SHRI Sagar (C.T.R)

CENTRAL TIFFEN ROOM (C. T. R)

17/03/2024

ಅತಿ ಸಣ್ಣ ವಯಸ್ಸಿನಲ್ಲೇ ಮನಸ್ಸುಗಳ ಗೆದ್ದು, ಅಜರಾಮರವಾಗಿ ಲಕ್ಷಾಂತರ ಹೃದಯಗಳ ಮೇಲೆ ಪ್ರೀತಿಯ ಚಾಪು ಹಾಕಿದ, ಕರ್ನಾಟಕದ ನೆಚ್ಚಿನ ನಗುವಿಗೆ ನಮ್ಮ ನಮನಗಳು ❤️
What was that special magic inside this soul that could melt every heart just by a sparkling smile? Remembering the brightest star in the sky of love, today! Happy Birthday Dear Appu 🤍

01/01/2024

ಹಿಂದಿದ್ದೆಲ್ಲವ ಮಗಚು ಹಾಕಿ, ಶುರು ಮಾಡೋಣ ಈ ಹೊಸ ಸಂತಸದ ವರ್ಷ... ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ✨
Let the bygones be, and flip the past into a new bright futuristic year ahead! Take a leap of faith this leap year, and soar higher! Wishing you all a very Happy New Year💖

25/12/2023

ನಮ್ಮ ನಿಮ್ಮೆಲ್ಲರ ಮಧ್ಯೆ ಇರುವ ಒಳ್ಳತನವೆ ಸಾಂಟಾ ಎನ್ನಬಹುದೇ? ನಮ್ಮ ನಿಮ್ಮೆಲ್ಲರ ಒಳಗಿರುವ ಪ್ರೀತಿ ಹಂಚುವ ಗುಣಗಳನ್ನೇ ಸಾಂಟಾ ಎನ್ನಬಹುದೇ? ಎಲ್ಲೇ ಇರಲಿ ಆ ಸಾಂಟಾ ಕ್ಲಾಸ್.... ಏನೇ ಕೊಡಲಿ ಉಡುಗೊರೆಯಾಗಿ...ನಗುವುದನ್ನು ಮರೆಯದೇ ಪ್ರೀತಿಯಿಂದ ಆಚರಿಸಿ! ಕ್ರಿಸ್ಮಸ್ ಹಬ್ಬದ ಶುಭಾಶಯಗಳು 🎅

May your Santa handpick the best in life and the best of life, for you... Don't forget to cherish the santa within you who spreads love, and the santa in disguise beside you who's got your back!
Wishing everyone a very Merry Christmas 🎄

14/11/2023

ದೀಪಾವಳಿಯ ಹೊಳಪು ನಮ್ಮ ಹೃದಯದೊಳಗಿನ ನಿರಂತರ ಜ್ವಾಲೆಯ ಪ್ರತಿಬಿಂಬವಾಗುಳಿಯುತ್ತ, ಸಂಪ್ರದಾಯಗಳ ಮೌಲ್ಯಗಳಿಂದ ಉರಿಯುತ್ತ, ಮಿನುಗುವ ದೀಪದಂತೆ ಪ್ರೀತಿಯಿಂದ ಜಗತ್ತನ್ನು ಬೆಳಗಿಸಲಿ. ಸರ್ವರಿಗೂ ದೀಪಾವಳಿಯ ಶುಭಾಶಯಗಳು ✨

May the glow of Diwali be a reflection of the enduring flame within our hearts, fueled by traditions and kindled by values. Just like a burning Deepa, let us illuminate the world with love. Happy Deepavali ✨

