Wesupport-dr.dinkarmore

Wesupport-dr.dinkarmore

Mp independent Candidate Bidar

Photos from Wesupport-dr.dinkarmore's post 30/04/2024

ಕಮಲಾ ನಗರ ತಾಲೂಕಿನ ಹಾಲಹಳ್ಳಿಯಲ್ಲಿಂದು ನಮ್ಮ ಚುನಾವಣಾ ಪ್ರಚಾರ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಮೊದಲಿಗೆ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಗ್ರಾಮದ ಮಹಾಲಕ್ಷ್ಮೀ ಹಾಗೂ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದೆ. ತದನಂತರ ಊರಿನ ವಿವಿಧ ಬೀದಿಗಳಿಗೆ ತೆರಳಿ ಮತಯಾಚನೆ ಮಾಡಿದೆ. ನನ್ನ ಆತ್ಮೀಯರಾದ ಪ್ರವೀಣ್ ಕಾರ್ಬಾರಿ ಅವರ ಮನೆಯಲ್ಲಿ ಪ್ರಚಾರ ಸಭೆ ನಡೆಸಿ, ಸ್ವತಂತ್ರವಾಗಿ ಕಣಕ್ಕಿಳಿಯುವ ಅನಿವಾರ್ಯತೆ ಕುರಿತು ಸಮಾಜ ಬಾಂಧವರಿಗೆ ತಿಳಿಸಲಾಯ್ತು. ಪ್ರಚಾರದ ವೇಳೆ ಗ್ರಾಮದ ಯುವಕರು ನಮ್ಮನ್ನು ಡೋಲು ಬಾರಿಸಿ, ಪಟಾಕಿ ಸಿಡಿಸಿ ಸ್ವಾಗತಿಸಿದ್ದು, ನಮ್ಮ ಉತ್ಸಾಹ ಹೆಚ್ಚುವಂತೆ ಮಾಡಿತು. ಈ ಭೇಟಿ ವೇಳೆ
ಶಿವಾಜಿರಾವ್ ಪಾಟೀಲ್, ಕೆರ್ಬಾ ಪವಾರ್ ಸೇರಿದಂತೆ ಹಲವು ಹಿರಿಯರು ಜೊತೆಗಿದ್ದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

30/04/2024

ಇಂದಿನ ಪ್ರವಾಸದ ವಿವರ.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 29/04/2024

ಬೀದರ್ ಸ್ವಾಭಿಮಾನ ಗೆಲ್ಲಿಸಲು ಹೋರಾಡುತ್ತಿರುವ ನಾವು ಹಗಲು ರಾತ್ರಿ ಎನ್ನದೆ ಪ್ರಚಾರ ಕಾರ್ಯ ನಡೆಸುತ್ತಿದ್ದೇವೆ. ಅದರಂತೆ ಇವತ್ತು ರಾತ್ರಿ ಬಸವಕಲ್ಯಾಣ ತಾಲೂಕಿನ ಚಣಗಾಪೂರ ಗ್ರಾಮಕ್ಕೆ ಮುಖಂಡರೊಂದಿಗೆ ಭೇಟಿ ನೀಡಲಾಯ್ತು. ಗ್ರಾಮದ ಹಿರಿಯರು,ಕಿರಿಯರು ಹಾಗೂ ಮಾತೆಯರು ನಮ್ಮ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ನಮ್ಮನ್ನು ಹರಸಿದರು. ಯುವಕರು ಶುಭ ಸೂಚನೆ ಎನ್ನುವ ಹಾಗೆ ಪಟಾಕಿ ಸಿಡಿಸಿ ಬರಮಾಡಿಕೊಂಡರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 29/04/2024

ರಾತ್ರಿಯಾದ್ರೂ ನಮ್ಮ ಚುನಾವಣಾ ಪ್ರಚಾರದ ಉತ್ಸಾಹ ಕಡಿಮೆಯಾಗಿಲ್ಲ. ರಾತ್ರಿ ಬಸವಕಲ್ಯಾಣ ತಲೂಕಿನ ಚಿಟ್ಟಾ (ಕೆ) ಗ್ರಾಮಕ್ಕೆ ಭೇಟಿ ನೀಡಿ ಮತಯಾಚನೆ ನಡೆಸಿದೆ. ಮೊದಲಿಗೆ ಗ್ರಾಮದ ಕಲ್ಲೇಶ್ವರನಿಗೆ ವಂದಿಸಿ, ಬಳಿಕ ತರುಣ ಮಂಡಳದ ಕಾರ್ಯಾಲಯದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದೆ. ಸಭೆಯಲ್ಲಿ ಶ್ರೀಮತಿ ಡಾ.ರಾಣಿಯವರು ಭಾಗಿಯಾಗಿ ನಮಗೆ ಶುಭ ಹಾರೈಸಿದರು. ನಮ್ಮ ಈ ಭೇಟಿ ವೇಳೆ ಗ್ರಾಮದ ಯುವಕರು ಪಟಾಕಿ ಸಿಡಿಸಿ ನಮಗೆ ಸ್ವಾಗತ ನೀಡಿದ್ದು ವಿಶೇಷವಾಗಿತ್ತು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 29/04/2024

