INC BTM Layout constituency

INC BTM Layout constituency

Contact information, map and directions, contact form, opening hours, services, ratings, photos, videos and announcements from INC BTM Layout constituency, Political organisation, .

13/12/2020

ಗೆ,
ಶ್ರೀ BS Yediyurappa
ಸನ್ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ

ಶ್ರೀ Laxman Savadi,
ಸನ್ಮಾನ್ಯ ಉಪ-ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ.

ವಿಷಯ: ಸಾರ್ವಜನಿಕರ, ಸಾರಿಗೆ ನೌಕರರ
ಹಿತದೃಷ್ಟಿಯಿಂದ ಸಾರಿಗೆ ನೌಕರರ ಮುಷ್ಕರವನ್ನು ಆದಷ್ಟು ಬೇಗ ಪರಿಹರಿಸುವ ಬಗ್ಗೆ.

ಮಾನ್ಯರೇ,

ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರವನ್ನು ಆದಷ್ಟು ಬೇಗ ಸರ್ಕಾರ ಪರಿಹರಿಸಬೇಕಾಗಿರುವುದು ಸಾರಿಗೆ ನೌಕರರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅವಶ್ಯಕವಾಗಿದೆ‌.

ಸಾರಿಗೆ ನೌಕರರ ಎಲ್ಲಾ ಬೇಡಿಕೆಗಳನ್ನು ಒಂದೇ ಸಮಯದಲ್ಲಿ ಪರಿಹರಿಸಲಾಗುವುದಿಲ್ಲವೆಂಬುದು ತಿಳಿದ ವಿಷಯ. ಆದರೆ ಸಾರಿಗೆ ನೌಕರರ
ವೇತನ ತಾರತಮ್ಯ, ಭತ್ಯೆ ,ಮೇಲಾಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಡೆ, ರಜೆಯ ಸಮಸ್ಯೆ,
ಇನ್ನಿತರ ತ್ವರಿತವಾಗಿ ಪರಿಹರಿಸಬಹುದಾದಂತ ಸೇವಾ ಸೌಲಭ್ಯಗಳನ್ನು ಕೂಡಲೇ ಪರಿಹರಿಸಲೇಬೇಕು.

ಈ ಕಾರ್ಮಿಕರನ್ನು ಸಂಘಟಿಸುತ್ತಿರುವ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು
ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಶಮನಗೊಳಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಇದರಲ್ಲಿ ಯಾವುದೇ ಪ್ರತಿಷ್ಠೆ ಮತ್ತು ಜಿದ್ದು ತೋರಿಸುವುದು ಸಲ್ಲ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಗ್ರಗಣ್ಯ ರಸ್ತೆ ಸಾರಿಗೆ ನಿಗಮಗಳನ್ನಾಗಿ ಗುರುತಿಸಿಕೊಂಡಿವೆ.

ತಾತ್ಕಾಲಿಕವಾಗಿ ಸಾರಿಗೆ ವ್ಯವಸ್ಥೆಯನ್ನೇ ಖಾಸಗಿಯವರಿಗೆ ವಹಿಸಲು ಮುಂದಾಗುತ್ತಿರುವುದು ವಿನಾಶಕಾರಿಯಾದ ವ್ಯವಸ್ಥೆಯಾಗಲಿದೆ‌.

ಆದ್ದರಿಂದ ಸರ್ಕಾರವು ಶೀಘ್ರ ಸಮಸ್ಯೆ ಬಗೆಹರಿಸುವ ಬಗ್ಗೆ ಗಮನಹರಿಸಬೇಕು.

ವಂದನೆಗಳೊಂದಿಗೆ ,

ತಮ್ಮ ವಿಶ್ವಾಸಿ,
ರಾಮಲಿಂಗಾರೆಡ್ಡಿ
ಮಾಜಿ ಗೃಹ ಮತ್ತು ಸಾರಿಗೆ ಸಚಿವರು
ಶಾಸಕರು- ಬಿಟಿಎಂ ವಿಧಾನಸಭಾ ಕ್ಷೇತ್ರ

To,
Sri B.S. Yeddyurappa
Hon’ble Chief Minister,
Government of Karnataka

Sri Laxman Savadi,
Hon’ble Deputy Chief Minister and Transport Minister, Government of Karnataka

Subject: To resolve the Transport Workers' Strike as soon as possible in the interests of the Transport Employees and the Public.

It is essential that the government resolves the strike by the transport corporation employees as soon as possible in the best interest of the transport employees and the public.

We all know that not all the demands of the transport employees can be addressed at the same time. But the wage discrimination problem, allowance, harassment by higher authorities, the holiday issue and other such issues that can be quickly resolved must be addressed immediately.

It is imperative to take the leaders of these transport employees into confidence and have a discussion with them to ease the problems being caused to the public. This is not a matter of pride or winning, real people’s lives are being affected.

The Karnataka State Road Transport Corporation is recognised as one of the leading road transport corporations nationally as well as internationally.

Temporarily handing over the transport system to private parties would be a destructive move.
Therefore, the government must focus on solving this problem at the earliest.

Regards,
Yours faithfully,
Ramalinga Reddy,
Former Home & Transport Minister
MLA - BTM Assembly Constituency

Indian National Congress Indian National Congress - Karnataka

Photos from INC BTM Layout constituency's post 12/12/2020

ಬಿಟಿಎಂ ಲೇಔಟ್ ವಾರ್ಡ್'ನ ಎನ್.ಎಸ್ ಪಾಳ್ಯ'ದಲ್ಲಿ ಫಲಾನುಭವಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನು ಇಂದು ವಿತರಿಸಿದೆ.

ಕೋವಿಡ್ ಲಾಕ್'ಡೌನ್'ನ ನಂತರ ಬೀದಿ ಬದಿ ವ್ಯಾಪಾರಿಗಳಿಗೆ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಗುರುತಿನ ಚೀಟಿಗಳನ್ನು ಪಡೆಯುವುದರಿಂದ ವ್ಯಾಪಾರ ನಡೆಸಲು ಸುಗಮವಾಗುತ್ತದೆ.

ಜೊತೆಗೆ, ಅಂಬೇಡ್ಕರ್ ಕಾಲೋನಿಯ ವಸತಿ ಸಂಕೀರ್ಣಕ್ಕೆ ಭೇಟಿ ನೀಡಿ ನಿವಾಸಿಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಸೂಚಿಸಿದೆ.

ಇದೇ ಸಂದರ್ಭ ನಿವಾಸಿಗಳು ಸಂಕೀರ್ಣದ ಕಟ್ಟಡಕ್ಕೆ ಪೇಂಟಿಂಗ್ ಮಾಡಿಸುವಂತೆ, ನೀರಿನ ಟ್ಯಾಂಕ್'ಗಳ ದುರಸ್ಥಿಗೊಳಿಸುವಂತೆ ಮತ್ತು ಬಡಾವಣೆಯ ಆವರಣದಲ್ಲಿ ಹೊಸದಾಗಿ ದೇವಸ್ಥಾನವನ್ನು ನಿರ್ಮಿಸುವಂತೆ ಬೇಡಿಕೆ ಸಲ್ಲಿಸಿದರು.

ಈ ಎಲ್ಲ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೇನೆ.

ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಜಿ.ಎನ್.ಆರ್ ಬಾಬು, ಶ್ರೀ ನಾಗರಾಜ್, ಶ್ರೀ ವೆಂಕಟೇಶ್, ಶ್ರೀ ಗೋವಿಂದ, ಶ್ರೀ ಬಾಲಕೃಷ್ಣ, ಶ್ರೀ ರಂಗಧಾಮ, ಶ್ರೀ ಬನ್ನೂರ್, ಶ್ರೀ ಶಾಮಣ್ಣ, ಶ್ರೀ ಕೆಂಪಣ್ಣ, ಶ್ರೀ ಮೂರ್ತಿ, ಶ್ರೀ ನಾರಾಯಣಸ್ವಾಮಿ, ಶ್ರೀ ಪ್ರದೀಪ್, ಶ್ರೀ ಯೋಗೇಶ್, ಶ್ರೀಮತಿ ಶುಭ, ಶ್ರೀ ನಾಗೇಂದ್ರ, ಶ್ರೀ ಈರಮಣಿ, ಶ್ರೀ ತಂಗರಾಜು, ಶ್ರೀ ವೇಲು ಮತ್ತು ಇತರರು ಹಾಜರಿದ್ದರು.