09/11/2023

ಕನ್ನಡ ಚಿತ್ರರಂಗದ ದಂತಕಥೆಯಾಗಿರುವ ಶಂಕರ್ ನಾಗ್ ಅವರ ಸವಿ ನೆನಪಿನಲ್ಲಿ. ತಮ್ಮ ಅಸಾಧಾರಣ ಪ್ರತಿಭೆಯಿಂದ ತೆರೆ ಮತ್ತು ರಂಗಕ್ಕೆ ಜೀವ ತುಂಬಿದ ಕಲಾವಿದರು ಹಾಗೂ ನಿರ್ದೇಶಕರು. ಅಳಿಸಲಾಗದ ಛಾಪನ್ನು ಬಿಟ್ಟು, ಕನ್ನಡ ಚಲನಚಿತ್ರೋದ್ಯಮದಲ್ಲಿ ಇನ್ನೂ ಪ್ರತಿಧ್ವನಿಸುತ್ತಿರುವ ಸೃಜನಶೀಲತೆಯ ಹೊಸ ಅಲೆಯನ್ನೇ ತಂದರು.

ಅಂದಿನಿಂದ ಇಂದಿನವರೆಗೂ ಆಟೋ ಚಾಲಕರ ಚಿರ ಆರಾಧ್ಯ ದೈವವಾಗಿ ಉಳಿದಿರುವ ಶಂಕರ್ ನಾಗ್ ಅವರು, ಕಲಾ ಜಗತ್ತಿನ ಬಹುಮುಖ ರತ್ನ ಮತ್ತು ಕರ್ನಾಟಕದ ಅಮೂಲ್ಯ ಕೊಡುಗೆ. ಅವರ ನೆನಪುಗಳು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ.

In fond remembrance of the iconic Shankar Nag, a true legend of Kannada cinema. An artist, director, and a visionary who breathed life into the screen and stage with his exceptional talents. He left an indelible mark, bringing a new wave of creativity that still echoes in the Kannada Film Industry. Shankar Nag has remained as the eternal idol of auto drivers, ever since! As a versatile gem and Karnataka's cherished gift to the world of art, his memory lives on, universally adored, forever etched in our hearts.

Photos from SHRI Sagar (C.T.R)'s post 02/11/2023
Photos from SHRI Sagar (C.T.R)'s post 01/11/2023

ನಮ್ಮ ಪ್ರೀತಿಯ ರಾಜ್ಯವು ಕೆಂಪು ಮತ್ತು ಹಳದಿ ಬಣ್ಣದ‌ ವರ್ಣಗಳೊಂದಿಗೆ ಜೀವಂತವಾಗುವ ವಿಶೇಷ ದಿನವಿದು! ಬೀದಿಗಳುನ್ನು ಭವ್ಯವಾಗಿ ಅಲಂಕರಿಸುತ್ತ ತಂಗಾಳಿಯಲ್ಲಿ ಹೆಮ್ಮೆಯಿಂದ ಬೀಸುವ ಕರ್ನಾಟಕ ಧ್ವಜಗಳನ್ನು ನೋಡುವುದೇ ಚೆಂದ. ಅದರಲ್ಲೂ ವಿಶೇಷವೇನೆಂದರೆ, ನಮ್ಮ ರಾಜ್ಯದ ಭಕ್ತಿಯ ಸಾರವನ್ನು ವಿಭಿನ್ನವಾಗಿ ಹಿಡಿದಿಟ್ಟುಕೊಳ್ಳುವ ನಮ್ಮ ಶ್ರದ್ಧೆಯ ಚಾಲಕರು. ಆಟೋ ರಿಕ್ಷಾ ಚಾಲಕರು ತಮ್ಮ ವಾಹನಗಳನ್ನು ಕನ್ನಡ ಪ್ರೇಮದಿಂದ ತುಂಬಿದ ಕಲಾಕೃತಿಗಳಾಗಿ ಪರಿವರ್ತಿಸಿ, ಆಟೋಗಳನ್ನು ಪರಿಮಳಯುಕ್ತ ಹೂವುಗಳಿಂದ ಹಾಗೂ ಕನ್ನಡಕ್ಕೆ ಸೇವೆ ಸಲ್ಲಿಸಿದವರ ಭಾವಚಿತ್ರಗಳಿಂದ ಅಲಂಕರಿಸಿ, ಹೆಮ್ಮೆಯಿಂದ ಸವಾರಿ ಮಾಡುವರು…ಈ ಕರ್ನಾಟಕದ ಸೊಬಗನ್ನು ಕಾಪಾಡುತ್ತಾ ನಮ್ಮ ನಾಡ ದೇವತೆಯು ಸದಾ ನಮ್ಮ ಭಾಷೆಯ ಮೂಲಕ ಪೂಜಿಸಲ್ಪಡಲಿ ಎಂಬುದು ನಮ್ಮ ಹಾರೈಕೆ. ಎಂದೆಂದು ಕನ್ನಡ ಮಾತುಗಳನ್ನು ಸವಿಯುತ್ತಾ ನುಡಿಯುತ್ತಾ, ನಿಮ್ಮ ಪ್ರೀತಿಯ ಸಿ.ಟಿ.ಆರ್ ಕುಟುಂಬದಿಂದ ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🛺🏵️

