AntarChakshu

AntarChakshu

Contact information, map and directions, contact form, opening hours, services, ratings, photos, videos and announcements from AntarChakshu, Yoga studio, .

21/03/2023
12/08/2021

ಗಾಂಧಾರಿ ವಿದ್ಯೆ

ಕುಂಡಲಿನಿ 06/08/2021

ಕುಂಡಲಿನಿ ಧ್ಯಾನ ಕಲಿಯಲು ಈ ವಾಟ್ಸಾಪ್ ಗೆ join ಆಗಿ
https://chat.whatsapp.com/I1yppyseRTxLeWkpdQ4Eqb

ಕುಂಡಲಿನಿ WhatsApp Group Invite

ಕುಂಡಲಿನಿ 21/07/2021

ಕುಂಡಲಿನಿ ಶಕ್ತಿ ಎಂದರೆ ಏನು? ಪ್ರತಿ ಮನುಷ್ಯರಲ್ಲೂ ಕುಂಡಲಿನಿ ಶಕ್ತಿ ಇರುತ್ತದಾ?
ಕುಂಡಲಿನಿ ಎಂದರೆ ಅಕ್ಷರಶಃ ‘ಸುರುಳಿಯಾಕಾರ’ ಎಂಬ ಅರ್ಥವನ್ನು ನೀಡುತ್ತದೆ. ಭಾರತೀಯ ಯೋಗ ದಲ್ಲಿ, ಇದು ಒಂದು “ದೈಹಿಕ ಶಕ್ತಿ” – ಒಂದು ಸುಪ್ತ, ಸಹಜ ಪ್ರವೃತ್ತಿಯ ಅಥವಾ ಮಾನಸಿಕ ಪ್ರಚೋದನೆ ಅಥವಾ ಶಕ್ತಿಯು, ಬೆನ್ನುಮೂಳೆಯ ತಳದಲ್ಲಿ ಸುರುಳಿಯಾಕಾರದಲ್ಲಿ ಇರುತ್ತದೆ ಎನ್ನುತ್ತದೆ.
ಇದು ಪ್ರತಿಯೊಬ್ಬರಲ್ಲೂ ಇರುತ್ತದೆ. ಇದರ ಮೂಲಾಧಾರ ಚಕ್ರದಲ್ಲಿ ಎಂದರೆ ಭೌತಿಕ ದೇಹದ ಬೆನ್ನುಮೂಳೆ ಕೆಳಗಿನ ಭಾಗದಲ್ಲಿ ಎರಡೂವರೆ ಸುತ್ತು ಸುತ್ತಿಕೊಂಡು ಸರ್ಪಾಕಾರದಲ್ಲಿ ಚೈತನ್ಯ ರಹಿತವಾಗಿ ಇರುತ್ತದೆ. ಆದರೆ ಇದು ಸೂಕ್ಷ್ಮ ದೇಹದಲ್ಲಿ ಇರುತ್ತದಾದ್ದರಿಂದ ಭೌತಿಕ ದೇಹದಲ್ಲಿ ನಾವು ನೋಡಲು ಸಾಧ್ಯವಿಲ್ಲ. ಕುಂಡಲಿನಿ ಶಕ್ತಿ ಚೈತನ್ಯವಾಗದ ಹೊರತು ಧ್ಯಾನಯೋಗ ಆರಂಭವಾಗಲ್ಲ. ಈ ಕುಂಡಲಿನಿ ಶಕ್ತಿ ನಮ್ಮೆಲ್ಲರಲ್ಲಿ ಚೈತನ್ಯ ರಹಿತವಾಗಿ ಇರುವ ಸ್ಥಿತಿಯನ್ನು ನಿದ್ರಿಸುವುದು ಎಂದು, ಇದು ಚೈತನ್ಯಶೀಲವಾಗಲು ಕುಂಡಲಿನಿ ಎಚ್ಚರಗೊಳ್ಳುವುದು ಎಂದೂ ಆಧ್ಯಾತ್ಮಿಕವಾಗಿ ವ್ಯವಹರಿಸುತ್ತಾರೆ.
ಈ ಶಕ್ತಿ ಎಚ್ಚೆತ್ತುಕೊಂಡ ಮೇಲಷ್ಟೇ ಧ್ಯಾನಯೋಗ ಆರಂಭವಾಗುತ್ತದೆ. ಆಗಲೇ ಭೌತಿಕ ದೇಹದ ಮೂಲಕ ನಾವು ಧ್ಯಾನ ಎಂಬ ಅನೇಕ ಅನುಭವ ಪಡೆಯುತ್ತೇವೆ. ಅಂದರೆ ಧ್ಯಾನಯೋಗದಲ್ಲಿ ಪ್ರವೇಶಿಸಬೇಕಾದರೆ ಮೊದಲು ಕುಂಡಲಿನಿ ಶಕ್ತಿಯನ್ನು ಎಚ್ಚರಗೊಳಿಸಬೇಕು. ಕೆಲವರಲ್ಲಿ ಇದು ಸಹಜವಾಗಿ ನಡೆಯುತ್ತದೆ. ಪೂರ್ವಜನ್ಮದಲ್ಲಿ ಧ್ಯಾನಯೋಗದಲ್ಲಿದ್ದು ಮರಣಿಸಿದವರಿಗೆ ಈ ಜನ್ಮದಲ್ಲಿ ಕರ್ಮಶೇಷ ಅನುಭವಿಸಿದ ಬಳಿಕ ಕುಂಡಲಿನಿ ಎಚ್ಚರಗೊಂಡು ಮನಸ್ಸು ಧ್ಯಾನದ ಕಡೆಗೆ, ದೈವದ ಕಡೆಗೆ ಹೊರಳುತ್ತದೆ.
ಕೆಲವರಲ್ಲಿ ಎಲ್ಲಾ ಜನ್ಮಗಳಲ್ಲೂ ಸಂಪಾದಿಸಿದ ಸಂಚಿತ, ಆಗಾಮಿ ಕರ್ಮಗಳೆಲ್ಲಾ ಈ ಜೀವನದಲ್ಲಿ ಯಾವುದೋ ಒಂದು ಹಂತದಲ್ಲಿ ಅನುಭದಿಂದ ಕ್ಷಯವಾದ ಮರುಕ್ಷಣ ಕುಂಡಲಿನಿ ಶಕ್ತಿ ಎಚ್ಚರಗೊಳ್ಳುತ್ತದೆ. ಫಲಿತವಾಗಿ ಅಲ್ಲಿಯವರೆಗೂ ಆಧ್ಯಾತ್ಮಿಕ ಮಾರ್ಗದಲ್ಲಿ ಇಲ್ಲದವರು ಸಹ ತಕ್ಷಣ ತೀವ್ರ ವೈರಾಗ್ಯದಿಂದ ಭಕ್ತಿಯ ಕಡೆಗೆ ಹೊರಳುತ್ತಾರೆ. ಈ ಜನ್ಮದಲ್ಲಿ ಮಾಡಿಕೊಂಡ ಕರ್ಮಗಳು ಕ್ಷಯಿಸಲು ಧ್ಯಾನಯೋಗ ಮಾಡುತ್ತಾರೆ. ಇವರನ್ನು ಅವಧೂತರೆಂದು ಕರೆಯುತ್ತಾರೆ. ಲಲಿತಾದೇವಿ ಕುಂಡಲಿನಿ ಮಾತೆ. ಸುಬ್ರಹ್ಮಣ್ಯೇಶ್ವರನನ್ನು ಧ್ಯಾನ ಮಾಡಿದವರಿಗೆ ಕುಂಡಲಿನಿ ಶೀಘ್ರವಾಗಿ ಚೈತನ್ಯಶೀಲವಾಗುತ್ತದೆ ಎನ್ನುತ್ತಾರೆ.
ಇದನ್ನು ಒಂದು ದೇವಿಯ ರೂಪದಲ್ಲಾಗಲಿ ಅಥವಾ ಒಂದು ಮಲಗಿರುವ ಸರ್ಪದ ರೂಪದಲ್ಲಾಗಲಿ ಚಿತ್ರಿಸ ಲಾಗುತ್ತದೆ. ಹೀಗಾಗಿ ಈ ಪದದ ಇಂಗ್ಲೀಷ್ ರೂಪಾಂತರದಲ್ಲಿ ಹೆಚ್ಚಾಗಿ ‘ಸರ್ಪ ಶಕ್ತಿ’ ಎಂದು ಕರೆಯಲಾಗುತ್ತದೆ. ಕುಂಡಲಿನಿಯು ಸೇಕ್ರಂ(ಬೆನ್ನೆಲುಬುಗಳು ಸೇರಿಕೊಂಡು ಉಂಟಾಗಿರುವ ತ್ರಿಕೋನಾಕಾರದ ಎಲುಬು) ಮೂಳೆಯಲ್ಲಿ ಮೂರುವರೆ ಸುರುಳಿಗಳಲ್ಲಿ ಇರುತ್ತದೆ ಹಾಗು ಇದನ್ನು ಪರಿಶುದ್ಧ ವಾಂಛೆಯ ಒಂದು ಉಳಿಕೆ ಶಕ್ತಿ ಎಂದು ವಿವರಿಸಲಾಗಿದೆ.

