Mahesh Kutaganahalli LS Pade
Contact information, map and directions, contact form, opening hours, services, ratings, photos, videos and announcements from Mahesh Kutaganahalli LS Pade, Politician, .
ಇಂದು ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದ ಜ್ಞಾನ ಯೋಗಿ ಪರಮಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿ ಸಭಾಭವನದ ಭೂಮಿ ಪೂಜೆ ಕಾರ್ಯಕ್ರಮ ಹಾಗೂ ಗಾಣಿಗ ಬೃಹತ್ ಸಮಾವೇಶದಲ್ಲಿ ಮಾನ್ಯ ಮಾಜಿ ಉಪ ಮುಖ್ಯಮಂತ್ರಿಗಳು ಹಾಗು ಅಥಣಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಸಾಹುಕಾರ ಅವರು ಭಾಗವಹಿಸಿ, ಮಾತನಾಡಿದರು.
Laxman Savadi
#ಇಂಡಿ
*ಛತ್ರಪತಿ ಶಿವಾಜಿ ಮಹಾರಾಜರ*
*ಮೂರ್ತಿ ಮೆರವಣಿಗೆ* *ಕಾರ್ಯಕ್ರಮದಲ್ಲಿ*
*ಶ್ರೀ ಚಿದಾನಂದ ಲ. ಸವದಿ ಭಾಗಿ*
*ಅಥಣಿ* : ಪಟ್ಟಣದ ಮೀರಜ ರಸ್ತೆಯಲ್ಲಿನ ಶಿವಾಜಿ ವೃತ್ತದಲ್ಲಿ ಛತ್ರಪತಿ *ಶಿವಾಜಿ ಮಹಾರಾಜರ ಮೂರ್ತಿ* ಪ್ರತಿಷ್ಠಾಪನೆಗೊಳ್ಳಲಿರುವ ನಿಮಿತ್ಯವಾಗಿ ಇಂದು ಪಟ್ಟಣದಲ್ಲಿ ಜರುಗಿದ *ಶಿವಾಜಿ ಮಹಾರಾಜರ ಮೂರ್ತಿ ಮೆರವಣಿಗೆ* ಕಾರ್ಯಕ್ರಮದಲ್ಲಿ *ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಶ್ರೀ ಚಿದಾನಂದ ಲ. ಸವದಿಯವರು* ಪಾಲ್ಗೊಂಡು *ಶಿವಾಜಿ ಮಹಾರಾಜರ ಮೂರ್ತಿಗೆ* ಮಾಲಾರ್ಪಣೆ ಮಾಡಿ ಭಕ್ತಿ ನಮನ ಸಲ್ಲಿಸಿದರು. ಮೆರವಣಿಗೆಯಲ್ಲಿ *ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಸದಾಶಿವ ಬುಟಾಳಿ, ದಿಗ್ವಿಜಯ ಪವಾರ ದೇಸಾಯಿ, ಮರಾಠಾ ಸಮಾಜದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ಶ್ರೀ ವಿನಾಯಕ ದೇಸಾಯಿ, ಮರಾಠಾ ಸಮಾಜದ ಮುಖಂಡರಾದ ಶ್ರೀ ಸಂದೀಪ ಪಾಟೀಲ, ಶ್ರೀ ಬಾಹುಸಾಹೇಬ ಜಾಧವ, ಶ್ರೀ ಸಿದ್ದು ಪಾಟೀಲ* ಸೇರಿದಂತೆ ಅಥಣಿ ಹಾಗೂ ಕಾಗವಾಡ ತಾಲೂಕಿನ ಮರಾಠಾ ಸಮಾಜ ಮುಖಂಡರು ಹಾಗೂ ಸಮಾಜ ಬಾಂಧವರು, ಪುರಸಭೆ ಸದಸ್ಯರು, ವಿವಿಧ ಮುಖಂಡರು ಪಾಲ್ಗೊಂಡಿದ್ದರು.
Laxman Savadi
#ಅಥಣಿ
ಅಥಣಿ ಕ್ಷೇತ್ರದ ಜನಪ್ರಿಯ ನಾಯಕರು, ಕೊಡುಗೈದಾನಿ, ಸರ್ವ ಸಮಾಜದ ಆಶಾಕಿರಣ, ದೀನದಲಿತರ, ನಿರ್ಗತಿಕರ ಸೇವಕ, ಸರ್ವ ಸಮಾಜದ ಧೀಮಂತ ನಾಯಕ, ಬೆಳಗಾವಿ ಜಿಲ್ಲೆಯ ಎಲ್ಲರ ಪ್ರೀತಿಯ ಸಾಹುಕಾರ, ಸಹಕಾರಿ ರಂಗದ ಭೀಷ್ಮ,ಚುನಾವಣಾ ಚಾಣಕ್ಯ, ಮಾಜಿ ಡಿಸಿಎಂ ಹಾಗೂ ಅಥಣಿ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ನಮ್ಮ ಗುರುಗಳಾದ *ಶ್ರೀ ಲಕ್ಷ್ಮಣ ಸಂಗಪ್ಪ. ಸವದಿ* ಸಾಹುಕಾರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನು ಇವರಿಗೆ ಆಯುರಾರೋಗ್ಯ, ಐಶ್ವರ್ಯ, ಸಕಲ ಸಮೃದ್ಧಿಯನ್ನು ಕರುಣಿಸಿ, ರಾಜಕೀಯ ರಂಗದಲ್ಲಿ ಅತ್ಯುನ್ನತವಾದ ಸ್ಥಾನವನ್ನು ಇವರು ಅಲಂಕರಿಸಲಿ ಎಂದು ಪ್ರಾರ್ಥಿಸುತ್ತೇನೆ.
Laxman Savadi
Laxman Savadi
ಲಕ್ಷ್ಮಣ ಸವದಿ ಸಾಹುಕಾರ ಪಡೆ
Mahesh Kutaganahalli
#ಅಥಣಿ...
Mahesh Kutaganahalli LS Pade
Mahesh Kutaganahalli Pade
ಮಹೇಶ್ ಕುಟಗನಹಳ್ಳಿ ಕಾಸನಕಂಡಿ
ಇಂದು ಅಥಣಿಯಲ್ಲಿ ನಡೆದ ಸವದಿ ಹಾಗೂ ಬಡ್ನಿ ಕುಟುಂಬದವರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧು- ವರರಿಗೆ ಶುಭ ಕೋರಲಾಯಿತು..
