ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ

ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ

Contact information, map and directions, contact form, opening hours, services, ratings, photos, videos and announcements from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ, College & University, HANDIGUND, .

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 26/01/2023

ಅರುಣೋದಯ ಶಿಕ್ಷಣ ಸಂಸ್ಥೆಯಲ್ಲಿ 74 ನೇ ಗಣರಾಜ್ಯೋತ್ಸವ ಆಚರಣೆ

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 07/01/2023

ಯೋಗದಿಂದ ರೋಗಗಳು ದೂರ , ಯೋಗ ಗುರು ಹಂದಿಗುoದ : ಇಲ್ಲಿನ ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ರನ್ನ ಬೆಳಗಲಿ ಋಷಿ ಯೋಗಾಶ್ರಮದ ಯೋಗಾಚಾರ್ಯ ಸದಾಶಿವ ಗುರೂಜಿ ಅವರು ಭೇಟ್ಟಿ ನೀಡಿ ವಿದ್ಯಾರ್ಥಿಗಳಿಗೆ ಯೋಗ, ಪ್ರಾಣಾಯಾಮ, ವಿವಿಧ ಪ್ರಕಾರದ ಸರಳ ಯೋಗಾಸನದ ಬಗ್ಗೆ ವಿವರವಾಗಿ ಮಾತನಾಡುತ್ತಾ ಯೋಗ ರೋಗಗಳನ್ನು ದೂರ ಮಾಡುವ ಒಂದು ಪ್ರಕಾರದ ಶಕ್ತಿ ಹಾಗೂ ಯುಕ್ತಿಗಳ ಕಲೆಯಾಗಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ ಯೋಗ ಮಾಡುವುದರಿಂದ ಜ್ಞಾನ ಹಾಗೂ ಆಯುರ್ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಅರುಣೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ ಖಾನ ಗೌಡರ , ಶಾಲೆಯ ಪ್ರಧಾನ ಗುರು ನಾರಾಯಣ ಜಾದವ, ದೈಹಿಕ ಶಿಕ್ಷಕ ಹಾಗೂ ಸ್ಕೌಟ್ ಮಾಸ್ಟರ್ ಸಿಎಸ್ ಹಿರೇಮಠ, ರಾಮಕೃಷ್ಣ ಬನಾಜ, ಶಾಂತಕುಮಾರ ಬೆಳ್ಳಿಕಟ್ಟಿ, ಯಲ್ಲಪ್ಪ ಜಕನೂರ, ನಾಗರಾಜ ಖಾನಗೌಡ, ಗುರುಮಾತೆಯರಾದ ಶ್ರೀಮತಿ ಕಾವೇರಿ ಎತ್ತಿನಮನಿ, ಭಾರತಿ ತೇಲಿ, ಶ್ರೀಮತಿ ಎಲ್ಎಂ ಕಾಳೆ, ಅನ್ನಪೂರ್ಣ ಹೊನ್ನಕಾಂಬಳೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಗೊಳ್ಳಿ ರಾಯಣ್ಣ ಟ್ರೂಫನ ವಿದ್ಯಾರ್ಥಿಗಳು ಇದ್ದರು.

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 22/12/2022

ನಮ್ಮ ಅರುಣೋದಯ ಶಾಲೆಯ ರತ್ನಗಳು ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾoಬೂರಿ ಮೂಡುಬಿದ್ರೆಯಲ್ಲಿ

20/12/2022
20/12/2022

ನಮ್ಮ ಅರುಣೋದಯ ಶಾಲೆಯಿಂದ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾoಬೂರಿ ಮೂಡುಬಿದ್ರೆ 2022-2023 ಗೆ ತೆರಳುತ್ತಿರುವ ನಮ್ಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಶುಭವಾಗಲಿ

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 05/12/2022

ನನ್ನ ಕುಟುಂಬ ಪಾಠದ ಚಟುವಟಿಕೆಯ ಕುರಿತು ಮಕ್ಕಳ ‘ಕೈಯಿಂದ’ ಮಾಡಿಸಿದ ಸಣ್ಣ ಕುಟುಂಬ ಮತ್ತು ದೊಡ್ಡ ಕುಟುಂಬದ ಚಟುವಟಿಕೆಯನು ಮಕ್ಕಳು ಖುಷಿಯಿಂದ ಮಾಡಿದರು.

