Drawing Teacher Graduate Association

Drawing Teacher Graduate Association

Save Drawing in Education

23/12/2019

Hi every one new thoughts begins in New Year..... Wait and join

11/04/2018
10/07/2017

✍💐 *ಚಿತ್ರಕಲಾ ಕಾಲೇಜುಗಳಿಂದ ನಿಯಮ ಉಲ್ಲಂಘನೆ?*💐✍

*ರಾಜ್ಯದ 81 ಚಿತ್ರಕಲಾ ಮಹಾವಿದ್ಯಾಲಯಗಳಲ್ಲಿ ಇಂದಿಗೂ ಎಸ್ಸೆಸ್ಸೆಲ್ಸಿ ನಂತರ ಕೋರ್ಸ್‌ಗೆ ಪ್ರವೇಶ*

*ಹುಬ್ಬಳ್ಳಿ: ದೇಶದಲ್ಲಿರುವ ಎಲ್ಲ ಕಲಾ ಕಾಲೇಜುಗಳು ಪಿ.ಯು.ಸಿ ನಂತರವಷ್ಟೇ ಪ್ರವೇಶ ನೀಡಬೇಕು ಎಂಬ ವಿಶ್ವವಿ ದ್ಯಾಲಯ ಧನಸಹಾಯ ಆಯೋಗದ (ಯು.ಜಿ.ಸಿ) ನಿಯಮ ಉಲ್ಲಂಘಿಸಿ, ರಾಜ್ಯದ ಬಹುತೇಕ ಕಲಾ ಕಾಲೇಜುಗಳು ಎಸ್ಸೆಸ್ಸೆಲ್ಸಿ ನಂತರ ಕಲಾ ಮೂಲ (ಫೌಂಡೇಷನ್‌ ಕೋರ್ಸ್‌) ತರಗತಿಗಳಿಗೆ ಇಂದಿಗೂ ಪ್ರವೇಶ ನೀಡುತ್ತಿವೆ.*

*ಮನೋಜಕುಮಾರ್ ಗುದ್ದಿ*
*ಪಿ.ಯು.ಸಿ ನಂತರವಷ್ಟೇ ನಾಲ್ಕು ವರ್ಷಗಳ ಬ್ಯಾಚಲರ್‌ ಆಫ್‌ ವಿಜ್ಯುವಲ್‌ ಆರ್ಟ್ಸ್‌ (ಬಿವಿಎ) ಮತ್ತು ಬ್ಯಾಚಲರ್‌ ಆಫ್‌ ಫೈನ್ ಆರ್ಟ್‌ (ಬಿ.ಎಫ್‌.ಎ) ಪದವಿ ನೀಡುವಂತೆ ಮೇ 24ರಂದು ಯು.ಜಿ.ಸಿ ಕಾರ್ಯದರ್ಶಿ ಪ್ರೊ. ಜಸ್ಪಾಲ್‌ ಎಸ್‌. ಸಂಧು ಸುತ್ತೋಲೆ ಹೊರಡಿಸಿದ್ದಾರೆ. ಇಷ್ಟಾಗಿಯೂ ಮೈಸೂರಿನ ಚಾಮ ರಾಜೇಂದ್ರ ದೃಶ್ಯಕಲಾ ಸರ್ಕಾರಿ ಕಾಲೇಜು (ಕಾವಾ), ದಾವಣಗೆರೆ ವಿಶ್ವವಿದ್ಯಾನಿಲ ಯದ ದೃಶ್ಯಕಲಾ ಕಾಲೇಜು, ತುಮಕೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬಾದಾಮಿ ಕೇಂದ್ರದ ಚಿತ್ರಕಲಾ ವಿಭಾಗದಿಂದ ಎಸ್ಸೆಸ್ಸೆಲ್ಸಿ ನಂತರದ ಬ್ಯಾಚಲರ್ ಆಫ್ ಫೈನ್ ಆರ್ಟ್‌ ವ್ಯಾಸಂಗಕ್ಕೆ ಮತ್ತೆ (ಐದು ವರ್ಷದ ಶಿಕ್ಷಣದ ಬೋಧನೆಗಾಗಿ) ಅರ್ಜಿ ಆಹ್ವಾನಿಸಲಾಗಿದೆ.*

*ಸಮಸ್ಯೆ ಏನು?: ‘ಎಸ್ಸೆಸ್ಸೆಲ್ಸಿ ನಂತರ ಎರಡು ವರ್ಷಗಳ ದೃಶ್ಯಕಲಾ ಕೋರ್ಸ್‌ ಹಾಗೂ ಆ ನಂತರ ಮೂರು ವರ್ಷಗಳ ಬಿ.ವಿ.ಎ, ಬಿ.ಎಫ್‌.ಎ ಕೋರ್ಸ್‌ಗಳನ್ನು ರಾಜ್ಯದ ಬಹುತೇಕ ಕಾಲೇಜುಗಳು ನಡೆಸಿಕೊಂಡು ಬರುತ್ತಿವೆ. ಈ ಕೋರ್ಸ್‌ ಪೂರ್ಣಗೊಳಿಸಿದವರಿಗೆ ಯು.ಜಿ.ಸಿಯ ನೆಟ್‌ ಪರೀಕ್ಷೆ ಬರೆಯಲು, ಬೇರೆ ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆ ಅಥವಾ ದೃಶ್ಯಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಅವಕಾಶ ನೀಡುವುದಿಲ್ಲ.*