Happy Married life Akshay Savadi Brother 💐💐
*ಶಾಲೆಯ 20ನೇ ವಾರ್ಷಿಕ ಸ್ನೇಹ* *ಸಮ್ಮೇಳನ, ಪಾದಪೂಜೆ ಕಾರ್ಯಕ್ರಮ* *ಉದ್ಘಾಟಿಸಿದ ಶ್ರೀ ಚಿದಾನಂದ ಲ. ಸವದಿ*
*ಅಥಣಿ* : ಪಟ್ಟಣದ ಶ್ರೀ ಮುರಘೇಂದ್ರ ಶಿವಯೋಗಿ ವೀರಶೈವ ವಿದ್ಯಾಪೀಠ (ರಿ) ದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಇಂದು ಜರುಗಿದ ಶಾಲೆಯ 20ನೇ ವಾರ್ಷಿಕ ಸ್ನೇಹ ಸಮ್ಮೇಳನ, ಶಾಲೆಯ ಮಕ್ಕಳಿಂದ ತಂದೆ ತಾಯಿಯರ ಪಾದಪೂಜೆ ಕಾರ್ಯಕ್ರಮ ಹಾಗೂ ವಿಜ್ಞಾನ ವಸ್ತುಪ್ರದರ್ಶನವನ್ನು *ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಶ್ರೀ ಚಿದಾನಂದ ಲ. ಸವದಿ ಉದ್ಘಾಟಿಸಿದರು.*
ಶಾಲೆಯಲ್ಲಿ ಮಕ್ಕಳಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಲು, ತಂದೆ ತಾಯಿಗಳ ಬಗ್ಗೆ ಪೂಜ್ಯ ಭಾವನೆ ಮೂಡಿಸುವ ಉದ್ದೇಶದಿಂದ ಮಕ್ಕಳಿಂದ ತಂದೆ-ತಾಯಿಗಳ ಪಾದಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಚಿದಾನಂದ ಸವದಿ ಪ್ರಶಂಸೆ ವ್ಯಕ್ತಪಡಿಸಿದರು.
*ಶಿವಬಸವ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ, ತೆಲಸಂಗದ ವೀರೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಶಿವಾನಂದ ದಿವಾನಮಳ, ರಾಮನಗೌಡ ಪಾಟೀಲ* ಸೇರಿದಂತೆ ಮತ್ತಿತರ ಗಣ್ಯಮಾನ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Laxman Savadi
#ಅಥಣಿ
ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ #ಶ್ರೀ_ಲಕ್ಷ್ಮಣ_ಸವದಿ ಸಾಹುಕಾರ್* ಅವರ ದ್ವಿತೀಯ ಸುಪುತ್ರರರು ಹಾಗೂ ನನ್ನ ಆತ್ಮೀಯ ಸಹೋದರರಾದ
#ಶ್ರೀ_ಶಶಿಕಾಂತ_ಎಲ್_ಸವದಿ* ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ..💐💐💐💐💐
ದೇವರು ನಿಮಗೆ ಆಯುರಾರೋಗ್ಯ, ನೂರಾರು ವರ್ಷಗಳ ಕಾಲ ಸುಖ-ಸಂತೋಷ, ನೆಮ್ಮದಿ, ಯಶಸ್ಸು, ಸಿರಿ-ಸಂಪತ್ತು ಹಾಗೂ ಇನ್ನಷ್ಟು ಜನ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ..
#ಅಥಣಿ......
ಶ್ರೀ ಚಿದು ಅಣ್ಣ ಸವದಿ
Laxman Savadi
#ಅಥಣಿ
*ಬೆಂಗಳೂರಿನಲ್ಲಿ ಅಮ್ಮಾಜೇಶ್ವರಿ (ಕೊಟ್ಟಲಗಿ)* *ಏತ ನೀರಾವರಿ 2ನೇ ಹಂತದ ಯೋಜನೆ ಕೈಗೊಳ್ಳುವ ಕುರಿತು ಮಾಜಿ ಡಿಸಿಎಂ, ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ*
*ಅಥಣಿ* : ತಾಲೂಕಿನ ಪೂರ್ವ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿಯ 2ನೇ ಹಂತದ ಕಾಮಗಾರಿ ಕೈಗೊಳ್ಳುವ ಕುರಿತು ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ *ಮಾಜಿ ಉಪಮುಖ್ಯಮಂತ್ರಿಗಳು, ಹಸಿರುಕ್ರಾಂತಿ ಹರಿಕಾರರು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ* *ಲಕ್ಷ್ಮಣ ಸಂ. ಸವದಿಯವರ* ನೇತೃತ್ವದಲ್ಲಿ ಇಂದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಜರುಗಿತು.
ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ ಯೋಜನೆಗೆ ಮೊದಲನೇ ಹಂತದಲ್ಲಿ 900 ಕೋಟಿ ರೂ. ಮಂಜೂರಾಗಿದ್ದು, ಒಟ್ಟು 1487 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 2ನೇ ಹಂತದಲ್ಲಿ 587 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳುವ ಕುರಿತು ಹಾಗೂ ಕಾಮಗಾರಿಯ ರೂಪು ರೇಷೆಯ ಬಗ್ಗೆ ವಿಸ್ತೃತವಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಈ ಯೋಜನೆಯಿಂದ ಅಥಣಿ ಪೂರ್ವ ಭಾಗದಲ್ಲಿನ ಹಳ್ಳಿಗಳಾದ ಕೊಟ್ಟಲಗಿ, ಕಕಮರಿ, ಐಗಳಿ, ಅಡಹಳ್ಳಿ, ಅಡಹಳಟ್ಟಿ, ಕೋಹಳ್ಳಿ, ಕನ್ನಾಳ, ತೆಲಸಂಗ, ಫಡತರವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಸುಮಾರು 72 ಸಾವಿರ ಎಕರೆಗೂ ಹೆಚ್ಚು ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಿ, 2 ವರ್ಷದೊಳಗಾಗಿ ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಈ ಭಾಗದ ರೈತರ ಬಹುದಿನಗಳ ನೀರಾವರಿ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಸಭೆಯಲ್ಲಿ *ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ ಅಮ್ಮಿನಬಾವಿ, ಮುಖ್ಯ ಇಂಜಿನಿಯರ್‌ರಾದ* *ಬಿ* *.ಆರ್. ರಾಠೋಡ, ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಜಿ. ಶ್ರೀನಾಥ, ಸಹಾಯಕ* *ಕಾರ್ಯನಿರ್ವಾಹಕ* *ಇಂಜಿನಿಯರ್ ಪ್ರವೀಣ ಹುಣಸೀಕಟ್ಟಿ, ಸಹಾಯಕ ಇಂಜಿನಿಯರ್ ಭರತೇಶ ಮಹಿಷವಾಡಗಿ, ಇ.ಐ. ಟೆಕ್ನಾಲಜಿ ವಿಭಾಗದ ಸಂದೀಪ ನಾಡಿಗೇರ* ಸೇರಿದಂತೆ ನೀರಾವರಿ ಇಲಾಖೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Laxman Savadi
#ಬೆಂಗಳೂರು
*ವಧು- ವರರಿಗೆ ಶುಭಹಾರೈಸಿದ*
*ಚಿದಾನಂದ ಲ. ಸವದಿ*
*ಅಥಣಿ* : ತಾಲೂಕಿನ ಹಲ್ಯಾಳದ ಶ್ರೀ ಕೃಷ್ಣಾ ರೈತ ಸಭಾ ಭವನದಲ್ಲಿ ದಿ. 31-1-2024ರಂದು ಜರುಗಿದ ಐಗಳಿ-ಗೌರಾಣಿ ಬಂಧುಗಳ ವಿವಾಹ ಸಮಾರಂಭದಲ್ಲಿ *ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಶ್ರೀ ಚಿದಾನಂದ ಲ. ಸವದಿಯವರು* ಪಾಲ್ಗೊಂಡು ವಧು-ವರರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯಮಾನ್ಯರು, ಗುರು-ಹಿರಿಯರು, ಬಂಧು ಬಾಂಧವರು ಉಪಸ್ಥಿತರಿದ್ದರು.
*ಐಗಳಿ ಗ್ರಾಮದ ಶ್ರೀ ಬಸವೇಶ್ವರ ವಿವಿಧೋದ್ದೇಶಗಳ ಪ್ರಾ.ಗ್ರಾ.ಕೃ. ಸಂಘದ ನವೀಕರಣ ಕಟ್ಟಡದ ಉದ್ಘಾಟನೆ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಸನ್ಮಾನ*
*ಅಥಣಿ* : ತಾಲೂಕಿನ ಐಗಳಿ ಗ್ರಾಮದಲ್ಲಿ ದಿ. 28-1-24ರಂದು ಸಾಯಂಕಾಲ ಜರುಗಿದ ಗ್ರಾಮದ *ಶ್ರೀ ಬಸವೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ ನವೀಕರಣ ಕಟ್ಟಡದ ಉದ್ಘಾಟನೆ* ಹಾಗೂ *ಆಡಳಿತ ಮಂಡಳಿಯ ನೂತನ ಅಧ್ಯಕ್ಷರು, ಸದಸ್ಯರಿಗೆ ಜರುಗಿದ ಸನ್ಮಾನ* ಸಮಾರಂಭದಲ್ಲಿ *ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು* ಪಾಲ್ಗೊಂಡು ಮಾತನಾಡಿದರು.
ಐಗಳಿ ಗ್ರಾಮದ ಶ್ರೀ ಬಸವೇಶ್ವರ ಸಹಕಾರಿ ಸಂಘವು ಆರ್ಥಿಕ ಪ್ರಗತಿಯೊಂದಿಗೆ ರೈತರಿಗೆ ಉತ್ತಮ ಸೇವೆ ನೀಡುತ್ತ ಬಂದಿದೆ. ಈ ಸಂಘದ ಏಳ್ಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. *ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಭೀಮಗೌಡ ಬಿರಾದಾರ, ಉಪಾಧ್ಯಕ್ಷರಾದ ಶ್ರೀ ವಿಠ್ಠಲ ರು. ತೆಲಸಂಗ, ನಿರ್ದೇಶಕರಾದ ಶ್ರೀ ಶ್ರೀಶೈಲ ಬಳ್ಳೊಳ್ಳಿ, ಶ್ರೀ ಮಲಕಪ್ಪಾ ಪ. ಮಾಳಿ, ಶ್ರೀ ಅಪ್ಪಾಸಾಬ ಬಿ. ತೆಲಸಂಗ, ಶ್ರೀ ಮಲ್ಲಪ್ಪಾ ರಾ. ನೇಮಗೌಡ, ಶ್ರೀ ಚೇತನ ಚಂ. ನೇಮಗೌಡ, ಶ್ರೀ ಶಿವಪ್ಪಾ ಓಂಕಾರಪ್ಪ ಸನದಿ, ಶ್ರೀ ಸದಾಶಿವ ಮಹಾದೇವ ಚಿಪ್ಪಾಡಿ, ಶ್ರೀ ಮಲ್ಲಪ್ಪಾ ಶೆಟ್ಟೆಪ್ಪಾ ಭಜಂತ್ರಿ, ಶ್ರೀಮತಿ ಶೀಲಾ ಅಪ್ಪಾಸಾಬ ಮಾಕಾಣಿ, ಶ್ರೀಮತಿ ಪಾರ್ವತಿ ಮ. ಮುದಗೌಡರ ಅವರನ್ನು ಮಾನ್ಯ ಶಾಸಕರಾದ ಶ್ರೀ ಲಕ್ಷ್ಮಣ ಸಂ. ಸವದಿಯವರು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀ ಶೇಖರ ನೇಮಗೌಡ, ಶ್ರೀ ಅಣ್ಣಾರಾಯ* *ಹಾಲಳ್ಳಿ, ಶ್ರೀ ಅಪ್ಪಾಸಾಬ ಪಾಟೀಲ, ಶ್ರೀ ದುಂಡಪ್ಪ ದೊಡ್ಡಮನಿ, ಶ್ರೀ ಯಲ್ಲಪ್ಪಾ ಮಿರ್ಜಿ* ಸೇರಿದಂತೆ ಹಲವು ಮುಖಂಡರು, ಗ್ರಾಮದ ಹಿರಿಯರು, ರೈತ ಬಾಂಧವರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