It is that special day where our beloved state comes alive with the vibrant hues of Red and Yellow! The streets are adorned with the majestic Karnataka flag, fluttering proudly in the gentle breeze. But what truly captures the essence of our state's devotion is the heartwarming sight of our diligent drivers, who transform their humble vehicles into works of art filled with their love for Kannada. Auto Rickshaw drivers turn into true artists of the streets, where their autos become a canvas adorned with fragrant flowers, portraits of their favourite icons of Karnataka, and eloquent Kannada quotes. As we meander through the beautiful streets of our state, we can't help but be captivated by the presence of our beloved Naada Devathe, watching over us with a mother's affection. With wishes and love, we embrace our Kannada Naadu, cherishing the culture that binds us together. Happy Karnataka Rajyotsava! 🧡❤️

17/10/2023

'ಜೀವಮಾನದ ಸಮರ್ಪಣೆ' ಎನ್ನುವ ಪದದ ಜೀವಂತ ಉದಾಹರಣೆಯಾಗಿದ್ದ ನಮ್ಮ ಪ್ರೀತಿಯ ಉದ್ಯೋಗಿ ಶ್ರೀ ಸೋಮಶೇಖರ್ ಅವರ ನೆನಪುಗಳಲ್ಲಿ…
ಅರ್ಧ ಶತಮಾನಕ್ಕೂ ಹೆಚ್ಚು ಕಾಲ, 1960ರ ದಶಕದ ಅಂತ್ಯದಿಂದ 2020ರವರೆಗೆ, ಈ ಒಬ್ಬ ವ್ಯಕ್ತಿ ನಿರಂತರವಾಗಿ ನಮ್ಮ ಅಂಗಳವನ್ನು ತಮ್ಮ ಹಸನ್ಮುಖದಿಂದ ಬೆಳಗಿಸಿದರು.
ಸಿ.ಟಿ.ಆರ್ ಇತಿಹಾಸದ ಪುಸ್ತಕದಲ್ಲಿ ಅಚಲ ನಿಷ್ಠೆಗೆ ಸಾಕ್ಷಿಯಾಗಿ ನಿಲ್ಲುವ ಒಂದು ಪುಟವಿದ್ದರೆ, ಅದುವೇ ನಮ್ಮ ಪ್ರಾಮಾಣಿಕ ಕ್ಯಾಷಿಯರ್ ಶ್ರೀ ಸೋಮಶೇಖರ್ ಅವರದ್ದು. ಪ್ರತಿಯೊಂದು ವಹಿವಾಟಿನಲ್ಲೂ, ಕೇವಲ ಸಂಖ್ಯೆಗಳನ್ನು ಲೆಕ್ಕ ಹಾಕಲಿಲ್ಲ, ಆದರೆ ಅವರು ಸಂಬಂಧಗಳನ್ನು ನಿರ್ಮಿಸಿದರು. ನಮ್ಮಲ್ಲಿ ಬರುವ ಹಲವಾರು ಗ್ರಾಹಕರನ್ನು ಬಾಲ್ಯದಿಂದಲೂ ನೋಡುತ್ತಾ ಬಂದಿದ್ದ ನಮ್ಮ ಸೋಮಶೇಖರ್, ಅವರ ಜೊತೆಗಿನ ಸಣ್ಣ ಸಂಭಾಷಣೆಗಳ ಮೂಲಕ ಗ್ರಾಹಕರ ಕಷ್ಟ ಸುಖದ ಭಾಗಿಯಾಗಿದ್ದರು.
ಈ ಅಮೂಲ್ಯವಾದ 55ಕ್ಕಿಂತಲು ಹೆಚ್ಚು ವರ್ಷಗಳ ಕಾಲ ಸೋಮಶೇಖರ್ ಅವರು ನಮಗೆ ನೀಡಿದ ಲೆಕ್ಕವಿಲ್ಲದಷ್ಟು ಗಂಟೆಗಳಿಗೆ, ಪ್ರೀತಿ ಹಾಗೂ ನಿಷ್ಠೆಗೆ ನಾವು ಸದಾ ಆಭಾರಿ.

