UmesshBabu BC. Politician
I Love My Hindustan
Congratulations
Congratulations 💐
Happy independence day 🙏
Happy Republic Day
ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೂತ್ ವಿಜಯೋತ್ಸವ ಸಂಕಲ್ಪ ಯಾತ್ರೆಯ ಅಲ್ಪ ವಿಸ್ತಾರಕರ ಪೂರ್ವಭಾವಿ ಸಭೆಯನ್ನು ನಮ್ಮೆಲ್ಲರ ನೆಚ್ಚಿನ ಶಾಸಕರಾದ ಶ್ರೀ ಎಂ ಸತೀಶ್ ರೆಡ್ಡಿಯವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು
ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಮಂಡಲದ ಅಧ್ಯಕ್ಷರಾದ ಶ್ರೀ ಪಿ.ಶಿವಾಜಿ ಯವರು,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವೆಂಕಟಸ್ವಾಮಿ ರವರು,ಅನಿಲ್ ಕುಮಾರ್ ರವರು,ಶ್ರೀಧರ್ ರವರು ಹಾಗೂ ಎಲ್ಲಾ ವಾರ್ಡುಗಳ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ಮುಖಂಡರು ಉಪಸ್ಥಿತಿದ್ದರು.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮಾತೃಶ್ರೀ ಶ್ರೀಮತಿ ಹೀರಾಬೆನ್ ಮೋದಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ಓಂ ಶಾಂತಿಃ.
Shubha Deepavali
ಎಲ್ಲರಿಗೂ *ದೀಪಾವಳಿಯ ಹಾರ್ದಿಕ ಶುಭಾಶಯಗಳು...*
ದೀಪಾವಳಿಯು *ಪ್ರಭು ಶ್ರೀರಾಮಚಂದ್ರನು* ವನವಾಸ ಮುಗಿಸಿ ಅಯೋಧ್ಯೆಗೆ ಹಿಂದಿರುಗಿದ ದಿನದ ಸಂಭ್ರಮದ ಪ್ರತೀಕ. ಲಕ್ಷಾಂತರ ಹಣತೆಗಳೊಂದಿಗೆ ಅಯೋಧ್ಯೆಯು ಜಗಮಗಿಸುತ್ತಾ ರಾಮನನ್ನು ಸ್ವಾಗತಿಸಿದ ದಿನ ದೀಪಾವಳಿಯೇ ಹೊರತು ದಿವಾಳಿಯಲ್ಲ.
ದೀಪಾವಳಿ ನಮ್ಮೊಳಗಿನ ಅಂಧಕಾರವನ್ನು, ಅಜ್ಞಾನವನ್ನು ತೊಡೆಯುವ ದಿನ. ಹೀಗಾಗಿ ಹಣತೆಗಳನ್ನು ಹಚ್ಚೋಣ, ಕಿಡಿಯನ್ನಲ್ಲ. ಪ್ರೀತಿಯನ್ನು ಹಂಚೋಣ, ದ್ವೇಷವನ್ನಲ್ಲ. ಪಟಾಕಿಗಳನ್ನು ಸುಡುವುದೇ ಹಬ್ಬವಲ್ಲ, ನಮ್ಮೊಳಗಿನ ಮೂಢತ್ವವನ್ನು ಸುಡುವುದು ನಿಜವಾದ ಹಬ್ಬ.
ಸಮಸ್ತ ಭಾರತೀಯರೊಂದಿಗೆ ಬಂಧುತ್ವವನ್ನು ಹೊಸೆಯೋಣ. ಸಾಮರಸ್ಯವನ್ನು ಬೆಸೆಯೋಣ.
ದೀಪಾವಳಿಯನ್ನು ಜಗತ್ತಿನ ಸಂಭ್ರಮವನ್ನಾಗಿಸೋಣ.
ಭಾರತದ ದೀವಳಿಗೆಯು ಜಗತ್ತಿಗೆ ದೀವಿಗೆಯಾಗಲಿ...