ಇಳಿಸಂಜೆಯಾದರೂ ನಮ್ಮ ಪ್ರಚಾರ ಕಾರ್ಯ ಮುಂದುವರಿದಿದೆ. ಸಂಜೆ ಬಸವಕಲ್ಯಾಣದ ಮೌಜೆ ಶಿರಗೂರು ಗ್ರಾಮಕ್ಕೆ ತೆರಳಿ ಮತಯಾಚನೆ ನಡೆಸಿದೆ. ಗ್ರಾಮದ ಮತದಾರರಿಗೆ ನನ್ನ ಉಮೇದುವಾರಿಕೆಯ ಕರ ಪತ್ರ ನೀಡಿ ಬೆಂಕಿ ಪೊಟ್ಟಣದ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದೆ.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 29/04/2024

ಚುನಾವಣಾ ಪ್ರಚಾರಾರ್ಥವಾಗಿ ಇಂದು ಸಂಜೆ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮಕ್ಕೆ ಮುಖಂಡರೊಂದಿಗೆ ಭೇಟಿ ನೀಡಲಾಯ್ತು. ಬೀದರ್ ಸ್ವಾಭಿಮಾನಕ್ಕಾಗಿ ಈ ಬಾರಿ ನನ್ನ ಗುರುತು ಬೆಂಕಿ ಪೊಟ್ಟಣಕ್ಕೆ ಮತ ಚಲಾಯಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದೆ. ಗ್ರಾಮದ ಶಿವಾಜಿ ಮಹಾರಾಜಾ ವೃತ್ತದಲ್ಲಿ ಚಿಕ್ಕದಾದ ಬಹಿರಂಗ ಸಭೆ ನಡೆಸಿ ತಮ್ಮ ಉಮೇದುವಾರಿಕೆಯ ಅನಿವಾರ್ಯತೆಯನ್ನು ನಾಗರಿಕರಿಗೆ ತಿಳಿಸಲಾಯ್ತು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 29/04/2024

ನಮ್ಮ ಮತಯಾಚನೆ ಪ್ರಕ್ರಿಯೆ ಹರ್ಷೋಲ್ಲಾಸದಿಂದ ಸಾಗಿದೆ. ಅದರಂತೆ ಸಂಜೆ ಬಸವಕಲ್ಯಾಣ ತಾಲೂಕಿನ ಹೊನ್ನಾಳಿ ಗ್ರಾಮಕ್ಕೆ ಭೇಟಿ ನೀಡಿದೆ.
ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲೂ ಭಾಗಿಯಾಗಿ ತಮಗೆ ಯಾಕೆ ಮತ ಚಲಾಯಿಸಬೇಕು ಅನ್ನೋದರ ಕುರಿತು ವಿವರಿಸಿದೆ. ಪ್ರಚಾರ ಸಭೆಯಲ್ಲಿ ನನ್ನೊಂದಿಗೆ ಅಂಗದರಾವ್ ಜಗತಾಪ್ , ಪದ್ಮಾಕರ ಪಾಟೀಲ್ ಸೇರಿದಂತೆ ಇತರರು ಹಾಜರಿದ್ದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ 11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 29/04/2024

ಬಸವಕಲ್ಯಾಣ ತಾಲೂಕಿನ ಹಂದ್ರಾಳ (ಆರ್) ಗ್ರಾಮಕ್ಕೆ ಭೇಟಿ ನೀಡಿ ಮತಯಾಚನೆ ನಡೆಸಿದೆನು. ಗ್ರಾಮದ ಅರಳಿಕಟ್ಟೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದೆ. ಈ ಸಭಾ ಕಾರ್ಯಕ್ರಮದಲ್ಲಿ ಅನೇಕ ಯುವಕರು ಭಾಗಿಯಾಗಿ ನನ್ನ ಉಮೇದುವಾರಿಕೆ ಬೆಂಬಲಿಸಿದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ 11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 29/04/2024