*ಇಂತಹ ಅದ್ಭುತವಾದ ಕುಂಡಲಿನಿ ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ*
ಆಗಸ್ಟ್ 10 ರಿಂದ ತರಬೇತಿ ಶುರುವಾಗುತ್ತಿದೆ
https://chat.whatsapp.com/I1yppyseRTxLeWkpdQ4Eqb

ಕುಂಡಲಿನಿ WhatsApp Group Invite

26/10/2020

ಯಶಸ್ವಿ 4ನೇ ಬ್ಯಾಚ್ ಗೆ ನೀವು ಭಾಗವಹಿಸಿ ಅದ್ಬುತ ಫಲಿತಾಂಶ ಸಾಧಿಸಿ

14/10/2020

ಸಮ್ಮೋಹಿನಿ ವಿದ್ಯೆ

01/10/2020

ಆಧ್ಯಾತ್ಮಿಕ ಸಾಧನೆಗಾಗಿ

28/08/2020

ನಮಸ್ತೆ🙏😊
ನಮ್ಮ ಎಲ್ಲ ಶಿಬಿರಗಳು ಇನ್ನುಮುಂದೆ
🍀ಪಂಚಮುಖಿ ವಿದ್ಯಾ ಕೇಂದ್ರ🍀
ಈ ಟ್ರಸ್ಟ್ ನ ಮುಖಾಂತರ ನಡೆಯುತ್ತದೆ

13/07/2020

🌼 ಪ್ರಣವ ಧ್ಯಾನ🌼

ಮನೆಯಲ್ಲೇ ಇದ್ದುಕೊಂಡು online ಮುಖಾಂತರ (zoom ) 19/7/2020 ಭಾನುವಾರ ಸಂಜೆ 6ರಿಂದ 7ಗಂಟೆಯವರೆಗೆ ಪ್ರಾಣಾಯಾಮ.ಧ್ಯಾನ ಕಲಿಯಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9964217206.8277448809.

ಧ್ಯಾನದಿಂದ ಆಗುವ ಉಪಯೋಗಗಳು...