Remembering a lifetime of dedication: Our beloved employee, Mr. Somashekar!
For over half a century, from the late 1960s until 2020, one man consistently illuminated our desk and customers with his warm smile. In the tapestry of CTR's history, if there is one thread that stands out as an evidence to unwavering loyalty, it is that of our cherished cashier, Mr Somashekar's. With every transaction, he didn't just tally numbers but built relationships. He recognised young kids who grew up into loyal patrons of CTR, and shared in the joys and sorrows of countless customers. As we reflect on these precious 55+ years, we can't help but be filled with gratitude for the countless hours, the smiles, and the tireless commitment he offered to us.
Mr. Somashekar wasn't just a cashier…he was the heart and soul of family. His legacy continues to live on in the warm memories we hold close to our hearts.

02/10/2023

ಗಾಂಧೀಜಿ ಬೆಂಗಳೂರಿಗೆ ಬಂದಿದ್ದು ನಿಜವೇ?
1940ರ ದಶಕದಲ್ಲಿ ಗಾಂಧೀಜಿ ಅವರ ಉಪಸ್ಥಿತಿಯನ್ನು ಅಲಂಕರಿಸಿದ ಮಲ್ಲೇಶ್ವರದಲ್ಲಿರುವ ಈ ಹೆಮ್ಮೆಯ ಸಭಾಂಗಣವೇ ಈ ಪ್ರಶ್ನೆಗೆ ಉತ್ತರ.
ಕಾಲದ ಆಳದಲ್ಲಿ ಕಳೆದು ಹೋದ ನಮ್ಮ ದೇಶದ ಯೋದ್ಧರ ನೆನಪುಗಳನ್ನು ಭದ್ರವಾಗಿ ಅಡಗಿಸಿಟ್ಟುಕೊಂಡಿರುವ 'ಗಾಂಧಿ ಸಾಹಿತ್ಯ ಸಂಘವು' ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಹೋರಾಟಕ್ಕೆ ಮೂಕ ಸಾಕ್ಷಿಯಾಗಿ ನಿಂತಿದೆ. ಈ ಸಂಘವನ್ನು ಉಳಿಸಿಟ್ಟುಕೊಂಡಿರುವ ನಿರ್ವಹಣೆಗೆ ನಮ್ಮ ನಮನಗಳು, ಹಾಗೂ ಗಾಂಧಿ ಜಯಂತಿಯ ಶುಭಾಶಯಗಳು 🕊️

As we remember Mahatma Gandhiji today, let us journey back to the proud halls of this hidden gem in Malleswaram, where Gandhiji himself graced his presence during the 1940's.
Lost in the depths of time, yet alive in our hearts, the 'Gandhi Sahitya Sangha' stands as a silent witness to our nation's freedom struggle. Discover the echoes of history in this legendary library, where the aura of the Mahatma still lingers ✨

05/09/2023

ತಂದೆ-ತಾಯಿಯರ ಸಮಾನದಲ್ಲಿದ್ದು, ಆ ತುಂಟ ಪುಟ್ಟ ಕೈಗಳ ಹಿಡಿದು ತಪ್ಪುಗಳನ್ನು ತಿದ್ದಿ ಸದಾ ಸರಿ ದಾರಿಯ ತೋರಿಸಿ, ಜೀವನವನ್ನು ಗೆಲ್ಲುವ ಸ್ಥೈರ್ಯವನ್ನು ನಮ್ಮಲ್ಲಿ ತಂಬಿದ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು 👩‍🏫

