S P Chidananda

S P Chidananda

BJP Leader, Tumkur

06/11/2023
03/11/2023

https://m.facebook.com/story.php?story_fbid=305054295719113&id=100086436351686&mibextid=ZbWKwL

https://drive.google.com/file/d/1rQ_gtDVH0utxula9A83WBik51BGAd5n8/view?usp=drivesdk

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕೌಶಲ್ ಸಮ್ಮಾನ್ ಅನ್ನು ಆಗಸ್ಟ್ 15, 2023 ರಂದು ಘೋಷಿಸಿದರು. ಈ ಉಪಕ್ರಮವು ಸಾಂಪ್ರದಾಯಿಕ ಕಲಾವಿದರು ಮತ್ತು ಕುಶಲಕರ್ಮಿಗಳನ್ನು ಕೇಂದ್ರೀಕರಿಸುವ ಸಣ್ಣ ವ್ಯಾಪಾರಗಳನ್ನು ಬೆಂಬಲಿಸುತ್ತದೆ. ಇದು ಸಣ್ಣ ಕೆಲಸಗಾರರು ಮತ್ತು ಕುಶಲಕರ್ಮಿಗಳಿಗೆ ಹಣಕಾಸಿನ ಸಹಾಯ, ತರಬೇತಿ, ಸುಧಾರಿತ ವಿಧಾನಗಳು ಮತ್ತು ಕೌಶಲ್ಯ ಮಾರ್ಗದರ್ಶನವನ್ನು ಒದಗಿಸುತ್ತದೆ. ಸರ್ಕಾರದ ಹೂಡಿಕೆಯನ್ನು ಯೋಜನೆಯ 15 ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ತೋರಿಸಲಾಗಿದೆ. ಅಕ್ಕಸಾಲಿಗರು, ಕಮ್ಮಾರರು, ಕೇಶ ವಿನ್ಯಾಸಕರು, ಬಟ್ಟೆ ಒಗೆಯುವವರು, ಮೇಸ್ತ್ರಿಗಳು ಮತ್ತು ಮಾರಾಟಗಾರರು ಈ 15,000 ಕೋಟಿ ರೂಪಾಯಿಗಳಿಂದ ಪ್ರಯೋಜನ ಪಡೆಯುತ್ತಾರೆ.

ಈ ಉಪಕ್ರಮವು ನಮ್ಮ ರಾಷ್ಟ್ರದ ಆರ್ಥಿಕವಾಗಿ ಕಷ್ಟಪಡುವ ಮತ್ತು ಉತ್ತಮ ಜೀವನಶೈಲಿಯನ್ನು ಬದುಕಲು ಸಾಧ್ಯವಾಗದ ಅದ್ಭುತ ಕುಶಲಕರ್ಮಿಗಳಿಗಾಗಿ ಆಗಿದೆ. ಅವಕಾಶ ನೀಡಿದರೆ ನಾಗರಿಕತೆಯನ್ನು ಮುನ್ನಡೆಸುವ ಅನೇಕ ವ್ಯಕ್ತಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಸೆಪ್ಟೆಂಬರ್ 17, 2023 ರಂದು ಸರ್ಕಾರವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕೌಶಲ್ ಸಮ್ಮಾನ್ ಅನ್ನು ಪ್ರಾರಂಭಿಸಿತು. ಈ ಯೋಜನೆಯು ಪ್ರತಿಭಾವಂತ ಕುಶಲಕರ್ಮಿಗಳಿಗೆ ಕಲಿಸುತ್ತದೆ ಮತ್ತು ಹಣವನ್ನು ನೀಡುತ್ತದೆ. ಸರ್ಕಾರವು ಈ ಕುಶಲಕರ್ಮಿಗಳನ್ನು ಆರ್ಥಿಕವಾಗಿ ಬಲಪಡಿಸುವ ಗುರಿಯನ್ನು ಹೊಂದಿದೆ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ.

