Shri. M G Shastri-Retd. Teacher- Author, Poet

Shri. M G Shastri-Retd. Teacher- Author, Poet

Shri. M.G.Shastri is a retired teacher. He has served the Government Of India for 33 years as a Trained Graduate Teacher in Central School.

Post retirement he also served Rotary High School Kushalnagar as Principal.

26/01/2023
14/01/2023

HAPPY MAKARA SANKRAMANA FESTIVAL TO YOU ALL.

24/09/2021

Wishing you very happy Birthday 🌺💐👍

02/08/2021

"ಮೈಸೂರು ಜಿಲ್ಲಾ ಬರಹಗಾರರ ಬಳಗ,ಮೈಸೂರು"
ಸ್ಪರ್ಧಾ ಸಂಖ್ಯೆ:೩
ದಿನಾಂಕ:೩೧-೦೭-೨೦೨೧
ಪ್ರಕಾರ:ಕವನ(ವೃತ್ಯನುಪ್ರಾಸ)
ವಿಷಯ:ನಿಮ್ಮಿಷ್ಟ ದೈವ

ಶೀರ್ಷಿಕೆ: * ನಂದ ಗೋಪಾಲ *

ನಂದ ನಂದನಕಂದ ನಂದಗೋಪಾಲ.
ನಂದ,ಮುಕುಂದ,ಕಂದ ಬಾಲಗೋಪಾಲ.
ದೇವ ದೇವರ ನಂದ,ಬಾಲಗೋಪಾಲ.
ನವನೀತ ಚೋರ,ತುಂಟ,ಬಾಲಗೋಪಾಲ.(೧)

ನಯನ ಮೋಹನ ಹರಿ,ನಂದಗೋಪಾಲ.
ಮುರಳಿ ಮನೋಹರ,ಬಾಲಗೋಪಾಲ.
ಚಂದಿರವದನ ಕಂದ,ನಂದಗೋಪಾಲ.
ಗೋಪಿಕಾಪ್ರಿಯ,ಬಾಲಗೋಪಾಲ.(೨)

ವಸುದೇವ ಸುತ,ನಂದಗೋಪಾಲ.
ಕಂಸ,ಚಾನೂರ ಮರ್ಧನ,ಬಾಲಗೋಪಾಲ.
ದೇವಕಿ ಪರಮಾನಂದ,ನಂದಗೋಪಾಲ
ತುಂಟಾಟಗಳ ಪ್ರಿಯ,ಮುದ್ದುಗೋಪಾಲ.(೩)

ದೇವಕಿಗರ್ಭ ಸಂಜಾತ, ಬಾಲಗೋಪಾಲ.
ಗೋವರ್ಧನಗಿರಿಯ ಎತ್ತಿದ ನಂದಗೋಪಾಲ.
ಗೋವುಗಳಾ ರಕ್ಷಕ,ಶಿಷ್ಟಗೋಪಾಲ.
ಮಾಯಾ ಪೂತನಿಯ ಕೊಂದ, ನಂದಗೋಪಾಲ.(೪)

ಸುಧಾಮನ ಆಪ್ತಮಿತ್ರ,ಬಾಲಗೋಪಾಲ.
ಪಾಂಡವರಿಗೆ ಪರಮ ಪವಿತ್ರ,ನಂದಗೋಪಾಲ.
ಸೌಭದ್ರಗೆ ಅಂಬರವ ನೀಡಿದ,ಕರುಣಾಳು ಗೋಪಾಲ.
ಕೊಳಲನೂದುತ ಬಂದ,ನಂದಗೋಪಾಲ.(೫)

ಭಕುತರ ಮೊರೆಯ ಪೊರೆವ,ನಂದಗೋಪಾಲ.
ಹೊಳೆವ ಪೀತಾಂಬರಧಾರಿ,ನಂದಗೋಪಾಲ.
ಕೈಯಲಿ ಕೊಳಲು,ಕಾಲೊಳು ಗೆಜ್ಜೆ ಇರುವ ಬಾಲಗೋಪಾಲ.
ಎಲ್ಲರಾ ಕರುಣೆಯಿಂ ಪೊರೆವ,ನಂದಗೋಪಾಲ.(೬)

ರಚನೆ:ಎಂ.ಜಿ.ಶಾಸ್ತ್ರಿ,
9448933188

ಸ್ಪರ್ಧೆಯ ಪಲಿತಾಂಶ:-

ಪ್ರಥಮ ಸ್ಥಾನ:- ಸಿ.ಎನ್. ಭಾಗ್ಯಲಕ್ಷ್ಮಿ ನಾರಾಯಣ್
ಮತ್ತು ಎಂ. ಜಿ ಶಾಸ್ತ್ರಿ.