ಭಾರತದ ನಿಜವಾದ ಆರ್ಥಿಕತೆ ನಿಂತಿರುವುದೇ ಗೃಹೋದ್ಯಮಗಳ, ಸಣ್ಣ ವ್ಯಾಪಾರಿಗಳ ಮೇಲೆ.
ಮಣ್ಣಿನ ಹಣತೆಗಳನ್ನು ಖರೀದಿಸೋಣ. ಪ್ಲಾಸ್ಟಿಕ್ ವಸ್ತುಗಳನ್ನು ದೂರವಿರಿಸೋಣ.
ರಸ್ತೆಬದಿಯ ವ್ಯಾಪಾರಿಗಳಿಂದ, ಪುಟ್ಟ ವ್ಯಾಪಾರಿಗಳಿಂದ ಹಾಗೂ ಮಹಿಳಾ ವ್ಯಾಪಾರಿಗಳಿಂದಲೇ ಹಣತೆ ಖರೀದಿಸುವ ಸಂಕಲ್ಪ ತೊಡೋಣ. ಹಬ್ಬದ ಘಮಲನ್ನು ಎಲ್ಲೆಡೆ ಬೀರೋಣ...
ದೀಪಾವಳಿಯು ತಮ್ಮ ಬದುಕಿಗೆ ಬೆಳಕನ್ನು ತರಲಿ.
🌹💐🙏🙏🥰
ನನ್ನ ಮಿತ್ರರ ವಾಲ್ ನಿಂದ ………. "PFIಯನ್ನು ಬ್ಯಾನ್ ಮಾಡಿದರೂ ಈಗಾಗಲೇ ಯಾವುದೋ ಬೇರೆ ಹೆಸರಿನಲ್ಲಿ ಹುಟ್ಟಲು ಯೋಜನೆ ತಯಾರಾಗ್ತಾ ಇರ್ತದೆ. ಇನ್ನೊಂದು ರೂಪದಲ್ಲಿ ಬರ್ತಾರೆ, ಬೇರೊಂದು ಸೋಗಿನಲ್ಲಿ ಇನ್ನೊಂದು ಸಂಘಟನೆಯಲ್ಲಿ ಇದರ ಕಾರ್ಯಕರ್ತರು ಇದ್ದೇ ಇರುತ್ತಾರೆ. ಪಿಎಫ್ಐ ಅನ್ನೋ ಸಂಘಟನೆ ನಾಮಕಾವಸ್ತೆಯಷ್ಟೇ" ಅನ್ನೋ ಅಭಿಪ್ರಾಯಗಳಿಗೆ....
ಹೌದು. ರಾವಣನನ್ನು ಮುಗಿಸಿದಕೂಡಲೇ ರಾಮಾಯಣ ಮುಗಿದಂತೆ, ಕೌರವರನ್ನು ಕೊಂದಕೂಡಲೇ ಪಾಂಡವರಿಗೆ ಮುಖ್ಯಶತ್ರುಗಳೇ ಇಲ್ಲವಾದಂತೆ ಆಗುವ ಕಾಲದಲ್ಲಿ ನಾವಿಲ್ಲ. PFI ಅಂತಲ್ಲ, ಅಲ್ ಖೈದಾ, ಐಸಿಸ್ ಯಾವುದೇ ಸಂಘಟನೆಯನ್ನೂ ನೀವು ನೂರಕ್ಕೆ ನೂರು ಮುಗಿಸಲಾರಿರಿ. ಯಾಕೆಂದರೆ ಇವತ್ತಿನ ಈ ಶತ್ರುಗಳು ನಿಂತಿರುವುದು ಐಡಿಯಾಲಜಿಯ ಮೇಲೆ. ಅಂದಮೇಲೆ ನೀವು ಅವರನ್ನು ಸಾಯಿಸಿದರೂ ಅವರ ಮನೆಯಲ್ಲಿ, ಅವರ ಬಳಗದಲ್ಲಿ ಈ ರೀತಿಯ ನಾಲ್ಕು ತಲೆಗಳು ಹುಟ್ಟಿರುತ್ತವೆ. ಹೌದು. ಎಷ್ಟೋಸಲ, ಅವರ ಮಕ್ಕಳಿಗೆ ಅವರಪ್ಪನ ಐಡಿಯಾಲಜಿಯ ಬಗ್ಗೆ ಲವಲೇಶ ಗೊತ್ತಿರದಿದ್ದರೂ, ಯಾರೋ ನನ್ನಪ್ಪನನ್ನು ಹೆಡೆಮುರಿಕಟ್ಟಿದ್ರು ಕೊಂದ್ರು ಅನ್ನೋ ಒಂದೇ ಸೇಡಿಗೆ ಅವರಪ್ಪನ ಹಾದಿಯನ್ನೇ ಹಿಡಿದು ಅವನ ಆತ್ಮಕ್ಕೆ ಶಾಂತಿಕೊಡಿಸುವ ಸಾಹಸಕ್ಕೆ ಇಳಿಯುತ್ತವೆ. ಬಿನ್ ಲಾಡೆನ್, ಜವಾಹಿರಿ, ಅಬು ಝರ್ಕಾವಿ ಎಲ್ಲರದ್ದೂ, ಅವರ ಮಕ್ಕಳದ್ದೂ, ಅವರನ್ನು ನಂಬಿದವರದ್ದು, ಮತ್ತವರ ಮಕ್ಕಳದ್ದೂ ಇದೇ ಕಥೆ. ಶತ್ರು ನಿರ್ನಾಮವಾಗುವ ಕಾಲ ಹೋಗಿ ಬಹಳ ಸಮಯವಾಗಿದೆ.
ಆದರೆ ಬ್ಯಾನ್ ಮಾಡಿದ ಒಂದು ಸಂಘಟನೆಯನ್ನು ಮತ್ತೆ ಪ್ರಾರಂಭಿಸೋದು ಅಥವಾ ಇನ್ನೊಂದು ರೂಪದಲ್ಲಿ ತರೋದು ಅಂದರೆ, ಆ ಬೋರ್ಡ್ ಇಳಿಸಿ ಈ ಬೋರ್ಡ್ ಎಬ್ಬಿಸಿದಷ್ಟು ಸುಲಭವಲ್ಲ. PFI ಹಾಗೂ ಇಪ್ಪತ್ತು ಸಂಘಟನೆಗಳ ಬ್ಯಾನ್ ಅಂದರೆ ಆ ಇಪ್ಪತ್ತೊಂದೂ ಸಂಘಟನೆಗಳ ಲೀಡರುಗಳನ್ನ ಜೈಲಿಗೆ ಎಸೆಯುವುದು. ಹಿರಿತಲೆಗಳೇ ಇಲ್ಲದ ಸಂಘಟನೆ ಗೊಂದಲದ ಗೂಡಾಗುತ್ತದೆ, ಜೊತೆಗೇ ಸಣ್ಣಪುಟ್ಟ ತಪ್ಪುಹೆಜ್ಜೆಗಳನ್ನ ಇಡುತ್ತದೆ. ಇದನ್ನೇ ಬಳಸಿಕೊಂಡು NIA ಎರಡನೇ ಮತ್ತು ಮೂರನೇ ಅಲೆಯ ದಾಳಿ ನಡಿಸಿರೋದು. ಇದರಿಂದಾಗಿ ಮೇಲಿನ ಮತ್ತು ಮಧ್ಯಮ ಹಂತದ ನಾಯಕರೆಲ್ಲಾ ಒಂದೋ ಜೈಲೊಳಗೆ, ಇಲ್ಲಾ ತಲೆಮರೆಸಿಕೊಂಡು ಓಟ. ಇದರಿಂದ ಸಂಘಟನೆ ಮತ್ತದನ್ನು ನಂಬಿಕೊಂಡ ಸದಸ್ಯರು ಕಕ್ಕಾಬಿಕ್ಕಿಯಾಗೋದು ಖಚಿತ. ಈ ರೀತಿಯಾಗಿ ಅರೆಸ್ಟ್ ಆದ ನಾಯಕರು ಮತ್ತವರ ಮಕ್ಕಳು ದೇಶಬಿಡುವಂತಿಲ್ಲ, ಪಾಸ್ಪೋರ್ಟಿಗೆ ಅರ್ಜಿಹಾಕುವಂತಿಲ್ಲ. ಹಾಕಿದರೂ ಸಿಗಲ್ಲ. ಅವರು ಸುಧಾರಿಸಿಕೊಂಡು ಮತ್ತೊಂದು ಸಂಘಟನೆಯನ್ನ ಮೊದಲಿನಷ್ಟೇ ಗಟ್ಟಿಯಾಗಿ ಕಟ್ಟಬೇಕು ಅಂದರೆ ಕನಿಷ್ಟ ಏಳೆಂಟು ವರ್ಷ ಬೇಕು. ಯಾವುದೇ ಇಸ್ಲಾಮಿಕ್ ಸಂಘಟನೆ ನಾಳೆ ಸರ್ಕಾರದ ನೋಂದಣಿಪಡೆಯಲು ಹೋದರೆ, ಒಂದಿದ್ದಲ್ಲಿ ಹತ್ತು ಹಲವು ಹೆಚ್ಚಿನ ಪ್ರಾಸೆಸ್ಸುಗಳು ಸೇರಿಕೊಂಡಿರುತ್ತವೆ. ನೂರು NOCಗಳು ಬೇಕಾಗುತ್ತವೆ.
ಇದಕ್ಕಿಂತಾ ದೊಡ್ಡ ಹೊಡೆತ ಎಂದರೆ, ಸಂಘಟನೆಯೊಂದು ಬ್ಯಾನ್ ಆದಕೂಡಲೇ ಅದರ ಅಷ್ಟೂ ಬ್ಯಾಂಕ್ ಅಕೌಂಟುಗಳು ಸರ್ಕಾರದ ವಶವಾಗುತ್ತವೆ. ಕೂಡಿಟ್ಟಿದ ಹಾರ್ಡ್ ಕ್ಯಾಶ್, ಸಂಘಟನೆಯ ಹೆಸರಲ್ಲಿ ಬಾಡಿಗೆಗೆ ಲೀಸಿಗೆ ಬಿಟ್ಟಿದ್ದ ಕಮರ್ಷಿಯಲ್ ಆಸ್ತಿಗಳು ಸೀಝ್ ಆಗುತ್ತವೆ. ಅರೆಸ್ಟಾದ ನಾಯಕರ ಕುಟುಂಬದವರು ಅವರ ಮನೆಗಳನ್ನು ಮಾರುವಂತಿಲ್ಲ. ಮುಖ್ಯ ಹೊಡೆತವೇ ಹಣದ್ದು. ಅದೇ ಇಲ್ಲವೆಂದರೆ ಐಡಿಯಾಲಜಿಯ ಹೊಟ್ಟಿಗಳು ಖಾಲಿಬೀಳುತ್ತವೆ. ಮತ್ತೆ ಯಾರದ್ದೋ ಮುಂದೆ ಕೈಯೊಡ್ಡಿ ನಿಲ್ಲಬೇಕು. ಇನ್ನೂ ಹೆಚ್ಚಿನ ತಲೆ ಉಪಯೋಗಿಸಿ ಹಣವನ್ನು ಭಾರತಕ್ಕೆ ತರಬೇಕು. ಸುಪಾರಿ ಕೆಲಸಕ್ಕೆ ಹೊಸಾ ಕೈಗಳನ್ನು ಹುಡುಕಬೇಕು. ಅದೂ ಎಂತಾ ಕೈಗಳು? ಯಾವುದೋ ಕಾಂಜಿಪೀಂಜಿ ಊಟಕ್ಕೆ ಗತಿಯಿಲ್ಲದ ಹಣಕ್ಕೆ ಏನು ಬೇಕಾದರೂ ಮಾಡುವಂತವನಲ್ಲ. ಐಡಿಯಾಲಜಿ ಮ್ಯಾಚ್ ಆಗಿ, ಸಿಕ್ಕಿಕೊಳ್ಳದಾಗಷ್ಟು ಬುದ್ಧಿವಂತನಾಗಿದ್ದು, ಮತ್ತೆ ಗೆಲ್ಲುವ ಛಾತಿಯುಳ್ಳವನಾಗಿರಬೇಕು. ಇದಕ್ಕೂ ಐದರಿಂದ ಎಂಟು ವರ್ಷಬೇಕು.
