Manohar Prabhu
Contact information, map and directions, contact form, opening hours, services, ratings, photos, videos and announcements from Manohar Prabhu, Health & Wellness Website, .
*ನಿಮ್ಮ ಮಗಳು ಬೇಗನೆ ಋತುಮತಿಯಾಗುವುದನ್ನು ತಡೆಯಬೇಕೇ? ಹಾಗಿದ್ರೆ ಈ ಐದು ಸೂತ್ರಗಳನ್ನು ಪಾಲಿಸಿ…*
********************************
ಈಗಿನ ಜೀವನಶೈಲಿ ಹಾಗೂ ಆಹಾರಶೈಲಿಯಿಂದಾಗಿ ಮಕ್ಕಳು ಬೇಗನೆ ಋತುಮತಿಯಾಗುತ್ತಿದ್ದಾರೆ, 8 ವರ್ಷದಲ್ಲಿ ಆದರೆ ಪಾಪ ಆ ಮಗುವಿಗೆ ಪ್ಯಾಡ್ ಬದಲಾಯಿಸುವುದು ಕೂಡ ಕಷ್ಟವಾಗುವುದು, ಮೊದಲೆಲ್ಲಾ ಹೆಣ್ಮಕ್ಕಳು 14-16 ವರ್ಷಕ್ಕೆ ಋತುಮತಿಯಾಗುತ್ತಿದ್ದರು.
ಕೆಲವು ಪೋಷಕರು ಅಯ್ಯೋ ನನ್ನ ಮಗಳಿಗೆ 16 ವರ್ಷವಾದರೂ ಇನ್ನೂ ದೊಡ್ಡವಳಾಗಿಲ್ಲ ಎಂದು ಚಿಂತೆ ಮಾಡುತ್ತಿದ್ದರು, ಆದರೆ ಈಗ ಪೋಷಕರು ನಮ್ಮ ಮಗಳು 8 ವರ್ಷಕ್ಕೆ ಋತುಮತಿಯಾದಳು ಎಂದು ಕಣ್ಣೀರು ಹಾಕುತ್ತಿದ್ದಾರೆ.
ಮಕ್ಕಳು ಬೇಗನೆ ಋತುಮತಿಯಾಗುವುದು ಒಳ್ಳೆಯದಲ್ಲ. ಬೇಗನೆ ಋತುಮತಿಯಾದರೆ ಪ್ರೀಮೆನೋಪಾಸ್ ಅಪಾಯವಿದೆ, ಹೀಗಾಗಿ 12 ವರ್ಷದ ಬಳಿಕ ಋತುಮತಿಯಾಗುವುದು ಒಳ್ಳೆಯದು.
ನಿಮ್ಮ ಮಗಳು ಚಿಕ್ಕ ಪ್ರಾಯದಲ್ಲಿ ಋತುಮತಿಯಗುವುದನ್ನು ತಡೆಗಟ್ಟಲು ಪೋಷಕರು ಈ 5 ವಿಷಯಗಳತ್ತ ಗಮನಹರಿಸಬೇಕು:
ಪ್ರತಿದಿನ 1 ಗಂಟೆ ಸೂರ್ಯನ ಬೆಳಕು ಮಕ್ಕಳ ಮೈಮೇಲೆ ಬೀಳಬೇಕು:
ನಿಮ್ಮ ಮಕ್ಕಳ ಮೇಲೆ ಪ್ರತಿದಿನ ಒಂದು ಗಂಟೆಯಾದರೂ ಬೆಳಗಿನ ಬಿಸಿಲು ಮೈ ಮೇಲೆ ಬೀಳಬೇಕು, ಇದರಿಂದ ಮಕ್ಕಳಿಗೆ ಅವಶ್ಯಕತೆಯಿರುವ ವಿಟಮಿನ್ ಡಿ ಸಿಗುವುದು. ನೀವು ಈ ಸಮಯದಲ್ಲಿ ಮಕ್ಕಳ ಜೊತೆ ಮನೆಯ ಹೊರಗಡೆ ಬಂದು ಆಟವಾಡಿ ಅಲ್ಲದೆ ಅವರಿಗೆ ಮೊಬೈಲ್ ಕೊಡುವುದು, ಟಿವಿ ಮುಂದೆ ಕೂರಿಸುವುದು ಮಾಡಿಸದೆ ಹೊರಗಡೆ ಹೋಗಿ ಆಟ ಆಡಲು ಪ್ರೋತ್ಸಾಹಿಸಿ. ರಜೆ ಇರುವಾಗ ಮನೆಯೊಳಗಡೆ ಇರುವುದಕ್ಕಿಂತ ಹೊರಗಡೆ ಹೋಗಿ ಆಡಲು ಪ್ರೋತ್ಸಾಹಿಸಿ.
ಮಕ್ಕಳಿಗೆ ಕಾಸ್ಮೆಟಿಕ್ ಹಚ್ಚಬೇಡಿ:
ಮಕ್ಕಳಿಗೆ ಕಾಸ್ಮೆಟಿಕ್ ಹಚ್ಚುವುದು ಒಳ್ಳೆಯದಲ್ಲ, ಅದು ಅವರ ತ್ವಚೆಗೆ ಒಳ್ಳೆಯದಲ್ಲ, ಅಲ್ಲದೆ ಕಾಸ್ಮೆಟಿಕ್‌ಗೂ ಹಾಗೂ ಬೇಗನೆ ಋತುಮತಿಯಾಗುವುದಕ್ಕೂ ಸಂಬಂಧವಿದೆ ಎಂದು ಅಧ್ಯಯನಗಳು ಹೇಳಿವೆ, ಆದ್ದರಿಂದ ಮಕ್ಕಳಿಗೆ ಕಾಸ್ಮೆಟಿಕ್ ಬಳಸಬೇಡಿ. ಅಲ್ಲದೆ ಮಕ್ಕಳಿಗೆ ಕಾಸ್ಮೆಟಿಕ್ ನೀಡುವುದು ಅವರ ತ್ವಚೆ ಆರೋಗ್ಯಕ್ಕೂ ಒಳ್ಳೆಯದಲ್ಲ.