ದ್ವಿತೀಯ ಸ್ಥಾನ:- ಅಶ್ವತ್ಥನಾರಾಯಣ್
ಮತ್ತು ರತ್ನ
ತೃತೀಯ ಸ್ಥಾನ:- ಸುಮತಿ ಮತ್ತು
ವಂದನ ಮುರಳಿ.

ಸ್ವರಾ
(ಸರಸ್ವತಿ ರಾಮಚಂದ್ರ)

Photos from Shri. M G Shastri-Retd. Teacher- Author, Poet's post 07/07/2021

ಈ ಶುಭಸಂದರ್ಭದಲ್ಲಿ ನನ್ನ ಕವನವನ್ನು ಶಿವಮೊಗ್ಗ ಬರಹಗಾರರ ಗೂಗಲ್ ಮೀಟ್ನಲ್ಲಿ ವಾಚಿಸಿದೆ.

04/07/2021

ಈ ಕವನವನ್ನು ಮೈಸೂರು ಬರಹಗಾರರ ಗೂಗಲ್ ಮೀಟ್ನಲ್ಲಿ ಇಂದು ಸಂಜೆ ವಾಚಿಸಿದೆ.

27/05/2021

ಪ್ರಕೃತಿ ವಿಷಯದ ಬಗ್ಗೆ ಕನ್ನಡಕವಿಗುಚ್ಛ ನಡೆಸಿದ ಸ್ಪರ್ಧೆಯಲ್ಲಿ ವಿಜೇತವಾದ ನನ್ನ ಕವನ.

06/05/2021

ನನ್ನ ನಾಲ್ಕು ಕಾವ್ಯ ಸಂಕಲನ ಪುಸ್ತಕಗಳ ಬಗ್ಗೆ ಶ್ರೀ ಜಗದೀಶಶರ್ಮ ಸಂಪ ರವರ ಅಭಿಪ್ರಾಯ:

"ನನಗೆ ಮೊದಲಿಗೆ ಅಚ್ಚರಿ ತಂದಿದ್ದು ಈ ಬರಹಗಳ ವಸ್ತುವೈವಿಧ್ಯ. ಮೊದಲ ಸಂಕಲನದ ಮೊದಲ ಸಾಲಿನಿಂದ ನಾಲ್ಕನೆಯ ಸಂಕಲನದ ಕೊನೆಯ ಸಾಲಿನವರೆಗೆ ಓದುತ್ತಾ ಸಾಗಿದರೆ ಇವರು ಮುಟ್ಟದ ವಿಷಯವೇ ಇಲ್ಲವಲ್ಲ ಎನಿಸುತ್ತದೆ. ಹೀಗೆ ಸೃಷ್ಟಿಯ ಅಸಂಖ್ಯ ವಿಷಯಗಳ ಕುರಿತು ಬರೆಯಬೇಕೆಂದರೆ ಇವೆಲ್ಲವುಗಳ ಬಗೆಗೆ ಯೋಚನೆ ಹರಿಯಬೇಕು. ಹಾಗಾಗಲು ವ್ಯಾಪಕವಾಗಿ ಬದುಕನ್ನು ಅವಲೋಕಿಸಿರಬೇಕು. ಆ ಅವಲೋಕನ ಮನಸ್ಸಿನಲ್ಲಿ ನಿರ್ದಿಷ್ಟ ರೂಪ ತಳೆಯಬೇಕು. ಒಟ್ಟಿನಲ್ಲಿ ದಟ್ಟವಾದ ಜೀವನಾನುಭವ ಬೇಕು.