ನಮ್ಮ ಚುನಾವಣಾ ಪ್ರಚಾರ ಅತ್ಯಂತ ಉತ್ಸಾಹದಿಂದ ಮುಂದುವರಿದಿದೆ. ಅದರ ಮುಂದುವರಿದ ಭಾಗವಾಗಿ ಬಸವಕಲ್ಯಾಣ ತಾಲೂಕಿನ ಅಲಗೂಡ ಗ್ರಾಮಕ್ಕೆ ಇಂದು ಭೇಟಿ ನೀಡಲಾಯ್ತು. ಗ್ರಾಮದ ಏಕನಾಥ್ ಮಹಾರಾಜ ಮಂದಿರ ಸಭಾ ಗೃಹದಲ್ಲಿ ಪ್ರಚಾರ ಸಭೆ ನಡೆಸಿ ಬೆಂಕಿಪೊಟ್ಟಣ ಚಿಹ್ನೆಗೆ ಮತ ನೀಡುವಂತೆ ಕೇಳಲಾಯಿತು. ಸಭೆ ಬಳಿಕ ಗ್ರಾಮದ ಗಲ್ಲಿಗಳಲ್ಲಿ ಸಂಚರಿಸಿ ಮತಯಾಚನೆ ನಡೆಸಿದೆ. ಎಂದಿನಂತೆ ಮಿತ್ರರಾದ ಪದ್ಮಾಕರ್ ಪಾಟೀಲ್, ಅಂಗದರಾವ್ ಜಗತಾಪ್, ಶರಣು ಕಡಗಂಚಿ, ವಿ.ಟಿ. ಶಿಂಧೆ ಈ ವೇಳೆ ಜೊತೆಗಿದ್ದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 29/04/2024

ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದಲ್ಲಿಂದು ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದೆ. ಸನ್ಮಿತ್ರರಾದ ವಿ.ಟಿ.ಶಿಂಧೆ ಆಯೋಜಿಸಿದ್ದ ಈ ಸಭೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಮರಾಠ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಜನರಿಗೆ ತಿಳಿಸಿದೆ. ಪ್ರಚಾರ ಸಭೆಗೂ ಮುನ್ನ ಊರಿನ ವೃತ್ತದಲ್ಲಿರುವ ಶಿವಾಜಿ ಮಹಾರಾಜ ಹಾಗೂ ಅಂಬೇಡ್ಕರ್ ಪುತ್ಥಳಿಗೆ ನಮಸ್ಕರಿಸಿದೆ. ಬಳಿಕ ಗ್ರಾಮದ ವಿವಿಧೆಡೆ ತೆರಳಿ ಮನೆ ಮನೆ ಪ್ರಚಾರ ನಡೆಸಿದೆ. ಪ್ರಚಾರದ ವೇಳೆ ಊರಿನ ಯುವಕರು ಪಟಾಕಿ ಸಿಡಿಸಿ, ತಮಟೆ ಬಾರಿಸಿ ನಮ್ಮ ಉತ್ಸಾಹ ಹೆಚ್ಚಿಸಿದರು. ನಮ್ಮ ಕ್ಯಾಂಪೇನ್ ಗೆ ಊರಿನ ಹಿರಿಯರಾದ ಜಯರಾಜ್ ಚವ್ಹಾಣ್, ಅನಂತ್ ಪಾಟೀಲ್, ನಾನಾರಾವ್ ಜೀ, ಮೇಘನಾಥ್ ಖಾರ್ಬರಿ, ಸಮಾಜದ ಹಿರಿಯರಾದ ಪದ್ಮಾಕರ್ ಪಾಟೀಲ್, ಅಂಗದರಾವ್ ಜಗತಾಪ್, ಶರಣು ಕಡಗಂಚಿ ಸಾಥ್ ನೀಡಿದರು.
ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

29/04/2024

"ಶಿಲ್ಪಕಲೆಯು ಬುದ್ಧಿವಂತಿಕೆಯ ಕಲೆ."
- ಪ್ಯಾಬ್ಲೋ ಪಿಕಾಸೊ

‘ಅಂತರಾಷ್ಟ್ರೀಯ ಶಿಲ್ಪಕಲಾ ದಿನ’ದ ಶುಭಾಶಯಗಳು

ಡಾ.ದಿನಕರ ಮಾಧವರಾವ್ ಮೋರೆ MD
ಸ್ವತಂತ್ರ ಅಭ್ಯರ್ಥಿ, ಬೀದರ್ ಲೋಕಸಭಾ ಕ್ಷೇತ್ರ.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

29/04/2024

“ಹಾಡು..ಕುಣಿತ.. ಅಭಿನಯ ಮನುಷ್ಯನ ಮನರಂಜನಾ ವಿಧಾನಗಳು. ಮಾನವ ತನ್ನ ಸೃಜನಶೀಲತೆಯನ್ನು ಇವುಗಳ ಮೂಲಕ ಹೊರಹಾಕುತ್ತಾನೆ”
ಇಂದು ‘ಅಂತರಾಷ್ಟ್ರೀಯ ನೃತ್ಯ ದಿನ’ ಈ ಸಂದರ್ಭದಲ್ಲಿ ನಾಡಿನ ಎಲ್ಲ ನೃತ್ಯ ಕಲಾವಿದರಿಗೆ ಶುಭ ಹಾರೈಕೆಗಳು
ಡಾ.ದಿನಕರ ಮಾಧವರಾವ್ ಮೋರೆ MD
ಸ್ವತಂತ್ರ ಅಭ್ಯರ್ಥಿ, ಬೀದರ್ ಲೋಕಸಭಾ ಕ್ಷೇತ್ರ.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 29/04/2024

