Troll Who Trolls JDS
social services
ಕುಮಾರಣ್ಣನ ಪಂಚರತ್ನ ರಥಯಾತ್ರೆಗೆ 13 ದಿನಗಳಲ್ಲಿ 10,80,000 ಜನ ಭಾಗಿ🔥❤️🌾
H D Kumaraswamy 👍
#ಜೆಡಿಎಸ್
ರಾಜಕೀಯ ಚದುರಂಗದಾಟದಲ್ಲಿ ಜೆಡಿಎಸ್ ನದೇ ಪಾರುಪತ್ಯ❤️🌾🔥
H D Kumaraswamy ಮತ್ತೊಮ್ಮೆ
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಿಂದ ನಾಳೆ ನವೆಂಬರ್ 18ರಿಂದ "ಪಂಚರತ್ನ ರಥಯಾತ್ರೆ" ಆರಂಭವಾಗಲಿದ್ದು, ನವಕರ್ನಾಟಕದ ನಿರ್ಮಾಣಕ್ಕೆ ಸಹಕಾರ ನೀಡಬೇಕಾಗಿ ಸಮಸ್ತ ಕನ್ನಡಿಗರಲ್ಲಿ ವಿನಂತಿಸಿಕೊಳ್ಳುತ್ತೇನೆ.
#ಪಂಚರತ್ನರಥಯಾತ್ರೆ
ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಂಚರತ್ನ ಯೋಜನೆಗಳೇ ಪರಿಹಾರ
1.ಶಿಕ್ಷಣವೇ ಆಧುನಿಕ ಶಕ್ತಿ
2.ಆರೋಗ್ಯವೇ ಸಂಪತ್ತು
3.ರೈತ ಚೈತನ್ಯ
4.ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ
5.ವಸತಿಯ ಆಸರೆ
ಪಂಚರತ್ನ ಯೋಜನೆಗಳನ್ನು ಬೆಂಬಲಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ಕೊಡಿ.
8884984666
#ಪಂಚರತ್ನ
ಮನೆ ಮನೆ ಮೇಲೂ ಕನ್ನಡದ ಬಾವುಟ. 😍❤️
ಕರ್ನಾಟಕದ ಹೆಮ್ಮೆ ನಮ್ಮ ದೇವೇಗೌಡ್ರು 🙏🏻
ಕನ್ನಡ ನಾಡಿನ ಶ್ರೀಮಂತ ಪರಂಪರೆ, ಸಾಹಿತ್ಯ ಸಿರಿ ಸಂಪತ್ತಿನ ಹೆಗ್ಗುರುತು ನಾಡಹಬ್ಬ ಮೈಸೂರು ದಸರಾ ಬಗ್ಗೆ ರಾಜ್ಯ BJP Karnataka ಸರಕಾರದ ನೀತಿ ಅತ್ಯಂತ ಖಂಡನೀಯ. ಕನ್ನಡ ಭಾಷೆ, ಸಂಸೃತಿಯ ಕುರಿತು ಆಡಳಿತ ನಡೆಸುವವರ ದಿವ್ಯನಿರ್ಲಕ್ಷ್ಯ ಮಾತೃಭಾಷೆಗೆ ಮಾಡಿರುವ ಅಪಮಾನ ಮತ್ತು ದ್ರೋಹ.
ಮೈಸೂರು ದಸರೆಯಲ್ಲಿ ಕನ್ನಡ ಪುಸ್ತಕ ಪ್ರದರ್ಶನ ಅನಾದಿ ಕಾಲದಿಂದ ಅವಿಚ್ಛಿನ್ನವಾಗಿ ನಡೆದುಕೊಂಡು ಬರುತ್ತಿರುವ ಕನ್ನಡ ತಾಯಿಯ ಸೇವಾ ಕೈಂಕರ್ಯ. ಆದರೆ, ರಾಜ್ಯ BJP Karnataka ಸರಕಾರ ಕನ್ನಡ ಪುಸ್ತಕ ಪ್ರದರ್ಶನಕ್ಕೇ ಕೊಕ್ ಕೊಟ್ಟು, ತನ್ನ ಕನ್ನಡ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾರಿದೆ. ಪುಸ್ತಕ ಸಂಸ್ಕೃತಿಗೆ ಧಕ್ಕೆ ತಂದಿದೆ.
ಮೈಸೂರು ಸಾಂಸ್ಕೃತಿಕ ನಗರಿ. ದಸರಾ, ಜಗದ್ವಿಖ್ಯಾತ ಸಾಂಸ್ಕೃತಿಕ ಉತ್ಸವ. ಹೀಗಿದ್ದೂ ರಾಜ್ಯ BJP Karnataka ಸರಕಾರವು ಕನ್ನಡವನ್ನು ಧಿಕ್ಕರಿಸಿ ತನ್ನ ʼರಹಸ್ಯ ಕಾರ್ಯಸೂಚಿʼಯನ್ನು ಹೇರಲು ಹೊರಟಿದೆ. ಹಿಂದಿ ಭಾಷೆಯ ವಕ್ತಾರಿಕೆ ಮಾಡುವ Bharatiya Janata Party (BJP) ಪಕ್ಷದಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?
ಕನ್ನಡವನ್ನು ಮುಗಿಸುವುದನ್ನೇ ರಾಜ್ಯ BJP Karnataka ಸರಕಾರ ನಿತ್ಯಕಾಯಕ ಮಾಡಿಕೊಂಡಿದೆ. ಸಮಯ ಸಿಕ್ಕಾಗಲೆಲ್ಲಾ ಕನ್ನಡಕ್ಕೆ ಕೊಡಲಿಪೆಟ್ಟು ಕೊಡುವ ಕೆಲಸ ಮಾಡುತ್ತಲೇ ಇದೆ. ಕನ್ನಡಿಗರ ಶಾಂತಿ, ಸಹನೆಯನ್ನು ಬಿಜೆಪಿ ಪರೀಕ್ಷೆ ಮಾಡುತ್ತಿದೆ.
ಬೇಕೆಂದೇ, ಉದ್ದೇಶಪೂರ್ವಕವಾಗಿ ಕನ್ನಡ ಪುಸ್ತಕ ಪ್ರದರ್ಶನವನ್ನು ಕೈಬಿಟ್ಟಂತೆ ಕಾಣುತ್ತಿದೆ. ರಾಜ್ಯ BJP Karnataka ಸರಕಾರ ಮತ್ತು ಕನ್ನಡ ಸಂಸ್ಕೃತಿ ಖಾತೆ ಸಚಿವ ಶ್ರೀ Sunil Kumar Karkala ಅವರೇ ಈ ಬಗ್ಗೆ ಕನ್ನಡಿಗರಿಗೆ ಉತ್ತರ ಕೊಡಬೇಕು.
ತಕ್ಷಣ ಕನ್ನಡ ಪುಸ್ತಕ ಪ್ರದರ್ಶನವನ್ನು ಆಯೋಜನೆ ಮಾಡಬೇಕು.
ನಾಡಿನ ಸಮಸ್ತ ಜನತೆಗೆ ಬೆಂಗಳೂರು ಮಹಾನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯ ಶುಭಾಶಯಗಳು.
#ಕೆಂಪೇಗೌಡರ_ಜಯಂತಿ
🤦🏻♂️
ಮೋದಿ ಬರ್ತಾರೆಂದು 23 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿದ್ದ ರಸ್ತೆ ಅಧೋಗತಿಗೆ! ರಾಜ್ಯ ಸರ್ಕಾರಕ್ಕೆ ವರದಿ ಕೇಳಿದ ಬಿಬಿಎಂಪಿ ಡಾಂಬರ್ ರಸ್ತೆ ಕಳಪೆ ಕಾಮಗಾರಿ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ, ಪ್ರಧಾನಿ ....
ಕಟೀಲ್ ಅಲ್ಲ ಪಿಟೀಲು 😂🤣
ನಮಸ್ತೆ ಸ್ನೇಹಿತರೆ ಈ ಫೇಸ್ಬುಕ್ ಪೇಜ್ ನಾ ಮುಖ್ಯ ಉದ್ದೇಶ ನಮ್ಮೆಲ್ಲರ ಪ್ರಾದೇಶಿಕ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು 2023ರ ಮುಖ್ಯಮಂತ್ರಿಯಾಗಿ ಕುಮಾರಣ್ಣ ರಾಜ್ಯವನ್ನ ಉತ್ತಮ ಆಡಳಿತ ಮಾಡ್ಬೇಕು ಅನ್ನೋದು.. ಇನ್ನು ಮುಂದೆ ಪಕ್ಷದ ಎಲ್ಲ ಚಟುವಟಿಕೆಗಳು ಈ ಪೇಜ್ ನಲ್ಲಿ ಮುಂದುವರೇಸುತ್ತೇನೆ.. ನಿಮ್ಮ ಸಹಕಾರ ಹೀಗೆ ಇರಲಿ 🙏🏻
ನೆಲ, ಜಲ ಮತ್ತು ಭಾಷೆಯ ಹಕ್ಕು ಸಾಧನೆಗಾಗಿ ನಮ್ಮ ಗುಲಾಮಗಿರಿ ಇನ್ನೆಷ್ಟು ದಿನ? ಭಾರತದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ. ಒಕ್ಕೂಟ ವ್ಯವಸ್ಥೆಯ ಗಣರಾಜ್ಯಕ್ಕೆ 73 ವರ್ಷ. ನಾಡಿನ ಏಕೀಕರಣಕ್ಕೂ 49ರ ಹೊತ್ತು.
ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿ ಅನೇಕ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ಕರ್ನಾಟಕವು ಇಂದು ಪ್ರತಿಯೊಂದಕ್ಕೂ ಕೇಂದ್ರದ ಮುಂದೆ ದೇಹಿ ಎನ್ನುವಂಥ ದುಸ್ಥಿತಿ.
ಉದ್ಯೋಗ, ಅನುದಾನ, ತೆರಿಗೆ ಪಾಲು.. ಹೀಗೆ ಎಲ್ಲದರಲ್ಲೂ ಕರ್ನಾಟಕದ ಕಡೆಗಣನೆ ನಿರಂತರವಾಗಿದೆ. ಹಕ್ಕುಗಳ ಸಾಧನೆಗಾಗಿ ಕನ್ನಡಿಗರೆಲ್ಲಾ ಒಟ್ಟಾಗಿ ಹೆಜ್ಜೆ ಇಡಬೇಕಿದೆ. ಒಗ್ಗಟ್ಟಿನ ಹೋರಾಟ ಬಿಟ್ಟರೆ ನಮಗೆ ನ್ಯಾಯ ಸಿಗದು.
ಈ ನಿಟ್ಟಿನಲ್ಲಿ ರಾಜ್ಯದ ಕನ್ನಡಪರ ಒಕ್ಕೂಟಗಳ ಮುಖಂಡರ ಜತೆ ಗುರುವಾರ 11 ಗಂಟೆಗೆ ಮುಕ್ತ ಮಾತುಕತೆ ನಡೆಸುತ್ತಿದ್ದೇನೆ. ನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರದ ದಿಕ್ಕಿನಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ.
ಕನ್ನಡ ಮನಸುಗಳ ಜತೆಗಿನ ನನ್ನ ಚರ್ಚೆ ನಾಡಿನ ಪ್ರಗತಿಗೆ ನವದಿಕ್ಕು ತೊರಲಿದೆ ಎಂಬುದು ನನ್ನ ಅಚಲ ವಿಶ್ವಾಸ. ಕನ್ನಡದ ಮಕ್ಕಳಾದ ನಮ್ಮೆಲ್ಲರ ಕೆಚ್ಚು ಸುವರ್ಣ ಕರ್ನಾಟಕದ ಸಮಗ್ರ ಮುನ್ನಡೆಗೆ ನಾಂದಿ ಆಗಲಿ.
ಬನ್ನಿ, ನಾವೆಲ್ಲರೂ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ.
#ಕನ್ನಡಿಗರಿಗೇ_ಅಧಿಕಾರ_ಬಲಿಷ್ಠ_ಕರ್ನಾಟಕದ_ಸಾಕಾರ
ಈ ರೀತಿ ಹೇಳಿಕೆಯನ್ನ ರಾಷ್ಟ್ರೀಯ ಪಕ್ಷದಲ್ಲಿರೋ ಯಾರಾದ್ರು ಕೊಡ್ರಪ್ಪ ನಿಮಗೆ ಧಮ್ಮು ಇದ್ರೆ!!!!
Preetham J Gowda ಈ ಮಾತು ಕೇಳಿ ಬದುಕಬೇಕ ನೀನು, 😂😂
ಅಯೋಗ್ಯರೆಲ್ಲ ಜನ ಪ್ರತಿನಿಧಿಗಳಾದರೆ
ಜನರ ನೋವುಗಳಿಗೆ ಸ್ಪಂದಿಸುವವರು ಯಾರು?
ರೀ ಈಶ್ವರಪ್ಪನವರೆ ನಿಮ್ಮ ಮನೆಯಲ್ಲಿ ಈ ಘಟನೆ ನಡೆದಿದ್ರೆ ಸುಮ್ನೆ ಇರ್ತಿದ್ರಾ ? 😡
ಕೇವಲ ಮೂರೇಮೂರು ವರ್ಷಗಳ ಹಿಂದೆ ಮುನಿರತ್ನ ಗುರುತಿನ ಚೀಟಿ ಹಗರಣ ನಡೆಸಿದ್ದಾರೆ ಅಂತ ಎಲ್ಲಾ ಕಡೆ ಭಾಷಣ ಮಾಡಿ ಬಾಯ್ ಬಡ್ಕೊಂಡು ,ಅಂತಹ ಕಳ್ಳನನ್ನೆ ಪಕ್ಷಕ್ಕೆ ಕರ್ಕೊಂಡು ಇವತ್ತು ಆತನನ್ನೆ ಕ್ಯಾಬಿನೆಟ್ ಮಂತ್ರಿ ಮಾಡಿರುವ ಏಕೈಕ ಧಾರ್ಮಿಕ ನಿಷ್ಠಾವಂತ ದೇಶಭಕ್ತ ಪಕ್ಷ ಬಿಜೆಪಿ ಅಂತ ಹೇಳಿಕೊಳ್ಳಲು ಬಹಳ ಸಂತಸವಾಗುತ್ತೆದೆ ಬಂಧುಗಳೇ..
ಬೋಲೋ ಭಾರತ್ ಮಾತಾ ಕೀ 🚩🚩
❤️
ನಾವು ಭ್ರಷ್ಟಾಚಾರ ಸಹಿಸಲ್ಲ, ಪ್ರೋತ್ಸಾಹಿಸಲ್ಲ... ಇದು ಈ ಪಕ್ಷದ ನಾಯಕರ, ಪ್ರತಿ ಭಾಷಣದಲ್ಲೂ ಬರೋ ಮಾತು. ಆದ್ರೆ ಹೇಳೋದು ವೇದಾಂತ, ತಿನ್ನೋದ್ ಬದನೆಕಾಯಿ ಅಂತಾರಲ್ಲ ಈ ಮಾತು ಇವ್ರಿಗೆ ಬಹಳ ಚೆನ್ನಾಗ್ ಅನ್ವಯ ಆಗುತ್ತೆ. ಖಾಸಗಿ ವಾಹಿನಿಯವ್ರು, ಸ್ಟಿಂಗ್ ಆಪರೇಷನ್ ನಡೆಸಿ, ಸಾಕ್ಷಿ ಸಮೇತ ಭ್ರಷ್ಟಾಚಾರ ಬಯಲುಗೊಳಿಸಿದ್ರೂ, ಝಿರೋ ಟ್ರಾಫಿಕ್ ನಲ್ಲಿ ರಾಜಭವನಕ್ಕೆ ಕರೆಸಿಕೊಂಡು, ಸಚಿವ ಸ್ಥಾನನ ದಯಪಾಲಿಸಿದ್ದಾರೆ, ಈ ಪಕ್ಷದ ಹೈಕಮಾಂಡ್. ಹಾಗೆ ಕುಟುಂಬ ರಾಜಕಾರಣ ಸಹಿಸಲ್ಲ ಅಂದ್ರು. ಆದ್ರೆ ಗಂಡ ಎಂಪಿ ಹೆಂಡ್ತಿ, ಸಚಿವೆ. ಇತ್ತ ಒಂದೂ ಕಪ್ಪು ಚುಕ್ಕೆ ಇಲ್ಲದ ಹಾಲಾಡಿ ಶ್ರೀನಿವಾಸ ಶೆಟ್ರು ಇನ್ನೂ ಎಷ್ಟು ವರ್ಷ ಕಾಯ್ಬೇಕೊ ಗೊತ್ತಿಲ್ಲ. ಇನ್ನೂ ಹೇಗೆ ನಂಬೋದು ಈ ಪಕ್ಷದ ನಾಯಕರ ಮಾತುಗಳನ್ನ?
ಪ್ರೀತಿಯ ಸ್ನೇಹಿತರೇ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರೇ,
ನಿಮ್ಮೆಲ್ಲರಿಗೂ ತಿಳಿದಿರುವಂತೆ ನಾಳೆ 05.08.2021 ನನ್ನ ಹುಟ್ಟಿದ ದಿನ, ಪ್ರತಿವರ್ಷ ನೀವೆಲ್ಲಾ ನಾನು ಇರುವಲ್ಲಿಗೆ ಬಂದು ವಿವಿಧ ರೀತಿಯ ಉಡುಗೊರೆಗಳೊಂದಿಗೆ ಶುಭ ಹಾರೈಕೆಗಳನ್ನು ಸಲ್ಲಿಕೆ ಮಾಡುತ್ತಿದ್ದಿರಿ. ಆದರೆ ಕಳೆದ ಎರಡು ವರ್ಷಗಳಿಂದ ಕೊರೋನಾ ಎಂಬ ಸಾಂಕ್ರಾಮಿಕ ರೋಗದಿಂದ ಇಡೀ ವಿಶ್ವವೇ ನರಳುತ್ತಿದೆ ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ನಾವೆಲ್ಲರೂ ವೈಯಕ್ತಿಕ ಅಂತರದ ಜೊತೆಗೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಜೊತೆಗೆ ದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭಾ ಅಧಿವೇಶನದಲ್ಲಿ ಪಾಲ್ಗೊಂಡಿರುವ ಕಾರಣದಿಂದ ನಾನು ಯಾರಿಗೂ ಲಭ್ಯವಿರುವುದಿಲ್ಲ.
ಈ ಕಾರಣದಿಂದ ನನ್ನ ಅಭಿಮಾನಿಗಳು, ಸ್ನೇಹಿತರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ನೀವಿರುವಲ್ಲಿಂದಲೇ ಶುಭ ಹಾರೈಕೆಗಳನ್ನು ಸಲ್ಲಿಸಿ,ನಿಮ್ಮ ಶುಭಾಶಯಗಳು ನನಗೆ ತಲುಪುತ್ತವೆ. ಸಾಧ್ಯವಾದರೆ ಕೋವಿಡ್ ನಿಂದ ಸಮಸ್ಯೆಗೊಳಗಾದವರಿಗೆ, ಹಿರಿಯ ನಾಗರೀಕರಿಗೆ, ಬಡವರಿಗೆ ಹಾಗೂ ವಿಶೇಷ ಚೇತನರಿಗೆ ಸಹಾಯ ಮಾಡುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ.
ಕಡೆಯದಾಗಿ ನನ್ನ ಎಲ್ಲ ಹಿತೈಷಿಗಳಿಗೆ, ಮಾರ್ಗದರ್ಶಕರಿಗೆ ಹಾಗೂ ಗುರುಹಿರಿಯರಿಗೆ ವಂದಿಸಿ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಆಶಿಸುತ್ತೇನೆ.
Prajwal Revanna
ಹುಟ್ಟು ಹಬ್ಬದ ಶುಭಾಶಯಗಳು ಬ್ರದರ್ 🍰💐
05 AUG 2021
Prajwal Revanna
ವಯಸ್ಸಾದರೂ ಏನು ಗುರು ನಿಮ್ ಕಥೆ.
ಸಚಿವರಿಗೆ ಪ್ರಮಾಣ ವಚನ ಸಂಭ್ರಮ; BSY ಬೆರಳಿಗೆ ಮಹಿಳೆ ಸೀರೆ ಪಿನ್ ಚುಚ್ಚಿ ನೋವು Kannada News Portal