Laxman Savadi
#ಅಥಣಿ
*ಸಾರ್ವಜನಿಕ ಶೌಚಾಲಯ* ,
*ಸ್ನಾನ ಗೃಹಗಳ ನಿರ್ಮಾಣಕ್ಕೆ* *ಭೂಮಿಪೂಜೆ ನೆರವೇರಿಸಿದ* *ಚಿದಾನಂದ ಲ. ಸವದಿ*
*ಅಥಣಿ* : ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ತಾ.ಪಂ. ಅನುದಾನದಡಿ ನಿರ್ಮಾಣಗೊಳ್ಳಲಿರುವ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನ ಗೃಹಗಳ ನಿರ್ಮಾಣ ಕಾಮಗಾರಿಗೆ ಇಂದು ಬೆಳಗ್ಗೆ *ಶ್ರೀ* *ಚಿದಾನಂದ ಲ. ಸವದಿ* ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ *ತಾ.ಪಂ. ಇ.ಒ. ಶಿವಾನಂದ ಕಲ್ಲಾಪುರ, ಗ್ರಾಮದ ಮುಖಂಡರಾದ ಎಸ್.ಆರ್. ಘೂಳಪ್ಪನವರ, ಸಂಜೀವ ರಾಚಗೌಡರ, ಗ್ರಾ* *.ಪಂ ಅಧ್ಯಕ್ಷೆ ಸಂಗೀತಾ ಜನಗೌಡರ, ಶಂಕರ ಠಕ್ಕಣ್ಣವರ, ನಾಗಪ್ಪಾ ಘೂಳಪ್ಪನವರ, ಮಲ್ಲಪ್ಪ ಠಕ್ಕಣ್ಣವರ* , *ಅಪ್ಪು ಮದಬಾವಿ* ಸೇರಿದಂತೆ ಗ್ರಾಮದ ಮುಖಂಡರು, ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
Laxman Savadi
#ಅಥಣಿ
*ಡಾ. ಬಿ.ಆರ್. ಅಂಬೇಡ್ಕರ್ ಕೊಡುಗೆ ಅನನ್ಯ*
- *ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಅಭಿಮತ*
- *ಅಥಣಿಯಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ* ..
*ಅಥಣಿ* : *ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್* ಅವರು ಭಾರತ ದೇಶಕ್ಕೆ ನೀಡಿದ ಸಂವಿಧಾನವು ಜಗತ್ತಿಗೆ ಮಾದರಿಯಾಗಿದೆ. ಇದರಲ್ಲಿ ದೇಶದ ಸರ್ವರಿಗೂ ಅಸ್ಪೃಶ್ಯತೆ ನಿವಾರಣೆ, ಜಾತ್ಯತೀತತೆ, ಸಹಬಾಳ್ವೆ, ಸಮಾನತೆ ಕಲ್ಪಿಸುವ ಉದ್ದೇಶದಿಂದ ಮಹಾಮಾನವತಾವಾದಿ *ಜಗಜ್ಯೋತಿ ಬಸವಣ್ಣನವರ* ತತ್ವಾದರ್ಶದಂತೆ ಸಂವಿಧಾನವನ್ನು ರಚಿಸಲಾಗಿದೆ. ಇಂತಹ ಸಂವಿಧಾನವನ್ನು ನೀಡಿದ ಡಾ. ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಿ ಗೌರವಿಸಬೇಕು ಎಂದು *ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ* *ಲಕ್ಷ್ಮಣ ಸಂ. ಸವದಿಯವರು* ಹೇಳಿದರು.
ಅವರು ತಾಲೂಕಾಡಳಿತದಿಂದ ಇಂದು ಬೆಳಗ್ಗೆ ಪಟ್ಟಣದ ಶ್ರೀ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ *75ನೇ ಗಣರಾಜ್ಯೋತ್ಸವದ* *ಧ್ವಜಾರೋಹಣ* ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಕಮರಿ (ಕೊಟ್ಟಲಗಿ) ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ 1400 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲಿಯೇ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಂದ ಭೂಮಿಪೂಜೆ ನೆರವೇರಿಸಲಾಗುವುದು. ಎರಡುವರೆ ವರ್ಷದಲ್ಲಿಯೇ ಈ ಯೋಜನೆಯನ್ನು ಪೂರ್ಣಗೊಳಿಸಿ ಅಥಣಿ ಪೂರ್ವ ಭಾಗದ ಹಳ್ಳಿಗಳಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಅಥಣಿ ಪಟ್ಟಣದಲ್ಲಿ 126 ಕೋಟಿ ರೂ. ವೆಚ್ಚದಲ್ಲಿ ದಿನದ 24 ತಾಸು ಕುಡಿಯವ ನೀರು ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು. ಪಟ್ಟಣದ ಜೋಡು ಕೆರೆಗಳ ಅಭಿವೃದ್ಧಿಗೆ 25 ಕೋಟಿ ರೂ. ಹಾಗೂ ಭಾಗಿರಥಿ (ದಕ್ಕೆ) ನಾಲಾ ಅಭಿವೃದ್ಧಿಗೆ 10 ಕೋಟಿ ರೂ. ಮಂಜೂರಾಗಿದ್ದರು, ಶೀಘ್ರದಲ್ಲಿಯೇ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು. ಅಥಣಿ ಮತಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಒದಗಿಸುವ ಮೂಲಕ ಸಹಕಾರ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಮಾನ್ಯ ಶಾಸಕರಾದ ಲಕ್ಷ್ಮಣ ಸಂ. ಸವದಿಯವರು ತಿಳಿಸಿದರು. ಅಥಣಿ ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಬದ್ಧನಿದ್ದೇನೆ. ಕ್ಷೇತ್ರದ ಜನತೆ ಸಹಕಾರ ನೀಡಬೇಕು ಎಂದು ಕೋರಿದರು.