ಚುನಾವಣಾ ಪ್ರಚಾರದ ಗಡಿಬಿಡಿಯ ನಡುವೆ ರಾತ್ರಿ ಬಸವಕಲ್ಯಾಣದ ಲಾಡವಂತಿ ಗ್ರಾಮಕ್ಕೆ ಭೇಟಿ ನೀಡಿದೆ. ಗ್ರಾಮದಲ್ಲಿರುವ ಶ್ರೀ ಸದ್ಗುರು ಮಾಣಿಕ್ ಪ್ರಭು ಮಹಾರಾಜರ ಜನ್ಮಭೂಮಿಗೆ ನಮಸ್ಕರಿಸಿ ಬಳಿಕ ಗ್ರಾಮದ ದರ್ಗಾ ಆವರಣದಲ್ಲಿ ನಡೆದ ಮೋಹದ್ದಿನ್ ಶಾ ವಾಲಿ ಜಾತ್ರೆಯಲ್ಲಿ ಭಾಗಿಯಾದೆ. ಸೌಹಾರ್ದ ಪರಂಪರೆಯನ್ನು ಹೊಂದಿರುವ ಈ ಜಾತ್ರೆಯಲ್ಲಿ ಧರ್ಮ, ಜಾತಿ ಬೇಧವಿಲ್ಲದೇ ಎಲ್ಲರೂ ಭಾಗಿಯಾಗುವುದು ವಿಶೇಷ. ಕಿಕ್ಕಿರಿದು ಸೇರಿದ್ದ ಜಾತ್ರೆಯಲ್ಲಿ ಗ್ರಾಮಸ್ಥರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರಲ್ಲದೇ ಅತ್ಯಂತ ಪ್ರೀತಿಪೂರ್ವಕವಾಗಿ ನಮ್ಮನ್ನು ಸತ್ಕರಿಸಿ, ಹರಸಿದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 29/04/2024

ಚುನಾವಣಾ ಪ್ರಚಾರದ ಮಧ್ಯೆ ಇವತ್ತು ಬಸವಕಲ್ಯಾಣದ ಶ್ರೀ ಹಿಂಗುಲಾಂಬಿಕಾದೇವಿ ಮಂದಿರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದೆನು. ಈ ಭಾಗದ ಪ್ರಮುಖ ಜಾಗೃತ ಶಕ್ತಿ ಪೀಠವಾಗಿರುವ ದೇವಾಲಯದಲ್ಲಿ ಕೆಲಹೊತ್ತು ಇದ್ದು, ನಾಡಿನ ಸುಖ-ಸಮೃದ್ದಿಗಾಗಿ ಪ್ರಾರ್ಥಿಸಿದೆನು. ಈ ಭೇಟಿಯ ವೇಳೆ ತಾಲೂಕಿನ ಭಾವಸಾರ ಕ್ಷತ್ರೀಯ ಸಮಾಜದವರು ನನ್ನನ್ನು ಆತ್ಮೀಯವಾಗಿ ಸನ್ಮಾನಿಸಿ, ಶುಭ ಹಾರೈಸಿದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ 11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 28/04/2024

ಮಾಡು ಇಲ್ಲವೇ ಮಡಿ ಎನ್ನುವ ಈ ಚುನಾವಣೆಯನ್ನು ಬೀದರ್ ಸ್ವಾಭಿಮಾನಿ ಅಘಾಡಿ ಗೆಲ್ಲಲೇ ಬೇಕಿದೆ. ಈ ನಿಟ್ಟಿನಲ್ಲಿಂದು ಭಾಲ್ಕಿ ತಾಲೂಕಿನ ನಿಟ್ಟೂರು (ಬಿ) ಗ್ರಾಮದಲ್ಲಿ ವಿಚಾರ ಮಂಥನ ಸಭೆ ನಡೆಸಲಾಯ್ತು. ಗ್ರಾಮದ ಸಂದೀಪ್ ಮಂಕರಿ ಅವರ ನಿವಾಸದಲ್ಲಿ ಬಹುವಿಸ್ತ್ರತವಾಗಿ ಮುಖಂಡರೊಂದಿಗೆ ಚರ್ಚಿಸಲಾಯ್ತು. ಈ ಹಿಂದೆ 2013ರಲ್ಲಿ ಬಿಎಸ್ ಯಡಿಯೂರಪ್ಪ ಹೇಗೆ ಕೆಜೆಪಿ ಸ್ಥಾಪಿಸಿ ತಾಕತ್ತು ತೋರಿಸಿದ್ದರೋ,ಅದೇ ರೀತಿ ಬೀದರ್ ಸ್ವಾಭಿಮಾನಿ ಅಘಾಡಿಯ ಮೂಲಕ ನಮ್ಮ ಸಮಾಜದ ಶಕ್ತಿ ತೋರಿಸಬೇಕು ಎಂದು ಸಭೆಯಲ್ಲಿ ಒಕ್ಕೂರಿಲಿನಿಂದ ನಿರ್ಣಯಿಸಲಾಯ್ತು. ಸಭೆಯಲ್ಲಿ ಪದ್ಮಾಕರ ಪಾಟೀಲ್, ಶರಣು ಕಡಗಂಚಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 28/04/2024