ನಾನ್‌ವೆಜ್ ಕಡಿಮೆ ಬಳಸಿ:
ಮಕ್ಕಳಿಗೆ ಪ್ರತಿದಿನ ನಾನ್‌ವೆಜ್ ಕೊಡಬೇಡಿ, ನಾನ್‌ವೆಜ್ ಸೇವನೆ ವಾರದಲ್ಲಿ ಎರಡು ಬಾರಿ ಇದ್ದರೆ ಒಳ್ಳೆಯದು, ಪ್ರತಿದಿನ ನಾನ್‌ವೆಜ್ ಸೇವನೆ ಮಾಡುವುದರಿಂದ ಬೇಗನೆ ಋತುಮತಿಯಾಗುವ ಸಾಧ್ಯತೆ ಇದೆ, ಆದ್ದರಿಂದ ತರಕಾರಿ ಹಣ್ಣುಗಳನ್ನು ಹೆಚ್ಚಾಗಿ ನೀಡಿ, ನಾನ್‌ವೆಜ್ ಕಡಿಮೆ ಸೇವಿಸಿ. ಮೀನು ಒಳ್ಳೆಯದು, ಫಾರಂ ಕೋಳಿ ಬದಲಿಗೆ ನಾಟಿ ಕೋಳಿ ನೀಡಿ, ಮೊಟ್ಟೆಯನ್ನು ಕೂಡ ಮಿತಿಯಲ್ಲಿ ನೀಡಿ, ಜಂಕ್ ಫುಡ್ ಹೆಚ್ಚು ನೀಡಬೇಡಿ, ಹೀಗೆ ಅವರ ಆಹಾರ ಕ್ರಮದ ಕಡೆಗೆ ಗಮನಹರಿಸಿ.
ದೈಹಿಕ ಚಟುವಟಿಕೆ ತುಂಬಾನೇ ಮುಖ್ಯ:
ಮಕ್ಕಳಿಗೆ ದೈಹಿಕ ಚಟುವಟಿಕೆ ತುಂಬಾನೇ ಮುಖ್ಯ. ಆದ್ದರಿಂದ ಮಕ್ಕಳನ್ನು ಡ್ಯಾನ್ಸ್, ಕ್ರೀಡೆ, ಯೋಗ, ಕರಾಟೆ ಅಂತ ಸೇರಿಸಿ, ಇದರಿಂದ ಅವರು ದೈಹಿಕವಾಗಿ ಫಿಟ್ ಆಗಿರುತ್ತಾರೆ, ಪ್ರತಿನಿತ್ಯ 2 ಗಂಟೆ ದೈಹಿಕ ವ್ಯಾಯಾಮ ಅವಶ್ಯಕ. ನೀವೂ ಅವರ ಜೊತೆ ಆಟ ಆಡುವುದರಿಂದ ಅವರಿಗೂ ಖುಷಿ, ಅಪ್ಪ-ಾಮ್ಮ ಮಕ್ಕಳು ಫಿಟ್ನೆಸ್ ಕಡೆ ಗಮನಹರಿಸಬಹುದು.
ಹಾಲು ಕೊಡಬೇಡಿ:
ಕೆಲವರು ಮಕ್ಕಳಿಗೆ ಹಾಲು ಕೊಡುತ್ತಾರೆ, ಹಾಗೆ ಮಾಡಬೇಡಿ, ಹಾಲು ಕೊಡುವುದರಿಂದ ಹಾರ್ಮೋನ್‌ಗಳ ಬದಲಾವಣೆಯಾಗಿ ಮಕ್ಕಳು ಬೇಗನೆ ಋತುಮತಿಯಾಗುತ್ತಾರೆ.
ಉತ್ತಮ ಜೀವನಶೈಲಿ ಮತ್ತು ಪೌಷ್ಟಿಕಾಂಶದ ಊಟ ಮಾಡಿ.ಆಹಾರ ಮತ್ತು ಜೀವನಶೈಲಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ WhatsApp:
ಪರಿಚಯದ ಚಲನಚಿತ್ರ ಯುವ ನಿರ್ದೇಶಕರೊಬ್ಬರು ಕರೆ ಮಾಡಿ ಅವರ ಮುಂದಿನ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಕೇಳಿದರು......
ಕುತೂಹಲಕ್ಕಾಗಿ ನಾನು ಯಾವ ಪಾತ್ರ ಎಂದು ಕೇಳಿದೆ.
" ಪೋಲಿಸ್ ಅಧಿಕಾರಿ " ಎಂದರು.
ನಾನು " ಓ ಒಬ್ಬ ನಿಷ್ಠಾವಂತ ಪ್ರಾಮಾಣಿಕ ದಕ್ಷ ಅಧಿಕಾರಿ. ಯಾವ ಮುಲಾಜಿಗೂ ಒಳಗಾಗದೆ ತನ್ನ ಕರ್ತವ್ಯ ನಿಭಾಯಿಸುವ ಪಾತ್ರವೇ ? " ಎಂದು ಕೇಳಿದೆ.