ಶ್ರೀ ಎಂ.ಜಿ.ಶಾಸ್ತ್ರಿಗಳು ಶಿಕ್ಷಕರಾಗಿದ್ದವರು. ಸಾವಿರಾರು ಜನ ಅವರ ಎದುರು ವಿದ್ಯಾಕಾಂಕ್ಷಿಗಳಾಗಿ ಕುಳಿತಿದ್ದಾರೆ. ವಿಭಿನ್ನ ಮನೋಭಾವದ ಅವರೆಲ್ಲರೊಂದಿಗೆ ನಿರಂತರ ಸಂವಹನ ನಡೆಸಿದ್ದಾರೆ ಶಾಸ್ತ್ರಿಗಳು. ಜೊತೆಗೆ ಆ ಮನಸ್ಸುಗಳನ್ನು ಬೆಳೆಸುವ ಪ್ರಯತ್ನವನ್ನೂ ಮಾಡಿಕೊಂಡು ಬಂದಿದ್ದಾರೆ. ಇದು ಅವರ ಮನಸ್ಸನ್ನು ವಿಶ್ವತೋಮುಖವಾಗಿಸಿದೆ. ಬದುಕಿನ ಎಲ್ಲ ಸಂಗತಿಗಳೊಂದಿಗೆ ಅವರನ್ನು ಮುಖಾಮುಖಿಯಾಗಿಸಿದೆ. ಇದರ ಪರಿಣಾಮವೇ ಅವರ ಈ ಅವಗಾಹನೆ.

ನನಗೆ ಮೆಚ್ಚು ಎನಿಸಿದ್ದು ಅವರ ಸಕಾರಾತ್ಮಕತೆ. ಅವರು ಎಲ್ಲವನ್ನೂ ಸಹಾನುಭೂತಿಯಿಂದ ನೋಡುತ್ತಾರೆ. ಅವರ ಕಣ್ಣ ನೋಟಕ್ಕೆ ಎಲ್ಲವೂ ಒಳಿತು ಮತ್ತು ಒಳಿತಾಗಬೇಕಾದದ್ದು. ಸೃಷ್ಟಿಯನ್ನು ಅವರು ಸತ್ಯ-ಶಿವ-ಸುಂದರವಾಗಿ ಕಾಣಬಯಸುತ್ತಾರೆ. ಅದಕ್ಕೆ ಅವರ ಅಸಂಖ್ಯ ಸಾಲುಗಳು ನಿದರ್ಶನವಾಗಿ ಕಣ್ಣೆದುರು ಬಂದು ನಿಲ್ಲುತ್ತವೆ.

ಪ್ರಕೃತಿ ಅವರ ಉಪಾಸನೆಯ ಅಂಗಳ. ಹಾಗಾಗಿಯೇ ಅವರು ಮತ್ತೆ ಮತ್ತೆ ಮರ, ಗಿಡ, ಹಕ್ಕಿ, ನದಿ, ಬೆಟ್ಟ ಎಲ್ಲದರ ಕುರಿತು ಹೇಳುತ್ತಲೇ ಸಾಗುತ್ತಾರೆ. ಪ್ರಕೃತಿಯೊಂದಿಗೆ ತಾದಾತ್ಮ್ಯ ಸಾಧಿಸಲು ಹಪಹಪಿಸುತ್ತಾರೆ.

ಬದುಕಿನಲ್ಲಿ ಸಂಬಂಧಗಳ ಪ್ರಾಮುಖ್ಯ ಎಷ್ಟೆಂಬುದನ್ನು ಸ್ಪಷ್ಟೀಕರಿಸಲು ಅವರು ಇನ್ನಿಲ್ಲದ ಪ್ರಯತ್ನ ಹಾಕುತ್ತಾರೆ. ಹಾಗಾಗಿಯೇ ಅಮ್ಮ, ಅಕ್ಕ, ತಂಗಿ, ಮಡದಿ ಎಲ್ಲರೂ ಸಾಲು ಸಾಲಾಗಿ ಇಲ್ಲಿ ಹೊಳೆಯುತ್ತಾರೆ.

ನಿರ್ಲಕ್ಷಿತರು, ದುರ್ಬಲರು ಅವರ ಸ್ಪಂದನಕ್ಕೆ ಎಡೆಯಾಗಿದ್ದಾರಾಗಿ ಅವರ ಕುರಿತು ಸಹಾನುಭೂತಿಯೊಂದಿಗೆ ಜಗತ್ತು ಅವರನ್ನು ಹೇಗೆ ಪರಿಭಾವಿಸಬೇಕೆಂದು ಮೃದುವಾಗಿ ಹೇಳುತ್ತಾರೆ.