Raybag, Belagavi : ರಾಯಬಾಗ: ಹಂದಿಗುಂದ ಗ್ರಾಮದ ಅರುಣೋದಯ ಶಾಲೆಯಲ್ಲಿ ಮಕ್ಕಳ ದಿನಾಚರಣೆ | Public App 14/11/2022

ಹಂದಿಗುಂದ ಗ್ರಾಮದ ಅರುಣೋದಯ ಶಾಲೆಯಲ್ಲಿ ಮಕ್ಕಳ ದಿನಾಚರಣೆ https://link.public.app/WGqBe

Raybag, Belagavi : ರಾಯಬಾಗ: ಹಂದಿಗುಂದ ಗ್ರಾಮದ ಅರುಣೋದಯ ಶಾಲೆಯಲ್ಲಿ ಮಕ್ಕಳ ದಿನಾಚರಣೆ | Public App Raybag, Belagavi : ರಾಯಬಾಗ: ಹಂದಿಗುಂದ ಗ್ರಾಮದ ಅರುಣೋದಯ ಶಾಲೆಯಲ್ಲಿ ಮಕ್ಕಳ ದಿನಾಚರಣೆ | Public App

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 28/09/2022

ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಂದಿಗುಂದ .
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರಾಯಭಾಗ. ಮತ್ತು ಭಾರತ ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆ ರಾಯಬಾಗ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದಂತಹ ಸನ್ 2022-23ನೇ ಸಾಲಿನ ತಾಲೂಕ ಮಟ್ಟದ ದೇಶ ಭಕ್ತಿಗೀತೆ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ವಯಕ್ತಿಕ ವಿಭಾಗದಲ್ಲಿ ನಮ್ಮ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿ ಪ್ರಸನ್ನ ಖಾನಗೌಡ ತಾಲೂಕಿಗೆ ದ್ವಿತೀಯ ಸ್ಥಾನ,ಹಾಗೂ ಸಂತೋಷ್ ಸುಳ್ಳನ್ನವರ್ ಚತುರ್ಥ ಸ್ಥಾನವನ್ನು ಪಡೆದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ.ಅಭಿನಂದನೆ ಸಲ್ಲಿಸುವವರು:ಶಾಲೆಯ ಆಡಳಿತ ಮಂಡಳಿ ಶಿಕ್ಷಕ ವೃಂದ ಹಾಗೂ ಮುದ್ದು ವಿದ್ಯಾರ್ಥಿಗಳು. *ಅರುಣೋದಯ ಶಿಕ್ಷಣ ಸಂಸ್ಥೆ*

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 24/09/2022

ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರೂಪ್ ನ ಸ್ಕೌಟ್ಸ್ ವಿದ್ಯಾರ್ಥಿಗಳು ಹಂದಿಗುಂದ ಗ್ರಾಮ ಪಂಚಾಯತ ಗ್ರಂಥಾಲಯಕ್ಕೆ ಭೇಟಿ ನೀಡಿದರು .ಗ್ರಂಥಪಾಲಕ ಮಲ್ಲಪ್ಪ ಚಿಲ್ಲಾಳಶೆಟ್ಟಿ ಸ್ಕೌಟ್ಸ್ ವಿದ್ಯಾರ್ಥಿ ವೀರೇಶ ಕೇಸ್ತಿ ಅವರಿಗೆ ಹೂಗುಚ್ಛ ನೀಡಿದರು. ಗ್ರಂಥಪಾಲಕರು ಮಲ್ಲಪ್ಪ ಚಿಲ್ಲಾಳಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಓದುವುದನ್ನು ರೂಢಿಸಿಕೊಳ್ಳಬೇಕು.ಗ್ರಂಥಾಲಯಕ್ಕೆ ಬಂದಾಗ ಎಲ್ಲರೂ ಶಾಂತತೆಯನ್ನು ಕಾಪಾಡಿಕೊಳ್ಳಬೇಕು ಇನ್ನೊಬ್ಬರಿಗೆ ತೊಂದರೆ ಕೀಟಲೆ ಕೊಡಬಾರದು . ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರಗಳ ಕಥೆ, ಕವನ, ಕಾದಂಬರಿ, ಕ್ವಿಜ್ ,ಜನರಲ್ ನಾಲೇಜ್ ಪುಸ್ತಕಗಳ ಬಗ್ಗೆ ಅಧ್ಯಯನ ಮಾಡಬೇಕು . ನಂತರ ಎಲ್ಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು . ವಿದ್ಯಾರ್ಥಿಗಳು ನೋಂದಣಿ ಮಾಡಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು . ಸ್ಕೌಟ್ಸ್ ಮಾಸ್ಟರ್ ಹಾಗೂ ದೈಹಿಕ ಶಿಕ್ಷಕ ಸಿ ಎಸ್ ಹಿರೇಮಠ ಸ್ಕೌಟ್ಸ್ ವಿದ್ಯಾರ್ಥಿಗಳು ಇದ್ದರು .