*🍀ನಮ್ಮೊಳಗಿನ ಸುಪ್ತಶಕ್ತಿಯ ವರ್ಧನೆ.
*🍀ಮೆದುಳಿನ ಕ್ರಿಯಾ ಶಕ್ತಿ ಹೆಚ್ಚುವುದು.
*🍀ನಕಾರಾತ್ಮಕ ಶಕ್ತಿಗಳ ವಿಮೋಚನೆ.
*🍀ಒತ್ತಡ ನಿವಾರಣೆ.ದೈಹಿಕ ಮಾನಸಿಕ.ಭಾವನಾತ್ಮಕ ಸುಸ್ಥಿತಿ.
*🍀ಏಕಾಗ್ರತೆ.ನೆನಪಿನ ಶಕ್ತಿ.ಶಾಂತಿ ನೆಮ್ಮದಿಯನ್ನು ಹೊಂದುವುದು.

🌺🌺🌺ಧ್ಯಾನವೆಂಬುವುದು ಮನಸ್ಸುನ್ನು ಶುದ್ದಿ ಮಾಡುವ ಕ್ರಿಯೆ🌺🌺🌺

🌼🌼🌼ಪ್ರಾಣಾಯಾಮದಿಂದ ಆಗುವ ಉಪಯೋಗಗಳು🌼🌼🌼

🍀ದೇಹದಲ್ಲಿ ಪ್ರಾಣ ಶಕ್ತಿ ಹೆಚ್ಚಗುತ್ತದೆ.
🍀ದೇಹದಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಹೆಚ್ಚಗುತ್ತದೆ.
🍀ದೇಹದಲ್ಲಿ ಉಲ್ಲಾಸ ಉತ್ಸಾಹ ಹೆಚ್ಚುತ್ತದೆ.

ಆಸಕ್ತರು ಈ ನಂಬರ್ ಗೆ ವಾಟ್ಸಾಪ್ ಮಾಡಿ 9964217206 ತರಬೇತಿ ಶುಲ್ಕ 200 ಮಾತ್ರ. ( ಹೆಚ್ಚಿನ ಅಭ್ಯಾಸಕಾಗಿ ಧ್ಯಾನದ ಅಡಿಯೋ ನೀಡಲಾಗುವುದು)

22/06/2020

ಕುಂಡಲಿನಿ ಜಾಗೃತಿಗಾಗಿ ಮಾಹಿತಿ.
*ಕುಂಡಲಿನಿ ಜಾಗೃತಿ ಆಗಲು ಶಿವ ಶಕ್ತಿ ಹೀಲಿಂಗ್ ಆಗಲೇ ಬೇಕು ಶಿವ ಶಕ್ತಿ ಒಂದಾಗದೆ ಕುಂಡಲಿನಿ ಜಾಗೃತಿ ಸಾಧ್ಯವಿಲ್ಲ*

ಚಕ್ರ ಎಂದರೆ ಉರುಟಾಗಿರುವುದು ಅಥವಾ ಉಂಗುರದಂತೆ ಸುತ್ತಿರುವುದು ಎಂದು ಅರ್ಥ. ಈ ಚಕ್ರಗಳು ಚೈತನ್ಯ ವಾಹಕಗಳಾಗಿವೆ. ನಮ್ಮ ದೇಹದಲ್ಲಿರುವ ಚಕ್ರಗಳು ಪ್ರಕೃತಿಯಲ್ಲಿನ ತರಂಗ ಭಾವನೆಗಳನ್ನು ಸಂಗ್ರಹಿಸಿ ದೇಹದ ನಾಡಿ, ಧಮನಿ, ಶಿರಸ್ಸಿಗೆ ತಲುಪಿಸುತ್ತದೆ.
ಮನುಷ್ಯನ ಬೆನ್ನುಹುರಿಯ ಕೆಳಭಾಗದಿಂದ ಶಿರೋಭಾಗದವರೆಗೆ ಶಕ್ತಿ ಅಂತರ್ಗತವಾಗಿರುತ್ತದೆ.

ಬೆನ್ನು ಹುರಿಯಲ್ಲಿ ಇಡಾ, ಪಿಂಗಳಾ ಹಾಗೂ ಸುಪುವ್ನು ನಾಡಿಗಳು ಎಂಬ ಮೂರು ನಾಡಿಗಳಿವೆ. ಇದೇ ಬೆನ್ನುಹುರಿಯಲ್ಲಿ ಇರುವ ಏಳು ಶಕ್ತಿ ಕೇಂದ್ರಗಳನ್ನು ಚಕ್ರಗಳು ಎನ್ನುತ್ತಾರೆ. ಗಾಲಿಗಳು ಎಂದೂ ಇವನ್ನು ಹೆಸರಿಸಬಹುದು. ನಾಡಿಗಳು ಪ್ರಮುಖ ಶಕ್ತಿವಾಹಿನಿಗಳಾಗಿವೆ.
ಚಕ್ರ ನಮ್ಮೊಳಗೆ ಸದಾ ತಿರುಗುತ್ತಲೇ ಇದ್ದು, ಇದರಿಂದ ಶಕ್ತಿ ಸಂಚಯಿಸುತ್ತದೆ.