ಸಹಬಾಳ್ವೆಯ ಅವರ ಕನಸು ಚೇತೋಹಾರಿ. ಜಗತ್ತಿನ ಪ್ರತಿ ವ್ಯಕ್ತಿಯೂ ಸಮಕಾಲದಲ್ಲಿ ಸಮರ್ಥನೂ ದುರ್ಬಲನೂ ಆಗಿರುತ್ತಾನೆ ಎನ್ನುವುದು ಅವರಿಗೆ ಗೊತ್ತು. ಹಾಗಾಗಿ ಪರಸ್ಪರ ಸಹಕಾರಿಯಾಗಿ ಬಾಳ್ವೆ ನಡೆಸಬೇಕಾದದ್ದು ಆವಶ್ಯಕ ಮಾತ್ರವಲ್ಲ ಅನಿವಾರ್ಯ ಕೂಡಾ. ‘ಕುರುಡ, ಕಿವುಡ, ಮೂಕ’ ಎನ್ನುವ ಪದ್ಯದ ಸಾಲುಗಳು ಇದನ್ನು ಚೆನ್ನಾಗಿ ಮನದಟ್ಟು ಮಾಡುತ್ತವೆ. ನನಗೆ ಆ ಕಲ್ಪನೆ ಬಹಳವಾಗಿ ಹಿಡಿಸಿತು. ಸಹಬಾಳ್ವೆಯೇ ಜೀವರಸಾಯನ ಎಂಬ ಅವರ ಮಾತು ಅವರ ವ್ಯಕ್ತಿತ್ವವನ್ನೇ ತೋರಿಸಿಕೊಟ್ಟಿತು.

ಶ್ರೀ ಎಂ.ಜಿ.ಶಾಸ್ತ್ರಿಗಳ ಈ ಸದಭಿರುಚಿಯ ಸತ್ಕಾರ್ಯ ನಿರಂತರ ಸಾಗುತ್ತಿರಲಿ, ಅದು ಅವರಿಗೂ ಸಮಾಜಕ್ಕೂ ಜೀವರಸಾಯನವೇ ಸರಿ ಎಂಬ ಸದಾಶಯದೊಂದಿಗೆ ಅವರಿಗೆ ನನ್ನ ವಂದನೆ.”

ಶ್ರೀ ಜಗದೀಶಶರ್ಮ ಸಂಪರ ಕಿರು ಪರಿಚಯ:

೧. ನೂರಾರು ರಾಷ್ಟ್ರೀಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಆಯೋಜನೆಯಲ್ಲಿ ಭಾಗಿ.
೨. ಕಥೆಯೆಲ್ಲ ಜೀವನ, ಹೂಬಾಣ, ಮಹಾಭಾರತ ಹೇಳಿಯೂ ಹೇಳದ್ದು, ಕಥಾಸರಸಿ, ಅಂದಿಗಷ್ಟು ಇಂದಿಗಿಷ್ಟು, ಮಹಾನಂದಿ, ಚುರುಕು-ಚಾವಡಿ, ಸಂತತ್ರಿವಿಕ್ರಮ,ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ, ಸಂಪನಿನಾದ, ದಿವ್ಯಜೀವನ ಇವು ಪ್ರಕಟಿತ ಕೃತಿಗಳು.
೩.ಕನ್ನಡ ಪ್ರಭ ಮತ್ತು ಹೊಸದಿಗಂತ ಪತ್ರಿಕೆಗಳಲ್ಲಿ ಅಂಕಣಕಾರ.
೪. ಪ್ರಕೃತ ಜ್ಞಾನವಿಜ್ಞಾನ-ಅಧ್ಯಯನಕೇಂದ್ರದ ನಿರ್ದೇಶಕ.

05/05/2021

ಉಂಡಾಡಿ ಗುಂಡಾ - ಎಲ್ಲವದಕ್ಕೂ ದಂಡ..😉

29/04/2021

ಕವಿ ಸಮಯ..ಆನಂದಮಯ😀.. ಮೊದಲ ಪುಸ್ತಕದ ನಾಲ್ಕನೇ ಕವಿತೆ..ಓದಿ ಆನಂದಿಸಿ..

Photos from Shri. M G Shastri-Retd. Teacher- Author, Poet's post 19/04/2021

ಡಾ|| ಜಿ. ಎಲ್. ಹೆಗಡೆಯವರು, ವಿಶ್ರಾಂತ ಪ್ರೊಫೆಸರ್, ಡಾ|| ಎ. ವಿ. ಬಾಳಿಗ ಕಾಲೇಜು, ಕುಮಟಾ, ಉತ್ತರ ಕನ್ನಡ, ನನ್ನ ಮೊದಲ ಕವನ ಸಂಕಲನದ ಮುನ್ನುಡಿ ಬರೆದಿರುತ್ತಾರೆ. ಮುನ್ನುಡಿಯನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದೇನೆ..

14/04/2021

Best wishes from Shri Joshiji of TV 5 news channel..

14/04/2021

Best wishes from Justice Arali Nagaraj, former judge, Karnataka High court.

14/04/2021

Best wishes from Shri. Nadoja Dr. Mahesh Joshiji, former Additional Director General of Doordarshan, Delhi & South India on the book release function at Gokarna.

Photos from Shri. M G Shastri-Retd. Teacher- Author, Poet's post 14/04/2021

ನನ್ನ ಸ್ವಗ್ರಾಮವಾದ ಊರಕೇರಿ ಊರಿನಲ್ಲಿ ಇರುವ ಸ್ವಯಂಭು ವಿನಾಯಕ ಮಂದಿರದಲ್ಲಿ ಪುಸ್ತಕಗಳನ್ನು ದೇವರಿಗೆ ಅರ್ಪಿಸಿ ತದನಂತರ ನಡೆದ ಸಣ್ಣ ಕಾರ್ಯಕ್ರಮದಲ್ಲಿ ನಮ್ಮ ಗ್ರಾಮದ ಪ್ರತಿಷ್ಠಿತರು ಹಾಗೂ ನನ್ನ ಮೊದಲ ಪುಸ್ತಕದ ಮುನ್ನುಡಿ ಬರೆದಂತಹ ಶ್ರೀ ಡಾಕ್ಟರ್ ಜಿ. ಏಲ್. ಹೆಗಡೆಯವರ ಸಮ್ಮುಖದಲ್ಲಿ ಕಾವ್ಯವಾಚನದ ಸವಿಯನುಂಡ ಹಿತೈಷಿಗಳು.

Photos from Shri. M G Shastri-Retd. Teacher- Author, Poet's post 13/04/2021

Shri Jagadguru Shankaracharya Shrimad Raghaveshwara Bharathi Swamyji releasing my books today at Ashoke, Gokarna. Feeling blessed..Finally one milestone achieved. Now request everyone to read my book..🙏🙏

Photos from Shri. M G Shastri-Retd. Teacher- Author, Poet's post 12/04/2021

ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮಿಜಿ, ಶ್ರೀ ರಾಮಚಂದ್ರಾಪುರ ಮಠದ 36ನೆ ಮಠಾಧೀಶರು, ನಾನು ಬರೆದ ನಾಲ್ಕು ಪುಸ್ತಕಗಳನ್ನು (ಕವನ ಸಂಕಲನಗಳು) ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಅಂದರೆ 13/04/2021 ರಂದು, ಅಶೋಕೆ, ಗೋಕರ್ಣದಲ್ಲಿ ಮಧ್ಯಾಹ್ನ 12.30pm ಗೆ ಲೋಕಾರ್ಪಣಗೊಳಿಸಿ ಆಶೀರ್ವದಿಸಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಂಕಲಿಸಲ್ಪಟ್ಟ ಕವಿತೆಗಳನ್ನು ಮೊದಲಬಾರಿಗೆ ಲೋಕಾರ್ಪಣಗೊಳಿಸುವದರ ಮೂಲಕ ನನ್ನ ಬಹಳ ದಿನದ ಕನಸು ನನಸಾಗುತ್ತಿದೆ. ಈ ಶುಭಸಂದರ್ಭದಲ್ಲಿ ನನ್ನನ್ನು ಆಶೀರ್ವದಿಸುವಂತೆ ಎಲ್ಲರಿಗೂ ವಿನಂತಿಸಿ, ಬಿಡುಗಡೆಯ ನಂತರ ಪ್ರತಿಯೊಬ್ಬರೂ ತಪ್ಪದೆ ಈ ಕವನ ಸಂಕಲನವನ್ನು ಓದಿ ನನ್ನನ್ನು ಪ್ರೋತ್ಸಾಹಿಸಬೇಕೆಂದು ವಿನಂತಿಸುತ್ತೇನೆ.

Photos from Shri. M G Shastri-Retd. Teacher- Author, Poet's post 12/04/2021

Jagadguru Shri Shankaracharya Srimad Raghaveshwara Bharathi Swamiji, 36th Pontiff of Shri Ramachandrapura Math will be releasing four books written by me (Kannada poems) on the auspicious occasion of Ugadi ie on 13th April, 2021 at Ashoke, Gokarna at 12.30pm with his blessings.This is my first set of books written over the last few years which has been compiled into four books. Request everyone to bless me on this auspicious occasion. Post release, request everyone to read the same and bless me.

Website