ಇಂದು ಕ್ಷೇತ್ರದ ಹಲವೆಡೆ ನಡೆದ ವಿವಿಧ ಮದುವೆ ಸಮಾರಂಭಗಳಲ್ಲಿ ಭಾಗಿಯಾದೆ. ಅದರಂತೆ ಬಸವಕಲ್ಯಾಣದ ಬಸವಾತ್ಮಜ ಡಿವಿನಿಟಿ ಹಾಲ್ ನಲ್ಲಿ ನಡೆದ ರಾಯಪಳೆ ಪರಿವಾರದವರ ಮದುವೆ ಸಮಾರಂಭಕ್ಕೂ ಸಾಕ್ಷಿಯಾದೆ. ನವದಂಪತಿಗಳಿಗೆ ಶುಭ ಹಾರೈಸಿ, ಆಶೀರ್ವದಿಸಿದೆ. ಭೇಟಿ ವೇಳೆ ಮದುವೆಯ ಗಡಿಬಿಡಿಯಲ್ಲೂ ಎರಡೂ ಕುಟುಂಬಸ್ಥರು ನನಗೆ ಸನ್ಮಾನಿಸಿದ್ದು ವಿಶೇಷವಾಗಿತ್ತು.

Photos from Wesupport-dr.dinkarmore's post 28/04/2024

ಚುನಾವಣಾ ಪ್ರಚಾರದ ಮಧ್ಯೆ ಇವತ್ತು ಬಸವಕಲ್ಯಾಣ ತಾಲೂಕಿನ ಜಾನಾಪೂರದ ದಲ್ಲಿ ನಡೆದ ಸೂರ್ಯವಂಶಿ ಮತ್ತು ಬಿರಾದಾರ್ ಪರಿವಾರದವರ ಮದುವೆ ಸಮಾರಂಭಕ್ಕೆ ಭೇಟಿ ನೀಡಿದೆ. ನಮ್ಮನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಪರಿವಾರದವರು, ಪೇಟ ಸುತ್ತಿ ಸಂಭ್ರಮಿಸಿದರು. ಇಂದು ಹೊಸ ದಾಂಪತ್ಯಕ್ಕೆ ಕಾಲಿಟ್ಟ ರೇಖಾ-ವಿಠ್ಠಲ್ ದಂಪತಿಯನ್ನು ಈ ವೇಳೆ ಮನದುಂಬಿ ಹಾರೈಸಿದೆ.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 28/04/2024

ಇಂದು ಬಸವಕಲ್ಯಾಣ ತಾಲೂಕಿನ ಜಾನಾಪೂರಕ್ಕೆ ಭೇಟಿ ನೀಡಿದೆ. ಗ್ರಾಮದ ಜಿ.ಎಂ.ಆರ್ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ನೆಲವಾಡೆ ಮತ್ತು ಬೋಂಡ್ಗೆ ಪರಿವಾರದವರ ಮದುವೆ ಸಮಾರಂಭಕ್ಕೆ ಭೇಟಿ ನೀಡಿ, ನವ ದಂಪತಿಗಳಾದ ನಮ್ರತಾ-ಸದಾನಂದ ರನ್ನು ಆಶೀರ್ವದಿಸಿದೆ. ಈ ವೇಳೆ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಎರಡು ಕುಟುಂಬಗಳ ಹಿರಿಯರು, ಮದುವೆಯ ಜಂಜಾಟದ ನಡುವೆಯೂ ಪ್ರಚಾರದ ಬಗ್ಗೆ ಕೇಳಿ ತಿಳಿದುಕೊಂಡು ಶುಭ ಹಾರೈಸಿದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 27/04/2024

ಚುನಾವಣೆ ಪ್ರಚಾರದ ಮುಂದುವರಿದ ಭಾಗವಾಗಿ ಭಾಲ್ಕಿ ತಾಲೂಕಿನ ತುಗಾಂವ್ (ಎಚ್) ಗ್ರಾಮಕ್ಕೆ ಮುಖಂಡರೊಂದಿಗೆ ಭೇಟಿ ನೀಡಿದೆ. ಗ್ರಾಮದ ಮಹಾಲಕ್ಷ್ಮಿ ಹಾಗೂ ಹನುಮಾನ ದೇವರ ಗುಡಿಗೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಊರಿನ ಯುವ ನಾಯಕರೊಂದಿಗೆ ಸಂವಾದ ನಡೆಸಿದೆ. ಹಾಲಿ ಸಂಸದರು ಮರಾಠ ಸಮಾಜದವನ್ನು ಕಡೆಗಣಿಸುತ್ತಿರುವುದರ ಕುರಿತು ಸಮಾಜದ ಬಂಧುಗಳಿಗೆ ತಿಳಿಸಲಾಯಿತು. ಊರಿನ ಯುವ ಮುಖಂಡರಾದ ಸುಧಾಕರ್, ದಾದಾರಾವ್ ಗೋರ್ವಾಡಿ, ಭರತ್, ಬಾಬೂರಾವ್ ಗೋರ್ವಾಡಿ ಮುಂತಾದವರು ಈ ವೇಳೆ ಹಾಜರಿದ್ದರು. ನಮ್ಮ ಈ ಭೇಟಿ ವೇಳೆ ಗ್ರಾಮದ ಯುವ ಮಿತ್ರ ಭೀಮ್ ಕಾಳಿದಾಸ್ ಡೋಂಗ್ರೆ ತಮಟೆ ಮೂಲಕ ನಮ್ಮನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 27/04/2024