" ಇಲ್ಲ ಈ ಚಿತ್ರದಲ್ಲಿ ಆತ ವಿಲನ್. ರಾಜಕಾರಣಿಯ ಗುಲಾಮನಂತೆ ಕೆಲಸ ಮಾಡುವ ಕಡು ಭ್ರಷ್ಠ " ಪಾತ್ರ ಎಂದರು. ಆಗ ನಾನು " ಕ್ಷಮಿಸಿ ಒಬ್ಬ ಪೋಲಿಸ್ ಕಲ್ಪನೆಯಲ್ಲಿಯೂ ವಿಲನ್ ಆಗುವುದನ್ನು ಸಹಿಸುವುದು ನನಗೆ ಕಷ್ಟ. " ಎಂದು ನಯವಾಗಿ ತಿರಸ್ಕರಿಸಿದೆ.
ಆತ ಮತ್ತೆ " ಇನ್ನೊಂದು ಧರ್ಮಾಧಿಕಾರಿಯ ಪಾತ್ರ ಇದೆ. ಅದನ್ನಾದರೂ ಮಾಡಿ " ಎಂದ.
"ಹೌದೇ ಸರ್ವಸಂಗ ಪರಿತ್ಯಾಗಿಯಾಗಿ ಭಿಕ್ಷೆ ಬೇಡಿ ಅನ್ನದಾಸೋಹ ಅಕ್ಷರ ದಾಸೋಹ ಮಾಡುವ ನಿಷ್ಕಲ್ಮಶ ಹೃದಯದ ಆಧ್ಯಾತ್ಮಿಕ ಚಿಂತನೆಯ ಯಾವುದೇ ಧರ್ಮದ ಧರ್ಮಾಧಿಕಾರಿಯ ಪಾತ್ರವಾದರೂ ಸರಿ" ಎಂದೆ.
ಆತ " ಛೆ, ಛೆ, ನನ್ನ ಕಥೆಯಲ್ಲಿ ಬರುವ ಧರ್ಮಾಧಿಕಾರಿ ಮೇಲ್ನೋಟಕ್ಕೆ ಸಭ್ಯವಾಗಿ ಕಂಡರೂ ಆತ ಒಬ್ಬ ಗೋಮುಖ ವ್ಯಾಘ್ರ. ವಿಕೃತ ಕಾಮಿ, ಎಲ್ಲಾ ದುಶ್ಚಟಗಳ ದಾಸ " ಎಂದ.
ಅದನ್ನೂ ನಿರಾಕರಿಸಿದೆ.
ಕೊನೆಗೆ ಆತ " ಹೋಗಲಿ ಒಬ್ಬ ಪತ್ರಕರ್ತನ ಪಾತ್ರವಿದೆ ಮಾಡಿ " ಎಂದ.
ನಾನು " ಸಮಾಜದ ಸರ್ಕಾರದ ಓರೆ ಕೋರೆಗಳನ್ನು ತಿದ್ದುವ, ವ್ಯವಸ್ಥೆಯ ಹುಳುಕುಗಳನ್ನು ತೋರಿಸುವ, ಧೈರ್ಯ ಸಾಹಸದ ವಿವೇಚನಾಯುಕ್ತ ಪಾತ್ರವೇ " ಕೇಳಿದೆ.
ಆತ " ಇಲ್ಲ, ಒಬ್ಬ ಸಾಧಾರಣ ವ್ಯಕ್ತಿ ಟಿವಿ ಮಾಧ್ಯಮದ ರಿಪೋರ್ಟರ್ ಆಗಿ ಕೆಲಸ ಆರಂಭಿಸಿ ತನ್ನ ಚಾಣಾಕ್ಷ ನಡೆಯಿಂದ ತಾನೇ ಸುದ್ದಿಗಳನ್ನು ಸೃಷ್ಟಿಸುತ್ತಾ ಜನರ ಭಾವನೆಗಳನ್ನು ಕೆರಳಿಸಿ TRP ಯಲ್ಲಿ ತನ್ನ ಚಾನಲ್ ನಂಬರ್ 1 ಆಗುವಂತೆ ಮಾಡಿ ಅಪಾರ ಹಣಗಳಿಸಿ ಕೊನೆಗೆ ಅದೇ ಹಣ ಜನಪ್ರಿಯತೆಯಿಂದ ಚುನಾವಣೆಗೆ ಸ್ಪರ್ಧಿಸಿ ಭ್ರಷ್ಠ MLA ಆಗುವ ಪಾತ್ರ " ಎಂದ.
" ಅಯ್ಯೋ ಮಾರಾಯ ನಿನ್ನ ಚಿತ್ರದಲ್ಲಿ ಯಾವುದಾದರು ಒಳ್ಳೆಯ ಗುಣದ ಪಾತ್ರವಿದ್ದರೆ ಹೇಳು " ಎಂದೆ.
