://youtu.be/U9tuUQZuNiM

Video Song : https://youtu.be/3Lq0DNRHKPs

Photos from Chitratara Manu's post 06/10/2020
Mounave Mounave (Full Song) - Shruthi Prahlad Joshi - Download or Listen Free - JioSaavn 06/10/2020

Mounave Mounave (Full Song) - Shruthi Prahlad Joshi - Download or Listen Free - JioSaavn Listen to Mounave Mounave on the Kannada music album Bhrame by Shruthi Prahlad Joshi, only on JioSaavn. Play online or download to listen offline free - in HD audio, only on JioSaavn.

06/10/2020

ಭ್ರಮೆ ಆಡಿಯೋ ಬಿಡುಗಡೆ, ಬೈಕ್ ವಿಜೇತರ ಘೋಷಣೆ
ರೇಣುಕಾಂಬ ಥಿಯೇಟರಿನಲ್ಲಿ ಭ್ರಮೆ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಹಾಗೂ ಮೊದಲ ಲಕ್ಕಿಡ್ರಾ ವಿಜೇತರ ಆಯ್ಕೆ ಕಾರ್ಯಕ್ರಮ ನಡೆಯಿತು. ಕುಂದಾಪುರದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಚರಣರಾಜ್ ಈ ಚಿತ್ರವನ್ನು ನಿರೂಪಿಸಿದ್ದಾರೆ.
ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದಲ್ಲಿ ಅಂಜನಾಗೌಡ ಹಾಗೂ ಇಶಾನಾ ನಾಯಕಿಯರ ಪಾತ್ರದಲ್ಲಿದ್ದಾರೆ. ಇದೊಂದು ಹಾರರ್ ಕಾಮಿಡಿ ಕಥೆಯ ಮೇಲೆ ನಡೆಯುವ ಸಬ್ಜೆಕ್ಟ್ ಆಗಿದ್ದು, ಚಿತ್ರಕ್ಕೆ ಚರಣರಾಜ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ನಾಯಕ ಆಸ್ಪತ್ರೆಯೊಂದರಲ್ಲಿ ಮೇಲ್ ನರ್ಸ್ ಆಗಿದ್ದು, ಚಿತ್ರದ ಬಹುತೇಕ ಕಥೆ ನಡೆಯುವುದೇ ಆಸ್ಪತ್ರೆಯ ಅಂಗಳದಲ್ಲಿ. ನವೆಂಬರ್ ಒಂದರಂದು ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಭ್ರಮೆ ಚಿತ್ರ ಬಿಡುಗಡೆಯಾಗಲಿದೆ. ಅಂದಿನ ಸಮಾರಂಭದ ಕೇಂದ್ರಬಿಂದು ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಮಾತನಾಡುತ್ತ ಒಬ್ಬ ನಿರ್ದೇಶಕನಾದವನಿಗೆ ಮಾರ್ಕೆಟಿಂಗ್ ಸ್ಕಿಲ್ ಕೂಡ ಮುಖ್ಯವಾಗಿರುತ್ತೆ ಅನ್ನೋದು ಇವರನ್ನು ನೊಡಿದಾಗ ತಿಳಿಯಿತು. ಎರಡೇ ವಾರದಲ್ಲಿ 10 ಸಾವಿರ ಟಿಕೆಟ್ ಮಾರಾಟ ಮಾಡಿರುವುದು, ಅದೂ ಕರೋನಾ ಟೈಂನಲ್ಲಿ ಅಂದರೆ, ಅಲ್ಲಿ ಇವರ ಎಫರ್ಟ್ ಎಷ್ಟಿದೆ ಎಂದು ಗೊತ್ತಾಗುತ್ತೆ. ನಾನು ಮೆಜೆಸ್ಟಿಕ್ ಚಿತ್ರದ ಸಮಯದಲ್ಲೇ ಮ್ಯೂಸಿಕ್ ಮಾಡಬೇಕಿತ್ತು. ಆಗ ನಾನೇ ಮುಂದುವರಿಯಲಿಲ್ಲ. ನಂತರ ಶಿಶ್ಯ ಚಿತ್ರದಿಂದ ಸಂಗೀತಜೋಡಣೆ ಆರಂಭಿಸಿದೆ. ಇದು ನನ್ನ ಏಳನೇ ಚಿತ್ರವಿರಬಹುದು. ಇದರಲ್ಲಿ ಬೇರೇನೇ ಥರದ ಸ್ಪಾರ್ಕ್ ಇದೆ. ನಾಯಕ ರಘು ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾರೆ. ಈ ಚಿತ್ರದಿಂದ ನಿರ್ಮಾಪಕರು, ನಿರ್ದೇಶಕರಿಗೆ ಒಳ್ಳೇ ಹೆಸರು, ಹಣ ಎರಡೂ ಬರಲಿ ಎಂದು ಶುಭ ಹಾರೈಸಿದರು. ನಿರ್ದೇಶಕ ಚರಣರಾಜ್ ಮಾತನಾಡಿ ನೈಜ ಘಟನೆ ಇಟ್ಟುಕೊಂಡು ಮಾಡಿರುವ ಚಿತ್ರವಿದು, ನನ್ನ ಈ ಪ್ರಯತ್ನವನ್ನು ನಂಬಿ ಬಂಡವಾಳ ಹಾಕಿದ ಎಲ್ಲಾ ನಿರ್ಮಾಪಕರಿಗೂ ಧನ್ಯವಾದ ಅರ್ಪಿಸುತ್ತೇನೆ. 14 ದಿನಗಳಲ್ಲಿ ಹತ್ತು ಸಾವಿರ ಟಿಕೆಟ್ ಸೇಲ್ ಮಾಡಿz್ದÉೀವೆ. ಇದರಲ್ಲಿ ವಿಜೇತರೊಬ್ಬರಿಗೆ ಬೈಕ್ ಇದೆ. ಮುಂದಿನ ಡ್ರಾದಲ್ಲಿ ಬುಲೆಟ್, ಕಾರ್ ಕೂಡ ಇರುತ್ತದೆ. ಚಿಕ್ಕಮಗಳೂರಿನ ರಾಣಿಝರಿ ಎಂಬಲ್ಲಿ ಈವರೆಗೂ ಯಾರೂ ಶೂಟ್ ಮಾಡಿರದಂಥ ಲೊಕೇಶನ್‍ನಲ್ಲಿ ಹಾಡನ್ನು ಚಿತ್ರೀಕರಿಸಿರುವುದು ಈ ಚಿತ್ರದ ಮತ್ತೊಂದು ವಿಶೇಷ ಎಂದು ಹೇಳಿದರು.
ನಾಯಕನಟ ನವೀನ್, ನಾಯಕಿ ಇಶಾನಾ ಮತ್ತು ಅಂಜನಾಗೌಡ ಕೂಡ ತಮ್ಮ ಪಾತ್ರಗಳ ಕುರಿತು ಹೇಳಿಕೊಂಡರು. ಮಜಾಟಾಕೀಸ್ ಪವನ್ ಈ ಚಿತ್ರದಲ್ಲಿ ಹಾಸ್ಪಿಟಲ್ ಅಟೆಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ಮುಖ್ಯ ಅತಿಥಿಗಳಾಗಿದ್ದ ಬಾಮ ಹರೀಶ್, ಭಾಮ ಗಿರೀಶ್, ನೆಟ್‍ಫ್ಲಿಕ್ಸನ ವಿಜಯಕುಮಾರ್ ಕೂಡ ಚಿತ್ರದ ಬಗ್ಗೆ ಹಾಗೂ ತಂಡದ ಕುರಿತಂತೆ ಮಾತನಾಡಿದರು. ಮೊದಲ ಡ್ರಾ ವಿಜೇತರನ್ನು ಸಂಗೀತ ನಿರ್ದೇಶಕ ವಿ. ನಾಗೇಂದ್ರಪ್ರಸಾದ್ ಆಯ್ಕೆಮಾಡಿದರು. 23682 ಟಿಕೆಟ್ ನಂಬರಿನ ರಾಜರಾಜೇಶ್ವರಿ ನಗರದವರೊಬ್ಬರು ಬೈಕ್‍ನ ವಿಜೇತರಾಗಿದ್ದಾರೆ.

ಭ್ರಮೆ ಆಡಿಯೋ ಬಿಡುಗಡೆ,ಬೈಕ್ ವಿಜೇತರ ಘೋಷಣೆ - BCinemas 06/10/2020

ಭ್ರಮೆ ಆಡಿಯೋ ಬಿಡುಗಡೆ,ಬೈಕ್ ವಿಜೇತರ ಘೋಷಣೆ - BCinemas ರೇಣುಕಾಂಬ ಥಿಯೇಟರಿನಲ್ಲಿ ಭ್ರಮೆ ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಹಾಗೂ ಮೊದಲ ಲಕ್ಕಿಡ್ರಾ ವಿಜೇತರ ಆಯ್ಕೆ ಕಾರ್ಯಕ್ರಮ ನಡೆಯಿತು. ಕುಂ...

06/10/2020

ಕವಿರತ್ನ ಡಾ.ವಿ.ನಾಗೇಂದ್ರ ಪ್ರಸಾದ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ #ಭ್ರಮೆ ಚಿತ್ರದ ಮೌನವೇ ಮೌನವೇ ಹಾಡಿನ ವಿಡಿಯೋ ಬಿಡುಗಡೆಯಾಗಿದೆ ನೋಡಿ ಹಂಚಿ👇🏻
https://youtu.be/3Lq0DNRHKPs

Videos (show all)

Dr. Raj Cup memories @ Dubai

Telephone

Website