Happy Teacher's Day to the guiding stars who traced a path of righteousness in our lives and led us to where we are today. Happy 📚

23/08/2023

ತುತ್ತನಿಡುತ್ತಾ ಅಮ್ಮ ತೋರುತ್ತಿದ್ದ ಆ ಚಂದಮಾಮನು, ಚಿಕ್ಕಂದಿನಿಂದಲು ಕನಸು, ಭರವಸೆ ಹಾಗು ಅಚ್ಚರಿಯ ಗುರುತಾಗಿ, ಜೀವನವನ್ನು ತಾನಿರುವ ಆಕಾಶದೆತ್ತರಕ್ಕೆ ಬೆಳಸುವ ಸ್ಪೂರ್ತಿಯಾಗಿದ್ದಾನೆ.‌ ಆ ಕನಸುಗಳನ್ನು ನಮ್ಮ ದೇಶದ ಹೆಮ್ಮೆಯ ' ಇಸ್ರೋ ಸಂಸ್ಥೆ' ಇಂದು ಮತ್ತೊಮ್ಮೆ ಸಾಧಿಸಿ, ಚಂದ್ರಯಾನ - ೩ ಬಾಹ್ಯಾಕಾಶ ನೌಕೆಯನ್ನು ಪ್ರಪಂಚದಿಡೀ ಭಾರತದ ಶ್ರೇಷ್ಠತೆಯ ಸಂಕೇತವನ್ನಾಗಿ ಮಾಡಿದೆ... ಇಸ್ರೋನ ಎಲ್ಲಾ ವಿಜ್ಞಾನಿಗಳಿಗೆ ನಮ್ಮ ಸಲಾಮ್ 🚀

Eversince our childhood, the Moon has been a symbol of awe associated with every morsel that our mothers fed us...a celestial body that triggered aspirations, hopes, and milestones in our lives! Today, our hearts are filled with pride to witness a team of brilliant Indian minds, once again, launching a dream to the same Moon. We salute for their stupendous mission 🌌🌕

15/08/2023

ಶಾಲೆಯ ಅಂಗಳದಲ್ಲಿ ಶ್ರುತಿ ಬದ್ಧವಾಗಿ "ಜಯ ಭಾರತ ಜನನಿಯ ತನುಜಾತೆ" ಹಾಡಿನೊಂದಿಗೆ ಶುರುವಾಗುತ್ತಿದ ಆ ಸ್ವಾತಂತ್ರೋತ್ಸವದ ಸಂಭ್ರಮ ಇಂದಿಗು ಮನದಲ್ಲಿ ಅಚ್ಚೆಳೆದಿದೆ. ಶಾಲೆಯ ಅಂಗಳದಲ್ಲಿ ಬಿಳಿಯ ಸಮವಸ್ತ್ರವನ್ನು ತೊಟ್ಟು ನಮ್ಮ ಹೆಮ್ಮೆಯ ಧ್ವಜಕ್ಕೆ ಪ್ರೀತಿಯಿಂದ ಒಂದು ಸಲಾಮ್ ಹಾಕಿ, "ಜೈ ಹಿಂದ್" ಎಂದು ಗಂಟಲಾಳದಿಂದ ಕೂಗಿದರೆ ರೋಮ ರೋಮದಲ್ಲು ದೇಶಭಕ್ತಿ ಹೊರಹೊಮ್ಮುತ್ತಿತ್ತು. ದೇಷ ಪ್ರೇಮ ಹೆಚ್ಚಿಸಿಕೊಂಡು ಹೊರಡುವ ಮುನ್ನ ಮೇಷ್ಟ್ರು ಕೊಡುತ್ತಿದ್ದ ಆ ತುಪ್ಪ ಭರಿತ ಮೈಸೂರ್ ಪಾಕ್ ಅಥವ ಲಾಡುವಿನ ಸುವಾಸನೆ ಮರೆಯಲಾರೆವು.