Distributed ID cards to the street vendor beneficiaries that were identified by BBMP in NS Palya, BTM Layout Ward 176 today.

Also, Visited the residential quarters in Ambedkar Colony, BTM Layout Ward and addressed the grievances of the residents.

Residents have requested for painting of the building, for the rectification of overhead tanks leakage and also for the construction of a temple on the premises.

I have agreed to get these works done at the earliest.

Ex-Corporator Sri GNR Babu, Sri Nagaraj, Sri Venkatesh, Sri Govinda, Sri Balakrishna, Sri Rangadama, Sri Bannur, Sri Shamanna, Sri Kempanna, Sri Murthy, Sri Narayanswamy, Sri Pradeep, Sri Yogesh, Smt Subha, Sri Nagendra, Sri Eremani, Sri Thangraju, Sri Velu and others were present.

Photos from INC BTM Layout constituency's post 12/12/2020

ಕೋರಮಂಗಲ ವಾರ್ಡ್ 151ರ ಜ್ಯೋತಿ ನಿವಾಸ್ ಕಾಲೇಜು ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದೆ.

ವೈಟ್ ಟಾಪ್'ಪಿಂಗ್ ಕಾಮಗಾರಿಗಾಗಿ ರಸ್ತೆಯನ್ನು ಸಮತಟ್ಟು ಮಾಡುವ ಸಲುವಾಗಿ ನಡೆದ ಮೊದಲ ಸ್ತರದ ಡಾಂಬರೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಹಾಗೆಯೇ, ಕೋರಮಂಗಲ 80ಅಡಿ ರಸ್ತೆಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಪರಿಶೀಲನೆ ನಡೆಸಿದೆ.

126, (1600mm DIA) ಹ್ಯೂಮ್ ಪೈಪ್‌ಗಳ ಪೈಕಿ ಈಗಾಗಲೇ 110 ಪೈಪ್‌ಗಳನ್ನು ಅಳವಡಿಸುವ (ಮೊದಲನೇ ಹಂತ) ಕೆಲಸ ಪೂರ್ಣಗೊಂಡಿದೆ.
ಗುತ್ತಿಗೆದಾರರಿಗೆ ಸರಿಯಾದ ಪ್ರಮಾಣದಲ್ಲಿ ಕ್ವಾರಿ ಡಸ್ಟ್ ಬಳಸಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ.

2018ರಲ್ಲಿ ನಾನು ಸಾರಿಗೆ ಸಚಿವನಾಗಿದ್ದ ಸಂದರ್ಭ ಈ ಒಳಚರಂಡಿ ಕಾಮಗಾರಿಗಾಗಿ ರಾಜ್ಯ ಸರ್ಕಾರದಿಂದ 23ಕೋಟಿ ರೂ ವಿಶೇಷ ಅನುದಾನ ಮಂಜೂರು ಮಾಡಿಸಿದ್ದೆ.

ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಚಂದ್ರಪ್ಪ, ಬ್ಲಾಕ್ ಅಧ್ಯಕ್ಷರಾದ ಶ್ರೀ ಗೋವರ್ಧನ್ ರೆಡ್ಡಿ, ಶ್ರೀ ಶಂಕರ್ ಶೆಟ್ಟಿ, SWD EE ಶ್ರೀ ಶರೀಫ್, ಗುತ್ತಿಗೆದಾರರಾದ ಶ್ರೀ ಮಿಥುನ್ ಮತ್ತು ಇತರರು ಹಾಜರಿದ್ದರು.

Visited Jyothi Nivas College Road in Koramangala Ward 151 today and inspected the ongoing road development work.

A layer of asphalting is getting completed to ensure road leveling in preparation for the white topping work that will be done.

Also, inspected the ongoing parallel drain work on 80ft Road.

Out of the 126 (1600mm Dia) Hume pipes that need to be laid, 110 pipes have been laid as of today (1st Phase).

When I was Transport Minister, I got ₹ 23 Crs approved in 2018, under Special Funds from the State Govt for this Parallel drain project.

I have instructed the contractor to back fill with quarry dust & consolidate properly.

Ex-Corporator Sri Chandrappa, Block President Sri Govardhan Reddy, Sri Shankar Shetty, SWD Executive Engineer Sri Shariff, Contractor Sri Mithun and others were present.

11/12/2020

Mr Tejasvi Surya,

You speak about Rohingya Muslims acquiring Voter IDs in BTM Layout.

I want to ask you, Bharatiya Janata Party (BJP) Govt is in power at the state & centre (6 years) why not take stringent action against such illegal activities?

I will fully support the cause to jail or deport them.

Get your govt to do it.



Indian National Congress Indian National Congress - Karnataka Narendra Modi Amit Shah Rahul Gandhi Indian Youth Congress

11/12/2020

ಮಾಜಿ ರಾಷ್ಟ್ರಪತಿ, 'ಭಾರತ ರತ್ನ' ಪ್ರಣಬ್ ಮುಖರ್ಜಿ ಅವರ ಜನ್ಮದಿನದಂದು ನನ್ನ ನಮನಗಳನ್ನು ಸಲ್ಲಿಸುತ್ತೇನೆ.

5 ದಶಕಗಳಿಗೂ ಮಿಕ್ಕಿದ ಸುದೀರ್ಘ ರಾಜಕೀಯ ಜೀವನದಲ್ಲಿ ವಿದೇಶಾಂಗ ಸಚಿವರಾಗಿ, ವಿತ್ತ ಸಚಿವರಾಗಿ ರಾಷ್ಟ್ರಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಅದಕ್ಕಾಗಿ ನಾವೆಲ್ಲರೂ ಅವರಿಗೆ ಆಭಾರಿಗಳಾಗಿದ್ದೇವೆ.

ಸ್ವಾತಂತ್ರ್ಯ ನಂತರ ಭಾರತ ಕಂಡ ಅಪರೂಪದ ರಾಜಕಾರಣಿಯಾದ ಪ್ರಣಬ್ ಮುಖರ್ಜಿ ಅವರು ನಿಜವಾಗಿಯೂ ಯುವ ನಾಯಕರುಗಳಿಗೆ ಮಾದರಿಯಾಗಿದ್ದಾರೆ.

Paying respects to Former President and Bharat Ratna Sri today on his birth anniversary.

As someone who played many key roles as the Minister of External Affairs, of Defense and of Finance before serving as the 13th President of India, his contribution to strengthening our nation’s polity is truly immense.

He is respected across political lines for his political career of 5 decades of valuable service which he served with the utmost honour and dignity. His imprint on India will not soon be forgotten.

Photos from INC BTM Layout constituency's post 10/12/2020

Inaugurated the newly built complex at Koramangala Club today (Est., cost ₹20 crores) and also felicitated the Ex-Presidents of the club Sri Vijay Raghav Reddy, Sri PV Shetty, Sri C Rajendra, Sri Anoop Shetty, Former Secretaries, Building Committee Members, Fundraising committee members and others on this occasion.

This new building block of the Club, well-equipped with upgraded facilities including a party hall, rooms, rooftop heated swimming pool, auditorium, snooker zone, gym, etc is now ready for use for members.

I congratulate Club President Sri Jairam as well as the office bearers and all executive members of the Club for this grand initiative. Under his leadership, Sri Jairam has made great efforts in modernising & developing the Club by improving its facilities and has really taken the Koramangala Club to greater heights for the members.

