Ayisha Perne

Ayisha Perne

Contact information, map and directions, contact form, opening hours, services, ratings, photos, videos and announcements from Ayisha Perne, Health/Beauty, .

12/12/2021

ಯಶಸ್ವೀ ಕಾರ್ಯಕ್ರಮ.

ಮಧುಮೇಹ ಮತ್ತು ರಕ್ತದೊತ್ತಡ‌ (Diabetes & Hypertension- BP) ಬಗ್ಗೆ ಮಾಹಿತಿ ಕೊಡಲಾಯಿತು.

ಈ ಮಾಹಿತಿ ಶಿಬಿರವು ಮಾತೃಭಾಷೆ ಬ್ಯಾರಿಯಲ್ಲಾಗಿದ್ದು ವಿಶೇಷವಾಗಿತ್ತು.

#ಆರೋಗ್ಯ_ಜಾಗೃತಿ_ಅಭಿಯಾನ_5
12-12-2021

11/12/2021

12-12-2021

Photos from Ayisha Perne's post 13/11/2021

ದ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಕಾರ್ಲ

ೋಗ್ಯ_ಜಾಗೃತಿ_ಅಭಿಯಾನ_3
ವಿಷಯ:ವೈಯಕ್ತಿಕ ಸ್ವಚ್ಚತೆ ಮತ್ತು ಕೊರೋನ ಬಗ್ಗೆ
ದಿನಾಂಕ:13-11-2021
ಸಮಯ:10:30-11:10

Photos from Ayisha Perne's post 10/11/2021

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬಿಳಿಯೂರು.

#ಆರೋಗ್ಯ_ಜಾಗೃತಿ_ಅಭಿಯಾನ_2
ವಿಷಯ:ಕೊರೋನ ಬಗ್ಗೆ
ದಿನಾಂಕ:9-11-2021
ಸಮಯ: 11:15-11:50

Photos from Ayisha Perne's post 09/11/2021

ಮೊದಲ ಕಾರ್ಯಕ್ರಮ ‌ನಾ ಕಲಿತ ಶಾಲೆ ಮಜೀದಿಯಾ ದೋರ್ಮೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರ್ನೆ ಯಲ್ಲಿ

#ಆರೋಗ್ಯ_ಜಾಗೃತಿ_ಅಭಿಯಾನ_1
#09/11/2021
ಸಮಯ: 10:15 ರಿಂದ 10:45

09/11/2021

ಮೂರು ವರ್ಷದ ಹಿಂದೆ ಯೆನೆಪೋಯ ಸಮುದಾಯ ವೈದ್ಯಕೀಯ ವಿಭಾಗದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಮಂಗಳೂರಿನ ಬೆಂಗರೆ, ಕುದ್ರೋಳಿ, ಬಂದರ್ ಈ ಭಾಗಗಳಲ್ಲಿ ಫೀಲ್ಡ್ ಮಾಡಿ ಆ ಪ್ರದೇಶದ ಜನಗಳಿಗೆ ಬಿಪಿ,ಶುಗರ್ ರಾಪಿಡ್ ಟೆಸ್ಟ್ ಮಾಡಿ , ಆರೋಗ್ಯ ಮಾಹಿತಿಯನ್ನು ಕೊಡ್ತಾ ಇದ್ದೆವು.