ವಿಶ್ವಕರ್ಮ ಯೋಜನೆ ಆನ್‌ಲೈನ್ ನೋಂದಣಿ

ಸ್ಥಳೀಯ ಸಣ್ಣ ಉದ್ಯಮಗಳು ಮತ್ತು ನುರಿತ ಕುಶಲಕರ್ಮಿಗಳಿಗೆ ಸಹಾಯ ಮಾಡಲು ವಿಶ್ವಕರ್ಮ ಯೋಜನೆಯನ್ನು ಭಾರತ ಸರ್ಕಾರವು ಪ್ರಾರಂಭಿಸಿತು. ಈ ಕಾರ್ಯಕ್ರಮದ ಆನ್‌ಲೈನ್ ದಾಖಲಾತಿಗೆ ಪ್ರಾರಂಭ ದಿನಾಂಕ ಸೆಪ್ಟೆಂಬರ್ 17, 2023, ಭಗವಾನ್ ವಿಶ್ವಕರ್ಮರ ಜನ್ಮದಿನ. ಜಾಗತಿಕ ಮಟ್ಟದಲ್ಲಿ ಕಂಪನಿಗಳನ್ನು ಉತ್ತೇಜಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ವಿಶ್ವಕರ್ಮ ಸಮ್ಮಾನ್ ಯೋಜನೆಯಿಂದ ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಲಾಭ ಪಡೆಯುತ್ತವೆ.

ಭಾರತ ಸರ್ಕಾರದ ವಿಶ್ವಕರ್ಮ ಯೋಜನೆ 2023 ಸಾವಿರಾರು ಭಾರತೀಯ ಕುಟುಂಬಗಳಿಗೆ ಸಹಾಯ ಮಾಡುವ ಅದ್ಭುತ ಕಾರ್ಯಕ್ರಮವಾಗಿದೆ. ವಿಶ್ವಕರ್ಮ ಯೋಜನೆಯು ಶೀಘ್ರದಲ್ಲೇ ಆನ್‌ಲೈನ್ ನೋಂದಣಿಯನ್ನು ಒದಗಿಸುತ್ತದೆ, ಯಾರಾದರೂ ನೋಂದಾಯಿಸಲು ಮತ್ತು ಅದರ ಪ್ರಯೋಜನಗಳ ಲಾಭವನ್ನು ಪಡೆಯಲು ಸುಲಭವಾಗುತ್ತದೆ.

Photos from S P Chidananda's post 25/10/2023

ಇಂದಿನ ಪತ್ರಿಕಾ ವರದಿಗಳು

Photos from S P Chidananda's post 24/10/2023

ಸಹಜ ಯೋಗ ಮಾತಾಜಿಯವರ ವಿಜಯದಶಮಿ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾಜಿಯವರ ಆಶೀರ್ವಾದ ಪಡೆದ ಸಂದರ್ಭ

23/10/2023

ಬ್ರಿಟಿಷರಿಗೆ ಸಿಂಹಸ್ವಪ್ನದಂತೆ ಕಾಡಿದ ವೀರ ವನಿತೆ, ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯಂದು ಶತಕೋಟಿ ಪ್ರಣಾಮಗಳು. ಸ್ವಾಭಿಮಾನದಿಂದ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ರಣಕಹಳೆಯೂದಿದ ಚೆನ್ನಮ್ಮನವರ ಛಲ, ನಿಷ್ಠೆ, ಧೈರ್ಯ ಹಾಗೂ ಸಾಹಸಗಳು ಕನ್ನಡ ನಾಡಿನ ಸಮಸ್ತರಿಗೆ ಸರ್ವಕಾಲಿಕ ಪ್ರೇರಣೆ.

23/10/2023

ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧಪೂಜೆಯ ಹಾರ್ದಿಕ ಶುಭಾಶಯಗಳು. ನಮ್ಮ ನಿತ್ಯ ಬಳಕೆಯ ಸಕಲ ಯಂತ್ರೋಪಕರಣಗಳು, ವಾಹನಗಳು, ವಸ್ತುಗಳನ್ನು ದೈವ ಸ್ವರೂಪವೆಂದು ಭಾವಿಸಿ ಪೂಜಿಸುವ ವಿಶಿಷ್ಟ ದಿನದ ಸಂಭ್ರಮವು ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಹೊತ್ತು ತರಲಿ, ಜಗನ್ಮಾತೆ ದುರ್ಗಿಯ ಅನುಗ್ರಹ ಎಲ್ಲರ ಮೇಲಿರಲೆಂದು ಪ್ರಾರ್ಥಿಸೋಣ.