ನಮ್ಮ ದೇಶದ ಯೋದ್ಧರನ್ನು ಸ್ಮರಿಸುತ್ತಾ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳

How eagerly we awaited the arrival of Independence Day back in those days! As the sun rose on that special morning, we gathered on our school grounds to sing the soul stirring songs, “Vande Mataram” and “Jaya Bharata Jananiya”, that we rehearsed for weeks. After the ceremonies, our eyes gleamed with joy as we lined up to receive the mouth watering sweets from our favourite teachers. When the school bell finally rang, we ran home with the little flags that our school gave us, and planted it proudly at our favourite spots at home to flaunt our love for the nation.

Let us continue to stand tall, upholding the values that make our nation incredible. Happy ! 🫡

Photos from Mayuurra Raghavendraa  ಮಯೂರ ರಾಘವೇಂದ್ರ's post 26/06/2023
10/05/2023

ನಮ್ಮ ಮತ, ನಮ್ಮ ಹಕ್ಕು! ರಾಜ್ಯದ ಉತ್ತಮ ನಾಳೆಗಳಿಗಾಗಿ ಸರಿಯಾದ ಸದಸ್ಯರನ್ನು ಆಯ್ಕೆ ಮಾಡಿ, ಪ್ರಜಾಪ್ರಭುತ್ವವನ್ನು ಗೆಲ್ಲಿಸಿ!
Our Vote is Our Voice!
Use your power to make a difference and shape the future of our state. Let's make our voices heard loud and clear on election day!

24/04/2023

ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ 94ನೇ ಜನ್ಮ ದಿನೋತ್ಸವದ ಅಂಗವಾಗಿ ಅವರು ಕನ್ನಡ ರಂಗಭೂಮಿಗೆ, ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಸಂಗೀತಕ್ಕೆ ನೀಡಿದ ಅಪಾರವಾದ ಕೊಡುಗೆಯನ್ನು ಸಂಭ್ರಮಿಸೋಣ! ಅವರ ಸಾಧನೆ ಹಾಗೂ ಅವರ ವ್ಯಕ್ತಿತ್ವ ಇಂದಿಗೂ ನಮಗೆ ಮಾದರಿ. ಅವರ ಹೆಸರು ಬೆಳ್ಳಿಪರದೆಯ ಪ್ರತಿ ಬಿಂಬದಲ್ಲೂ ಶಾಶ್ವತ. ಹುಟ್ಟು ಹಬ್ಬದ ಶುಭಾಶಯಗಳು ಅಣ್ಣಾವ್ರೆ!

On the 94th birth anniversary of Natasaarvabhouma Dr Rajkumar, CTR celebrates his contributions to ranga bhoomi, music, and Kannada film industry. His achievements and morals continue to inspire many, and he will always be cherished and admired. Happy Birthday, Annavre!

Photos from SHRI Sagar (C.T.R)'s post 23/04/2023

Look who joined us today! It was great pleasure having the legendary .Kohliand the beautiful visit us with their family. Your words and wishes have raised our spirits and made our day! Looking forward to having you again ❤️

22/03/2023

ಅಭ್ಯಂಜನದ ಆಚರಣೆಯಲ್ಲಿ ಮಿಂದೆದ್ದು, ಮನೆಯ ಮುಂದೆ ರಂಗೋಲಿ ಬಿಡಿಸಿ, ಮನೆಯವರೆಲ್ಲ ಒಟ್ಟಿಗೆ ಹಬ್ಬದ ಊಟ ಸವಿದು, ಜೀವನದ ಏಳು ಬೀಳುಗಳನ್ನು ಸಮವಾಗಿ ಸ್ವೀಕರಿಸುವ ಸಂಕೇತವಾದ ಬೇವು ಬೆಲ್ಲ ಹಂಚಿ ತಿನ್ನುವ ವಿಶಿಷ್ಟ ಹಬ್ಬ ಯುಗಾದಿ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಈ ಹಬ್ಬ ಎಲ್ಲರಲ್ಲಿ ಒಂದು ಹೊಸ ಚಿಗುರು, ಹೊಸ ಉಲ್ಲಾಸ, ಹೊಸ ಹುರುಪನ್ನು ತುಂಬುತ್ತದೆ. ಇಂತಹ ವಿಶೇಷವಾದ ದಿನದಂದು ತಮ್ಮೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು!