ಚುನಾವಣಾ ಪ್ರಚಾರಾರ್ಥವಾಗಿ ಇಂದು ಭಾಲ್ಕಿ ತಾಲೂಕಿನ ವಾಂಜರಖೇಡ ಹಾಗೂ ಕೊಂಗ್ಲಿ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದೆ. ಮೊದಲಿಗೆ ವಾಂಜರಖೇಡ ಗ್ರಾಮದ ಹನುಮಾನ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದೆ. ಬಳಿಕ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ನಾಗನಾಥ್ ಬಗ್ದೂರಿ ನಿವಾಸಕ್ಕೆ ಸೌಹಾರ್ದ ಭೇಟಿ ನೀಡಿ ಮಾತುಕತೆ ನಡೆಸಲಾಯ್ತು. ಬಳಿಕ ಗ್ರಾಮದ ಹಲವು ಬೀದಿಗಳಲ್ಲಿ ನಮ್ಮ ಸ್ವಯಂ ಸೇವಕರು ಮೈಕ್ ಮೂಲಕ ಪ್ರಚಾರ ನಡೆಸಿದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ 11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 27/04/2024

ಕೆಂಡದಂತ ಬಿಸಿಲಿನ ನಡುವೆಯೂ ನಮ್ಮ ಪ್ರಚಾರ ಕಾರ್ಯ ಮುಂದುವರಿದಿದೆ. ಇಂದು ಮಧ್ಯಾಹ್ನ ಬಸವಕಲ್ಯಾಣ ತಾಲೂಕಿನ ಬೇಟ ಬಾಲಕುಂದ ಗ್ರಾಮಕ್ಕೆ ಭೇಟಿ ನೀಡಿ ಮತಯಾಚನೆ ನಡೆಸಲಾಯ್ತು. ಗ್ರಾಮದ ಕಾಶೀನಾಥ್ ಖಾರ್ಬರಿ ರವರ ನಿವಾಸದಲ್ಲಿ ಪ್ರಚಾರ ಸಭೆ ನಡೆಸಲಾಯ್ತು. ಅತ್ಯಂತ ಸೌಹಾರ್ದಯುತವಾಗಿ ನಡೆದ ಸಭೆಯಲ್ಲಿ ನನ್ನ ಉಮೇದುವಾರಿಕೆಯ ಕರಪತ್ರಗಳನ್ನು ವಿತರಿಸಿ ಸಮಾಜದ ಬಂಧುಗಳಲ್ಲಿ ಮತಯಾಚನೆ ಮಾಡಿದೆ. ಈ ವೇಳೆ ನನ್ನೊಂದಿಗೆ ಕಾಶಿನಾಥ್ ಖಾರ್ಬರಿ, ಜನಾರ್ದನ್ ಬಿರಾದರ್, ಬಾಲಾಜಿ ಸಾವ್ಳೆ, ಅಂಗದರಾವ್ ಜಗತಾಪ್, ಯುವರಾಜ್ ಪಾಟೀಲ್ ರಾವ್ ಸಾಬ್ ಬಿರಾದಾರ್ ಜೊತೆಗಿದ್ದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 27/04/2024

ಇಂದು ಭಾಲ್ಕಿ ತಾಲೂಕಿನ ಕೇಸರ ಜವಳಗ ಗ್ರಾಮಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದೆನು. ಗ್ರಾಮದ ನರಹರಿ ಯವರ ನಿವಾಸದಲ್ಲಿ ಪ್ರಚಾರ ಸಭೆ ನಡೆಸಲಾಯ್ತು. ಸಮಾಜದ ವಿಷಯವಾಗಿ ರಾಷ್ಟ್ರೀಯ ಪಕ್ಷಗಳು ತಳೆದಿರುವ ನಿಲುವಿನ ಕುರಿತು ತಿಳಿ ಹೇಳಲಾಯ್ತು. ಸಭೆಯಲ್ಲಿ ಕರ ಪತ್ರ ಹಂಚಿ, ತಮಗೆ ಮತ ನೀಡುವಂತೆ ಗ್ರಾಮಸ್ಥರನ್ನು ಕೇಳಿಕೊಂಡೆನು. ಈ ಭೇಟಿಯ ವೇಳೆ ಜನಾರ್ದನ್ ಬಿರಾದಾರ್, ಪದ್ಮಾಕರ ಪಾಟೀಲ್, ಅಶ್ವಕ್ ಪಟೇಲ್, ಬಾಲಾಜಿ ಸಾವ್ಳೆ, ಅಂಕುಶ್ ಗೋಕ್ಳೆ ಹಾಗೂ ರಾವ್ ಸಾಬ್ ಬಿರಾದಾರ್ ಸಾಥ್ ನೀಡಿದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 27/04/2024