*ತಹಸೀಲ್ದಾರ್ ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಶ್ರೀಮತಿ ವಾಣಿ ಯು. ಧ್ವಜಾರೋಹಣ ನೆರವೇರಿಸಿದರು. ತಾ.ಪಂ. ಇ.ಒ. ಶ್ರೀ ಶಿವಾನಂದ ಕಲ್ಲಾಪುರ, ಎಇಇ ಶ್ರೀ ವೀರಣ್ಣಾ ವಾಲಿ, ಡಿವೈಎಸ್‌ಪಿ ಶ್ರೀ ಶ್ರೀಪಾದ ಜಲ್ದೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ. ಮುರೋಟಗಿ* , *ಗ್ರೇಡ್ 2 ತಹಶೀಲ್ದಾರ್ ರಾದ ಶ್ರೀ ಬಿ.ವೈ. ಹೊಸಕೇರಿ, ಎಮ್.ವ್ಹಿ. ಬಿರಾದರಪಾಟೀಲ* ಸೇರಿದಂತೆ ತಾಲೂಕಾಮಟ್ಟದ ಎಲ್ಲ ಅಧಿಕಾರಿಗಳು, ಹಲವು ಗಣ್ಯಮಾನ್ಯರು, ಪುರಸಭೆ ಸದಸ್ಯರು, ಕನ್ನಡಪರ ಸಂಘಟನೆಗಳ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು.
Laxman Savadi
#ಅಥಣಿ
ಅಥಣಿ ಶಾಸಕರಾದ ಶ್ರೀ Laxman Savadi ಅವರು ಇಂದು ಡಿಸಿಎಂ ಶ್ರೀ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಕುರಿತು ಚರ್ಚಿಸಿದರು.
ಬರದ ನಾಡಿನ ಭಗೀರಥ, ಸಹಕಾರಿ ಭೀಷ್ಮ, ಯುವಕರ ಕಣ್ಮಣಿ, ದೀನ ದಲಿತರ ಬಂಧು, ಯುವಕರ ಆಶಾಕಿರಣ ಸಕ್ಕರೆ ನಾಡಿನ ಅಕ್ಕರೆಯ ನಾಯಕರು ನಮ್ಮ ಹೆಮ್ಮೆಯ ಶ್ರೀ ಲಕ್ಷ್ಮಣ ಸವದಿ ಸಾಹುಕಾರರು..
ನಮ್ಮ ಸಾಹುಕಾರ್ ನಮ್ಮ ಹೆಮ್ಮೆ...
Laxman Savadi
#ಅಥಣಿ
ಶ್ರೀ ಸುಮಿತ್ ಸವದಿ ಬ್ರದರ್ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು❤️💐
ಶ್ರೀ ಶಶಿಕಾಂತ ಸವದಿ ಬ್ರದರ್ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು❤️💐
*ಸಪ್ತಸಾಗರ ಗ್ರಾಮದ ಕಾಶಿಲಿಂಗದೇವರ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡು ಕುಸ್ತಿ ಪಂದ್ಯಾವಳಿ ಉದ್ಘಾಟಿಸಿದ* *ಚಿದಾನಂದ ಲಕ್ಷ್ಮಣ ಸವದಿ*
*ಅಥಣಿ* : ತಾಲೂಕಿನ ಸುಕ್ಷೇತ್ರ *ಸಪ್ತಸಾಗರ ಗ್ರಾಮದಲ್ಲಿನ ಶ್ರೀ ಕಾಶಿಲಿಂಗದೇವರ* ಜಾತ್ರಾಮಹೋತ್ಸವದಲ್ಲಿ ಇಂದು ಸಾಯಂಕಾಲ *ಕಾಂಗ್ರೆಸ್ ಪಕ್ಷದ ಯುವ ನಾಯಕರಾದ ಶ್ರೀ ಚಿದಾನಂದ ಲಕ್ಷ್ಮಣ* *ಸವದಿಯವರು* ಪಾಲ್ಗೊಂಡು
ಕುಸ್ತಿ ಪಂದ್ಯಾವಳಿ ಉದ್ಘಾಟಿಸಿದರು. ಶ್ರೀ *ಬಸವಾನಂದ ಸ್ವಾಮೀಜಿ* ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ *ಮುಖಂಡರಾದ ಪದ್ಮಜಿತ ನಾಡಗೌಡ* , *ಶ್ರೀಶೈಲ ನಾಯಿಕ, ಎಸ್.ಆರ್. ಗೂಳಪ್ಪನವರ, ಭರತೇಶ್ ನಾಡಗೌಡ, ಆರ್ . ಎ. ಪಾಟೀಲ್, ನಾರಾಯಣ ಘೋರ್ಪಡೆ, ಬಾಬಲಾಲ್ ನದಾಫ್ , ಮಲ್ಲಪ್ಪ ದರೂರ, ಪರಮಾನಂದ ತೇಲಿ, ರಾವಸಾಬ್ ಪಾಟೀಲ್* , *ದರೆಪ್ಪಾ ಚುನಾರ* ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು, ಕುಸ್ತಿಪಟುಗಳು ಪಾಲ್ಗೊಂಡಿದ್ದರು.
Laxman Savadi
#ಅಥಣಿ
*ಧನ್ಯವಾದಗಳು*
ಆತ್ಮೀಯರೆ, ಕಳೆದ ಡಿ. 25, 2023ರಂದು ನನ್ನ 38ನೇ ಜನ್ಮದಿನಾಚರಣೆಯನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕಾರಣೀಕರ್ತರಾದ ಎಲ್ಲ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರು, ಸಮಸ್ತ ಮಹಾಜನತೆಗೆ ಹೃದಯಪೂರ್ವಕ ಕೃತಜ್ಞತೆಗಳು. ನಿಮ್ಮೆಲ್ಲರ ಸನ್ಮಾನ, ಗೌರವ, ಪ್ರೀತಿ, ಅಕ್ಕರೆ, ಅಭಿಮಾನ ಶುಭಹಾರೈಕೆಗೆ ಕೋಟಿ ಕೋಟಿ ಧನ್ಯವಾದಗಳು.
---------------------------------
*ಚಿದಾನಂದ ಲ. ಸವದಿ*
*ಕಾಂಗ್ರೆಸ್ ಪಕ್ಷದ* *ಯುವನಾಯಕರು*
Laxman Savadi
#ಅಥಣಿ
ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಸಾಹುಕಾರ್ ಅವರ ಸುಪುತ್ರರು ,ಬೆಳಗಾವಿ ಜಿಲ್ಲೆಯ ಯುವ ನಾಯಕರು, ಅಥಣಿ ಕ್ಷೇತ್ರದ ಯುವ ನೇತಾರರು, ಯುವಕರ ಆಶಾಕಿರಣ, ಬಡವರ ಬಂಧು,ಯುವಕರ ಕಣ್ಮಣಿ ಹಾಗೂ ನನ್ನ ಆತ್ಮೀಯ ಸಹೋದರರಾದ ಶ್ರೀ ಚಿದು ಅಣ್ಣ ಸವದಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..