ಆತ " ಇಂದಿನ ಚಲನಚಿತ್ರ ಅಥವಾ ಧಾರಾವಾಹಿ ಎಂದರೆ ಅದು ಮನರಂಜನೆಯ ನೆಪದಲ್ಲಿ ಹಣಗಳಿಸುವ ಉದ್ಯಮ. ತಗಡು ಆದರ್ಶಗಳನ್ನು ಪ್ರಚಾರ ಮಾಡುವ ಮಾಧ್ಯಮವಲ್ಲ. ಒಳ್ಳೆಯದನ್ನೇ ತೋರಿಸಿದರೆ ಜನ ನೋಡುವುದೇ ಇಲ್ಲ. ಸಮಾಜದ ವಿಕೃತಗಳನ್ನು ಮಸಾಲೆ ಬೆರೆಸಿ ಕುತೂಹಲ ಮೂಡಿಸಿ ಅಫೀಮಿನಂತೆ ಅವರ ಮನಸ್ಸುಗಳ ಒಳ ಪ್ರವೇಶಿಸಿ ಅವರನ್ನು ಭಾವನಾ ಲೋಕದಲ್ಲಿ ತೇಲಿಸಿ ಅವರಿಗರಿವಿಲ್ಲದಂತೆ ಅದರಲ್ಲಿ ಮುಳುಗಿಸಿದರೆ ಆ ರೀತಿಯ ಧಾರಾವಾಹಿ ಮತ್ತು ಚಲನಚಿತ್ರಗಳು ಯಶಸ್ವಿಯಾಗುತ್ತವೆ....
ಅದಕ್ಕೆ ನೆಪವಾಗಿ ಕೇವಲ ನಾಯಕ ಮತ್ತು ನಾಯಕಿಯನ್ನು ಮಾತ್ರ ಎಲ್ಲಾ ಒಳ್ಳೆಯ ಗುಣಗಳ ಆದರ್ಶದಂತೆ ಚಿತ್ರಿಸಿ ಇಡೀ ಕಥೆಯ ನಿರೂಪಣೆಯಲ್ಲಿ ಕೆಟ್ಟದ್ದನ್ನೇ ವಿಜೃಂಭಿಸಲು ಪ್ರಯತ್ನಿಸುತ್ತೇವೆ.....
ನಮ್ಮ ಜನ ಇರುವುದೇ ಹೀಗೆ. ಮುಖವಾಡಗಳ, ಆತ್ಮವಂಚನೆಯ ಸಮಾಜ ಇದು. ಅದಕ್ಕಾಗಿಯೇ ಇಂದಿನ ಧಾರಾವಾಹಿಗಳು ಮಹಿಳೆಯರ ಅಚ್ಚುಮೆಚ್ಚಿನ ಮನರಂಜನೆಯ ಮೂಲವಾಗಿ ಲೇಡಿ ವಿಲನ್ ಗಳು ಮಿಂಚಿ ಹೆಣ್ಣೆಂದರೆ ಮಾತೃ ಹೃದಯಿ ಎಂಬ ಮನೋಭಾವ ಬದಲಾಗಿ ಅವರನ್ನು ನೋಡಿದರೆ ಭಯ ಮೂಡುತ್ತದೆ " ಎಂದ.
ನೋಡಿ,....
ಹೇಗೆ ನಮ್ಮ ಮನಸ್ಥಿತಿಗಳು ಬದಲಾಗುತ್ತಾ ನಮಗರಿವಿಲ್ಲದೆ ವಿಕೃತಿಯತ್ತ ಸಾಗುತ್ತಿದೆ. ಎಲ್ಲಾ ರಂಗಗಳನ್ನು ವ್ಯಾಪಿಸುತ್ತಿದೆ.
ಇನ್ನಾದರೂ ಅಲ್ಲಿಯೇ ಕಳೆದು ಹೋಗದೆ ಅದರಿಂದ ಹೊರಬರುವ ಮಾರ್ಗಗಳನ್ನು ಹುಡುಕಿ ನಿಜವಾದ ಕ್ರಿಯಾತ್ಮತ ಚಟುವಟಿಕೆಯತ್ತ ನಮ್ಮ ಬದುಕಿನ ಪಯಣ ಸಾಗಲಿ ಎಂದು ಆಶಿಸುತ್ತಾ......
Forwarded as received.
https://youtu.be/In1gVgt-ib0?si=d_yyhODMT1DkJ8Zl
ಮನಸ್ಸಿಗೆ ನೆಮ್ಮದಿಯನ್ನು ನೀಡುವ ಕೃಷ್ಣನ ಈ ಮಾತುಗಳನ್ನು ತಪ್ಪದೆ ಕೇಳಿ |Krishna Life Changing Quotes In Kannada Please Join And Support Me Friendshttps://www.youtube.com/channel/UC669MmURgzc-4lGKQuw133w/joinMotivation For Life In Kannadaಮನಸ್ಸಿಗೆ ನೆಮ್ಮದಿಯನ್ನು ನೀಡುವ ಕೃಷ್...
FB ಗೆಳೆಯರಾದ ವೆಂಜಟ್ರಾಮ್ ಭಟ್ ಬೆಳ್ಳಿ ಇವರ ಚಂದದ ಬರಹ...
ನಿಜವಾದ ಜೀವನಪಾಠ ಇದು.. ಅನ್ನಿಸ್ತು.
*ಗೆಳೆತನ*:
ಎಲ್ಲಿಯವರೆಗೆ ಏಕವಚನದ ಸ್ನೇಹಿತರು ನಿಮ್ಮೊಂದಿಗಿರುತ್ತಾರೋ ಅಲ್ಲಿಯವರೆಗೂ ನೀವು ಸುಖಿಯೇ.