MP Sri Tejasvi Surya, Bommanahalli MLA Sri Reddy, Former Mayor Sri Manjunatha Reddy, Sri Chandrappa, Sri Narayana Gowda, Sri Radhakrishna and others were present.

ನೂತನವಾಗಿ ನಿರ್ಮಿಸಲಾದ ಕೋರಮಂಗಲ ಕ್ಲಬ್ ಸಂಕೀರ್ಣವನ್ನು ಇಂದು ಉದ್ಘಾಟಿಸಿದ ಕ್ಷಣ.
ಇದೇ ಸಂದರ್ಭ ಕ್ಲಬ್'ನ ಮಾಜಿ ಅಧ್ಯಕ್ಷರುಗಳಾದ ಶ್ರೀ ವಿಜಯ್ ರಾಘವ್ ರೆಡ್ಡಿ, ಶ್ರೀ ಪಿ.ವಿ ಶೆಟ್ಟಿ, ಶ್ರೀ ಸಿ.ರಾಜೇಂದ್ರ, ಶ್ರೀ ಅನೂಪ್ ಶೆಟ್ಟಿ, ಮಾಜಿ ಕಾರ್ಯದರ್ಶಿಗಳು, ಕಟ್ಟಡ ನಿರ್ಮಾಣ ಸಮಿತಿಯ ಸದಸ್ಯರು, ನಿಧಿಸಂಗ್ರಹ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

ಕ್ಲಬ್ ಹೌಸ್'ನ ನೂತನ ಕಟ್ಟಡವನ್ನು ಆಧುನಿಕವಾಗಿ ಸುಸಜ್ಜಿತಗೊಳಿಸಲಾಗಿದ್ದು ಪಾರ್ಟಿ ಹಾಲ್, ಜಿಮ್, ಸ್ನೂಕರ್ ಜೋನ್, ಮಹಡಿ ಮೇಲೆ ತಾಪಮಾನ ನಿಯಂತ್ರಿತ ಈಜುಕೊಳ ಮುಂತಾದ ಸೌಲಭ್ಯಗಳು ಸದಸ್ಯರ ಬಳಕೆಗೆ ಲಭ್ಯವಿದೆ.

ಇಷ್ಟು ದೊಡ್ಡ ಮಟ್ಟದ ಯೋಜನೆಯನ್ನು ಸಾಕಾರಗೊಳಿಸಿದ್ದಕ್ಕಾಗಿ ಅಧ್ಯಕ್ಷರಾದ ಶ್ರೀ ಜಯರಾಮ್ ಅವರನ್ನು ಅಭಿನಂದಿಸುತ್ತೇನೆ.
ತಮ್ಮ ನಾಯಕತ್ವದಲ್ಲಿ ಅವರು ಕೋರಮಂಗಲ ಕ್ಲಬ್'ನ್ನು ಹೊಸ ಎತ್ತರಕ್ಕೆ ಕೊಂಡೊಯ್ದು ಆಧುನಿಕರಣಗೊಳಿಸುವುದಕ್ಕೆ ಅಪಾರ ಶ್ರಮವಹಿಸಿದ್ದಾರೆ.

ಸಂಸದರಾದ ಶ್ರೀ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ ಶಾಸಕರಾದ ಶ್ರೀ ಸತೀಶ್ ರೆಡ್ಡಿ, ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಬಿ.ಎನ್. ಮಂಜುನಾಥ್ ರೆಡ್ಡಿ, ಶ್ರೀ ಚಂದ್ರಪ್ಪ , ಶ್ರೀ ನಾರಾಯಣ ಗೌಡ , ಶ್ರೀ ರಾಧಾಕೃಷ್ಣ ಮತ್ತು ಇತರರು ಹಾಜರಿದ್ದರು.

10/12/2020

ಎಲ್ಲರಿಗೂ ವಿಶ್ವ ಮಾನವ ಹಕ್ಕುಗಳ ದಿನದ ಶುಭಾಶಯಗಳು.

ಈ ಪ್ರಪಂಚದಲ್ಲಿ ಯಾರಿಗೂ ಇನ್ನೊಬ್ಬರ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರವಿಲ್ಲ. ನಮ್ಮ ಸಂವಿಧಾನ ಕೂಡ ಈ ಚಿಂತನೆಯನ್ನು ಗೌರವಿಸಿ ನಮಗೆ ಮೂಲಭೂತ ಹಕ್ಕುಗಳನ್ನು ನೀಡಿದೆ.

ಈ ವರ್ಷ ವಿಶ್ವ ಸಂಸ್ಥೆ 'ಮಾನವ ಹಕ್ಕುಗಳಿಗಾಗಿ ಧ್ವನಿಯೆತ್ತುವಂತೆ' ಕರೆ ನೀಡಿದೆ.

ಕೋವಿಡ್ ಪಿಡುಗಿನಿಂದಾಗಿ ವಿಶ್ವವೇ ನಲುಗಿ ಹೋಗಿರುವ ಸಂದರ್ಭದಲ್ಲಿ ನೊಂದವರ ಮತ್ತು ಹಸಿದವರ ಜೊತೆ ನಿಲ್ಲುವ ಮೂಲಕ ಈ ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸೋಣ.

Best wishes to everyone on .

Human Rights Day is celebrated annually across the world on 10 December to protect and promote the fundamental human rights of all people and their basic human freedoms.

This year’s theme as decided by the United Nations is ‘Stand Up for Human Rights’.

With the whole world shaken by the Covid pandemic, let us celebrate Human Rights Day by standing up for the disadvantaged communities who are suffering and starving.

09/12/2020

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಜನ್ಮ ದಿನದ ಶುಭಾಶಯಗಳು.

ನಿಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸುತ್ತೇನೆ.

A very happy birthday to the President of Indian National Congress, Smt .

I thank you for all your efforts over the years in serving our country and wish to see our Congress party rise even higher under your continued leadership.

Photos from INC BTM Layout constituency's post 09/12/2020

Participated in a protest in front of Mahatma Gandhi statue at Vidhana Soudha.

This was organised by Congress Legislative party in support of farmers, who has called for Bharat Bandh to oppose the central government’s anti-farmer bills.

The central government passing these bills in parliament without giving any opportunity for discussion and proceeding to forcibly enforce them shows the dictatorial stance of the government.

It is the duty of the government to discuss bills with farmers and take their pleas into account before finalizing and enforcing them. The government must respond to the farmers’ demands and withdraw these destructive bills immediately.

Congress legislative party leaders Sri Siddaramaiah, Sri DK Shivakumar, and others were present on this occasion.

ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್'ಗೆ ಬೆಂಬಲ ಸೂಚಿಸುವ ಸಲುವಾಗಿ ಇಂದು ವಿಧಾನಸೌಧದ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪ್ರತಿಮೆ ಎದುರು Indian National Congress - Karnataka ಶಾಸಕಾಂಗ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕ್ಷಣ.

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಯಾವುದೇ ಚರ್ಚೆಗೆ ಅವಕಾಶ ಕೊಡದೆ ಮಸೂದೆಗಳನ್ನು ಮಂಡಿಸುರುವುದು ಮತ್ತು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಹೊರಟಿರುವುದು ಅದರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ರೈತರೊಂದಿಗೆ ಚರ್ಚಿಸಿ ಮಸೂದೆಗಳನ್ನು ಸಿದ್ದಪಡಿಸುವುದು ಸರ್ಕಾರದ ಕರ್ತವ್ಯ. ಇನ್ನಾದರೂ ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ಸರ್ಕಾರ ಈ ಮಸೂದೆಗಳನ್ನು ಹಿಂಪಡೆಯಬೇಕು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ, ಶ್ರೀ ಡಿ.ಕೆ ಶಿವಕುಮಾರ್ ಮತ್ತು ಇತರ ಎಲ್ಲಾ ಮುಖಂಡರು ಈ ಸಂದರ್ಭ ಹಾಜರಿದ್ದರು.