ಹೆಚ್ಚಾಗಿ ನಾನ್ ಕಮ್ಯುನಿಕೇಬಲ್ ಡೀಸೀಸ್ ಆದ ಹೈಪರ್ಟೆನ್ಷನ್,(ಬಿ.ಪಿ) ಡಯಾಬಿಟಿಸ್ (ಮಧುಮೇಹ) ಈ ಖಾಯಿಲೆಯ ಬಗ್ಗೆ ಹೆಚ್ಚಿನವರಲ್ಲಿ ತಿಳುವಳಿಕೆಯ ಕೊರತೆಯಿರುತ್ತಿತ್ತು. ಒಂದು ಸಿಂಪಲ್ ರಾಪಿಡ್ ಟೆಸ್ಟ್ ಮಾಡಿಸಲೂ ಭಯ ಪಡುತ್ತಿದ್ದರು. ಅಂತಹ ಸಮಯದಲ್ಲಿ ಅವರಿಗೆ ಅದರ ಬಗ್ಗೆ ಅರಿವು ಮೂಡಿಸಿ ಆರೋಗ್ಯದ ಬಗ್ಗೆ ಗಮನಹರಿಸಲು ಮಾರ್ಗದರ್ಶನ ನೀಡ್ತಾ ಇದ್ದೆವು.

ಕೆಲವೊಂದೆಡೆ ಹೆಲ್ತ್ ಟಾಕ್ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೆವು. ಅಂಗನವಾಡಿ ಮಕ್ಕಳಿಗೆ, ಶಾಲಾ ಕಾಲೇಜು ಗಳಲ್ಲಿ ಹಾಗೂ ಗರ್ಭಿಣಿ ಸ್ತ್ರೀಯರು ಹೀಗೇ ಒಂದೊಂದು ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಏರ್ಪಡಿಸುತ್ತಿದ್ದೆವು.

ಆ ದಿನಗಳಲ್ಲಿ ನನ್ನಲ್ಲೊಂದು ಪ್ಲಾನ್ ಇತ್ತು ನಗರ ಪ್ರದೇಶಗಳಲ್ಲಿ ಇಂತಹ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದವರು ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲೂ ಇಂತಹ ಕಾರ್ಯಕ್ರಮ ಗಳು ನಡೆಯಬೇಕು ಅಂತ. ಅದಕ್ಕಾಗಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದೆ. ಅದೇ ಸಮಯಕ್ಕೆ ಕೊರೋನಾ ಬಂತು .

ಇದೀಗ‌ ಮತ್ತೆ ಅದಕ್ಕೊಂದು ಸೂಕ್ತ ಅವಕಾಶವನ್ನು ಹುಡುಕಿದಾಗ ನಮ್ಮೂರಿನ ಹತ್ತಿರದಲ್ಲೇ ಇರುವ ನಾಲ್ಕೈದು ಸರಕಾರಿ ಶಾಲೆಗಳು ಕಣ್ಣ ಮುಂದೆ ಬಂದವು. ಮಕ್ಕಳಲ್ಲಿ ಕೊರೋನಾ ಭಯ ದೂರವಿರಿಸಲು, ಅದರ ಬಗ್ಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ನನ್ನ ಮೊದಲ ಹೆಜ್ಜೆಯನ್ನು "ಆರೋಗ್ಯ ಜಾಗೃತಿ ಅಭಿಯಾನ" ದ ಮೂಲಕ ನಾಳೆಯಿಂದ ನಾನು ಕಲಿತ ಶಾಲೆಯಿಂದಲೇ ಆರಂಭಿಸುತ್ತಿದ್ದೇನೆ.

ಮುಂದೆ ಹಲವು ಕನಸುಗಳಿವೆ, ನಾನು ಕಲಿತದ್ದು ಇತರರಿಗೆ ಉಪಯೋಗಕ್ಕೆ ಆಗುವಂತೆ ನನ್ನದೊಂದು ಪುಟ್ಟ ಸೇವೆ.

ಆಯಿಷಾ ಪೆರ್ನೆ
ಆರೋಗ್ಯ ಮತ್ತು ನೈರ್ಮಲ್ಯ ನಿರೀಕ್ಷಕರು
ಮಂಗಳೂರು.

09/11/2021

ನಮಸ್ತೇ‌ ಸ್ನೇಹಿತರೇ, ನನ್ನ ಪೇಜ್ ಗೆ ನಿಮಗೆಲ್ಲರಿಗೂ ಸ್ವಾಗತ

Website