ನಮ್ಮ ಚುನಾವಣಾ ಪ್ರಚಾರ ಇಂದು ಸಹ ಬಿರುಸಿನಿಂದ ಮುಂದುವರಿದಿದೆ. ಕ್ಯಾಂಪೇನ್ ಭಾಗವಾಗಿ ಭಾಲ್ಕಿ ತಾಲೂಕಿನ ಪಂಡರಿ ಗ್ರಾಮಕ್ಕೆ ಭೇಟಿ ನೀಡಲಾಯಿತು. ಅತ್ಯಂತ ಉತ್ಸಾಹದಿಂದ ನಡೆದ ಪ್ರಚಾರ ಸಭೆಯಲ್ಲಿ ಅನೇಕ ಯುವಕರು, ಹಿರಿಯರು ಭಾಗಿಯಾಗಿದ್ದು ವಿಶೇಷವಾಗಿತ್ತು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 27/04/2024

ಚುನಾವಣಾ ಪ್ರಚಾರದ ನಿಮಿತ್ಯವಾಗಿ ಇಂದು ಭಾಲ್ಕಿ ತಾಲೂಕಿನ ಇಂಚೂರ ಗ್ರಾಮಕ್ಕೆ ಭೇಟಿ ನೀಡಲಾಯ್ತು. ಊರಿನ ಹಿರಿಯರು ಹಾಗೂ ಯುವ ಸಮುದಾಯವನ್ನು ಭೇಟಿ ಮಾಡಿ ಕರ ಪತ್ರ ನೀಡಿ, ಮತಯಾಚನೆ ನಡೆಸಲಾಯ್ತು. ಮತಯಾಚನೆ ವೇಳೆ ಸಮಾಜದ ಹಿರಿಯರೂ, ಆತ್ಮೀಯರೂ ಆದ ಜನಾರ್ದನ್ ಬಿರಾದರ್, ಪದ್ಮಾಕರ ಪಾಟೀಲ್, ಅಶ್ವಕ್ ಪಟೇಲ್, ಬಾಲಾಜಿ ಸಾವ್ಳೆ, ಅಂಕುಶ್ ಗೋಕ್ಳೆ ಸೇರಿದಂತೆ ಹಲವರು ಜೊತೆಗಿದ್ದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

27/04/2024

“ಇಂದಿನ ಡಿಜಿಟಲ್ ದಿನಮಾನಗಳಲ್ಲಿ ವಿನ್ಯಾಸ ಎನ್ನುವುದು ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಮನೆ ನಿರ್ಮಾಣದಿಂದ ಹಿಡಿದು, ಹತ್ತು ಹಲವು ಕ್ಷೇತ್ರಗಳಲ್ಲಿ ಡಿಸೈನ್ ಮಹತ್ವದ ಪಾತ್ರ ವಹಿಸುತ್ತಿದೆ”

ಇಂದು ವಿಶ್ವ ವಿನ್ಯಾಸ ದಿನ

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

25/04/2024

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 24/04/2024

ಎಲೆಕ್ಷನ್ ಕ್ಯಾಂಪೇನ್ ಹಿನ್ನೆಲೆಯಲ್ಲಿ ಇಂದು ಸಂಜೆ ಆಳಂದ ತಾಲೂಕಿನ ತಡೋಲ ಗ್ರಾಮದ ವಿಠ್ಠಲ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದೆನು. ಬಳಿಕ ಗ್ರಾಮಸ್ಥರನ್ನು ಉದ್ಧೇಶಿಸಿ ಮಾತನಾಡಿ, ತಮಗೆ ಮತ ಚಲಾಯಿಸುವಂತೆ ಕೇಳಿಕೊಂಡೆನು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ - 11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 24/04/2024