ಸಂಘಟನೆಯ ಸಂವಹನ ನೆಟ್ವರ್ಕುಗಳು, ವೆಬ್ಸೈಟುಗಳು, ಮೆಸೆಂಜರ್ ಚಾನಲ್ಲುಗಳು, ಸೋಷಿಯಲ್ ಮೀಡಿಯಾ ಅಕೌಂಟುಗಳು ಬ್ಲಾಕಾಗುತ್ತವೆ. ಹತ್ತಾರುವರ್ಷಗಳಿಂದ ಕಟ್ಟಿದ ಕೋಟೆ ನೆಲಸಮವಾಗುತ್ತದೆ.
ಹೌದು...ಇದೆಲ್ಲವನ್ನೂ ಕಟ್ಟಬಹುದು. ಮತ್ತೆ ಮತ್ತೆ ಕಟ್ಟಬಹುದು. ಆದರೆ ಮೊದಲಿಗಿಂತಾ ಗಟ್ಟಿಯಾಗಿ ಕಟ್ಟಬೇಕು, ಹುಷಾರಾಗಿ ಕಟ್ಟಬೇಕು. ಇದೆಲ್ಲದಕ್ಕೂ ಸಮಯ ಹಿಡಿಯುತ್ತದೆ. ಶತ್ರುವನ್ನು ಹೆಡೆಮುರಿ ಕಟ್ಟುವುದೆಂದರೆ ತಲೆ ಕತ್ತರಿಸಿ ಕೂರಿಸುವುದೊಂದೇ ದಾರಿಯಲ್ಲ. ಅವನನ್ನು ಸದಾ ಮತ್ತೆ ಮತ್ತೆ ಹೊಸದಾಗಿ ತಯಾರಾಗಿಸುವ ಕೆಲಸಕ್ಕೆ ಹಾಕುವಂತದ್ದೂ ಹೌದು. ಒಂದೇ ಪೆಟ್ಟಿಗೆ ತಲೆತೆಗೆಯದಿದ್ದರೂ, ನೂರು ಸಣ್ಣ ಸಣ್ಣ ಏಟುಗಳಿಂದ ಅವನನ್ನು ರಕ್ತಹೀನನನ್ನಾಗಿ ಮಾಡುವುದೂ ತಂತ್ರವೇ.
ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ಯಾವುದೋ ಸಂಘಟನೆಯನ್ನು ಸುಖಾಸುಮ್ಮನೇ ಬ್ಯಾನ್ ಮಾಡಿ ಬಿಸಾಕಲಿಕ್ಕಾಗಲ್ಲ. That is not how it works. ನಮ್ಮ ಮಿಲಾರ್ಡುಗಳು ಮೋದಿ ದೋವಲ್ಲುಗಳಲ್ಲ. ಅವರ ರೂಲ್ ಬುಕ್ಕು ಬೇರೆಯದೇ ಕಥೆ ಹೇಳುತ್ತದೆ. ಸರ್ಕಾರ ಹಾಕಿದ ಬ್ಯಾನ್ ತೆಗೆಸುವುದು ಮಾತ್ರವಲ್ಲ, ಹೀಗೆ ಮತ್ಯಾರನ್ನೂ ಇನ್ಮುಂದೆ ಬ್ಯಾನ್ ಮಾಡಬೇಡಿ ಅಂತಲೂ ತಾಕೀತು ಮಾಡಬಲ್ಲವು. ಆದ್ದರಿಂದ ಓಡುತ್ತಿರುವ ಶತ್ರುವನ್ನು ಕುಂಟುವಂತೆ ಮಾಡುವುದೂ ಯುದ್ಧದ ತಂತ್ರಗಳಲ್ಲೊಂದು.
ಹಾಗೂ ಈ ಬಾರಿ, ಈ ತಂತ್ರ, ಭಾರತವನ್ನು ಇಸ್ಲಾಮಿಕ್ ರಿಪಬ್ಲಿಕ್ ಮಾಡುವ ಇಂತಹ ಸಂಘಟನೆಗಳ ಕನಸಿಗೆ ಕನಿಷ್ಟ ಹತ್ತುವರ್ಷಗಳ ತಡೆಯೊಡ್ಡಿರುವುದಂತೂ ಹೌದು. ಶತ್ರು ಬೀಸಿದ್ದ ದೊಣ್ಣೆಯಿಂದ ನಮ್ಮ ತಲೆ ಸಧ್ಯಕ್ಕೆ ಹತ್ತುವರ್ಷ ಕಾಲ ಬಚಾವಾಗಿದ್ದು ಹೌದು.
ಈ ಕ್ಷಣಕ್ಕೆ ಶತ್ರು ತೀರಾ ಹೀನ ಮತ್ತು ಅನಾಗರೀಕ ದಾಳಿಗಳನ್ನೂ ನಡೆಸಬಹುದು. ಸಿಕ್ಕಿದಷ್ಟು ಜೀವಗಳ ಫಸಲು ಸಿಗಲಿ ಎಂದು ಕತ್ತಿ ಬೀಸಿದರೂ ಬೀಸಬಹುದು. ಅಪಾಯ ಒಂದಲ್ಲ ಒಂದು ರೀತಿಯಲ್ಲಿ ತಪ್ಪಿದ್ದಲ್ಲ. ಕತ್ತಲಡಿಯಲ್ಲಿ ಯಾವ್ಯಾವ ಪ್ರೇತಗಳು ಓಡಾಡುತ್ತಿದ್ದಾವೋ ನಮಗೆ ನಿಮಗಂತೂ ತಿಳಿಯಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಸ್ಪೆಷಲ್ ಫೋರ್ಸುಗಳು, ರಾ, NIA, ಐಬಿ, ಸಿಬಿಐ ಮುಂತಾದ ಏಜೆನ್ಸಿಗಳು ಮುಖ್ಯವಾಗೋದು.