ದೇವರು ನಿಮಗೆ ಧೀರ್ಘಾಯಸ್ಸು, ಆರೋಗ್ಯ ಸಕಲ ಶಾಂತಿ, ನೆಮ್ಮದಿಗಳೊಂದಿಗೆ ಮತ್ತಷ್ಟು ಜನಪರ ಕಾರ್ಯಗಳಲ್ಲಿ ತೊಡಗುವ ಶಕ್ತಿ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ..💐💐🎂🎂💐💐
.
Laxman Savadi
Laxman Savadi
*ಕೊಕಟನೂರ ಯಲ್ಲಮ್ಮದೇವಿ ಜಾತ್ರೆ ನಿಮಿತ್ಯ ಮಾಜಿ* *ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರ* *ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ*
*ಅಥಣಿ* : ತಾಲೂಕಿನ ಸುಕ್ಷೇತ್ರ ಕೊಕಟನೂರಲ್ಲಿ ದಿ. 6-1-24 ರಿಂದ 12-1-24ರ ವರೆಗೆ ಜರುಗಲಿರುವ *ಗ್ರಾಮದ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ನಿಮಿತ್ಯ* ಹಾಗೂ ಕೋವಿಡ್ ರೋಗದ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ದಿ. 23-12-2023 ರಂದು ತಾ.ಪಂ. ಸಭಾಭವನದಲ್ಲಿ *ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರ* ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ *ಮಾನ್ಯ ಶಾಸಕರಾದ ಲಕ್ಷ್ಮಣ ಸಂ. ಸವದಿಯವರು* ಮಾತನಾಡಿ, ಕೊಕಟನೂರಿನ ಐತಿಹಾಸಿಕ ಯಲ್ಲಮ್ಮದೇವಿ ಜಾತ್ರೆಗೆ ಪ್ರತಿ ವರ್ಷ ರಾಜ್ಯ ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಜಾತ್ರೆಯಲ್ಲಿ ಭಕ್ತರಿಗೆ ಕುಡಿಯುವ ನೀರು, ವಿದ್ಯುತ್, ವೈದ್ಯಕೀಯ ವ್ಯವಸ್ಥೆ, ಸಾರಿಗೆ ಸೇವೆ ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸಬೇಕು. ಜನದಟ್ಟಣೆಯಾಗದಂತೆ ಪಾರ್ಕಿಂಗ್, ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ನೆರೆ ಪರಿಹಾರ ಹಾಗೂ ಕರೊನಾ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಶಾಸಕರು ಚರ್ಚಿಸಿದರು. ಸಭೆಯಲ್ಲಿ *ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ಹಾಗೂ ಅಥಣಿ ಪುರಸಭೆ ಆಡಳಿತಾಧಿಕಾರಿಗಳಾದ ಸುಭಾಸ* *ಸಂಪಗಾಂವಿ, ಅಥಣಿ ತಹಸೀಲ್ದಾರ್ ವಾಣಿ ಯು., ತಾ.ಪಂ. ಇ.ಒ. ಶಿವಾನಂದ ಕಲ್ಲಾಪುರ,* *ಡಿ.ವೈ.ಎಸ್.ಪಿ. ಶ್ರೀಪಾದ ಜಲ್ದೆ ಸೇರಿದಂತೆ* ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Laxman Savadi
#ಅಥಣಿ
*ಸಾರ್ವಜನಿಕರ ಕುಂದುಕೊರತೆ ಆಲಿಸಿದ ಮಾಜಿ ಡಿಸಿಎಂ, ಶಾಸಕರಾದ ಶ್ರೀ ಲಕ್ಷ್ಮಣ ಸಂ. ಸವದಿ*
*ಅಥಣಿ* : *ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ* *ಲಕ್ಷ್ಮಣ ಸಂ. ಸವದಿಯವರು* ದಿ. 18-12-2023ರಂದು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಬೆಳಗ್ಗೆ 10.00 ರಿಂದ ಸಾರ್ವಜನಿಕರ ವಿವಿಧ ಅಹವಾಲು, ಕುಂದು ಕೊರತೆಗಳನ್ನು ಆಲಿಸಿ, ಮನವಿಗಳನ್ನು ಸ್ವೀಕರಿಸಿದರು.
ಸಂಬಂಧಪಟ್ಟವರೊಂದಿಗೆ ಸ್ಥಳದಲ್ಲೇ ಮಾತನಾಡಿ ಹಲವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು. ವಿವಿಧ ಸಾರ್ವಜನಿಕರ ಬೇಡಿಕೆ ಈಡೇರಿಕೆಗೆ ಹಾಗೂ ಸಮಸ್ಯೆಗಳ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಮುಖಂಡರು, ಮಾನ್ಯ ಶಾಸಕರಾದ ಲಕ್ಷ್ಮಣ ಸಂ. ಸವದಿ ಅವರನ್ನು ಸನ್ಮಾನಿಸಿ ಗೌರವಿಸಿದರು.
Laxman Savadi
#ಅಥಣಿ
*ವಧು-ವರರಿಗೆ ಶುಭ ಹಾರೈಕೆ*
*ಅಥಣಿ*: ಮದಬಾವಿ ಗ್ರಾಮದಲ್ಲಿ ಇಂದು ಜರುಗಿದ *ನಿವಲಗಿ -ಝರೆ* ಬಂಧುಗಳ ವಿವಾಹ ಸಮಾರಂಭದಲ್ಲಿ *ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ* *ಲಕ್ಷ್ಮಣ ಸಂ. ಸವದಿಯವರು* ಪಾಲ್ಗೊಂಡು ವಧು ವರರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀ ವಿನಾಯಕ ಬಾಗಡಿ ಸೇರಿದಂತೆ ಹಲವು ಗಣ್ಯ ಮಾನ್ಯರು, ಗುರುಹಿರಿಯರು, ಬಂಧು, ಬಾಂಧವರು ಪಾಲ್ಗೊಂಡಿದ್ದರು.