Photos from S P Chidananda's post 22/10/2023

ಇಂದು ತುಮಕೂರು ದಸರಾ ಸಮೀತಿ ವತಿಯಿಂದ ಆಯೋಜಿಸಿದ್ದ ವೇಷಬೂಷಣ ಸ್ಪರ್ಧೆಯಲ್ಲಿ ಸ್ಪರ್ದಿಸಿದ ಎಲ್ಲರಿಗೂ ಶುಭಕೋರಿ ದಸರಾ ಹಬ್ಬ ಆಯೋಜನೆಯ ಬಗ್ಗೆ ಕುಂದು ಕೊರತೆಗಳನ್ನು ಚರ್ಚಿಸಿದ ಸಂದರ್ಭ

22/10/2023

ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಸನ್ಮಾನ್ಯ ಶ್ರೀ ಅಮಿತ್ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮ ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
Happiest birthday wishes to Hon'ble Shri Amit Shah ji who is serving as our Union Home Minister.
I pray to God for your good health and long life.

21/10/2023

ತಾಯಿ ಭಾರತಿಯ ಸ್ವಾತಂತ್ರ್ಯಕ್ಕಾಗಿ ಜನ್ಮತಾಳಿದ ಆಜಾದ್ ಹಿಂದ್ ಫೌಜ್‌ನ ಸ್ಥಾಪನಾ ದಿನವಿಂದು. ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ದೇಶಭಕ್ತ ಸೇನಾನಿಗಳಿಗೆ ಕೋಟಿ ಕೋಟಿ ನಮನಗಳು.

21/10/2023

ಪೊಲೀಸ್ ಸಂಸ್ಮರಣಾ ದಿನ

ನಾಡಿನ ಭದ್ರತೆ ಮತ್ತು ಸುರಕ್ಷತೆಗಾಗಿ ಸದಾ ದುಡಿಯುವ ಪೊಲೀಸರ ಕರ್ತವ್ಯನಿಷ್ಠೆ ಹಾಗೂ ತ್ಯಾಗ ಸದಾ ಸ್ಮರಣೀಯ.

ಕರ್ತವ್ಯ ಪಾಲನೆಯ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಗೌರವ ನಮನಗಳು.

#ಪೊಲೀಸ್ ಸಂಸ್ಮರಣಾ ದಿನ

20/10/2023

1962ರಲ್ಲಿ ಈ ದಿನದಂದು ಚೀನಾ ಭಾರತದ ಮೇಲೆ ಆಕ್ರಮಣವನ್ನು ಆರಂಭಿಸಿತ್ತು ಅಂದು ಭಾರತೀಯರು ತೋರಿದ ಒಗ್ಗಟ್ಟಿಗೆ ಸಲ್ಲಿಸುವ ಗೌರವವಾಗಿದೆ.
ನಾವೆಲ್ಲರೂ ಸಮಸ್ತ ಭಾರತಿಯರು.. ನಮ್ಮ ದೇಶದ ಬೃಹತ್ ಗಡಿಗಳನ್ನು ಕಾಯುವ, ರಾಷ್ಟ್ರಕ್ಕಾಗಿ ತಮ್ಮ ಶೌರ್ಯ, ಸಾಮರ್ಥ್ಯ, ಸಹಿಷ್ಣುತೆಗಳನ್ನು ಪ್ರದರ್ಶಿಸುವ ಸೇನಾಪಡೆಗಳನ್ನು ಗೌರವಿಸಿಸೋಣ.
ರಾಷ್ಟ್ರೀಯ ಒಗ್ಗಟ್ಟಿನ ದಿನದಂದು ದೇಶಕ್ಕಾಗಿ ಜಾಗೃತಿ ಮೂಡಿಸುವ ಕೆಲಸ ಮಾಡೋಣ

20/10/2023

ಕಾಂಚನಾಂಬ ವರಭಯಂ ಪದ್ಮಧಾರಣ ಮುಕ್ತೋಜವಾಲನ್ ಸೈರ್ಮುಖಿನ್ ಶಿವಪತ್ನಿ ಕಾತ್ಯಾಯನಿ ನಮೋಸ್ತುತೇ.
ನವರಾತ್ರಿಯ ಆರನೇ ದಿನ ಶಕ್ತಿ ಸ್ವರೂಪಿಣಿಯಾದ ಕಾತ್ಯಾಯಿನಿಯನ್ನು ಪೂಜಿಸಲಾಗುತ್ತದೆ.ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು.ತಾಯಿಯ ಆಶೀರ್ವಾದದಿಂದ ನಾಡಿನೆಲ್ಲೆಡೆ ಸುಖ,ಶಾಂತಿ ಮತ್ತು ಸಮೃದ್ಧಿ ನೆಲೆಸಲಿ.

19/10/2023

ಶಾರದೀಯ ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ 5ನೇ ಅವತಾರವಾದ ಸ್ಕಂದಮಾತಾ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ದೇವಿಯ ಈ ರೂಪವನ್ನು ಪೂಜಿಸುವುದರಿಂದ ವ್ಯಕ್ತಿಯ ಶುಭ ಹಾರೈಕೆಗಳು ನೆರವೇರುತ್ತವೆ ಮತ್ತು ಮೋಕ್ಷದ ಮಾರ್ಗವೂ ಪ್ರಾಪ್ತಿಯಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ. ದುರ್ಗಾ ದೇವಿಯ ಈ ರೂಪ ಕಾರ್ತಿಕೇಯನ ತಾಯಿಯಾದ ಕಾರಣ ದೇವಿಯ ಈ ರೂಪಕ್ಕೆ ಸ್ಕಂದಮಾತೆ ಎಂಬ ಹೆಸರು ಬಂದಿದೆ.

17/10/2023

ದೇಶದ ಅಭಿವೃದ್ಧಿಗೆ ಬಡತನವು ಮಾರಕವೆಂದು ಅರಿತಿರುವ ಮಾನ್ಯ ಪ್ರಧಾನಿ ಶ್ರೀ Narendra Modi ಯವರ ನೇತೃತ್ವದ ಸರ್ಕಾರ, ವಿವಿಧ ಯೋಜನೆಗಳ ಮೂಲಕ ಜನಸಮುದಾಯಗಳನ್ನು ಬಡತನದಿಂದ ಹೊರಗೆ ತರಲು ಶ್ರಮಿಸುತ್ತಿದೆ. ಈ ಯೋಜನೆಗಳ ಲಾಭವನ್ನು ಮತ್ತಷ್ಟು ಜನರು ಪಡೆದು ಸಬಲೀಕರಣ ಹೊಂದಲಿ.

17/10/2023

ನವರಾತ್ರಿಯ ತೃತೀಯ ದಿನದಂದು ಆರಾಧಿಸುವ ಚಂದ್ರಘಂಟಾ ದೇವಿಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುತ್ತಾಳೆ.
ಶ್ರೀ ಮಾತೆಯ ಅನುಗ್ರಹದಿಂದ ಸರ್ವರಿಗೂ ಒಳಿತಾಗಲಿ.
| |

Photos from S P Chidananda's post 16/10/2023

ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಹಬ್ಬದ ತಯಾರಿಯ ವೀಕ್ಷಣೆ ನಡೆಸಿ ಚರ್ಚಿಸಲಾಯಿತು,

Photos from S P Chidananda's post 16/10/2023

ಇಂದು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ದಸರಾ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಐತಿಹಾಸಿಕ ಮತ್ತು ಪೌರಾಣಿಕ ನಾಟಕ ಸ್ಪರ್ಧೆಗೆ ಚಾಲನೆ ನೀಡಿ ಉದ್ಘಾಟಿಸಿದ ಸಂದರ್ಭ

