E K power bhalki

E K power bhalki

Contact information, map and directions, contact form, opening hours, services, ratings, photos, videos and announcements from E K power bhalki, Health/Beauty, .

21/12/2022
21/12/2022

ಘಟಶ್ರಾದ್ಧ, ಸಂಸ್ಕಾರ ಸೇರಿದಂತೆ ಹಲವಾರು ಕೃತಿ, ಕವನ ಸಂಕಲನ, ವಿಮರ್ಶೆ, ಪ್ರಬಂಧಗಳನ್ನು ರಚಿಸಿದ್ದ ಖ್ಯಾತ ಲೇಖಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರ ಜನ್ಮದಿನದಂದು ಶುಭ ಕಾಮನೆಗಳು.

21/12/2022

ಮರಾಠಾ ಸಮಾಜವು ಹಿಂದುಳಿದಿದೆ. ಈ ಹಿಂದಿನಿಂದಲೂ 3(B) ಮೀಸಲಾತಿ ಪಡೆಯುತ್ತಿದ್ದು, ಇದನ್ನು ಈಗ 2 (A) ವರ್ಗಕ್ಕೆ ಸೇರಿಸಲು ಮರಾಠಾ ಸಮುದಾಯದ ಪ್ರತಿನಿಧಿಗಳು ಮನವಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಈಗ ಪ್ರಸಕ್ತ ಸಾಲಿನ ಅಧಿವೇಶನದಲ್ಲಿ ಪ್ರಸ್ತಾಪಿಸುವ ಭರವಸೆ ನೀಡುತ್ತೇನೆ.

Photos from Eshwar Khandre's post 17/12/2022
17/12/2022

1971 ರ ಯುದ್ಧದಲ್ಲಿ ಪಾಕಿಸ್ತಾನದ ಮೇಲೆ ನಮ್ಮ ಹೆಮ್ಮೆಯ ಭಾರತೀಯ ಸಶಸ್ತ್ರ ಪಡೆಗಳು ಸಾಧಿಸಿದ ವಿಜಯವನ್ನು ಗೌರವಿಸಲು ಪ್ರತಿ ವರ್ಷ ಡಿಸೆಂಬರ್ 16 ರಂದು ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ. ಈ ದಿನದಂದು, ದೇಶವನ್ನು ರಕ್ಷಿಸಲು ಪ್ರಾಣತ್ಯಾಗ ಮಾಡಿದ ಎಲ್ಲಾ ವೀರ ಸೈನಿಕರಿಗೆ ಗೌರವ ಸಲ್ಲಿಸೋಣ.

17/12/2022

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮನಸುಗಳ ಬೆಸೆಯುತ್ತಿರುವ "ಭಾರತ್‌ ಜೋಡೋ ಯಾತ್ರೆ" 100ನೇ ದಿನಕ್ಕೆ ಕಾಲಿಟ್ಟಿದೆ.

ನಮ್ಮ ಹೆಮ್ಮೆಯ ಶ್ರೀ Rahul Gandhi ನೇತೃತ್ವದ ಈ ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕ್ಷಣಗಳು ಇನ್ನೂ ಸ್ಮರಣೀಯ.

ಶ್ರೀ ರಾಹುಲ್ ಗಾಂಧಿ ಜೀ ನಾಯಕತ್ವ ಗುಣಗಳು, ಜನರನ್ನು ಸೆಳೆಯುತ್ತಿರುವ ಪರಿ, ಎಲ್ಲರಿಗೂ ತೋರುತ್ತಿರುವ ಪ್ರೀತಿ ಅನುಕರಣೀಯ.

ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಯಶಸ್ಸು ದೊರೆಯುತ್ತಿದೆ, ಯಶಸ್ವಿಯಾಗಿ ಸಾಗಲಿ ಯಾತ್ರೆ!

15/12/2022

ಏಕತೆಗಾಗಿ ಶ್ರಮಿಸಿ, ಭವ್ಯ ಭಾರತದ ಏಕೀಕರಣಕ್ಕೆ ಬುನಾದಿ ಹಾಕಿದ 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುಣ್ಯಸ್ಮರಣೆಯಂದು ಅನಂತ ನಮನಗಳು.

14/12/2022

ಭಾಲ್ಕಿಯ ಹಜನಾಳ ಗ್ರಾಮದ ಯುವಕರು ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು, ಭ್ರಷ್ಟ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಇಂದು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ಪಕ್ಷಕ್ಕೆ ಸೇರ್ಪಡೆಯಾದ ಯುವಕರನ್ನು ಪಕ್ಷಕ್ಕೆ ಸ್ವಾಗತಿಸಿ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕೆಂದು ತಿಳಿಸಿದೆನು.

14/12/2022

ಭಾರತೀಯ ಯೋಗಶಾಸ್ತ್ರಕ್ಕೆ ಹೊಸ ಹೊಳಪು ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ತಂದು ಕೊಟ್ಟ ಹೆಮ್ಮೆಯ ಯೋಗಶಾಸ್ತ್ರಜ್ಞ "ಶ್ರೀ ಬಿ.ಕೆ.ಎಸ್.ಅಯ್ಯಂಗಾರ್ ಅವರು ಕನ್ನಡ ನಾಡಿನಲ್ಲಿ ಹುಟ್ಟಿ ವಿಶ್ವಕ್ಕೆ ಯೋಗ ಪಾಠ ಮಾಡಿದ ಮಹಾನ್ ಗುರು, ಯೋಗಭೀಷ್ಮ, ಪದ್ಮವಿಭೂಷಣ ಶ್ರೀ ಅಯ್ಯಂಗಾರ್ ಅವರ ಜನ್ಮದಿನದಂದು ಅನಂತಾನಂತ ನಮನಗಳು.

Website