09/12/2020

ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಪಕ್ಷಕ್ಕೆ ಸೇರಬಯಸಿದ
ಬಿಟಿಎಂ ವಾರ್ಡ್ 176ರ ಇತರ ಪಕ್ಷದ ಸದಸ್ಯರನ್ನು ಹೃತ್ಪೂರ್ವಕವಾಗಿ ಪಕ್ಷಕ್ಕೆ ಬರಮಾಡಿಕೊಂಡೆ.

ಶ್ರೀ ವೆಂಕಟೇಶ್ ಎಸ್, ಶ್ರೀ ಗೋವಿಂದ್ ಎಸ್, ಶ್ರೀ ಅಯ್ಯಪ್ಪ ಎಸ್, ಶ್ರೀ ಸಂತೋಷ್, ಶ್ರೀ ವಸಂತ್, ಶ್ರೀ ವಿಲೇಶ್, ಶ್ರೀ ಸುರೇಶ್, ಶ್ರೀ ಮುನಿಯಪ್ಪ ಮತ್ತು ಇತರರು ಈ ಸಂದರ್ಭ ಪಕ್ಷಕ್ಕೆ ಸೇರ್ಪಡೆಯಾದರು.

ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಜಿ.ಎನ್.ಆರ್ ಬಾಬು, ಶ್ರೀ ನಾಗರಾಜ್, ಶ್ರೀ ಬನ್ನೂರ್, ಶ್ರೀ ಬಾಲಕೃಷ್ಣ ಶ್ರೀ ರಂಗಧಾಮ, ಶ್ರೀ ಮಣಿ ಗೌಡರ್ ಮತ್ತು ಇತರ ಸ್ಥಳೀಯ ಮುಖಂಡರು ಹಾಜರಿದ್ದರು.

I wholeheartedly welcomed many members from other parties of BTM Ward 176 to the Congress party today as they agreed with the principles & doctrine of Congress and wished to join us in our mission.

Sri Venkatesh S, Sri Govind S, Sri Ayyappa S, Sri Santosh, Sri Vasanth, Shri Vilesh, Sri Suresh, Sri Muniyappa and others joined the party.

Ex-Corporator Sri GNR Babu, Sri Nagaraj, Sri Bannur, Sri Balakrishna, Sri Rangadhama, Sri Mani Gounder and other local leaders were in attendance.



Indian National Congress Indian National Congress - Karnataka

Photos from INC BTM Layout constituency's post 09/12/2020

ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲ, ಆಡುಗೋಡಿ, ಈಜಿಪುರ ಮತ್ತು ಜಕ್ಕಸಂದ್ರ ವಾರ್ಡ್'ಗಳಲ್ಲಿ ಬಿ.ಬಿ.ಎಂ.ಪಿ ಗುರುತಿಸಿದ 94 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣಪತ್ರ ವಿತರಿಸಿದೆ.

ಜೊತೆಗೆ, ಕೋರಮಂಗಲ ವಾರ್ಡ್ ಕಛೇರಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಆನ್'ಲೈನ್'ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ರಾಜೇಂದ್ರ ನಗರದ 6 ಸಾಹಸ್ ಮೇಲ್ವಿಚಾರಕರ ಸೇವೆಯನ್ನು ಗುರುತಿಸಿ, ಕ್ರತಜ್ಞತೆ ಸಲ್ಲಿಸುವ ಸಲುವಾಗಿ ಸೀರೆ, ಬಟ್ಟೆ ಮತ್ತು ರೇಷನ್ ಕಿಟ್'ಗಳನ್ನು ವಿತರಿಸಲಾಯಿತು.

ಮಾಜಿ ಪಾಲಿಕೆ ಸದಸ್ಯರುಗಳಾದ ಶ್ರೀ ಎಂ. ಚಂದ್ರಪ್ಪ, ಶ್ರೀ ರಾಮಚಂದ್ರ ಮತ್ತು ಶ್ರೀಮತಿ ಮಂಜುಳಾ ಸಂಪತ್, ಬ್ಲಾಕ್ ಅಧ್ಯಕ್ಷರಾದ ಶ್ರೀ ಗೋವರ್ಧನ್ ರೆಡ್ಡಿ, ಶ್ರೀ ಸಂಪತ್, ಶ್ರೀ ಹರೀಶ್ ಬಾಬು, ಶ್ರೀ ವೆಂಕಟೇಶ್, ಶ್ರೀ ಕಿಶನ್ ನಾಯಕ್, ಶ್ರೀ ಚಲಪತಿ, ಶ್ರೀ ಗಣೇಶ್, ಶ್ರೀಪಾಪ ರೆಡ್ಡಿ, ಶ್ರೀ ಕೇಶವ್ ಗೌಡ, ಶ್ರೀ ರಾಜೇಂದ್ರ ಬಾಬು, ಶ್ರೀ ಎಂ. ಶ್ರೀನಿವಾಸ್, ಶ್ರೀ ಶಿವಪ್ರಕಾಶ್, ಶ್ರೀ ಶ್ರೀರಾಮ್, ಶ್ರೀ ಮಾದೇಶ್, ಶ್ರೀಮತಿ ಪುಷ್ಪ ಮಂಜುನಾಥ್, ಶ್ರೀ ಶ್ಯಾಮ್, ಶ್ರೀ ಚಾಂದ್ ಮಿಯಾ ಮತ್ತು ಇತರರು ಹಾಜರಿದ್ದರು.

Distributed 94 BBMP Street Vendors Certificates & Identity Cards today to the beneficiaries that were identified by BBMP in Koramangala, Adugodi, Ejipura & Jakkasandra wards at BTM Assembly Constituency.

For the benefit of the street vendor beneficiaries, online enrolling of loan applications was taken up at Koramangala Ward Office in 5th Block.

Also, sarees, dress materials & ration kits were distributed to 6 Field Supervisors of Rajendranagar as a token of our appreciation of their selfless commitment to supervising the segregation of house-to-house garbage collection.

Ex Corporators Sri M Chandrappa, Sri Ramachandra & Smt Manjula Sampath, Sri Govardhan Reddy, Sri Sampath, Sri Harish Babu, Sri Venkatesh, Sri Kishan Naik, Sri Chalapati, Sri Ganesh, Sri Papa Reddy, Sri Keshava Gowda, Sri Rajendra Babu, Sri M Srinivas, Sri Shivaprakash, Sri Sriram, Sri Madesh, Smt Pushpa Manjunath, Sri Shyam, Sri Chand Miya & others were present.

09/12/2020

ಈ ಸಶಸ್ತ್ರಪಡೆಗಳ ಧ್ವಜ ದಿನಾಚರಣೆಯಂದು ದೇಶಕ್ಕಾಗಿ ತಮ್ಮ ಸಮಸ್ತವನ್ನು ತ್ಯಾಗ ಮಾಡುವ ಯೋಧರನ್ನು ಮತ್ತು ಅವರ ಕುಟುಂಬದವರನ್ನು ಸ್ಮರಿಸಿಕೊಳ್ಳುತ್ತೇನೆ.

ಸೈನಿಕರು ಈ ದೇಶಕ್ಕೆ ಮಾಡಿದ ತ್ಯಾಗ ಬಲಿದಾನಗಳಿಗೆ ನಾವು ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಕೇವಲ ನಮ್ಮ ಗಡಿಗಳನ್ನು ರಕ್ಷಿಸುವುದಷ್ಟೇ ಅಲ್ಲದೆ ದೇಶದ ಆಂತರಿಕ ಪ್ರತಿಕೂಲ ಪರಿಸ್ಥಿತಿಗಳನ್ನು ನಿಭಾಯಿಸುವುದರಲ್ಲೂ ಕೂಡ ಸೈನಿಕರ ಕೊಡುಗೆ ಅಪಾರವಾಗಿದೆ.