ಈ ಚಕ್ರಗಳು ದೇಹದ ಅಂಗಗಳಿಗೆ ಅಥವಾ ಗ್ರಂಥಿಗಳಿಗೆ ಜೋಡಣೆಯಾಗಿರುತ್ತವೆ. ದೇಹದ ಹಾಗೂ ಅಂಗಾಂಗಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತವೆ. ಚಕ್ರಗಳು ದೈಹಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಕ್ರಿಯೆಗಳೊಂದಿಗೆ ಸಹಯೋಗವನ್ನು ಹೊಂದಿದ್ದು, ದೈಹಿಕ ಸಶಕ್ತತೆಯೊಂದಿಗೆ ಸಮಯಪ್ರಜ್ಞೆಯ ಜಾಗೃತಿಯನ್ನು ಉಂಟು ಮಾಡುತ್ತವೆ. ದೇಹದ ವಿವಿಧ ಭಾಗಗಳಲ್ಲಿ 7 ಚಕ್ರಗಳಿವೆ. ಆಯಾ ಭಾಗದ ಚಕ್ರ ಆಯಾ ಭಾಗಕ್ಕೆ ಸಂಬಂಧಪಟ್ಟದ್ದಾಗಿದೆ.

*ಮೂಲಾಧಾರ (ಆಸನದ ದ್ವಾರದ ಮೇಲ್ಗಡೆ ಇದೆ)
*ಸ್ವಾಧಿಷ್ಠಾನ ಚಕ್ರ (ಜನನೇಂದ್ರಿಯ ಮೇಲ್ಭಾಗದಲ್ಲಿದೆ).
*ಮಣಿಪುರ ಚಕ್ರ (ನಾಭಿ ಪ್ರದೇಶದಲ್ಲಿದೆ)
*ಅನಾಹತ ಚಕ್ರ (ಹೃದಯದ ಮಧ್ಯದಲ್ಲಿದೆ)
*ವಿಶುದ್ಧ ಚಕ್ರ (ಗಂಟಲಿನಲ್ಲಿದೆ)
*ಆಜ್ಞಾ ಚಕ್ರ (ಎರಡು ಹುಬ್ಬುಗಳ ಮಧ್ಯಭಾಗದಲ್ಲಿದೆ)

*ಸಹಸ್ರಾರ ಚಕ್ರ (ಮೆದುಳಿನ ಮೇಲ್ಭಾಗದಲ್ಲಿ ನೆತ್ತಿಯಲ್ಲಿದೆ. ಇದು ಸಾವಿರ ದಳಗಳುಳ್ಳ ಕಮಲ ಪುಷ್ಪವನ್ನು ಹೋಲುತ್ತದೆ)
ಮನುಷ್ಯನ ದೇಹದಲ್ಲಿರುವ ಚೈತನ್ಯ ಶಕ್ತಿಯು ಕುಂಡಲಿನಿಯ ಜಾಗೃತಿಯಿಂದ ವಿವಿಧ ಚಕ್ರಗಳ ಮೂಲಕ ಸುಷುಮ್ನಾ ನಾಡಿಯಲ್ಲಿ ಹಾದು ಸಹಸ್ರಾರವನ್ನು ತಲುಪುತ್ತದೆ. ಆದ್ದರಿಂದ ದೇಹದ ಒಳಗೆ ಉತ್ಪತ್ತಿಯಾದ ಚೈತನ್ಯ ಶಕ್ತಿ ಕಡಿಮೆಯಾಗದಂತೆ ಕಾಪಾಡಲು ಆಸನ, ಪ್ರಾಣಾಯಾಮ ಮತ್ತು ಮುದ್ರೆಗಳನ್ನು ಮಾಡಬೇಕು. ಯೋಗಿಗಳು ಈ ವಿಧವಾದ ಸಾಧನೆಗಳನ್ನು ಮಾಡಿ ಸಿದ್ಧಿಯನ್ನು ಹೊಂದುತ್ತಾರೆ.
ಈ ಏಳು ಚಕ್ರಗಳ ಸಂಕ್ಷಿಪ್ತ ವಿವರಗಳ ಮಾಹಿತಿ ಈ ಕೆಳಗಿನಂತಿದೆ.

*ಮೂಲಾಧಾರ ಚಕ್ರ (ಬೇರು ಚಕ್ರ)
ಈ ಚಕ್ರ ಬೆನ್ನು ಮೂಳೆಯ ತಳಭಾಗದಲ್ಲಿದೆ. (ಮಲದ್ವಾರ ಹಾಗೂ ಜನನೇಂದ್ರಿಯಗಳ ಮಧ್ಯೆ). ಇದು ಕೆಂಪು ಬಣ್ಣಕ್ಕೆ ಸಂಬಂಧಪಟ್ಟದ್ದಾಗಿದೆ. ಇದು ಪಂಚಭೂತಗಳಲ್ಲಿ ಒಂದಾದ ಭೂಮಿಗೆ ಸಂಬಂಧಿಸಿದೆ. ಇದರ ಮಂತ್ರ ಲಂ. ಇದು ಎಡ್ರಿನಲ್ ಗ್ರಂಥಿಯಲ್ಲಿ ಅನುಸಂಧಾನವಾಗಿದೆ (ನಿರ್ನಾಳ ಗ್ರಂಥಿ). ಈ ಗ್ರಂಥಿಯು ಹಾರ್ಮೋನುಗಳನ್ನು ಬಿಡುಗಡೆಗೊಳಿಸುತ್ತದೆ. ಈ ಚಕ್ರ ನಾಲ್ಕು ದಳದ ಕಮಲದ ರೂಪದಲ್ಲಿದೆ.