Laxman Savadi
#ಅಥಣಿ
ಹೊಸಪೇಟೆ ನಗರದ ವಾಣಿಜ್ಯ ಉದ್ಯಮಿಗಳು ಹಾಗೂ ವಿಜಯನಗರ ಕ್ಷೇತ್ರದ ಶಾಸಕರಾದ ಶ್ರೀ ಹೆಚ್ ಆರ್ ಗವಿಯಪ್ಪನವರ ಜೇಷ್ಠ ಪುತ್ರರಾದ *ಶ್ರೀ ಗುರುದತ್ತ ಧಣಿ * ಅವರಿಗೆ ಜನ್ಮದಿನದ ಶುಭಾಶಯಗಳು..
#ಹೊಸಪೇಟೆ
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಭೋಜನ ವಿರಾಮದ ಸಮಯದಲ್ಲಿ ಅಥಣಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ್ ಸವದಿ ರವರ ನಿವಾಸಕ್ಕೆ ಚಿತ್ರದುರ್ಗ ಕ್ಷೇತ್ರದ ಶಾಸಕರಾದ ಶ್ರೀ ಕೆ ಸಿ ವೀರೇಂದ್ರ ಪಪ್ಪಿ ಅವರು ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.
Laxman Savadi
#ಬೆಳಗಾವಿ
ಸಾಮಾಜಿಕ ಸಮಾನತೆಗಾಗಿ ಅಹರ್ನಿಶಿ ದುಡಿದ ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವಿಂದು.
ಅವರ ಜೀವನ ನಮಗೆಲ್ಲಾ ಪ್ರೇರಣೆ. ಅವರ ದೂರದೃಷ್ಟಿಯ ವ್ಯಕ್ತಿತ್ವ, ಹೋರಾಟದ ಬದುಕು, ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸೋಣ.
*ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ*
*ನೀಡಿದ ಮಾಜಿ ಡಿಸಿಎಂ, ಅಥಣಿ ಮತಕ್ಷೇತ್ರದ ಜನಪ್ರಿಯ* *ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ*
*ಅಥಣಿ* : ತಾಲೂಕಿನ ಕೊಕಟನೂರ ಗ್ರಾಮದ *ಅಪ್ಪಯ್ಯಸ್ವಾಮಿ ದೇವಸ್ಥಾನದಲ್ಲಿ* 15 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ *ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ* *ಲಕ್ಷ್ಮಣ ಸಂ. ಸವದಿಯವರು* ದಿ. 2-12-2023 ರಂದು ಸಂಜೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ *ಕೆಪಿಸಿಸಿ ಸದಸ್ಯರಾದ ಶ್ಯಾಮು ಪೂಜಾರಿ, ಮುಖಂಡರಾದ ಸುಭಾಸ ಸೋನಕರ, ಅಶೋಕ ಸಿದ್ದಣ್ಣವರ, ಶಿವನಿಂಗ* *ದಡಕೆ, ತಮ್ಮಣ್ಣ ಮಗರ, ರೆವನೇಶ ಹಿರೇಮಠ, ಪಿ.ಆರ್.ಇ. ಎಇಇ ವೀರಣ್ಣಾ ವಾಲಿ, ಅಭಿಯಂತರರಾದ ಅನಿಲ ಪವಾರ* , *ಸಂತೋಷ ಔರಸಂಗ, ಸೊಮೇಶ ಔರಸಂಗ* ಸೇರಿದಂತೆ ಮತ್ತಿತರ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
Laxman Savadi
#ಅಥಣಿ
ಅಥಣಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವ ನಾಯಕರು,ಯುವ ಉದ್ಯಮಿಗಳು ಹಾಗೂ ಅತ್ಮೀಯ ಸಹೋದರರಾದ ಶ್ರೀ ಶಿವಕುಮಾರ್ ಸವದಿ ಅಣ್ಣ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ನೂರಾರು ಕಾಲ ಸುಖ, ಸಂತೋಷ, ಆಯುರಾರೋಗ್ಯ ಹಾಗೂ ಇನ್ನಷ್ಟು ಜನಸೇವೆಯ ಸೇವೆ ಮಾಡುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ 💐💐🎂🎂💐💐
Shivakumar Savadi
*ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ* *ಮಾಜಿ ಡಿಸಿಎಂ, ಅಥಣಿ* *ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿ*
*ಅಥಣಿ* : ಮಾನ್ಯ ಶಾಸಕರಾದ ಲಕ್ಷ್ಮಣ ಸಂ. ಸವದಿಯವರ ನೇತೃತ್ವದಲ್ಲಿ ಹಾಗೂ ಶಿವಾ ವಾಟರ್ ಸೊಲ್ಯೂಷನ್ಸ್ ಟ್ರಸ್ಟ್ ಸಹಯೋಗದಲ್ಲಿ ಪಟ್ಟಣದ ವಾರ್ಡ್ ನಂ. 1ರಲ್ಲಿ ನಿರ್ಮಿಸಿರುವ 24X7ಶುದ್ಧ ಕುಡಿಯುವ ನೀರಿನ ಘಟಕವನ್ನು ದಿ. 1-12-2023ರಂದು ಸಂಜೆ *ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ* *ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು* ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಪಟ್ಟಣದ ಎಲ್ಲ ಜನತೆಗೆ ದಿನದ 24 ತಾಸು ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ತಾಲೂಕಿನಲ್ಲಿ ಹಂತ ಹಂತವಾಗಿ ನೀರಾವರಿ ಯೋಜನೆಗಳನ್ನು ಕೈಗೊಂಡು ಅಥಣಿ ತಾಲೂಕನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ. ತಾವೆಲ್ಲರೂ ನನ್ನ ಮೇಲೆ ಇಟ್ಟಿರುವ ನಂಬಿಕೆ, ಪ್ರೀತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
*ಕಾಂಗ್ರೆಸ್ ಮುಖಂಡರಾದ ಶಿವಾನಂದ ಗುಡ್ಡಾಪುರ, ಪುರಸಭೆ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಮಲ್ಲೇಶ ಹುದ್ದಾರ, ಪುರಸಭೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ರಾವಸಾಬ ಐಹೊಳೆ, ಪುರಸಭೆ ಮಾಜಿ ಅಧ್ಯಕ್ಷರಾದ ದಿಲೀಪ ಲೋನಾರೆ, ಪುರಸಭೆ ವಾರ್ಡ್ ನಂ. ೧ರ ಸದಸ್ಯರಾದ ಆಸೀಫ್ ತಾಂಬೊಳಿ, ರಾಜು ಗುಡೋಡಗಿ, ಸಂತೋಷ ಸಾವಡಕರ, ಕಲ್ಲೇಶ ಮಡ್ಡಿ, ಸಯ್ಯದ್ ಅಮೀನ್ ಗದ್ಯಾಳ, ಬಸವರಾಜ ನಾಯಿಕ, ಬೀರಪ್ಪ ಯಕ್ಕಂಚಿ, ಬಸವರಾಜ ಪಾಟೀಲ, ಹಿರಿಯರಾದ ಸುರೇಶ ಗೋಡಕಿಂಡಿ, ರಾಮನಗೌಡ ಪಾಟೀಲ, ಅಬ್ದುಲ್ ಅಜೀಜ್ ಸಾತಬಚ್ಚೆ, ಡಾ. ಇಸ್ಮಾಯಿಲ್ ಮೋಮಿನ್, ವಿನೋದ ಮಮದಾಪುರ, ಆನಂದ ಪಾಂಗಿ, ಆನಂದ ಗಂಟಿ ಸೇರಿದಂತೆ* ಮತ್ತಿತರ ಮುಖಂಡರು, ವಾರ್ಡ್ ನಿವಾಸಿಗಳು ಉಪಸ್ಥಿತರಿದ್ದರು.