07/09/2022

Om shanti

26/08/2022

Azadi ka amruta mahotsava video @ Arunodaya school

20/08/2022

🙏🏻

ಕನ್ನಡ ಸಾಹಿತ್ಯ ಲೋಕದ ಜನಪ್ರಿಯ ಬರಹಗಾರರು, ಕಾದಂಬರಿಕಾರರು, ಲೇಖಕರು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಎಸ್.ಎಲ್ ಭೈರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. "ಬೆಳಕು ಮೂಡಿತು" ಕಾದಂಬರಿಯ ಮೂಲಕ ಜನಪ್ರಿಯರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದು ನಾಡಿಗೆ ಕೀರ್ತಿ ತಂದಿರುವ ನಿಮಗೆ ದೇವರು ಉತ್ತಮ ಆರೋಗ್ಯದೊಂದಿಗೆ ಚೆನ್ನಾಗಿಡಲಿ. 💐

15/08/2022

ಪಸರಿಸಲಿ ವಿಶ್ವಕ್ಕೆಲ್ಲಾ ಭಾರತದ ತ್ರಿವರ್ಣ ಧ್ವಜದ
ಹಿರಿಮೆ
ಪ್ರತಿಯೊಬ್ಬ ಭಾರತೀಯ ಹೆಮ್ಮೆಯಿಂದ ಹೇಳುವ 'ಜೈ ಹಿಂದ್' 🇮🇳

ಎಲ್ಲರಿಗೂ 76 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳು

The unparalleled pride of watching our Tiranga - the embodiment of courage, truth, and progress - Soar High 🇮🇳

Here's wishing all my fellow Indians a Happy 76th Independence Day.

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 14/08/2022

Harghar Tiranga

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 14/08/2022

ಹಂದಿಗುಂದದ ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ನ ಹಾಗೂ ವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು .

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 25/06/2022
25/06/2022

ಪಠ್ಯ ಪುಸ್ತಕ ವಿತರಣೆ ಹಂದಿಗುಂದ ಇಲ್ಲಿನ ಪ್ರತಿಷ್ಠಿತ ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣಾ ಸಮಾರಂಭ ನಡೆಯಿತು . ಮುಖ್ಯ ಶಿಕ್ಷಕ ನಾರಾಯಣ ಜಾಧವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಪಠ್ಯಪುಸ್ತಕದಲ್ಲಿರುವ ವಿಷಯಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ದೈಹಿಕ ಶಿಕ್ಷಕ ಸಿ ಎಸ್ ಹಿರೇಮಠ ಮಾತನಾಡಿ , ಸರ್ಕಾರ ನೀಡುವ ಪಠ್ಯ ಪುಸ್ತಕಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ ಇಟ್ಟುಕೊಳ್ಳಬೇಕು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಶಾಲೆಗಳ ಶ್ರೇಯೋಭಿವದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ಅರುಣೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ ಪರಪ್ಪ ಖಾನಗೌಡ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ನಾರಾಯಣ ಜಾಧವ, ದೈಹಿಕ ಶಿಕ್ಷಕ ಸಿ ಎಸ್ ಹಿರೇಮಠ, ಸಹ ಶಿಕ್ಷಕರಾದ ಯಲ್ಲಪ್ಪ ಜಕನೂರು, ಶಾಂತ ಕುಮಾರ ಬೆಳ್ಳಿಕಟ್ಟಿ, ನಾಗರಾಜ ಖಾನಗೌಡ , ಗುರುಮಾತೆಯರಾದ ಶ್ರೀಮತಿ ಕಾವೇರಿ ಎತ್ತಿನಮನಿ, ಶ್ರೀಮತಿ ಎಲ್ ಎಂ ಕಾಳೆ,ಶ್ರೀಮತಿ ಭಾರತಿ ತೇಲಿ, ಪೂರ್ಣಿಮಾ ಖಾನಗೌಡರ ಇದ್ದರು.

14/04/2022

ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಟ್ರೂಫ ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ರವರ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಡಾ ಬಿ ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಯುವ ಮುಖಂಡ ಮಹಾಲಿಂಗ ಕಾಳೆ ವಿಶೇಷ ಪೂಜೆ ಸಲ್ಲಿಸಿದರು. ಸಂಸ್ಥೆಯ ಸಹ ಕಾರ್ಯದರ್ಶಿ ವಿಶ್ವನಾಥ ಖಾನಗೌಡ,ಚಿನ್ನಪ್ಪ ಗಗ್ಗರಿ, ರಾಜು ಯರಗುದ್ರಿ, ಪ್ರಧಾನಗುರು ನಾರಾಯಣ ಜಾದವ,ಸ್ಕೌಟ್ ಮಾಸ್ಟರ್ ಸಿ ಎಸ್ ಹಿರೇಮಠ,ಎಸ್ ಎಚ್ ಬೆಳ್ಳಿಕಟ್ಟಿ , ರಾಮಕೃಷ್ಣ ಬನಾಜ ಸೇರಿದಂತೆ ಸ್ಕೌಟ್ಸ್ ವಿದ್ಯಾರ್ಥಿಗಳು ಹಾಜರಿದ್ದರು .

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 07/04/2022

ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರುಫ ವತಿಯಿಂದ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಶ್ರೀ ಮಹಾಲಕ್ಷ್ಮೀ ಕೋ ಆಪ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಮುರುಗೇಪ್ಪ ಅಂದಾನಿ ಸ್ಕೌಟ್ಸ್ ಧ್ವಜಾರೋಹಣ ನೆರವೇರಿಸಿದರು.ಲಾರ್ಡ್ ಬೆಡನ್ ಪೋವೆಲ್ ಅವರ ಭಾವಚಿತ್ರಕ್ಕೆ ಮಾಜಿ ಗ್ರಾಪಂ ಸದಸ್ಯ ಶಿವಲಿಂಗಪ್ಪ ಬಾಗೇವಾಡಿ ವಿಶೇಷ ಪೂಜೆ ನೆರವೇರಿಸಿದರು .ಹಂದಿಗುಂದ ಗ್ರಾಮದ ಯುವ ಮುಖಂಡ ಬಸವರಾಜ ನಿಪನಾಳ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಸ್ಥೆಯ ಸಹ ಕಾರ್ಯದರ್ಶಿ ಶ್ರೀ ವಿಶ್ವನಾಥ ಖಾನಗೌಡ ಅಧ್ಯಕ್ಷತೆ ವಹಿಸಿದ್ದರು.ಸಿದ್ದೇಶ್ವರ ಕನ್ನಡ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಹಾಗೂ ಸ್ಕೌಟ್ಸ್ ಮಾಸ್ಟರ್ ಟಿ ಜಿ ದಾಸಪ್ಪನವರ,ಅಜೀತ ಬಾನೆ ಪ್ರೌಢ ಶಾಲೆಯ ಹಿಂದಿ ಶಿಕ್ಷಕ ಹಾಗೂ ಸ್ಕೌಟ್ಸ್ ಮಾಸ್ಟರ್ ಎಂ ಜಿ ಮಾಲಗಾ ರ,ಮಲ್ಲಿಕಾರ್ಜುನ ಕನ್ನಡ ಪ್ರಾಥಮಿಕ ಶಾಲೆ ಗೈಡ್ಸ್ ಶಿಕ್ಷಕಿ ಗೀತಾ ಸುತಾರ ಮೆಡಂ ಮಾತನಾಡಿದರು. ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಾಹಾಲಿ೦ಗ ವಲ್ಯಾಪೂರ ನಾರಾಯಣ ಜಾಧವ ಹಾಗೂ ಗುರುಮಾತೆಯರು ಇದ್ದರು. ಸ್ಕೌಟ್ಸ್ ಮಾಸ್ಟರ್ ಸಿ ಎಸ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಾಯ್ ಎಸ್ ಜಕನೂರ ನಿರೂಪಿಸಿದರು. ಎಸ್ ಎಚ್ ಬೆಳ್ಳಿಕಟ್ಟಿ ವಂದಿಸಿದರು.