ಇದು ಮಾಸ್ಟರ್-ಸ್ಟ್ರೋಕ್ ಹೌದೋ ಅಲ್ಲವೋ ಅಂತೆಲ್ಲಾ ಚರ್ಚೆ ಬೇಡ. ಇರಲೂಬಹುದು, ಇಲ್ಲದೆಯೂ ಇರಬಹುದು. ಆದರೆ ಮನೆಯೊಳಗೇ ಅಡಗಿದ್ದ ಗೆದ್ದಲೊಂದರ ಮೇಲೆ ಸ್ಟ್ರೋಕ್ ಅಂತೂ ಹೌದು. ಏನಾಗ್ತಿದೆ ಅಂತಾ ತಿಳಿಯೋ ಮುನ್ನವೇ ಗಲ್ಲಕ್ಕೆ ಬಿದ್ದ ಮುಷ್ಟಿಘಾತವಂತೂ ಹೌದು. ಅದರ ಆರ್ಥಿಕಶಕ್ತಿಯೆಂಬ ದುರ್ಯೋಧನ ತೊಡೆಯಮೇಲೆ ಗಧಾಪಹಾರವಂತೂ ಹೌದು. ಮೋದಿಗಾದರೂ ಕ್ರೆಡಿಟ್ ಕೊಡಿ, ಧೋವಲ್ ಶಾಗಾದಾರೂ ಕೊಡಿ, NIAಯ ಸೂಪರ್ ಟೀಮಿಗಾದರೂ ಕೊಡಿ. ಯಾರಿಗೂ ಕೊಡದೇ ಸಿದ್ದರಾಮಯ್ಯ, ಕುಮಾರಣ್ಣನಂತಹ ಮೂರನೇ ದರ್ಜೆಯ ರಾಜಕಾರಣಿಗಳಂತೆ ಕುಸುಗುಡಿ. ನಿಮ್ಮ ಹಣೇಬರಹ. ಆದರೆ ದೇಶ ಮುರಿಯಬಾರದು ಎಂಬ ಮನಸ್ಸುಗಳೂ, ಅದಕ್ಕಾಗಿ ಸದಾ ಶ್ರಮಿಸುತ್ತಿರುವ ಏಜೆನ್ಸಿಗಳೂ, ನಮ್ಮೆಲ್ಲರ ನಾಳೆಗಳನ್ನು ಇನ್ನೂ ಸುನ್ನತೀಕರಿಸದಂತೆ, ನಮ್ಮ ಕನಸುಗಳಿಗೆ ಹಿಜಾಬು ಹಾಕಲು ಬಿಡದಂತೆ ಶ್ರಮಿಸುವ ಶಕ್ತಿಗಳು ಇನ್ನೂ ಜೀವಂತವಿದೆಯಲ್ಲ.....ಆ ಸಾಧ್ಯತೆಗೊಂದು ಸಂತೋಷಪಡಿ.
Let us hope tomorrow's sunrise to be more beautiful....everyday and for many more days to come.
✍️ Raghavendra Subramanian
Today in My Paddyfields 
ಇಂದು ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್l, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಎಲ್ಲ ಮುಖಂಡರಿಗೂ ಗೌರವಪೂರ್ವಕ ಸ್ವಾಗತವನ್ನು ಕೋರುತ್ತೇವೆ.
ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ವರ್ತೂರ್ ಪ್ರಕಾಶ್, ಮಾಜಿ ಸಂಸದರಾದ ಶ್ರೀ ಕೆ.ಬಿ.ಕೃಷ್ಣಮೂರ್ತಿ, ಮಾಜಿ ಶಾಸಕರಾದ ಶ್ರೀ ಮಂಜುನಾಥ ಗೌಡ, ಮಾಜಿ ಪರಿಷತ್ ಸದಸ್ಯ ಶ್ರೀ ಸಂದೇಶ್ ನಾಗರಾಜ್, ಮಂಡ್ಯ ಜಿಲ್ಲಾ ಮುಖಂಡರಾದ ಶ್ರೀ ಅಶೋಕ್ ಜಯರಾಮ್, ಮಾಜಿ IRS ಅಧಿಕಾರಿ ಡಾII ಲಕ್ಷ್ಮಿ ಅಶ್ವಿನ್ ಗೌಡ ಮತ್ತು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ನೂರಾರು ಬೆಂಬಲಿಗರಿಗೆ ಸುಸ್ವಾಗತ. ರಾಜ್ಯದಲ್ಲಿ ಜನರ ವಿಶ್ವಾಸ ಗಳಿಸಿರುವ, ಜನಸೇವೆಗೆ ಬದ್ಧವಾಗಿರುವ ಏಕೈಕ ಪಕ್ಷ ಬಿಜೆಪಿ.
2024 , Modi once more 😍