Laxman Savadi
#ಅಥಣಿ
*ಬಣಜಿಗ ಸಮಾಜ ಬಾಂಧವರಿಂದ*
*ಅಥಣಿ ಮತಕ್ಷೇತ್ರದ ಜನಪ್ರಿಯ*
*ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ ಹಾಗೂ ಕಾಗವಾಡ ಮತಕ್ಷೇತ್ರದ* *ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಾಜು (ಭರಮಗೌಡ) ಕಾಗೆಯವರಿಗೆ ಸನ್ಮಾನ*
*ಅಥಣಿ* : ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ) ಅಥಣಿ ತಾಲೂಕು ಘಟಕದ ವತಿಯಿಂದ ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ದಿ. 1-12-2023 ರಂದು *ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ* *ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ ಹಾಗೂ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ* *ಶ್ರೀ ರಾಜು (ಭರಮಗೌಡ) ಕಾಗೆಯವರಿಗೆ* ಸನ್ಮಾನ ಸಮಾರಂಭ ಜರುಗಿತು.
ಬಣಜಿಗ ಸಮಾಜ ಬಾಂಧವರ ಸನ್ಮಾನ ಸ್ವೀಕರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ *ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು* , ಬಣಜಿಗ ಸಮಾಜ ಬಾಂಧವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಹಾಗೂ ಕಾಗವಾಡ ಶಾಸಕರಾದ ರಾಜು ಕಾಗೆಯವರನ್ನು ಬೆಂಬಲಿಸಿ ಹೆಚ್ಚು ಮತಗಳ ಅಂತರದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ನಮ್ಮ ಮೇಲಿನ ಪ್ರೀತಿ, ಅಭಿಮಾನದಿಂದ ಸನ್ಮಾನಿಸಿ ಗೌರವಿಸಿದ್ದಾರೆ. ನಿಮ್ಮೆಲ್ಲರ ಬೆಂಬಲ, ಸಹಕಾರ, ಪ್ರೋತ್ಸಾಹಕ್ಕೆ ನಾನು ಋಣಿಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು. ಸಮಾಜ ಬಾಂಧವರ ವಿವಿಧ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಅಥಣಿ ಮತಕ್ಷೇತ್ರದ ರೈತರು, ಹಿಂದುಳಿದವರು, ಬಡವರು, ಜನ ಸೇವೆಗಾಗಿ ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.
*ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜು (ಭರಮಗೌಡ) ಕಾಗೆ, ಕಾಂಗ್ರೆಸ್ ಮುಖಂಡರಾದ ಶ್ರೀ ಗಜಾನನ ಮಂಗಸೂಳಿಯವರು* ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
*ಅಥಣಿ ಶೆಟ್ಟರಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಣಜಿಗ ಸಮಾಜದ ತಾಲೂಕಾ ಘಟಕದ ಅಧ್ಯಕ್ಷರಾದ ಶ್ರೀ ಸಂಗಪ್ಪಾ ಎಮ್. ಉಣ್ಣಿ, ಡಾ. ಎಂ.ಜಿ. ಹಂಜಿ, ಶ್ರೀ ಎ.ಎಮ್. ನಿಡೋಣಿ, ಶ್ರೀ ಶಿವಯೋಗಿ ಎಮ್. ಗೆಜ್ಜಿ, ಶ್ರೀ ಶಿವಶಂಕರ ಗು. ಹಂಜಿ, ಶ್ರೀ ಮಲ್ಲಿಕಾರ್ಜುನ ಎಮ್. ಕನಶೆಟ್ಟಿ, ಪುರಸಭೆ ಸದಸ್ಯರಾದ ಶ್ರೀ ಸಂತೋಷ ಸಾವಡಕರ, ಶ್ರೀ ಉದಯಕುಮಾರ ಆರ್. ಸೋಳಸಿ, ಶ್ರೀ ಅಕ್ಷಯ ಆರ್. ಬುರ್ಲಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು* . ವಿವಿಧ ಮುಖಂಡರು, ಬಣಜಿಗ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
Laxman Savadi
#ಅಥಣಿ
ಭಕ್ತಿ ಮಾರ್ಗದ ಮೂಲಕ ಭಗವಂತನನ್ನು ಒಲಿಸಿಕೊಂಡು ಕೀರ್ತನೆಗಳ ಮೂಲಕ ಜನತೆಗೆ ಉನ್ನತ ಚಿಂತನೆಗಳನ್ನು ಬಿತ್ತಿದ ದಾಸವರೇಣ್ಯ ಕನಕದಾಸರ ಜಯಂತಿಯಂದು ಅವರಿಗೆ ಅನಂತ ಪ್ರಣಾಮಗಳು.
ಸರ್ವರಿಗೂ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು.