Nagraja Kannadiga

Nagraja Kannadiga

Contact information, map and directions, contact form, opening hours, services, ratings, photos, videos and announcements from Nagraja Kannadiga, Artist, .

05/11/2023

ರಕ್ಷಕನಿಗೆ ಅವಕಾಶ ನೀಡದೇ.. ಮನೆಗೆ ಆದರೇ..!!!!..
ಅವಕಾಶ ನೀಡಿ ಡ್ರೋಡ್ ಪ್ರತಾಪ್ಗೆ ಒಳಗೆ..!!

05/11/2023
22/10/2023

ಸಿ ಸಿ ಸೀ ಪ್ರಜ್ವಲಾನಂದ ಚಾಮಿ

07/11/2022

ಕಲ್ಲಲ್ಲೆ ಕಲೆಯಾದ ಕನ್ನಡವೇ ನಿನ್ನ ಬಿತ್ತುವೆವು ಭುವಿಯಲ್ಲಿ ಭಕ್ತಿಯಲಿ.!
ಭುವಿಯಲ್ಲೆ ಭನವಾದ ಕನ್ನಡವೇ ನಿನ್ನ ತುಂಬುವೆವು ಮನದಲ್ಲಿ ಶ್ರದ್ಧೆಯಲಿ.!!
ಸ್ವರದಲ್ಲಿ ವರವಾದ ಕನ್ನಡವೇ ನಿನ್ನ ನುಡಿಯುವೆವು ನರನಾಡಿಯಲೂ ಹೆಮ್ಮೆಯಲಿ.!!!
ಮುತ್ತಿನ ಮಾಲೆ ನಿನ್ನಕ್ಷರಗಳ ಲೀಲೆ ಹರಡುವರು ಕಂಪು ಕವಿ ಕುವೆಂಪು.!!!!
ಹಸಿರವನ ನಿನ್ನಾಕ್ಷರ ಹರಿವ ನೀರೇ ನಿನ್ನ ಸ್ವರ ಬೀಸೋ ಗಾಳಿಯೇ ನಿನ್ನ ನಿನಾದ ದಿನೋದಯವೆ ನಿನ್ನಯ ಭಾವ.!!!!
------------ನಾ.ಕ🖋

03/11/2022

ಮಾನವನ ಸ್ವಾರ್ಥ ಈಗ ಇನ್ನೊಂದು ಬಗೆಯಲ್ಲಿ ಮುಂದುವರಿಯುತ್ತಿದೆ. ತಾನು ಬದುಕುವ ಆಸೆಗೆ ಕೊರೋನಾದಂತ ಮಾರಕ ರೋಗದಿಂದ ತಪ್ಪಿಸಿಕೊಳ್ಳಲು ಮುಖವಾಡವೆಂಬ ಮಾಸ್ಕ್ ಧರಿಸಿ ಎಲ್ಲೆಂದರಲ್ಲಿ ಎಸೆದು ಪರಿಸರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ... ಸಾಮಾಜಿಕ ಕಾಳಜಿ ಬಯಸುವ ಜನರು ಬಳಸಿದ ಮಾಸ್ಕ್ ಸರಿಯಾದ ರೀತಿಯಲ್ಲಿ ಕಸದ ತೊಟ್ಟಿಗೇ ಹಾಕುವ ಕ್ರಮ ಉತ್ತಮ. ... ಎಲ್ಲೆಂದರಲ್ಲಿ ಎಸೆದರೆ ಇನ್ನೊಮ್ಮೆ ಸ್ವಚ್ಚ ಭಾರತ ಅಭಿಯಾನ ಮಾಡಲು ಯಾವುದೇ ಸಂಶಯವಿಲ್ಲ ಹಾಗಾಗಿ ದಯಮಾಡಿ ನಿಮ್ಮ ರಕ್ಷಣೆಗೆ ಬಳಸಿದ ಮಾಸ್ಕನ್ನ ಎಲ್ಲರ ರಕ್ಷಣೆಗಾಗಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ...!!!
------------ನಾ.ಕ🖋

01/11/2022

ನುಡಿವ ನುಡಿ ನೂತನ! ನಡೆವ ನೆಲ ವಿನೂತನ! ನೋಡುವ ನೋಟ ನವಚೇತನ! ಕನ್ನಡಮ್ಮನ ಈ ನೆಲ ಸರ್ವಜನ್ಮದ ಫಲದ ಜನನ!! ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
-------ನಾ.ಕ🖋

23/10/2022

ಬಾ ನನ್ನ ಪ್ರೀತಿಸು ನೀ
ಬಾ ನನ್ನ ಅರಳಿಸು ನೀ
ನಗುವೇ ಆನಂದದಿಂದ!!
ಮಗುವಿನ ಹೊಳೆವ ಕಣ್ಣಲ್ಲಿ
ಹಿಪ್ಪಳಿಸುವ ತುಟಿಯಂಚಲ್ಲಿ
ಬಾ ಮನದ ಭಾವ ಹೊತ್ತು ಹರಿದು ಬಾ.
ಬಾ ನನ್ನ ಪ್ರೀತಿಸು ನೀ
ಬಾ ನನ್ನ ಅರಳಿಸು ನೀ
ನಗುವೇ ಆನಂದದಿಂದ!!
ಹಸಿರು ಧರೆಯ ಸಿಂಗರಿಸಿದಾಗ
ಸಪ್ತವರ್ಣವಾಗಸವ ಚುಂಬಿಸಿದಾಗ
ಮಾಮರವೇರಿ ಕೋಗಿಲೆ ಹಾಡಿದಾಗ.
ಬಾ ನನ್ನ ಪ್ರೀತಿಸು ನೀ
ಬಾ ನನ್ನ ಅರಳಿಸು ನೀ
ನಗುವೇ ಆನಂದದಿಂದ!!
ಮನದಿಂದ ಮನವನು ಬೆರೆಸಿದಾಗ
ಹೃದಯದ ನೋವು ನೀಗಿದಾಗ
ವಾತ್ಸಲ್ಯದ ಮಡಿಲಲ್ಲಿ ನೆಲೆಸಿದಾಗ
ಬಾ ನನ್ನ ಪ್ರೀತಿಸು ನೀ
ಬಾ ನನ್ನ ಅರಳಿಸು ನೀ
ನಗುವೇ ಆನಂದದಿಂದ!!
ಗೀಚಿದಗೆರೆ ಅಕ್ಷರವಾದಾಗ
ಬರೆದ ಚಿತ್ರ ಅಮ್ಮನ
ಹೋಲುವಾಗ
ಬದುಕಿನ ಸಾರ ತಿಳಿದಾಗ..
ಬಾ ನನ್ನ ಪ್ರೀತಿಸು ನೀ
ಬಾ ನನ್ನ ಅರಳಿಸು ನೀ
ನಗುವೇ ಆನಂದದಿಂದ!!
------ನಾ.ಕ🖋

Videos (show all)

ನಿಜ ಅನ್ನಿಸಿದರೆ ಲೈಕ್ ಮತ್ತು ಶೇರ್ ಮಾಡಿ  ಇಲ್ಲ ಅನ್ನಿಸಿದರೆ ಯಾಕೆ ಅಂತಾ ಮೆಸ್ಸೇಜ್ ಟ್ಯಾಗ್ ಮಾಡಿ..!!

Website