ಮೂಲಾಧಾರ ಸ್ವಭಾವ: ಇದು ರಕ್ಷಣೆ, ಸ್ಥಿರತೆ, ನಿಶ್ಚಲತೆ, ಗುರುತ್ವ, ಸಹನಶೀಲತೆಗೆ ಸಂಬಂಧಿಸಿದೆ. ಮೂಲಾಧಾರ ಚಕ್ರ, ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ ಧಾರಣ ಸಮಾನ ಶಕ್ತಿ ಕಡಿಮೆಯಾಗುತ್ತದೆ. ದೇಹದ ಭಾರ ಹೆಚ್ಚುತ್ತದೆ. ಮೂಲವ್ಯಾಧಿ, ಮಲಬದ್ಧತೆ, ಸಂಧಿವಾತ, ಸೊಂಟನೋವು ಬರುತ್ತದೆ ಹಾಗೂ ಕಿಡ್ನಿಯ ಆರೋಗ್ಯವು ಕೆಡುತ್ತದೆ.

ಮೂಲಾಧಾರ ಚಕ್ರದ ಆರೋಗ್ಯಕ್ಕೆ ಬಳಸುವ ಮುದ್ರೆಗಳು: ಚಿನ್ಮುದ್ರೆ, ಪೃಥ್ವಿಮುದ್ರೆ, ವರುಣಮುದ್ರೆ, ಆಕಾಶ ಮುದ್ರೆ, ಹಕಿನಿ ಮುದ್ರೆ ಮತ್ತು ಅಪಾನ ಮುದ್ರೆ.
ಮೂಲಾಧಾರ ಚಕ್ರದ ಸುಸ್ಥಿತಿಗೆ ಇರುವ ಆಸನಗಳು: ತಾಡಾಸನ, ಉತ್ಕಟಾಸನ, ವೀರಭದ್ರಾಸನ, ಬದ್ಧ ಕೋಣಾಸನ, ಪದ್ಮಾಸನ, ವಜ್ರಾಸನ, ಸುಖಾಸನ, ಸಿದ್ಧಾಸನ, ಮಾರ್ಜಾಲಾಸನ, ಪವನಮುಕ್ತಾಸನ, ಇತ್ಯಾದಿ.
ಮೂಲಾಧಾರದ ದೇವತೆ ಗಣೇಶ: ಪ್ರಾಣಿ ಆನೆ, ಅಧಿದೇವತೆ ಪೃಥ್ವಿ.

ಮೂಲಾಧಾರ ಚಕ್ರ ತೆರೆಯಲು: ವೀರಭದ್ರಾಸನ, ಮನೆ ಶುಚಿಗೊಳಿಸುವ ಚಟುವಟಿಕೆ (ನಿಂತುಕೊಂಡು) ಕಾಲಿನ ಪಾದ, ಭುಜದಷ್ಟು ಅಂತರವಿಟ್ಟು ಮಂಡಿಗಳು ಬಗ್ಗಿಸುವುದು ಸೊಂಟ ಸ್ವಲ್ಪ ಮುಂದಕ್ಕೆ ತರುವುದು- ಇತ್ಯಾದಿ ಉತ್ತಮ.
*ಚಿನ್ಮುದ್ರೆಯಲ್ಲಿ ಕುಳಿತು ಸ್ಪಷ್ಟವಾಗಿ ಧ್ವನಿ, ಮಂತ್ರ ಲಂ ಪಠಣ.
*ಒಂದು ಮುಚ್ಚಿದ ಕೆಂಪು ಹೂವನ್ನು ದೃಶ್ಯೀಕರಿಸುವುದು.
*ಆಮೇಲೆ ನಾಲ್ಕು ದಳದ ಕೆಂಪು ಹೂವನ್ನು ತೆರೆಯುವುದು ಇವನ್ನು ಕೂಡ ಮಾಡಬಹುದು.
*ಸ್ವಾಧಿಷ್ಠಾನ ಚಕ್ರ (ತ್ರಿಕಾಸ್ಥಿ ಚಕ್ರ)

ಈ ಚಕ್ರ ಬೆನ್ನು ಮೂಳೆಯ ಕೆಳಭಾಗದಲ್ಲಿದೆ. ಇದರ ಬೀಜಾಕ್ಷರ -ವಂ (ಹೊಕ್ಕಳಿನ ಒಂದು ಇಂಚು ಕೆಳಗೆ ಇದೆ) ಆರು ದಳಗಳ ಕಮಲ. ಈ ಚಕ್ರ ಕುಂಕುಮ ಯಾ ಕಿತ್ತಳೆ ಬಣ್ಣದ್ದಾಗಿದೆ. ಇದು ಮುಖ್ಯವಾಗಿ ಅಂಡಾಶಯಗಳ ಉತ್ಪಾದನೆ, ಲೈಂಗಿಕ ಗ್ರಂಥಿಗಳ ಸಂಯೋಜನೆ (ಹಾರ್ಮೋನುಗಳು) ಹಾಗೂ ಸಂತಾನೋತ್ಪತ್ತಿಗೆ ಸಂಬಂಧಿಸಿದ್ದಾಗಿದೆ.
ಇದರ ಗುಣ: ಜಲತತ್ವ, ಕೋಮಲ, ಬೇಕಾದ ಆಕಾರಕ್ಕೆ ಬಳಸುವ ಗುಣ, ಸಂಯಮ, ಬ್ರಹ್ಮಚರ್ಯ ಪಾಲನೆ ಹಾಗೂ ಭಾವನೆಯ ಹರಿವು ಆಧ್ಯಾತ್ಮಿಕ ಸಂತೋಷ ನೀಡುತ್ತದೆ.