ಭಾರತೀಯರಾಗಿ ಈ ದಿನ ಎಲ್ಲಾ ಯೋಧರಿಗೆ ನಮ್ಮ ಧನ್ಯವಾದ ಸಲ್ಲಿಸೋಣ.

All of India’s citizens are forever indebted to the for their accomplishments and for their indispensable role of safeguarding our country from external threats & internal conflicts.

I salute all our veterans, martyrs and soldiers as well as their families and will always be grateful to the Indian Armed Forces for their courage, dedication & sacrifice in the service to our country.

As Indians, let us all show our gratitude to our soldiers and donate for the welfare of soldiers, veterans, martyrs & their families.

Photos from INC BTM Layout constituency's post 09/12/2020

‘ಮಹಾಪರಿನಿರ್ವಾಣ ದಿನದ’ ಅಂಗವಾಗಿ ಕೋರಮಂಗಲ ವಾರ್ಡ್ ಮಡಿವಾಳ ಸಿದ್ದಾರ್ಥ ಕಾಲೋನಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ
ಭಾಗವಹಿಸಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.

ಜಾತಿ, ಧರ್ಮವನ್ನು ಲೆಕ್ಕಿಸದೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಸವಲತ್ತು ಮತ್ತು ಹಕ್ಕುಗಳನ್ನು ಕಲ್ಪಿಸುವುದು ಡಾ.ಅಂಬೇಡ್ಕರ್ ಅವರ ಕನಸಾಗಿತ್ತು.
ಆದ್ದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಮಹಿಳೆಯರಿಗೆ ಸೂಕ್ತ ಶಿಕ್ಷಣ ನೀಡುವ ಜೊತೆಗೆ ಅವರನ್ನು ಸಾಮಾಜಿಕ ಮತ್ತು ರಾಜಕೀಯ ಜೀವನದ ಭಾಗವಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ.

ಇದೇ ಸಂದರ್ಭದಲ್ಲಿ ಬಹುಜನ ಮಹಿಳಾ ಸಂಘವನ್ನು ಉದ್ಘಾಟಿಸಿ 500 ಸೀರೆಗಳನ್ನು ಸ್ಥಳೀಯ ನಿವಾಸಿಗಳಿಗೆ ವಿತರಿಸಲಾಯಿತು.

ಮಾಜಿ ಕಾರ್ಪೋರೇಟರ್‌ಗಳಾದ ಶ್ರೀ ಬಿ.ಎನ್.ಮಂಜುನಾಥ್ ರೆಡ್ಡಿ, ಶ್ರೀ ಚಂದ್ರಪ್ಪ, ಐವೈಸಿ ಬಿಟಿಎಂ ಅಧ್ಯಕ್ಷ ಶ್ರೀ ಲಿತೇಶ್ ಎಂ ರೆಡ್ಡಿ, ಶ್ರೀಮತಿ ಪಾರ್ವತಮ್ಮ , ಶ್ರೀ ಸಂಪಂಗಿ, ಶ್ರೀ ಕುಸ್ತಿ ಮಂಜು ಮತ್ತು ಇತರರು ಹಾಜರಿದ್ದರು.

Paid floral tributes to Dr. on the occasion of Day at Siddhartha Nagar, Madiwala in Koramangala Ward 151.

It was Dr. Ambedkar's dream to give equal privileges and rights to every citizen of the country irrespective of gender, caste or religion. Therefore it is our responsibility to educate women, give them opportunities and make them part of mainstream social and political life.

Also, inaugurated Bahujana Mahila Sangha, earlier today.

500 sarees were distributed to the local residents.

Ex-Corporators Sri BN Manjunath Reddy, Sri Chandrappa, IYC BTM President Sri Lithesh M Reddy, President of Bahujana Mahila Sangha Smt Parvathamma, Sri Sampangi, Sri Kusti Manju and others were present.

Photos from INC BTM Layout constituency's post 09/12/2020

ಆನೇಕಲ್‌'ನ ಚೌಡರೆಡ್ಡಿ ವೃತ್ತದಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರನ್ನು ಸ್ಮರಿಸಲು ಜಾಗೃತ ಯುವ ಭಾರತ ಸಂಘ ನಿರ್ಮಿಸಿದ ನೂತನ 'ಅಮರ್ ಜವಾನ್ ಸ್ಮಾರಕ'ವನ್ನು ಉದ್ಘಾಟಿಸಿದ ಕ್ಷಣ.

ಈ ರೀತಿಯ ಸ್ಮಾರಕಗಳು ನಮ್ಮ‌ ಇತಿಹಾಸವನ್ನು ಜೀವಂತವಾಗಿರಿಸಿ ಮುಂದಿನ ತಲೆಮಾರುಗಳಿಗೆ ಸೈನಿಕರ ವೀರಗಾಥೆಗಳನ್ನು ಸಾರಿ ಹೇಳುತ್ತವೆ.

ಆನೇಕಲ್ ಶಾಸಕರಾದ ಶ್ರೀ ಶಿವಣ್ಣ, ಮಾಜಿ ಪುರಸಭೆ ಅಧ್ಯಕ್ಷರಾದ ಶ್ರೀ ಸೋಮಶೇಖರ್ ರೆಡ್ಡಿ, ಶ್ರೀ ಪದ್ಮನಾಭ, ಡಾ. ಮುನಿರಾಜು, ಶ್ರೀ ಅಚ್ಯುತ ರಾಜ್, ಶ್ರೀ ಇನಾಯತ್ ಉಲ್ಲಾ ಮುನಾವರ್, ಶ್ರೀ ಗಣೇಶ್ ಕುಮಾರ್, ಶ್ರೀ ರಘು, ಶ್ರೀ ಮುನಿರಾಜು, ಶ್ರೀ ಗಿರೀಶ್, ಶ್ರೀ ಗಜೇಂದ್ರ, ಶ್ರೀ ವಿಜಿ ಕುಮಾರ್, ಶ್ರೀ ವೆಂಕಟೇಶ್, ಶ್ರೀ ರಾಮಕೃಷ್ಣ ರೆಡ್ಡಿ, ಶ್ರೀ ಲೋಹಿತ್, ಶ್ರೀ ತಿರುಮಲೇಶ್ ಮತ್ತು ಇತರರು ಹಾಜರಿದ್ದರು.

Inaugurated the new Amar Jawan War Memorial today at Chowda Reddy circle in Anekal, at a program organised by Jagrutha Yuva Bharat Sangh to commemorate the nation's martyrs.

This war memorial will ensure that not only the public but our future generations too are aware of the sacrifice made by past generations.

Anekal MLA Sri Shivanna, Ex-Municipal President Sri Somashekar Reddy, Sri Padmanabha, Dr Muniraju, Sri Achutaraju, Sri Inayath Ulla Munavar, Sri Ganesh Kumar, Sri Raghu, Sri Muniraju, Sri Girish, Sri Gajendra, Sri Viji Kumar, Sri Venkatesh, Sri Ramakrishna Reddy, Sri Lohit, Sri Tirumalesh and others graced the occasion.

09/12/2020

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಪುಣ್ಯ ಸ್ಮರಣೆಯ ದಿನವಾದ ಇಂದು, ಅವರನ್ನು ಭಕ್ತಿಪೂರ್ವಕವಾಗಿ ಸ್ಮರಿಸಿಕೊಳ್ಳುತ್ತೇನೆ.

ನಮ್ಮ ದೇಶದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆ, ಲಿಂಗ ಬೇಧಗಳ ವಿರುದ್ಧ ಸಮರ ಸಾರಿದ ಅವರು ಸಂವಿಧಾನ ರಚಿಸುವಾಗ ಸಮಾಜದ ಕಟ್ಟಕಡೆಯ ಪ್ರಜೆಗೂ ಸಮಾನ ಹಕ್ಕುಗಳು ಸಿಗುವಂತೆ ನೋಡಿಕೊಂಡರು.