ಆದರೆ ಸಮಯ ಸರಿಯುತ್ತಿದ್ದಂತೆ ಇಂತಹ ಸ್ನೇಹಿತರ ಸಂಖ್ಯೆಯೂ ಕಡಿಮೆಯಾಗುತ್ತದೆ. ಊರು ಬಿಟ್ಟಿರೋ ಆಗ ನೋಡಿ ಇಂತಹ ಸ್ನೇಹಿತರೂ ದೂರವಾಗುತ್ತಾರೆ. ಅಥವಾ ವ್ಯವಹಾರ ಕೈತಪ್ಪಿ ಇತರರ ಮೇಲೆ ಅವಲಂಬಿತರಾದರೋ ಆಗ ಸ್ವತಂತ್ರವಾಗಿ ಸ್ನೇಹಿತರೊಂದಿಗೆ ಕಳೆಯ ಬೇಕಾದ ಕಾಲಕ್ಕೂ ಸಂಚಕಾರ ಒದಗುತ್ತದೆ.
ಇನ್ನು ಅಂತಸ್ತು, ಹುದ್ದೆಯ ಕಾರಣದಿಂದ ಸ್ನೇಹಿತರಿಂದ ದೂರಾಗಿ ಮತ್ತೆ ಅನತಿ ಕಾಲದಲ್ಲೇ ಸಮಾನಾಭಿರುಚಿಯವರ ಗೆಳೆತನಕ್ಕೆ ಹಂಬಲಿಸಿದರೂ ಸಿಗುವ ಸಾಧ್ಯತೆ ಕಡಿಮೆಯೇ.
ಬಹುದಿನದ ಬಳಿಕ ಸಿಕ್ಕ ಬಾಲ್ಯದ ಗೆಳೆಯರೂ, ನಮ್ಮನ್ನು ಹೋಗೋ ಬಾರೋ ಎಂದು ತಿದ್ದಿ ತೀಡಿದ ಹಿರಿಯರು, ಬೆತ್ತದಲ್ಲಿ ಬಾರಿಸಿ ಕಿವಿಹಿಂಡಿ ಕಲಿಸಿದ ಮಾಸ್ತರೂ ಸಹ ದಿನಕಳೆದಂತೆ ನಮ್ಮನ್ನು ಹೋಗಿ, ಬನ್ನಿ ಎಂದು ಮಾತನಾಡಿಸುವುದು ಕೇಳಿದರೆ ಸಂಕಟವಾಗುತ್ತದೆ.
ವ್ಯಕ್ತಿ ಎಷ್ಟೇ ಸಾಧಿಸಿರಲಿ, ಸಹಪಥಿಕರಿಗಾಗಿ ಹಂಬಲಿಸುವುದು ಹೆಚ್ಚಾಗುತ್ತಲೇ ಹೋಗುತ್ತದೆ. ಅದು ತೋರಿಕೆಯಲ್ಲಿ ಕಾಣಬರದಿದ್ದರೂ ಆಳದಲ್ಲಿ ಹುದುಗಿರುವುದನ್ನು ತಪ್ಪಿಸಲು ಸಾಧ್ಯವಿಲ್ಲ.
ಪ್ರತಿಷ್ಠೆಯನ್ನು ದೂರವಿಟ್ಟು ರಜನಿಕಾಂತ್ ತನ್ನ ಗೆಳೆಯರೊಂದಿಗೆ ಕಾಲ ಕಳೆಯಲು ಬೆಂಗಳೂರಿಗೆ ಬಂದು ಹೋಗುತ್ತಾರೆ ಎಂಬುದನ್ನು ಹಿಂದೆ ಓದಿದಾಗ ನಗುತ್ತಿದ್ದೆ. ಆದರೆ ಅದು ವಾಸ್ತವದ ಬಯಕೆ ಎಂಬುದು ಅರ್ಥವಾಗುತ್ತಿದೆ.
ಅಡಿಗರು ತಮ್ಮ ಕೊನೆಗಾಲದ ಡೈರಿಯ ಪುಟಗಳಲ್ಲಿ ʼಇಂದು ನನ್ನನ್ನು ನೋಡಲು ಯಾರೂ ಬರಲಿಲ್ಲʼ ಎಂದು ಅನೇಕ ಬಾರಿ ಬರೆದುಕೊಂಡಿದ್ದರೆಂದು ಬಲ್ಲವರು ತಿಳಿಸಿದ್ದರು.
ಸ್ವಾತಂತ್ರ್ಯ ಧುರಿಣರಾದ ಗೋಖಲೆಯವರು ತೀರಿಕೊಂಡ ಸಮಯದಲ್ಲಿ, ʼಏಷ್ಟೇ ದೊಡ್ಡವರಾದರೂ ತಿಲಕರು ಮತ್ತು ಗೋಖಲೆಯರು ಮಿತ್ರತ್ವವನ್ನು ಕಲಿಯಲಿಲ್ಲʼ ಎಂಬ ಮಾತು ಕಿವಿಗೆ ಬಿದ್ದು ಬೇಂದ್ರೆಯವರು ʼಏನೇ ಆಗಲಿ ಏನೇ ಹೋಗಲಿ ಗೆಳೆಯರಿದ್ದರೆ ಸಾಕುʼ ಎಂಬ ತೀರ್ಮಾನಕ್ಕೆ ಬಂದು ಗೆಳೆಯರ ಗುಂಪಿನ ಯೋಚನೆ ಮಾಡಿದರು. ಇದನ್ನು ಅವರೇ ಹೇಳಿಕೊಂಡಿದ್ದಾರೆ. ಮುಂದೆ ಈ ಗುಂಪು ಮುರಿದರೂ ಬೇಂದ್ರೆಯವರಿಗೆ ಹಲವು ಮಿತ್ರರನ್ನು ಕೊನೆಗಾಲದವರೆಗೆ ನೀಡಿತ್ತು. ʼಇಷ್ಟೇ ನನಗೆ ಸಾಕುʼ ಎಂಬುದು ಅವರ ಅಭಿಮತವಾಗಿತ್ತು.