ಈ ಚಕ್ರದ ಮುದ್ರೆಗಳು: ವರುಣ ಮುದ್ರೆ, ವಜ್ರೋಲಿ ಮುದ್ರೆ, ಅಶ್ವಿನಿ ಮುದ್ರೆ, ಆಪಾನ ಮುದ್ರೆ.
ಈ ಚಕ್ರದ ಪ್ರಮುಖ ಆಸನಗಳು: ವೀರಭದ್ರಾಸನ, ಜಾನು ಶೀರ್ಷಾಸನ, ಪಶ್ಚಿಮೋತ್ಥಾಸನ, ಮತ್ಸ್ಯಾಸನ, ಸುಪ್ತ ವಜ್ರಾಸನ, ಪರಿಪೂರ್ಣ ನವಾಸನ, ಭುಜಂಗಾಸನ, ಸಿದ್ಧಾಸನ, ಮಾರ್ಜಾಲಾಸನ ಇತ್ಯಾದಿ.
ನಿಷ್ಕ್ರಿಯೆಗೊಂಡರೆ ಬರುವ ತೊಂದರೆಗಳು: ನಪುಂಸಕತೆ, ಗರ್ಭಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು, ಮೂತ್ರಪಿಂಡ ಸಮಸ್ಯೆಗಳು ಹಾಗೂ ಬೆನ್ನು ನೋವು ಬರುತ್ತದೆ. ವಜ್ರಾಸನದಲ್ಲಿ ಧ್ಯಾನ ಮುದ್ರೆಯ ಮೂಲಕ ಈ ಚಕ್ರವನ್ನು ತೆರೆಯಬಹುದು. ಸ್ಪಷ್ಟವಾಗಿ ಧ್ವನಿಯನ್ನು ವಂ ಪಠಣ ಹಾಗೂ ಗಮನವನ್ನು ತ್ರಿಕಾಸ್ದಿ ಅನುಸರಣೀಯ.

*ಮಣಿಪೂರ ಚಕ್ರ: ಈ ಚಕ್ರ ನಾಭಿ ಕೇಂದ್ರದ ಬಳಿ ಇದೆ. ಈ ಚಕ್ರವು ಅಗ್ನಿ ತತ್ವ ಹೊಂದಿದೆ (ಹೊಕ್ಕಳ ಮತ್ತು ಪಕ್ಕೆಲುಬುಗಳ ಮಧ್ಯೆ ಇದೆ).
ಬೀಜಾಕ್ಷರ ಮಂತ್ರ: ರಂ, ಹತ್ತು ದಳದ ಕಮಲ ರೂಪವಾಗಿದೆ. ಇದರ ಬಣ್ಣ ಹಳದಿ. ಬೆಂಕಿ ಮೂಲ ವಸ್ತು. ಇದು ಮೇದೋಜೀರಕ ಪಾಂಕ್ರಿಯನ್ ಗ್ರಂಥಿಯೊಂದಿಗೆ ಸಹಯೋಗ ಹೊಂದಿದೆ. ವ್ಯತ್ಯಯವಾದಲ್ಲಿ ಮಧುಮೇಹ ಅಲ್ಸರ್, ವಾತ ಸಂಬಂಧಿ ಕಾಯಿಲೆಗಳು ಬರುತ್ತವೆ.ಮಣಿಪೂರ ಚಕ್ರದ ಸಾಧನೆಯಿಂದ ಶುದ್ಧತೆ, ಸಾತ್ವಿಕತೆ ತೇಜಸ್ಸು ವರ್ಚಸ್ಸು ಹೆಚ್ಚುತ್ತದೆ. ಜೀರ್ಣಶಕ್ತಿ, ಜಠರಾಗ್ನಿ, ಪಚನಶಕ್ತಿ ವೃದ್ಧಿಸುತ್ತದೆ.

ಮಣಿಪೂರ ಚಕ್ರದ ಮುದ್ರೆ: ಸೂರ್ಯ ಮುದ್ರೆ, ಅಪಾನ ಮುದ್ರೆ.
ಯೋಗಾಸನಗಳು: ಧಾರ್ಮಿಕ ಆಸನ, ಯೋಗಮುದ್ರೆ, ಕೆಲವು ತಿರುಚುವಿಕೆಯ ಆಸನಗಳು, ಹಿಂದಕ್ಕೆ ಬಾಗುವ ಆಸನಗಳು, ತ್ರಿಕೋಣಾಸನ, ಧನುರಾಸನ. ಅಧೋ ಮುಖ ಶ್ವಾನಾಸನ.
ಮಣಿಪೂರ ಚಕ್ರ ತೆರೆಯಲು: ವಜ್ರಾಸನದಲ್ಲಿ ಹೊಕ್ಕುಳ ಮೇಲೆ, ಬೆನ್ನು ಮೂಳೆಯಲ್ಲಿ ಗಮನ, ಕೈಗಳು, ಭೈರವ/ಭೈರವಿ ಮುದ್ರೆಯಲ್ಲಿ, ಸ್ಪಷ್ಟ ಧ್ವನಿಯಲ್ಲಿ ರಂ ಪಠಣ.