16/10/2023

ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯ ಅಡಿಯಲ್ಲಿ ತೀವ್ರ ಗತಿಯಲ್ಲಿ ರಸ್ತೆಗಳ ನಿರ್ಮಾಣದಿಂದ ಗ್ರಾಮೀಣ ಭಾರತದ ಅಭಿವೃದ್ಧಿಯಾಗುತ್ತಿದೆ.
ಇದುವರೆಗೆ 7.44 ಲಕ್ಷ ಕಿ.ಮೀ. ಉದ್ದದ ರಸ್ತೆಗಳಿಂದ 1.72 ಲಕ್ಷಕ್ಕೂ ಅಧಿಕ ಗ್ರಾಮ/ ವಸತಿ ಪ್ರದೇಶಗಳು ಪಕ್ಕಾ ರಸ್ತೆಗಳೊಂದಿಗೆ ಸಂಪರ್ಕ ಪಡೆದಿವೆ.

16/10/2023

ಅಸಾಧಾರಣ ಪರಿಸ್ಥಿತಿಯಲ್ಲಿ ದೇಶವನ್ನು ಸುಭದ್ರವಾಗಿಡುವಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ
ರಾಷ್ಟ್ರೀಯ ಭದ್ರತಾ ಪಡೆಯ ಸಂಸ್ಥಾಪನಾ ದಿನದಂದು ನಮ್ಮ ವೀರ ಯೋಧರ ತ್ಯಾಗಕ್ಕೆ ಶತಕೋಟಿ ನಮನಗಳು

13/10/2023

ಏಳು ಸುತ್ತಿನ ಕೋಟೆಯ ಒಡೆಯನಾದ ನಾಡದೊರೆ, ಮಹಾಧೀರ ರಾಜ ವೀರ ಶ್ರೀ ಮದಕರಿ ನಾಯಕರ ಜಯಂತಿಯ ಹಾರ್ದಿಕ ಶುಭಾಶಯಗಳು.
ಶ್ರೀ ಮದಕರಿ ನಾಯಕ ಶೌರ್ಯ ಮತ್ತು ಸಾಹಸಗಳು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ.

11/10/2023

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ಹೆಣ್ಣು ಮಕ್ಕಳ ಹಕ್ಕು, ಮತ್ತವರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸೊಣ.
International Day of the Girl Child


#ಅಂತರಾಷ್ಟ್ರೀಯಹೆಣ್ಣುಮಕ್ಕಳದಿನ

Photos from S P Chidananda's post 11/10/2023

ಇಂದು ಮುಂಬರುವ ದಸರಾ ಹಬ್ಬದ ತಯಾರಿಯ ಬಗ್ಗೆ ತುಮಕೂರು ದಸರಾ ಸಮೀತಿ ಸದಸ್ಯರುಗಳ ಜೊತೆ ಚರ್ಚಿಸಿದ ಸಂದರ್ಭ

11/10/2023

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ
ಶ್ರೀ ಬಿ.ಸುರೇಶ್ ಗೌಡ
ಅವರಿಗೆ ಜನ್ಮದಿನದ ಶುಭಾಶಯಗಳು
B Suresh Gowda

Videos (show all)

ಮಹಿಳೆಯರ ಹಕ್ಕು ಮತ್ತು ಸಾಮರ್ಥ್ಯಗಳ ಬಗ್ಗೆ ಜಾಗ್ರತಿ ಮೂಡಿಸುವ ಮೂಲಕ ಸ್ತ್ರಿಯರನ್ನು ಗೌರವಿಸಿ , ಅವರ ಕನಸುಗಳನ್ನು ಬೆಂಬಲಿಸೋಣ .ಮಹಿಳಾ ಸಮಾನತೆ ...
ತುಮಕೂರು ಏನು ಅಂತ ಇಡಿ ಜಗತ್ತು ತಿರುಗಿ ನೋಡ್ಬೇಕು !ಮಾಧ್ಯಮ ಸಂದರ್ಶನದ ವೇಳೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಂದರ್ಭ.#spchidanand #bjpಕರ...
ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು#spchidanand #ಸರಳ_ಸಜ್ಜನಿಕೆಯ_ರಾಜಕಾರಣಿ#bjpಕರ್ನಾಟಕ #bjptumkur #...
In a interview given for Jananayaka News, Tumakuru BJP leader Chidanand wished and spoke about Labours day and Basava ja...

Telephone

Website