*‘ಎಸ್ಸೆಸ್ಸೆಲ್ಸಿ ನಂತರದ ಈ ಕೋರ್ಸ್ ಅನ್ನು ಪಿ.ಯು.ಸಿಗೆ ತತ್ಸಮಾನ ಎಂದು ಪರಿಗಣಿಸಿದ್ದರಿಂದ, ಯು.ಜಿ.ಸಿ ನಿಯಮಾ ವಳಿಗಳ ಪ್ರಕಾರ ಇವರನ್ನು ಪದವೀಧ ರರು ಎಂದೂ ಪರಿಗಣಿಸುವುದಿಲ್ಲ. ಹಲವು ಚಿತ್ರಕಲಾ ಕಾಲೇಜುಗಳಿಗೆ ಈ ವಿಷಯ ಗೊತ್ತಿಲ್ಲ’ ಎನ್ನುತ್ತಾರೆ ಈ ಕುರಿತು ಯುಜಿಸಿಗೆ ಪತ್ರ ಬರೆದು ಗಮನ ಸೆಳೆದಿರುವ ಹುಬ್ಬಳ್ಳಿಯ ಚಿತ್ರಕಲಾ ಉಪನ್ಯಾಸಕ ಚಂದ್ರಕಾಂತ ಜಟ್ಟೆಣ್ಣವರ.*

*ದೇಶದ ಯಾವುದೇ ವಿಶ್ವ ವಿದ್ಯಾಲ ಯ ದಲ್ಲಿಯೂ ಐದು ವರ್ಷಗಳ ಕಲಾ ಶಿಕ್ಷಣ ನೀಡುವ ಪದ್ಧತಿ ಇಲ್ಲ. ಈ ಬಗ್ಗೆ ಅರಿವಿರದೇ ಕೋರ್ಸ್ ಪೂರ್ಣ ಗೊಳಿಸಿದ ಚಿತ್ರಕಲಾ ವಿದ್ಯಾರ್ಥಿಗಳಿಗೆ ವಿವಿಧ ವಿಶ್ವವಿದ್ಯಾಲಯ, ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸ ಕ ರಾಗುವ ಅವಕಾಶಗಳು ಸಿಗುವುದಿಲ್ಲ ಎಂದು ಅವರು ತಿಳಿಸಿದರು.*

03/07/2017

*ರಾಜ್ಯದಲ್ಲಿ ನಕಲಿ ಚಿತ್ರಕಲಾ ಪದವಿಗಳ ಹಾವಳಿ*
ಮಹನಿಯರೆ ಚಿತ್ರಕಲಾ ಪರಿಷತ್ ಬೆಂಗಳೂರು, ಬೆಂಗಳೂರು ವಿಶ್ವವಿದ್ಯಾಲ, ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಇವುಗಳನ್ನು ಹೊರತು ಪಡಿಸಿ ರಾಜ್ಯದ ವಿವಿಧ ವಿಶ್ವವಿದ್ಯಾಲಯ ಗಳು ಯು.ಜಿ.ಸಿ ನಿಯಮಾವಳಿಗಳನ್ನು ಉಲ್ಲಂಘಸಿ ಚಿತ್ರಕಲಾ ಪದವಿ ಕೊರ್ಸುಗಳನ್ನು ನಡೆಸುತ್ತಿರುವ ಆಘಾತಕಾರಿ ಅಂಶ ಪತ್ರಿಕೆಗಳಲ್ಲಿ ಬಹಿರಂಗ ಗೊಂಡಿದೆ. ಬಹುತೇಕ ಚಿತ್ರಕಲಾ ಶಾಲೆಗಳು ಪ್ರವೇಶ ಪ್ರಕಟಣೆಯ ಜಾಹಿರಾತುಗಳಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದು ಸಾರ್ವಜನಿಕರು, ಪೋಷಕರು, ಹಾಗೂ ವಿದ್ಯಾರ್ಥಿಗಳು ಈ ನಕಲಿ ಪದವಿ ಕೊರ್ಸು ಪಡೆಯುವ ಮುನ್ನ ಎಚ್ಚರಿಕೆ ವಹಿಸಲಿ ಕೋರಿದೆ. ಈ ನಕಲಿ ಪದವಿ ಕೋರ್ಸುಗಳನ್ನು ನಡೆಸುತ್ತಿರುವ ವಿಶ್ವವಿದ್ಯಾಲಗಳು ಅತಿ ಶೀಘ್ರದಲ್ಲಿ ಕಪ್ಪು ಪಟ್ಟಿಗೆ ಸೇರಲಿದ್ದು, ಸಾರ್ವಜನಿಕ ಹಿತಾಸಕ್ತಿಗಾಗಿ ಈ ಸಂದೇಶವನ್ನು ಪ್ರತಿಯೋಂದು ಗ್ರುಪ್ನಲ್ಲಿ ಶೇರ್ ಮಾಡಲು ಮುಂದಾಗಿರಿ. ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯ...🙏🙏🙏🙏

Timeline photos 19/06/2017

Telephone

Website