*ಅನಾಹತ (ಹೃದಯ ಚಕ್ರ): ಇದು ಹೃದಯದ ಸಮೀಪ ಇರುವ ಚಕ್ರವಾಗಿದೆ. ಇದರ ಬಣ್ಣ ಹಸಿರು. ಬೀಜಾಕ್ಷರ ಯಂ. ಹನ್ನೆರಡು ಕಮಲಗಳು - ಇದರ ವಿನ್ಯಾಸ. ಅನಾಹತ ಚಕ್ರವು ತೈಮಾಸ್ ಗ್ರಂಥಿಯೊಂದಿಗೆ ಸಂಬಂಧ ಹೊಂದಿದೆ. ಈ ಚಕ್ರ ಸಾಧನೆಯಿಂದ ಪ್ರೇಮ, ಶಾಚಿತಿ, ಶುದ್ಧ ಸೌಚಿದರ್ಯ, ಶುದ್ಧ ಸತ್ಯ, ನೈರ್ಮಲ್ಯ ಯೋಗಕ್ಷೇಮ ಹಾಗೂ ಮಿತ್ರ ಗುಣಗಳನ್ನು ಸ್ಫುರಿಸುತ್ತದೆ. ನಿಷ್ಕ್ರಿಯವಾದಲ್ಲಿ ಅಸ್ತಮಾ, ಶ್ವಾಸಕೋಶಕ್ಕೆ ಸಂಬಂಧಿಸಿದ ಸೈನಸ್ ಇತ್ಯಾದಿ ಕಾಯಿಲೆ, ರಕ್ತದೊತ್ತಡ, ಹೃದ್ರೋಗ, ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಮುದ್ರೆಗಳು: ವಾಯುಮುದ್ರೆ, ಹೃದಯ ಮುದ್ರೆ.
ಆಸನಗಳು: ಅರ್ಧಚಕ್ರಾಸನ, ಪರ್ವತಾಸನ, ತ್ರಿಕೋನಾಸನ ಕೆಲವು ಹಿಂದಕ್ಕೆ ಬಾಗುವ ಆಸನಗಳು. ಅರ್ಧಮತ್ಸ್ಯೇಂದ್ರಾಸನ, ವಕ್ರಾಸನ, ಧನುರಾಸನ, ಚಕ್ರಾಸನ, ಅಧೋ ಮುಖಶ್ವಾನಾಸನ. ಈ ಚಕ್ರ ತೆರೆಯಲು ಚಿನ್ಮುದ್ರೆಯೊಂದಿಗೆ ಸ್ಪಷ್ಟ ದನಿಯಲ್ಲಿ ಯಂ ಮಂತ್ರ ಪಠಣ ಮಾಡಬೇಕು.

*ವಿಶುದ್ಧಿ ಚಕ್ರ (ಗಂಟಲು ಚಕ್ರ): ಈ ಚಕ್ರವು ಗಂಟಲು ಪ್ರದೇಶದಲ್ಲಿದೆ. ಇದರ ಬಣ್ಣ ನೀಲಿ. ಬೀಜಾಕ್ಷರ ಹಂ ಹದಿನಾರು ದಳಗಳ ಕಮಲದ ಆಕಾರ ಹೊಂದಿದೆ. ಈ ವಿಶುದ್ಧಿ ಚಕ್ರ ಆಕಾಶ ತತ್ವವನ್ನು ಹೊಂದಿದೆ. ಸಾಧಕನಲ್ಲಿ ಶುದ್ಧ ಸೌಂದರ್ಯ, ಸತ್ಯ ನಿರ್ಮಲತೆ ಉಂಟಾಗುತ್ತದೆ. ಸಂವಹನ ಉತ್ತಮವಾಗುತ್ತದೆ.
ಮುದ್ರೆಗಳು: ವಿರುದ್ಧ ಮುದ್ರೆ, ಶಂಖ ಮುದ್ರೆ, ಸಹಜ ಶಂಖ ಮುದ್ರೆ, ಖೇಚರಿ ಮುದ್ರೆ.
ಆಸನಗಳು: ಸರ್ವಾಂಗಸನ, ಮತ್ಸ್ಯಾಸನ, ಉಷ್ಟ್ರಾಸನ, ಸೇತುಬಂಧ, ಭುಜಂಗಾಸನ, ಉಜ್ಜೀಯಿಲೀ, ಪ್ರಾಣಯಾಮ... ಇದು ಥೈರಾಯಿಡ್ ಗ್ರಂಥಿಯೊಂದಿಗೆ ಸಂಬಂಧ ಹೊಂದಿದೆ. ಇದರ ಕಾರ್ಯ ಕುಂಠಿತವಾದಾಗ ಗಂಟಲು ಸಂಬಂಧಿ ಕಾಯಿಲೆಗಳು ಬರುತ್ತದೆ. ಶೀತ, ನೆಗಡಿ, ಶ್ರವಣ ಸಂಬಂಧ ಕಾಯಿಲೆಗಳು ಬರುತ್ತದೆ. ಯಾವುದಾದರೊಂದು ಧ್ಯಾನದಲ್ಲಿ ಕುಳಿತು ಹಂ ಮಂತ್ರ ಪಠಣ. ಇದರ ಸಾಧನೆಗೆ ಪೂರಕ

*ಆಜ್ಞಾ ಚಕ್ರ (ಮೂರನೇ ಕಣ್ಣಿನ ಚಕ್ರ) (ಕ್ರಿಯಾ ಚಕ್ರ) ಲಲಾಟ
ಈ ಚಕ್ರ ಕಣ್ಣುಗಳೆರಡ ನಡುವೆ ಹಾಗೂ ಹುಬ್ಬಿನ ನಡುವೆ ಇರುತ್ತದೆ. ಇದು ಇಡಾ, ಪಿಂಗಳಾ, ಸುಪುಮ್ನಾ ನಾಡಿಗಳ ಮಿಲನವಾಗಿದೆ. ಈ ಚಕ್ರ ಇದರ ಬಣ್ಣ ಇಂಡಿಗೊ ನೀಲಿ. ಮಂತ್ರ - ಓಂಕಾರ ಹಾಗೂ ಇದು ಎರಡು ಕಮಲದಳಗಳ ರೂಪದಲ್ಲಿದೆ. ಆಜ್ಞಾ ಚಕ್ರವು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮನಸ್ಸನ್ನು ಕೇಂದ್ರೀಕರಿಸಲಾಗುತ್ತದೆ. ಸಂಕಲ್ಪ ಸಿದ್ಧಿಯಾಗುತ್ತದೆ. ದಿವ್ಯಶಕ್ತಿ, ಜ್ಞಾನ ಉದಯವಾಗುತ್ತದೆ.