ಬಹುಶಃ ನಾಲ್ಕನೇ ತರಗತಿಯ ಪಠ್ಯದಲ್ಲಿತ್ತು ಎಂಬ ಕಾರಣದಿಂದ ಚನ್ನವೀರ ಕಣವಿಯವರ ʼಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನುʼ ಪದ್ಯ ಕಂಠಸ್ಥ ಮಾಡಿಕೊಂಡಿದ್ದರೂ ಅದು ಅರ್ಥವಾಗಲು ಮೂರು ದಶಕಗಳೇ ಬೇಕಾದವು.
ಒಮ್ಮೆ ನಿಮ್ಮ ಗೆಳೆತನದ ಸ್ಟಾಕ್ ಚೆಕ್ ಮಾಡಿಕೊಳ್ಳಿ, ಎಷ್ಟು ಹಳೆಯ ಸ್ಟಾಕ್ ನಿಮ್ಮಲ್ಲಿರುವುದೋ ಅಷ್ಟು ಭಾಗ್ಯಶಾಲಿಗಳು ನೀವು.
(ಪೇಸ್ ಬುಕ್ / ಸಾಮಾಜಿಕ ಜಾಲತಾಣ ಫ್ರೆಂಡ್ಸ್ ಬಗ್ಗೆ ಅಲ್ಲ)
ನಿಮ್ಮ ಸ್ನೇಹಿತರ ವಲಯವನ್ನು ಮರುನಿರ್ಮಾಣ ಮಾಡಲು ನೀವು ಬಯಸಿದರೆ, ನಾವು ನಿಮಗೆ ಮಾರ್ಗದರ್ಶನ/ಬೆಂಬಲ ನೀಡುತ್ತೇವೆ. ನಾವು ಒಂದೇ ದೃಷ್ಟಿ, ಒಂದೇ ಗುರಿ ಹೊಂದಿರುವ, ನಾವು ಸಂತೋಷವಾಗಿ ಮತ್ತು ಆರೋಗ್ಯವಾಗಿದ್ದು, ಜಗತ್ತನ್ನು ಆರೋಗ್ಯಕರ ಮತ್ತು ಸಂತೋಷಕರ ಮಾಡುವ ಜನರ ದೊಡ್ಡ ಗುಂಪು. ಸಂಪರ್ಕ: 9343357877.
If you want to rebuild your circle of friends, we will guide/support you. We are a great group of people with one vision, one goal, being happy and healthy and making the world healthier and happier.
Contact: 9343357877.
Hi
My Student ನನ್ನ ವಿದ್ಯಾರ್ಥಿ. Ask me how? ಹೇಗೆಂದು ನನ್ನನ್ನು ಕೇಳಿ. 9343357877
ಹಾಸ್ಯ😆: ಅತ್ತೆಗಳ ಯೋಚನೆ
ಸುಂದರಮ್ಮ: ಎನು ಚಂದ್ರಮ್ಮ ಊಟ ಆಯಿತಾ, ಕಟ್ಟಿ ಮೇಲೆ ಬಾಳೆ ಹಣ್ಣು ತಿನ್ನುತ್ತಾ ಕುಂತ್ರೆ
ಚಂದ್ರಮ್ಮ: ಮನೆಯಲ್ಲಿ ಇನ್ನೂ ಸೊಸೆ ಪೂಜೆ, ಅಡುಗೆ ಮಾಡ್ತಿದ್ದಾಳೆ, ಹಸಿವಾಗಿತ್ತು ಸುಮ್ಮನೆ ಬಾಳೆ🍌 ಹಣ್ಣು ತಿನ್ನತಾ ಕೂತೀನಿ ಬನ್ನಿ....
ಸುಂದರಮ್ಮ: ಯಾಕೆ ಹೊತ್ತಾಯತಲ್ಲ ಪೂಜೆ ಇನ್ನೂ ಮುಗಿದಿಲ್ಲವಾ...
ಚಂದ್ರಮ್ಮ: ಅಯ್ಯೋ ಅದನ್ನೇನು ಕೇಳ್ತೀರಾ ಬಿಡಿ ಸುಂದರಮ್ಮ 🤷♀️ ನನ್ನ ಸೊಸೆ ಮುಂಜಾನೆ 5ಗಂಟೆಗೆ ಎದ್ದು ಅಂಗಳ ಗೂಡಿಸಿ,,, ಎರಡು ತಾಸು ಕೂತು ಸುಂದರ ವಾದ ರಂಗೋಲಿ ಬಿಡಿಸಿ,,, ಒಂದು ತಾಸು ಅದರ ಫೋಟೋ ತೆಗೆದು, ಅದೇನೋ ರಂಗೋಲಿ ಅರಮನೆ ಅಂತೆ ಅದಕ್ಕೆ ಹಾಕಿದ್ಲು...