ಬೆಳಗ್ಗೆಯಿಂದ ಹುರುಪಿನಿಂದ ಸಾಗಿರುವ ನಮ್ಮ ಚುನಾವಣಾ ಪ್ರಚಾರ ರಾತ್ರಿಯಾದರೂ ಅದೇ ಉತ್ಸಾಹದಿಂದ ಸಾಗಿದೆ. ಇಂದು ಇಳಿ ಸಂಜೆಯ ವೇಳೆ ಆಳಂದ ತಾಲೂಕಿನ ಆಳಂಗ ಗ್ರಾಮಕ್ಕೆ ಭೇಟಿ ನೀಡಲಾಯಿತು. ಹನುಮಾನ್ ಮಂದಿರದಲ್ಲಿ ದೇವರಿಗೆ ವಂದಿಸಿ, ಸಭಾ ಕಾರ್ಯಕ್ರಮ ನಡೆಸಲಾಯಿತು. ನೂರಾರು ಸಂಖ್ಯೆಯ ಸಮಾಜ ಬಾಂಧವರು, ಗ್ರಾಮಸ್ಥರು ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದ್ರು. ಹುಣ್ಣಿಮೆ ಬೆಳಕಿನಲ್ಲಿ ನಡೆದ ಈ ಭೇಟಿ ವೇಳೆ ಗ್ರಾಮಸ್ಥರು ನಮ್ಮನ್ನು ಪಟಾಕಿ ಸಿಡಿಸಿ ಬರಮಾಡಿಕೊಂಡಿದ್ದಲ್ಲದೆ, ನಮ್ಮೆಲ್ಲರನ್ನು ಶಾಲು ಹೊದಿಸಿ ಸತ್ಕರಿಸಿದ್ದು ವಿಶೇಷವಾಗಿತ್ತು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

Photos from Wesupport-dr.dinkarmore's post 24/04/2024

ಇಂದು ಸಂಜೆ ಆಳಂದ ತಾಲೂಕಿನ ಅಣೂರ್ ಹಾಗೂ ತುಗಾಂವ್ ಗ್ರಾಮಕ್ಕೆ ಭೇಟಿ ನೀಡಿದೆನು. ಮೊದಲಿಗೆ ಅಣೂರ್ ಗ್ರಾಮದ ಶ್ರೀ ಹನುಮಾನ ಮಂದಿರಕ್ಕೆ ತೆರಳಿ ಗೆಲುವಿಗಾಗಿ ಪ್ರಾರ್ಥಿಸಿ ಬಳಿಕ ವಿಠ್ಠಲ್ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡೆನು. ಸಂಜೆಯಾದರೂ ಬೇಸರಿಸಿಕೊಳ್ಳದೇ ಅನೇಕ ಹಿರಿಯರು ಇಂದಿನ ಸಭೆಗೆ ಆಗಮಿಸಿ ನನ್ನ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದರು.

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ 11
ಬೆಂಕಿಪೊಟ್ಟಣದ ಗುರುತಿಗೆ.




🚩🚩🚩🚩🚩🚩

19/04/2024

“ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ
ಪ್ರಾಣತ್ ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ”

ನಾಡಿನ ಸಮಸ್ತ ಜನತೆಗೆ ‘ಕಾಮದಾ ಏಕಾದಶಿ’ ಶುಭಾಶಯಗಳು
ಭಗವಾನ್ ವಿಷ್ಣುವಿನ ಕೃಪಾದೃಷ್ಟಿ ಎಲ್ಲರ ಮೇಲಿರಲಿ..

ದಿನಕರ ಮಾಧವರಾವ್ ಮೋರೆ
ಸ್ವತಂತ್ರ ಅಭ್ಯರ್ಥಿ, ಬೀದರ್ ಲೋಕಸಭಾ ಕ್ಷೇತ್ರ.




🚩🚩🚩🚩🚩🚩

Videos (show all)

ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ11ಬೆಂಕಿಪೊಟ್ಟಣದ ಗುರುತಿಗೆ.#drdinkarmore#Drmoredinkar#IndependentCandidate #JaiShivaji🚩🚩🚩🚩🚩🚩#Bida...
ನೆನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ...ಈ ಬಾರಿ ನಿಮ್ಮ ಮತ ಕ್ರಮಸಂಖ್ಯೆ 11ಬೆಂಕಿಪೊಟ್ಟಣದ ಗುರುತಿಗೆ.#drdinkarmore#Drmoredinkar#Independe...
ಬೀದರ್ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುಂದುವರಿಸುವ ಮಹತ್ವಾಕಾಂಕ್ಷೆಯೊಂದಿಗೆ, ಏಪ್ರಿಲ್ 19ರ ಶುಕ್ರವಾರದಂದು ನಾಮಪತ್ರ ಸಲ್ಲಿಸಲಿದ...
ಬೀದರ್ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಮುಂದುವರಿಸುವ ಮಹತ್ವಾಕಾಂಕ್ಷೆಯೊಂದಿಗೆ, ಏಪ್ರಿಲ್ 19ರ ಶುಕ್ರವಾರದಂದು ನಾಮಪತ್ರ ಸಲ್ಲಿಸಲಿದ...
ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.#ChatrapatiShivajiMaharaj
Manoj jarange patil coming to Bidar on 10 April 2024.
#PrimeMinisterModi Narendra Modi #ModiHaiToMumkinHai #modiguarantee #ModiGovt #ModiAgainIn2024#BJP4IND #ModiBJP #dinkarm...

Website