One family one Guru

One family one Guru

We believe Shri Arjuna Avadhoota Maharaj is reincarnation of Paramapujya Shri Venkatachala Avadhoota

30/03/2023

|| ಶ್ರೀ ಗುರುಭ್ಯೋ ನಮಃ ||

ಮಾತಾ ರಾಮೋ ಮತ್-ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್-ಸಖಾ ರಾಮಚಂದ್ರಃ ।
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ
ನಾನ್ಯಂ ಜಾನೇ ನೈವ ಜಾನೇ ನ ಜಾನೇ||

|| ಎಲ್ಲರಿಗೂ ಶ್ರೀ ರಾಮ ನವಮಿಯ ಶುಭಾಶಯಗಳು ||

22/03/2023
22/03/2023

A disciple should be thankful to his guru,for gracing him more than he can wish for and blessing him more than what he deserve 🙏

Jai Gurudeva🙏

ಒಬ್ಬ ಶಿಷ್ಯನು ತನ್ನ ಗುರುವಿಗೆ ಕೃತಜ್ಞರಾಗಿರಬೇಕು, ಅವನು ಬಯಸುವುದಕ್ಕಿಂತ ಹೆಚ್ಚಿನದನ್ನು ಅನುಗ್ರಹಿಸಿದ್ದಕ್ಕಾಗಿ ಮತ್ತು ಅರ್ಹತೆಗಿಂತ ಹೆಚ್ಚಾಗಿ ಅವನನ್ನು ಆಶೀರ್ವದಿಸಿದಕ್ಕಾಗಿ.🙏

ಜೈ ಗುರುದೇವ 🙏

22/03/2023

ಯಾವಾಗ ನಿಮ್ಮ ಮನಸ್ಸು ಯೋಚನೆಗಳಿಂದ ಮತ್ತು ಗೊಂದಲಗಳಿಂದ ತುಂಬಿರುತ್ತದೊ, ನಿಮ್ಮನ್ನು ಸರಿಯಾದ ಗುರಿ ಮುಟ್ಟಿಸಿ ನಿಮ್ಮ ಜ್ಞಾನೋದಯಕ್ಕೆ ಕಾರಣವಾಗುವವನೇ ಗುರು. 🙏🙏

When your mind is cluttered with thoughts and confusion,a Guru is your GPS-he shall es**rt you to reach the destination safely with enlightening conduct 🙏🙏

Jai Gurudeva🙏

22/03/2023

"The way to show 'Gratitude' to your Guru is to follow his teachings and path of righteousness shown by him".

Jai Gurudeva

22/03/2023

"Guru is everything in our eternal life , nothing is possible without him. Life needs some power to push you up and Guru is that Superpower ".

Jai Gurudeva

Photos from One family one Guru's post 27/02/2023

ಶ್ರೀ ಗುರುಭ್ಯೋ ನಮಃ

ಬ್ರಾಹ್ಮಿನ್ ಆರ್ಗನೈಜೇಷನ್ ಆಫ್ ಇಂಡಿಯಾ (ರಿ) ಜಿಲ್ಲಾ ಘಟಕ, ವಿಜಯಪುರ ಆಯೋಜಿಸಿದ್ದ "ಬ್ರಾಹ್ಮಣ ಶಕ್ತಿ ಸಂಗಮ - 2023" ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜರು ದಿವ್ಯ ಉಪಸ್ಥಿತಿವಹಿಸಿದ್ದರು. ವಿಜಯಪುರ ಜಿಲ್ಲೆಯ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಕಣ್ವ ಮಠದ ಶ್ರೀಪಾದಂಗಳವರು, ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು (ಭೀಮಾಶಂಕರ ಮಠ, ಸಿಂದಗಿ, ವಿಜಯಪುರ ಜಿಲ್ಲೆ), ಸಂಘದ ಪದಾಧಿಕಾರಿಗಳು ಮತ್ತು ಅಪಾರ ಸಂಖ್ಯೆಯಲ್ಲಿ ವಿಪ್ರ ಬಾಂಧವರು ಭಾಗವಹಿಸಿ ಗುರು ಆಶೀರ್ವಚನ ಆಲಿಸಿದರು.

ಜೈ ಗುರುದೇವ 🙏

28/01/2023

|| ಶ್ರೀ ಗುರುಭ್ಯೋನಮಃ ||

ತಂ ಸೂರ್ಯಂ ಜಗತಾಂ ನಾಥo|
ಜ್ನಾನ ವಿಜ್ನಾನ ಮೋಕ್ಷದಂ |
ಮಹಾ ಪಾಪ ಹರಂ ದೇವಂ
ತಂ ಸೂರ್ಯಂ ಪ್ರಣಮಾಮ್ಯಹಂ ||