ಈ ಚಕ್ರವು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ದೃಷ್ಟಿಯ ಕೊರತೆ, ತಲೆನೋವು, ರಾತ್ರಿ ಕುರುಡುತನ ಇತ್ಯಾದಿ ಉಂಟಾಗುತ್ತದೆ.
ಈ ಚಕ್ರಕ್ಕೆ ಸಂಬಂಧಿಸಿದ ಮುದ್ರೆಗಳು: ಪ್ರಾಣಮುದ್ರೆ, ಹಕಿನಿ ಮುದ್ರೆ.
ಆಸನಗಳು: ಶೀರ್ಷಾಸನ, ಶೀರ್ಷಾಸನದಲ್ಲಿ ಪದ್ಮಾಸನ, ಮತ್ಸ್ಯಾಸನ, ಯೋಗಮುದ್ರಾಸನ, ಅಧೋಮುಖ ಶ್ವಾನಾಸನ, ಸರ್ವಾಂಗಾಸನ, ಶಶಾಂಕಾಸನ, ತ್ರಾಟಕ ಕ್ರಿಯೆಗಳು, ನಾಡಿಶುದ್ಧಿ ಪ್ರಾಣಾಯಾಮ, ಧ್ಯಾನ.

*ಸಹಸ್ರಾರ ಚಕ್ರ (ಕಿರೀಟ ಚಕ್ರ) ಕರ್ಮರೋಗ ಚಕ್ರ
ಇದು ಪ್ರಧಾನ ಚಕ್ರವಾಗಿದೆ. ಇದು ತಲೆಯ ತುತ್ತ ತುದಿಗೆ, ಮೆದುಳಿನ ಮೇಲೆ ಬ್ರಹ್ಮರಂಧ್ರದ ಬಳಿ ಇದೆ. ಇದು ಮೆದುಳಿನ ಪೀನಿಯಲ್ ಗ್ರಂಥಿಯೊಂದಿಗೆ ಸಂಬಂಧ ಹೊಂದಿದ್ದು, ಮನಸ್ಸಿಗೆ ಸಂಬಂಧಿಸಿದ್ದಾಗಿದೆ. ಇದು ಸಹಸ್ರದಳ ಕಮಲವಾಗಿದೆ. ಬಣ್ಣ ನೇರಳೆ ಆಗಿದೆ. ಇದು ಆಂತರಿಕ ಬುದ್ಧಿವಂತಿಕೆ, ದೇಹದ ಸಾವು ಮೊದಲಾದ ವಿಷಯಗಳನ್ನು ಒಳಗೊಂಡಿದೆ.

ಈ ಚಕ್ರ ಸಾಧನೆಯಿಂದ ಮನಸ್ಸು ಆನಂದಮಯವಾಗುತ್ತದೆ, ಮಾನವ ಶೋಕಮುಕ್ತನಾಗುತ್ತಾನೆ, ಪರಮಜ್ಞಾನಿ ಹಾಗೂ ತ್ರಿಕಾಲದರ್ಶಿಯೂ ಆಗುತ್ತಾನೆ. ಇದರ ಕಾರ್ಯಕ್ಷಮತೆ ಕ್ಷೀಣವಾದಾಗ, ಖಿನ್ನತೆ, ಮಾನಸಿಕ ದೌರ್ಬಲ್ಯ, ಓದು ಬರಹದಲ್ಲಿ ಹಿನ್ನಡೆ ಉಂಟಾಗುತ್ತದೆ.

ಮುದ್ರೆಗಳು: ಶೂನ್ಯ ಮುದ್ರೆ, ಕಮಲ ಮುದ್ರೆ, ಧ್ಯಾನ ಮುದ್ರೆ.
ಯೋಗಾಸನಗಳು: ಶೀರ್ಷಾಸನ, ಪದ್ಮಾಸನ, ಬದ್ಧ ಪದ್ಮಾಸನ, ಯೋಗ ಮುದ್ರಾಸನ ಮತ್ತು ಧ್ಯಾನ. ಬಾಬಾಮುದ್ರೆಯಲ್ಲಿ ಸಾಧನೆ ಮಾಡಬಹುದು. ಈ ಚಕ್ರಗಳ ಸಮತೋಲನಕ್ಕೆ ಸುಸ್ಥಿತಿಗೆ ಯೋಗ ಮುದ್ರೆ, ಪ್ರಾಣಾಯಾಮ, ಧ್ಯಾನ, ಮಂತ್ರಪಠಣ ಹಾಗೂ ಬಣ್ಣಗಳ ಚಿಕಿತ್ಸೆ ಇತ್ಯಾದಿ ಸಹಾಯವಾಗುತ್ತದೆ.

(ಮಾಹಿತಿಗೆ:
*ಪದ್ಮನಾಭ* *9964217206.8277448809*)

01/03/2020

ಧ್ಯಾನ ಹಾಗೂ ಪ್ರಣಾಯಮದಿಂದ ದೇಹ ಹಾಗೂ
ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಿ.

01/03/2020

kundalini

07/02/2020

gandari vidye.antarchakshu vidye

05/02/2020

ಗಾಂಧಾರಿ ವಿದ್ಯೆ.ಅಂತರ್ ಚಕ್ಷು ವಿದ್ಯೆ

Videos (show all)

ಗಾಂಧಾರಿ ವಿದ್ಯೆ
ಗಾಂಧಾರಿ ವಿದ್ಯೆ
ಗಾಂಧಾರಿ ವಿದ್ಯೆ
ಗಾಂಧಾರಿ ವಿದ್ಯೆ

Telephone

Website