ಅದಾದ ಮೇಲೆ ಮೊಬೈಲ್ ಕ್ಷಣಕ್ಕೆ ಒಮ್ಮೆ ಟಂಗ್ ಅನ್ನೋದು ಇವಳು ಟಿಂಗ್ ಅಂತ ಮಾಡುವ ಕೆಲಸ ಬಿಟ್ಟು ಅದನ್ನು ನೋಡಿ, ಒಬ್ಬಳೇ ಹುಚ್ಚಿ ಥರ ನಗೋದು....
ಸುಂದರಮ್ಮ: ಹುಚ್ಚಿ ಥರ ನಗತಿದ್ಲಾ... 😳😳😳 ಅದ್ಯಾಕೋ 🤔🤔🤔
ಚಂದ್ರಮ್ಮ: ಎಲ್ಲಾ ದೇವರ ಆಟ ಎನ್ ಮಾಡೋದು... ಪಾಪ ನನ್ನ ಮಗನ ಹಣೆಬರಹ ಸರಿ ಇರಲಿಲ್ಲ ಅಷ್ಟೇ..
ಸುಂದರಮ್ಮ: ನಿಮ್ಮನ್ನು ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ 🙄
ಚಂದ್ರಮ್ಮ: ಹೂ ತರೋಕೆ ಅಂತ ಗಾರ್ಡನ್ ಗೆ ಹೋಗುವುದು, ಅಲ್ಲಿ ಗಿಡ ಹೂ ಫೋಟೋ ತೆಗೆದು ನಮ್ಮ ಕೈತೋಟ ಕ್ಕೆ ಫೋಟೋ ಹಾಕೋದು
ಅದಾದ ಮೇಲೆ ಅವಳ ಮೊಬೈಲ್ ಟಂಗ್ ಅನ್ನೋದು ಇವಳು ಟಿಂಗ್ ಅಂತ ಓಡಿ ಹೋಗಿ ಅದನ್ನು ನೋಡಿ ಹುಚ್ಚಿ ಥರ ನಗೋದು🤦♀️
ಸುಂದರಮ್ಮ: ಇರಲಿ ಬಿಡಿ ಬೇಜಾರ್ ಆಗಬೇಡಿ... ಅಡುಗೆ ಆದರೂ ಸರಿಯಾಗಿ ಮಾಡ್ತಾಳೋ ಇಲ್ವೋ... 😏
ಚಂದ್ರಮ್ಮ: ಅಡುಗೆ ಸುದ್ದಿ ಎನ್ ಕೇಳ್ತೀರಾ 🤦♀️
ಈರುಳ್ಳಿ ಹೆಚ್ಚತಾಳೆ ಫೋಟೋ ತಗಿತಾಳೆ,
ಮಸಾಲೆ ಅರಿತಾಳೆ ಫೋಟೋ ತಗಿತಾಳೆ,
ಹಿಟ್ಟು ಕಲಸ್ತಾಳೆ ಫೋಟೋ ತಗಿತಾಳೆ,
ಗ್ರೈಂಡ್ ಮಾಡ್ತಾಳೆ ಫೋಟೋ ತಗಿತಾಳೆ,
ಹೀಗೆ ಪ್ರತಿಯೊಂದು ಫೋಟೋ ತೆಗೆದು ಮಾಡಿದ ಅಡುಗೆ ಅಲಂಕಾರ ಮಾಡಿ ಫೋಟೋ ತೆಗೆದು, ಅಡುಗೆ ಅರಮನೆ ಗೆ ಹಾಕ್ತಾಳೆ...
ಅದಾದ ಮೇಲೆ, ಕ್ಷಣಕ್ಕೆ ಒಮ್ಮೆ ಮೊಬೈಲ್ ಟಂಗ್ ಅನ್ನೋದು ಇವಳು ಟಿಂಗ್ ಅಂತ ಓಡಿ ಹೋಗಿ ಅದನ್ನು ನೋಡಿ, ಹುಚ್ಚಿ ಥರ ಒಬ್ಬಳೇ ನಗೋದು 🤦♀️
ಸುಂದರಮ್ಮ: ಇನ್ನು ಪೂಜೆ ಗತಿ🙄
ಚಂದ್ರಮ್ಮ: ಅವಳು ಮಾಡೋ ಪೂಜೆ ಆ ದೇವರಿಗೆ ಪ್ರೀತಿ 🙏🤷♀️ ದೇವರಿಗೂ ಮಂಚೆ ... ತಾನು ಅಲಂಕಾರ ಮಾಡಿಕೊಂಡು ಸೆಲ್ಫಿ ವಿಡಿಯೋ ದಲ್ಲಿ ದೇವರ ಹಾಡು ಹಾಡಿ ಭಕ್ತಿ ಗಾನ ಸುಧೆಗೆ ಹಾಕ್ತಾಳೆ
ಅದಾದ ಮೇಲೆ ಅವಳ ಮೊಬೈಲ್ ಟಂಗ್ ಅನ್ನೋದು ಇವಳು ಟಿಂಗ್ ಅಂತ ಓಡಿ ಹೋಗಿ ಅದನ್ನು ನೋಡಿ ಹುಚ್ಚಿ ಥರ ನಗೋದು🤦♀️....
ಸುಂದರಮ್ಮ: ಪಾಪ ನಿಮ್ಮ ಕಷ್ಟ ಯಾರಿಗೂ ಬರೋದು ಬೇಡ ಪಾ....