|| ಎಲ್ಲರಿಗೂ ಸೂರ್ಯ ಜಯಂತಿಯ ಶುಭಾಶಯಗಳು ||

Photos from One family one Guru's post 15/01/2023

ಓಂ ಶ್ರೀ ಗುರುಭ್ಯೋ ನಮಃ

ಶ್ರೀ ಕ್ಷೇತ್ರ ಹೆಬ್ಬಳ್ಳಿಯ ಚೈತನ್ಯ ಆಶ್ರಮದ ಶ್ರೀ ದತ್ತಾವಧೂತ ಗುರು ಮಹಾರಾಜರು ಮೈಸೂರು ನಗರಕ್ಕೆ ದಿನಾಂಕ 09/01/2023 ರಂದು ಆಗಮಿಸಿದರು. ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜರು ಮೈಸೂರು ರೈಲು ನಿಲ್ದಾಣದಲ್ಲೇ ಎದುರುಗೊಂಡು ಸ್ವಾಗತಿಸಿ ಆರತಿ ಬೆಳಗಿದರು. ದಿನಾಂಕ 11/01/2023ರ ಬುಧವಾರದಂದು ಶ್ರೀ ದತ್ತಾವಧೂತ ಮಹಾರಾಜರು ಸೋನಾರ್ ಬೀದಿಯಲ್ಲಿರುವ ಗುರುನಿವಾಸಕ್ಕೆ ಚಿತ್ತೈಸಿದ ಸಂದರ್ಭದಲ್ಲಿ ಶ್ರೀ ಅರ್ಜುನ ಅವಧೂತ ಮಹಾರಾಜರು ಶ್ರೀ ದತ್ತವಾಧೂತ ಮಹಾರಾಜರ ಪಾದಪೂಜೆ ನೆರವೇರಿಸಿದರು. ನಂತರ ಶ್ರೀ ದತ್ತಾವಧೂತ ಮಹಾರಾಜರು ನೆರೆದಿದ್ದ ಭಕ್ತವೃಂದಕ್ಕೆ ಪ್ರವಚನ ನೀಡಿ, ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಜೈ ಗುರುದೇವ 🙏

Photos from One family one Guru's post 11/12/2022

ಓಂ ಶ್ರೀ ಗುರುಭ್ಯೋ ನಮಃ

ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ದಿನಾಂಕ 07/12/2022ರ ಬುಧವಾರದಂದು ಮೈಸೂರಿನ ಜಯನಗರದ ರಾಮ ಮಂದಿರದಲ್ಲಿ ವೈಭವಯುತವಾಗಿ ದತ್ತ ಜಯಂತಿ ಭಕ್ತಿ ಭಾವದಿಂದ ನೆರವೇರಿತು. ಪೂಜ್ಯ ಶ್ರೀ ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಬಾಲಕೃಷ್ಣಾನಂದ ಮಹಾಸಂಸ್ಥಾನಮ್, ತಲಕಾಡು ಮತ್ತು ಜಗದ್ಗುರು ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿರವರು, ಶ್ರೀ ಸ್ಫಟಿಕಪುರಿ ಮಹಾಸಂಸ್ಥಾನ, ಸಿರಾ ತಾಲೂಕು, ಇವರು ಆಗಮಿಸಿ ನೆರೆದಿದ್ದ ಭಕ್ತ ಸಮೂಹಕ್ಕೆ ಆಶೀರ್ವದಿಸಿದರು.

ದತ್ತ ಹೋಮ ನೆರವೇರಿಸಿ, ಭಕ್ತಾದಿಗಳಿಗೆ ದತ್ತ ಮಹಾರಾಜರಿಗೆ ಅಭಿಷೇಕ ಮಾಡುವ ಅವಕಾಶ ಕಲ್ಪಿಸಿ, ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜೈ ಗುರುದೇವ 🙏

Photos from One family one Guru's post 05/12/2022

ಓಂ ಶ್ರೀ ಗುರುಭ್ಯೋ ನಮಃ

ಮೈಸೂರಿನ ಶಂಕರ ಮಠದಲ್ಲಿ ದಿನಾಂಕ 30 ನವೆಂಬರ್, 1 ಮತ್ತು 2ನೇ ಡಿಸೆಂಬರ್ ರಂದು ಅಕ್ಷರ ಲಕ್ಷ ಗಾಯತ್ರಿ ಜಪ ಸಾಂಗತಾ ಯಾಗವು ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಈ ಮಹತ್ಕಾರ್ಯಕ್ಕೆ ಸುಮಾರು 50ಹೆಚ್ಚು ಗುರುಭಕ್ತರು ಕಳೆದ ಮೂರು ತಿಂಗಳಿಂದ ಇಪ್ಪತ್ತನಾಲ್ಕು ಲಕ್ಷಕ್ಕೂ ಹೆಚ್ಚು ಗಾಯತ್ರಿ ಮಂತ್ರ ಅನುಷ್ಠಾನವನ್ನು ಮಾಡಿದ್ದರು. ಈ ಯಾಗವನ್ನು ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ನವರು ಆಯೋಜಿಸಿದ್ದರು. ನೂರಾರು ಜನ ಇದರಲ್ಲಿ ಪಾಲ್ಗೊಂಡು ಭಕ್ತಿ ಭಾವದಿಂದ ಈ ಅಪರೂಪದ ಯಾಗವನ್ನು ಕಣ್ಣು ತುಂಬಿಕೊಂಡರು.