ಅಂಬೇಡ್ಕರ್ ಅವರು ಹಾಕಿ ಕೊಟ್ಟ ಭದ್ರ ಸಾಂವಿಧಾನಿಕ ಅಡಿಪಾಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

Photos from INC BTM Layout constituency's post 09/12/2020

ಕೋರಮಂಗಲ ವಾರ್ಡ್ 151ರ ವ್ಯಾಪ್ತಿಯ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯ ಪರಿಶೀಲನೆ ನಡೆಸಿದೆ.

ಇದೆ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಸೆಂಟ್ ಜಾನ್ಸ್ ಆಸ್ಪತ್ರೆಯ ಮುಖ್ಯ ದ್ವಾರದಿಂದ ವಾಟರ್ ಟ್ಯಾಂಕ್ ಸಿಗ್ನಲ್'ವರೆಗಿನ ಸರ್ವಿಸ್ ರಸ್ತೆ ಮತ್ತು ಮುಖ್ಯ ರಸ್ತೆಯ ಮಧ್ಯ ಭಾಗದಲ್ಲಿರುವ ಪಾದಚಾರಿ ಮಾರ್ಗ ಮತ್ತು ಒಳಚರಂಡಿ ಅಭಿವೃದ್ಧಿ ಕಾಮಗಾರಿ ಮುಂದುವರಿಸುವಂತೆ ಸೂಚನೆ ನೀಡಿದ್ದೇನೆ.

ಜೊತೆಗೆ, ಈಜಿಪುರ ವಾರ್ಡ್'ನ ಎಸ್.ಟಿ ಬೆಡ್ ಮತ್ತು ಶಾಂತಿನಗರ ಹೌಸಿಂಗ್ ಸೊಸೈಟಿ ಬಡಾವಣೆಗೆ ಭೇಟಿ ನೀಡಿ ಕೆಳಕಂಡ ಉದ್ಯಾನವನಗಳಲ್ಲಿ ಮರಳಿನ ಅಂಗಳ, ಮಕ್ಕಳ ಆಟದ ಸಾಮಗ್ರಿಗಳು, ಗ್ರಿಲ್, ಪೆವೆರ್ ಬ್ಲಾಕ್'ಗಳ ಅಳವಡಿಕೆ, ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ.

1) ಪ್ರೆಸ್ಟೀಜ್ ಮತ್ತು ಜಿ-ಕ್ರಾಪ್ ವಸತಿ ಸಂಕೀರ್ಣದ ಮಧ್ಯದ ಉದ್ಯಾನವನ
2) ಡಿ.ಎಸ್.ಆರ್. ವಸತಿ ಸಂಕೀರ್ಣದ ಪಕ್ಕದ ಉದ್ಯಾನವನ

ಮಾಜಿ ಪಾಲಿಕೆ ಸದಸ್ಯರುಗಳಾದ ಶ್ರೀ ಎಂ.ಚಂದ್ರಪ್ಪ ಮತ್ತು ಶ್ರೀರಾಮಚಂದ್ರ, ಎಸ್.ಟಿ ಬೆಡ್ RWA ಅಧ್ಯಕ್ಷರಾದ ಶ್ರೀ ರಾಜೇಂದ್ರ ಬಾಬು, ಬ್ಲಾಕ್ ಅಧ್ಯಕ್ಷರಾದ ಶ್ರೀ ಗೋವರ್ಧನ್ ರೆಡ್ಡಿ, ಶ್ರೀ ನಾರಾಯಣಸ್ವಾಮಿ, ಶ್ರೀಮತಿ ದೇಬಶ್ರೀ, ಶ್ರೀಮತಿ ತಂಜೀಮ್, ಶ್ರೀ ಶ್ರೀನಿವಾಸ್, ಶ್ರೀ ಚಂದ್ರ ರೆಡ್ಡಿ, ಶ್ರೀ ನವೀನ್ ಮತ್ತು ಇತರರು ಹಾಜರಿದ್ದರು.

Inspected the ongoing road white topping work on Sarjapur main road opposite to St. John’s Hospital in Koramangala Ward 151.

Instructed the contractor to continue the median and drain work between service road & main road from St. John’s Hospital gate to Water tank signal.

Also, Visited ST Bed and Shanti Nagar housing society layout in Ejipura Ward 148 and instructed the concerned department officials to take up the grill & curb painting, children’s play equipments with sand pit, resetting paver blocks and other developmental works of the following unmaintained two parks.

1) Park between Prestige & G-Crop apartments.
2) Park next to DSR apartment.

Ex-Corporators Sri M Chandrappa and Sri Ramachandra, ST Bed RWA President Sri Rajendra Babu, Block President Sri Govardhan Reddy, Sri Narayanaswamy, Smt Debashree, Smt Tanzeem, Sri Srinivas, Sri Chandra Reddy, Sri Naveen and others were present.

09/12/2020

ಮಣ್ಣು ಮಾನವನ ಜೀವನಕ್ಕೆ ಅತ್ಯಂತ ಬಹುಮುಖ್ಯ ಭಾಗ. ಶೇ 95ರಷ್ಟು ನಮ್ಮ ಆಹಾರ ಪದಾರ್ಥಗಳನ್ನು ನಾವು ಮಣ್ಣಿನಿಂದ ಬೆಳೆದುಕೊಳ್ಳುತ್ತೇವೆ.

ಪ್ರತಿ ವರ್ಷ ಡಿಸೆಂಬರ್ 5ರಂದು ಮಣ್ಣಿನ ಮಹತ್ವವನ್ನು ಜನರಿಗೆ ಮನದಟ್ಟು ಮಾಡಿಕೊಡಲು ವಿಶ್ವ ಸಂಸ್ಥೆಯ ವತಿಯಿಂದ ವಿಶ್ವ ಮಣ್ಣಿನ ದಿನ ಆಚರಿಸಲಾಗುತ್ತದೆ. ಮಣ್ಣಿನ ಫಲವತ್ತತೆ ಕೈಪಿಡಿಕೊಳ್ಳುವುದು, ಸವಕಳಿ ತಡೆಯುವುದು ಮತ್ತು ಜೀವವೈವಿಧ್ಯವನ್ನು ಸಲಹುವುದು ನಮ್ಮೆಲ್ಲರ ಹೊಣೆಗಾರಿಕೆ.

ಆದ್ದರಿಂದ ಈ ದಿನ "ಮಣ್ಣಿನ ಜೀವಂತಿಕೆ ಉಳಿಸುವ ಮತ್ತು ಜೀವವೈವಿಧ್ಯವನ್ನು ಬೆಳೆಸುವ" ಪ್ರತಿಜ್ಞೆ ಮಾಡೋಣ.

Soil health is no doubt vital to all living beings: 95% of our food is produced on soil.

is celebrated every year on this day to raise awareness of this fact and to prioritise soil health and biodiversity. Our soil is a living home to more than 25% of our planet’s diversity, organisms which improve the soil health & increase the quality & quantity of the food produced.

So, it is our duty to preserve soil biodiversity & health for the benefit of future generations.

Photos from INC BTM Layout constituency's post 04/12/2020

Congratulated Sri Nanda Kumar the newly appointed Madiwala Ward Congress President and Ms Sara Sulthana, Lakkasandra Ward IYC Secretary, earlier today.

Former Corporators Sri BN Manjunatha Reddy, Sri Murugesh Modaliar, Sri Govardhan Reddy, Sri Anand, Sri Lithesh M Reddy, Sri Y. Ramesh, Sri Kushal Manjunath, Sri Muniraju, Smt Vedamma, Sri HMT Srinivas Reddy, Sri Raghu, Sri Mohan, Sri Shashi Kumar, Sri Sampangi, Sri Mosi, Sri Pyara, Sri Ganesh, Sri Imran, Sri Shyam, Sri BTS Ramanna, Sri Manjunath, Smt Manjulamma, Smt Kavitha, Smt Prabhavathi, Sri Shamir, Sri Shakeel, Smt Sanjeevamma, Smt Anu, Sri Narayan, Sri Muthyalu, local leaders and karyakartas were present.

ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ನಂದ ಕುಮಾರ್ ಮತ್ತು ಲಕ್ಕಸಂದ್ರ ವಾರ್ಡ್ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾದ ಕು. ಸಾರಾ ಸುಲ್ತಾನ ಅವರನ್ನು ಇಂದು ಅಭಿನಂದಿಸಲಾಯಿತು.

ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಬಿ.ಎನ್ ಮಂಜುನಾಥ ರೆಡ್ಡಿ, ಶ್ರೀ ಮುರುಗೇಶ್ ಮೊದಲಿಯಾರ್, ಶ್ರೀ ಗೋವರ್ಧನ್ ರೆಡ್ಡಿ, ಶ್ರೀ ಆನಂದ್, ಶ್ರೀ ಲಿತೇಶ್ ಎಂ ರೆಡ್ಡಿ, ಶ್ರೀ ವೈ. ರಮೇಶ್, ಶ್ರೀ ಕುಶಾಲ್ ಮಂಜುನಾಥ್, ಶ್ರೀ ಶಶಿ ಕುಮಾರ್, ಶ್ರೀ ಮುನಿರಾಜು, ಶ್ರೀಮತಿ ವೇದಮ್ಮ, ಶ್ರೀ ರಘು, ಶ್ರೀ ಸಂಪಂಗಿ, ಶ್ರೀ ಮೋಸಿ, ಶ್ರೀ ಪ್ಯಾರ, ಶ್ರೀ ಗಣೇಶ್, ಶ್ರೀ ಇಮ್ರಾನ್, ಶ್ರೀ ಮಂಜುನಾಥ್, ಶ್ರೀಮತಿ ಪ್ರಭಾವತಿ, ಶ್ರೀ ಶಮೀರ್, ಶ್ರೀ ಶಕೀಲ್, ಶ್ರೀ ಶ್ಯಾಮ್, ಶ್ರೀ ಶ್ರೀನಿವಾಸ್ ರೆಡ್ಡಿ, ಶ್ರೀ ಮೋಹನ್, ಶ್ರೀ ಬಿ.ಟಿ.ಎಸ್ ರಾಮಣ್ಣ, ಶ್ರೀ ಮಂಜುನಾಥ್, ಶ್ರೀಮತಿ ಮಂಜುಳಮ್ಮ, ಶ್ರೀಮತಿ ಕವಿತಾ, ಶ್ರೀಮತಿ ಸಂಜೀವಮ್ಮ, ಶ್ರೀಮತಿ ಅನು, ಶ್ರೀ ನಾರಾಯಣ್, ಶ್ರೀ ಮುತ್ಯಲು, ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

04/12/2020

ಈಜಿಪುರ ವಾರ್ಡ್ 148ರಲ್ಲಿ ನೂತನವಾಗಿ ನಿರ್ಮಿಸಲಾದ 4 ಅಂತಸ್ತಿನ ವಿವಿಧೋದ್ದೇಶ ಕಟ್ಟಡದ ನೆಲಮಹಡಿ ಕೀಗಳನ್ನು ಇಂದು ಬೆಳಿಗ್ಗೆ ಅಂಗನವಾಡಿ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು.

ಮಾಜಿ ಕಾರ್ಪೊರೇಟರ್ ಶ್ರೀ ರಾಮಚಂದ್ರ, ಶ್ರೀ ಶ್ರೀರಾಮ್, ಶ್ರೀ ಕುಮಾರ್ ಗೌಡ, ಶ್ರೀ ಆನಂದ್, ಶ್ರೀ ಬಾಬು, ಶ್ರೀ ಸಲೀಮ್, ಶ್ರೀ ಸಂಜಯ್, ಶ್ರೀ ಅರುಲ್, ಶ್ರೀ ರಾಜೇಶ್, ಶ್ರೀ ರವಿ, ಶ್ರೀಮತಿ ಮಣಿಯಮ್ಮ, ಶ್ರೀಮತಿ ಕನಕ, ಶ್ರೀ ಮೂರ್ತಿ, ಶ್ರೀ ಎಇ ಪ್ರದೀಪ್, ಶ್ರೀಮತಿ ರಂಜನಿ, ಶ್ರೀ ಕೇಶವ ಮತ್ತು ಇತರರು ಹಾಜರಿದ್ದರು.

The ground floor keys of the newly built 4-storey multipurpose building at Ejipura Ward 148 were handed over to the Anganvadi staff this morning.

Ex-Corporator Sri Ramachandra, Sri Sriram, Sri Kumar Gowda, Sri Anand, Sri Babu, Sri Saleem, Sri Sanjay, Sri Arul, Sri Rajesh, Sri Ravi, Smt Maniyamma, Smt Kanaka, Sri Murthy, Sri A.E Pradeep, Smt Ranjani, Sri Keshava and others were present.

04/12/2020

ಈಜಿಪುರ ವಾರ್ಡ್ 148ರ ಆರ್.ಎ.ರಸ್ತೆಗೆ ಭೇಟಿ ನೀಡಿ ಚಾಲ್ತಿಯಲ್ಲಿರುವ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದೆ.

ನಿವಾಸಿಗಳ ಅನುಕೂಲಕ್ಕಾಗಿ ಸೇತುವೆಯ ಆರ್‌ಸಿಸಿ ಮೇಲ್ಚಾವಣಿಯನ್ನು ಬೇಗನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಮಾಜಿ ಪಾಲಿಕೆ ಸದಸ್ಯರಾದ ಶ್ರೀ ರಾಮಚಂದ್ರ, ಶ್ರೀ ಕುಮಾರ್, ಶ್ರೀ ಶ್ರೀರಾಮ್ ಮತ್ತು ಇತರರು ಹಾಜರಿದ್ದರು.

Visited RA Road in Ejipura Ward 148 and inspected the ongoing construction of the bridge over the rajakaluve.

Instructed the officials to complete the RCC roof of the bridge at the earliest for the benefit of the residents.

Ex Corporator Sri Ramachandra, Sri Kumar, Sri Sriram and others were present.

04/12/2020

ಭಾರತೀಯ ನೌಕಾಪಡೆ ಯಶಸ್ವಿಯಾಗಿ ಪೂರೈಸಿದ 'ಆಪರೇಷನ್ ಟ್ರಿಡೆಂಟ್' ಅನ್ನು ನೆನಪಿಸಿಕೊಳ್ಳಲು ನೌಕಾಪಡೆ ದಿನವನ್ನು ಆಚರಿಸಲಾಗುತ್ತದೆ.

ಭಾರತ ಜಗತ್ತಿನಲ್ಲಿಯೇ ಶಿಸ್ತುಬದ್ಧವಾದ ನೌಕಾಪಡೆಯನ್ನು ಹೊಂದಿದ್ದು, ದೇಶದ ಮೂರು ದಿಕ್ಕಿನಲ್ಲಿರುವ ಸಾಗರ ಗಡಿಗಳನ್ನು ಕಾಯುವಲ್ಲಿ ನೌಕಾಪಡೆಯ ಪಾತ್ರ ಬಹಳ ಮುಖ್ಯವಾದದ್ದು.

ನಮ್ಮೆಲ್ಲರ ಒಳಿತು ಮತ್ತು ರಕ್ಷಣೆಗಾಗಿ ಹಗಲಿರುಳು ಅಮೂಲ್ಯವಾದ ತ್ಯಾಗ ಬಲಿದಾನಗಳನ್ನು ಮಾಡುತ್ತಿರುವ ಎಲ್ಲ ನೌಕಾಪಡೆಯ ಯೋಧರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

is celebrated on December 4 every year to commemorate Operation Trident, a naval attack during the 1971 Indo-Pakistan war and to recognize the achievements and role of the Indian Navy in national security.

On this occasion let’s recognize the efforts of our navy personnel who fearlessly protect our coasts and celebrate all our veteran sea warriors who have been integral to the security of our nation.