ಚಂದ್ರಮ್ಮ ನ ಸೊಸೆ:
ಅಮ್ಮ ನೋಡಿ ಇಲ್ಲಿ,,, ಇವತ್ತು ನಾನು ನೀವು ಹೇಳಿಕೊಟ್ಟ ರಂಗೋಲಿ ಹಾಕಿದ್ದಕ್ಕೆ ಮೊದಲ ಬಹುಮಾನ ಬಂದಿದೆ, ರಂಗೋಲಿ ಅರಮನೆ ಯಲ್ಲಿ...
ಮತ್ತೆ ಅಮ್ಮ ನೀವು ಮೂಲೆ ಮನೆ ಪಾರ್ವತಕ್ಕನ ಹತ್ತಿರ ತಂದು ಹಚ್ಚಿದ ಗಿಡ ಹೂ ಬಿಟ್ಟಿತ್ತಲ್ಲ ಅದನ್ನ 180 ಜನ ನೋಡಿ ಮೆಚ್ಚಿದ್ದಾರೆ.
ಇವತ್ತಿನ ಹಬ್ಬದ ಅಡುಗೆಯಲ್ಲಿ ನೀವು ಹೇಳಿದಂತೆ ರುಬ್ಬಿದ ಮಸಾಲೆ ಹಾಕಿದ್ನಲ್ಲಾ ನೋಡಿ ಎರಡನೇ ಬಹುಮಾನ ಬಂದಿದೆ.
ನೀವು ಹೇಳಿಕೊಟ್ಟ ದೇವರನಾಮ ಹಾಕಿದ್ದಕ್ಕೆ 120 ಕಮೆಂಟ್ ಬಂದಿದ್ದಾವೆ ಭಕ್ತಿ ಗಾನ ಸುಧೆಯಲ್ಲಿ
ಚಂದ್ರಮ್ಮ: ನೋಡಿದ್ರಾ ಸುಂದರಮ್ಮ ಎಷ್ಟು ಜಾಣೆ ನನ್ನ ಸೊಸೆ.... ನಾನು ಹಾಕಿದ ಗೆರೆ ದಾಟುವದಿಲ್ಲ... ಹೇಳಿಕೊಟ್ಟ ಎಲ್ಲಾ ವಿಷಯ ಎಷ್ಟು ಚೆನ್ನಾಗಿ ಕಲಿತು ಬಹುಮಾನ ತರುತ್ತಾಳೆ..
ಸುಂದರಮ್ಮ: ಅಯ್ಯೋ ಮಾಡೋ ಕೆಲಸ ಬಿಟ್ಟು,,, ನಿನ್ನ ಸೊಸೆ ಸಿಂಗಾರ ಕೇಳ್ತಾ ಕೂತ್ನಲ್ಲ ನನ್ನ ಬುದ್ಧಿಗಿಷ್ಟು... 🤦♀️
ಚಂದ್ರಮ್ಮ: ಎನೇ ಅನ್ನಿ ಸುಂದರಮ್ಮ,, ಲಕ್ಷ್ಮೀ ಅಂತ ಸೊಸೆ, ಮುದ್ದಾಗಿ ಸಿಂಗಾರಗೊಂಡು, ಘಲ್ ಘಲ್ ಅಂತ ಗೆಜ್ಜೆ ಸದ್ದು ಮಾಡುತ್ತಾ ಮನೆ ತುಂಬಾ ಓಡಾಡುತ್ತಾ ಇದ್ದರೆ ಸಾಕು..... ಹೊಟ್ಟೆ ತುಂಬಿ ಹೋಗುತ್ತೆ.... 🙏
ಸುಂದರಮ್ಮ: ಆಯ್ತು ಬಿಡಿ,,, ನೀವು ಇನ್ನಷ್ಟು ಹೊಟ್ಟೆ ತುಂಬಿಸಿಕೊಳ್ಳಿ ನನಗೆ ತುಂಬಾ ಕೆಲಸ ಇದೆ ಬರ್ತೀನಿ.... 😁
ಧನ್ಯವಾದಗಳು🙏
Think Positive
Be positive.
ನೈಜ ಸಮಯದಲ್ಲಿ ಭಗವದ್ ಗೀತೆಯನ್ನು ಎರಡು ಬಾರಿ ಪಠಿಸಲಾಯಿತು.
ಮೊದಲು ಶ್ರೀಕೃಷ್ಣನ ಮೂಲಕ ಅರ್ಜುನನಿಗೆ ಮತ್ತು ಎರಡನೆಯದು ಸಂಜಯನ ಮೂಲಕ ಧೃತರಾಷ್ಟ್ರನಿಗೆ
ಇದು ಒಂದೇ ಗೀತೆ , ಅದೇ ಪದಗಳು, ಒಂದೇ ಬೋಧನೆಗಳು ಆದರೆ ಅರ್ಜುನ ಮಾತ್ರ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದರಿಂದ
ಅರ್ಜುನ ಯುದ್ಧವನ್ನು ಗೆದ್ದನು ಮತ್ತು ಅದು ಧೃತರಾಷ್ಟ್ರನ ಮೇಲೆ ಶೂನ್ಯ ಪರಿಣಾಮವನ್ನು ಬೀರಿತು, ಏಕೆಂದರೆ ಅವನು ಅದನ್ನು ಸರಳವಾಗಿ ಕೇಳಿದನು. ಧೃತರಾಷ್ಟ್ರನು ಎಲ್ಲವನ್ನೂ ಕಳೆದುಕೊಂಡನು
ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ನಡುವಿನ ವ್ಯತ್ಯಾಸ ಇಲ್ಲಿದೆ.
You care for Every one
But Why not that you forget your self? Contact 9343357877 for Solution
, happiness, ,