02/04/2022

Happy Yugadi
Have a wonderful samvatsara new year.

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 01/04/2022

ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಪ್ರದೀಪ ಅಂದಾನಿ ಅವರು 2021 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ ಅವರಿಗೆ ನಮ್ಮ ಸಂಸ್ಥೆಯ ಪರವಾಗಿ ಅಭಿನಂದನೆಗಳು

Photos from Vishwanath Khanagoud's post 26/01/2022
20/01/2022

ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿನಿ ಗೋಕಾಕ ತಾಲ್ಲೂಕಿನ ಮಮದಾಪುರ ಗ್ರಾಮದ ಕು ಕೀರ್ತಿ ಕಾಮತ್ ಅವರು ಪಿಎಸ್ಐ ಸಿವಿಲ್ ಆಗಿ ಆಯ್ಕೆಯಾಗಿದ್ದು ನಮ್ಮ ಶಾಲೆಗೆ ಕೀರ್ತಿ ತಂದಿರುತ್ತಾರೆ ಅವರಿಗೆ ಅಭಿನಂದನೆಗಳು 💐

04/01/2022

ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮೇಘಾ ಬಸಪ್ಪ ಭಜಂತ್ರಿ ಈತಳು ಕಪ್ಪಲಗುದ್ದಿ ಕಿತ್ತೂರಾಣಿ ಚನ್ನಮ್ಮ ವಸತಿ ಶಾಲೆಗೆ ಆರನೇ ವರ್ಗಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಧಾನಗುರು ನಾರಾಯಣ ಜಾಧವ 2 ಪುಸ್ತಕಗಳನ್ನು ನೀಡಿ ಬೀಳ್ಕೊಟ್ಟರು. ಸ್ಕೌಟ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು .

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 03/01/2022

ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೆ ಶ್ರೀಮತಿ ಸಾವಿತ್ರಿಬಾಯಿ ಪುಲೆಯವರ 191ನೇ ಜಯಂತೋತ್ಸವದ ಆಚರಣೆ ಅದ್ದೂರಿಯಾಗಿ ಆಚರಿಸಲಾಯಿತು. ಗುರುಮಾತೆ ಶ್ರೀಮತಿ ಪ್ರಭಾವತಿ ಪಾಲಬಾವಿ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು . ಮಾತೆಯ ಬಗ್ಗೆ ಶಿಕ್ಷಕ ಯಲ್ಲಪ್ಪ ಜಕನೂರ ಮಾತನಾಡಿದರು.ಏಳನೆಯ ವರ್ಗದ ವಿದ್ಯಾರ್ಥಿಗಳಾದ ವರ್ಷಿಣಿ ಖಾನಗೌಡ ಹಾಗೂ ಲಕ್ಷ್ಮಿ ಚಿನಗುಂಡಿ ಮಾತನಾಡಿದರು. ಗುರುಮಾತೆಯರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು .

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 11/12/2021

ಶನಿವಾರ ಮಕ್ಕಳಿಗೆ ಕ್ರೀಡಾ ಚಟುವಟಿಕೆ

11/11/2021
Photos from Sachin Koparde's post 08/11/2021

🙏🏻

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 04/10/2021

ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ. ಅರುಣೋದಯ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಸಲ್ಪಡುವ ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಸಂಸ್ಥೆ ಕಾರ್ಯದರ್ಶಿ ವಿಶ್ವನಾಥ ಖಾನಗೌಡ ವಿತರಿಸಿದರು . ಈ ಸಂದರ್ಭದಲ್ಲಿ ಎಸ್ ಡಿಎಂಸಿ ಮಾಜಿ ಅಧ್ಯಕ್ಷ ರಮೇಶ ಉಳ್ಳಾಗಡ್ಡಿ , ಹಾಲಪ್ಪ ತಿಪ್ಪಣ್ಣವರ,ರುದ್ರಪ್ಪ ಭದ್ರಶೆಟ್ಟಿ, ಶಿವಪ್ಪ ಹೊಸೂರ, ಪ್ರಧಾನಗುರು ನಾರಾಯಣ ಜಾಧವ, ಶಿಕ್ಷಕರಾದ ಸಿ ಎಸ್ ಹಿರೇಮಠ ಫಕ್ಕೀರಪ್ಪ ಸಣ್ಣಹುಡುಗನ್ನವರ , ವಾಯ್ ಎಸ್ ಜಕನೂರ, ಶಾಂತಕುಮಾರ ಬೆಳ್ಳಿಕಟ್ಟಿ, ರಾಮಕೃಷ್ಣ ಬನಾಜ ಇದ್ದರು .

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 01/10/2021

ರಾಷ್ಟ್ರೀಯ ಪೋಷಣಾ ಅಭಿಯಾನ

Photos from ಅರುಣೋದಯ ಶಿಕ್ಷಣ ಸಂಸ್ಥೆ, ಹಂದಿಗುಂದ, ತಾ: ರಾಯಬಾಗ's post 06/09/2021

ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಮಹಾ ಪೂಜೆ ಮಾಡುವುದರ ಮೂಲಕ 6_ 7 ನೇ ನೇ ತರಗತಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರದೊಂದಿಗೆ ಶಾಲೆ ಪ್ರಾರಂಭಿಸಲಾಯಿತು .

Videos (show all)

ಹೊಸ ಹರುಷದಿ ಶಾಲೆಗೆ ಬನ್ನಿ
ಪ್ರಕೃತಿ ಮಾತೆಯ ಸೊಬಗು.....
Happy birthday sir
ಸ್ಕೌಟ್ ಅಂಡ್ ಗೈಡ್ಸ್ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ
ಇಂದು "ನಮ್ಮ ಅರುಣೋದಯ ಶಾಲೆ" ಯಲ್ಲಿ "ಮಕ್ಕಳ ದಿನಾಚರಣೆಯ" ಅಂಗವಾಗಿ ಮಕ್ಕಳೇ ಇಂದು "ಶಿಕ್ಷಕರಾಗಿ" ಪಾಠ ಪ್ರವಚನ ಮಾಡಿದರು.
ನಮ್ಮ ಶಾಲೆಯ ವಿದ್ಯಾರ್ಥಿ ಬುಗುರಿ ಆಡಿಸುತ್ತಿರುವುದು....  ಹಳೆಯ ಬಾಲ್ಯದ ನೆನಪು ಮರುಕಳಿಸಿದಂತಾಯ್ತು
ನಮ್ಮ ಶಾಲೆಯ ಶಿಕ್ಷಕರಾದ ಶ್ರೀ ಯಲ್ಲಪ್ಪ ಜಕನೂರ ಸರ್ ಅವರು ಪ್ರಯೋಗದ ಮೂಲಕ ವಿಜ್ಞಾನ ಪಾಠ ಮಾಡುತ್ತಿರುವದು
ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು

Telephone

Website

Address

HANDIGUND
Raibag
591235