India is blessed with one of the best navies in the entire world who work tirelessly and have dedicated their lives to keep us safe.

I salute our valiant Navy soldiers with pride for their courage, sacrifice & dedication to ensuring our maritime security & safeguarding our country.

03/12/2020

ಭಾರತದ ಪ್ರಥಮ ರಾಷ್ಟ್ರಪತಿ ಡಾ‌. ರಾಜೇಂದ್ರ ಪ್ರಸಾದ್ ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸಿಕೊಳ್ಳುತ್ತೇನೆ.

ವಕೀಲರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ನಮ್ಮ ದೇಶಕ್ಕೆ ಅವರ ಕೊಡುಗೆ ಅಪೂರ್ವವಾದದು. ಭಾರತದ ಸಂವಿಧಾನದ ರಚನೆಯಲ್ಲಿ, ಸಮಿತಿಯಿ ಅಧ್ಯಕ್ಷರಾಗಿದ್ದ ಅವರ ಪರಿಶ್ರಮ ಮಹತ್ವಪೂರ್ಣವಾದದು.

ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದೇ ರಾಜೇಂದ್ರ ಪ್ರಸಾದ್ ಅವರಿಗೆ ನಾವು ಸಲ್ಲಿಸುವ ಕೃತಜ್ಞತೆ.

My humble tributes to the First President of India Dr today on his birth anniversary.

From being a teacher, a lawyer, a freedom fighter and then the First President, his contribution to our country is truly immense. He also played a major role in drafting the Indian Constitution as well.

India is forever in his debt for his part in solidifying our constitutional values.

Photos from INC BTM Layout constituency's post 03/12/2020

ಆಡುಗೋಡಿ ವಾರ್ಡ್ 147ರ ಕೋರಮಂಗಲ 7ನೇ ಬ್ಲಾಕ್ ಮತ್ತು ರಾಜೇಂದ್ರ ನಗರದಲ್ಲಿ ನೂತನವಾಗಿ ನಿರ್ಮಿಸಲಾದ RO ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದ ಕ್ಷಣ.

ಸ್ಥಳೀಯ ನಿವಾಸಿಗಳು ಈಗ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕೈಗೆಟುಕುವ ದರದಲ್ಲಿ ಪಡೆದುಕೊಳ್ಳಬಹುದು.

ಮಾಜಿ ಪಾಲಿಕೆ ಸದಸ್ಯರಾದ ಶ್ರೀಮತಿ ಮಂಜುಳಾ ಸಂಪತ್ ಮತ್ತು ಶ್ರೀ ಚಂದ್ರಪ್ಪ, ಶ್ರೀ ಕೆಂಪರಾಜು, ಶ್ರೀ ಗೋವರ್ಧನ್, ಶ್ರೀ ಮುರುಗನ್, ಶ್ರೀ ಚಾಂದ್, ಶ್ರೀ ಪಾಂಡಿಯನ್, ಶ್ರೀ ಮಣಿ, ಶ್ರೀ ವೇಲು, ಮುನೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಬಾಬು, ಶ್ರೀ ಸಂಪತ್, ಶ್ರೀ ನೆಹರು, ಶ್ರೀ ಮುರುಘಿ, ಶ್ರೀ ಜಾಫರ್, ಶ್ರೀಮತಿ ಸಾಯಿರಾ, ಶ್ರೀ ವೆಂಕಟೇಶ್, ಶ್ರೀ ಬಾಲಣ್ಣ, ಶ್ರೀ ಪೊನ್ನು ಸ್ವಾಮಿ, ಶ್ರೀ ಕೆಂಪರಾಜು, ಶ್ರೀ ಪ್ರತಾಪ್, ಶ್ರೀ ಹರೀಶ್ ಯಾದವ್, ಶ್ರೀ ಪ್ರಸಾದ್ ಕುಮಾರ್, ಶ್ರೀ ಆನಂದ್, ಶ್ರೀ ಬಾಲಸುಬ್ರಹ್ಮಣ್ಯಂ, ಶ್ರೀ ಮೂರ್ತಿ ಸ್ವಾಮಿ, ಶ್ರೀ ಚೈತನ್ಯ, ಶ್ರೀ ಸೋಮು, ಶ್ರೀ ರಂಜಿತ್, ಶ್ರೀ ಮನ್ಸೂರ್, ಶ್ರೀ ಕುಮಾರ್ ಮತ್ತು ಇತರರು ಹಾಜರಿದ್ದರು.

Inaugurated new RO Drinking Water Plants today at Koramangala 7th Block and Rajendra Nagar in 147.

Local residents can now avail of these drinking water facilities and get drinking water at an affordable cost.

Ex Corporators Smt Manjula & Sri Chandrappa, Sri Kemparaju, Sri Govardhan, Sri Murugan, Sri Chand, Sri Pandian, Sri Mani, Sri Velu, Muneshwara Temple President Sri Babu, Sri Sampath, Sri Nehru, Sri Murughi, Sri Jaffar, Smt Sayira, Sri Venkatesh, Sri Balanna, Sri Ponnu Swamy, Sri Kemparaju, Sri Prathap, Sri Harish Yadav, Sri Prasad Kumar, Sri Anand, Sri Balasubramaniam, Sri Murthy Swamy, Sri Chaitanya, Sri Somu, Sri Ranjith, Sri Mansoor, Sri Kumar and others were present.

03/12/2020

ಬಿಟಿಎಂ ಬಡಾವಣೆಯಲ್ಲಿ ನೂತನವಾಗಿ ಉದ್ಘಾಟಿಸಲಾಗಿರುವ ಗ್ರಂಥಾಲಯದ 'ಸದಸ್ಯತ್ವ ಅಭಿಯಾನಕ್ಕೆ' ಕುವೆಂಪು ಉದ್ಯಾನವನದಲ್ಲಿ ಚಾಲನೆ ನೀಡಿದೆ.

ಗ್ರಂಥಾಲಯದಲ್ಲಿ 73,000ಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಲಾಗಿದ್ದು, ಮಕ್ಕಳನ್ನು ಸೇರಿ ಎಲ್ಲಾ ವಯೋಮಾನದವರ ಅಭಿರುಚಿಗೆ ತಕ್ಕಂತಹ ಪುಸ್ತಕಗಳು ಲಭ್ಯವಿದೆ. 29 ವಿವಿಧ ಭಾಷೆಯ ದಿನಪತ್ರಿಕೆಗಳನ್ನು ಮತ್ತು ಅನೇಕ ನಿಯತಕಾಲಿಕೆಗಳನ್ನು ಗ್ರಂಥಾಲಯಕ್ಕೆ ತರಿಸಲಾಗುತ್ತದೆ.

ಸಾರ್ವಜನಿಕರು ಈ ಗ್ರಂಥಾಲಯದ ಸದಸ್ಯರಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರುತ್ತೇನೆ.

ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಜಿ.ಎನ್.ಆರ್ ಬಾಬು, ಉಪ ನಿರ್ದೇಶಕಿ ಶ್ರೀಮತಿ ಸರಸ್ವತಿ, ಗ್ರಂಥಾಲಯದ ಉಸ್ತುವಾರಿ ಶ್ರೀಮತಿ ಜಲಜಾ, ಶ್ರೀ ವಿದ್ಯಾಶಂಕರ್ ಮತ್ತು ಇತರರು ಹಾಜರಿದ್ದರು.

A library membership enrollment drive was held for the new public library in Kuvempu Park, .

The library is fully equipped with over 73,000 books available for use including children’s books and there’s a digital library as well. Apart from books for reference, more than 32,000 books are available for borrowing and there are magazines and newspapers available in 29 different languages.

I highly encourage residents to make use of this library and avail of these facilities by registering to become a member.

Ex Corporator Sri GNR Babu, Deputy Director Smt Saraswathi, Library Incharge Smt Jalaja, Sri Vidhyashankar and other were present.

Videos (show all)

Website