A festival that spreads charismatic energy everywhere, reflecting the beginning of the new year, Yugadi is celebrated with great delight and the hope of having good changes in one's life. The festival is full of lovely traditions, which include oil baths, drawing rangolis, and eating tender neem along with jaggery, all in preparation for the ebb and flow of one's life.

On this auspicious day, we wish you great beginnings and prosperity in all your endeavors. Happy Yugadi!

17/03/2023

ಅಭಿಮಾನಿಗಳಿಗೆ ನೀವು ಉತ್ಸವ ಮೂರ್ತಿ, ನಿಮ್ಮ ಜೀವನ ನಮ್ಮೆಲ್ಲರಿಗೂ ಒಂದು ಸ್ಪೂರ್ತಿ, ನಿಮ್ಮ ನೆರಳು ಅಸಂಖ್ಯಾತ ಜನರಿಗೆ ಆಸರೆ! ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು!

A treat to the fans, an inspiration to everyone, your legacy continues to spread greatness all around. Happy Birthday Appu!

Photos from SHRI Sagar (C.T.R)'s post 13/03/2023

It is a historic and proud moment for India to win two Oscars. We would like to extend our heartfelt congratulations to M.M. Keeravani, Chandrabose, and the entire RRR team for their outstanding achievement in winning the 'Best Original Song' at the Oscar Awards. Additionally, we are thrilled to see 'The Elephant Whisperers' win the 'Best Short Documentary' award. We would like to congratulate Guneet Monga and Karthiki Gonsalves for their excellent work in creating a thought-provoking documentary that has made us all proud.

India has shown its incredible talent and creativity to the world, and we hope to see more such victories in the future.

08/03/2023

One can almost taste the celebration of Holi when March arrives. Small shops decorate the streets selling water balloons, gifts, holi colors, & of course, those fancy water guns. The entire neighborhood starts living in a delightful state of small fear about being attacked by the notorious kids who might be hiding behind walls and staircases carrying water balloons along with them. One can smell the aroma of colors emanating from everywhere. Playing Holi is something one can remember for a long time, as the colours leave a mark in our memories as well. Shri Sagar CTR wishes you all a vibrant and memorable Holi!

08/03/2023

Bengaluru is a city built by the contributions of great leaders, visionaries and selfless personalities. One such story is that of R. Kalyanamma, the remarkable woman who founded Makkala Koota and worked for the welfare of women and children. Despite suffering from child marriage and not having a formal education, Kalyanamma had a passion for reading and fought against societal norms to advance society. She founded Saraswathi, a monthly publication that featured articles on women's health, politics, and social issues, and Makkala Bavuta, a section dedicated to inspiring children's interest in literature. Kalyanamma was elected as the first woman vice president of Bangalore City Corporation (now Bruhat Bangalore Mahanagara Palike) in 1938 and used her positions of authority to advance the rights of women and children. Today, she stands as a source of tremendous inspiration, empowering every woman to follow in her remarkable footsteps.
Happy Women's Day from Shri Sagar CTR!

Photos from SHRI Sagar (C.T.R)'s post 02/03/2023

❤️

22/02/2023

ಹಳೆಯ ನೆನಪೊಂದನ್ನು ಮೆಲಕು ಹಾಕುವಾಗ ಮನಸ್ಸಿಗೆ ಕಳೆದು ಹೋದ ಕಾಲದ ಅಲೆಯೊಂದು ಬಂದು ಬಡಿಯುತ್ತದೆ. ಜೀವಿಸಿದ ಪ್ರತಿಯೊಂದು ಮಧುರ ಕ್ಷಣಗಳನ್ನು ನೆನಪಿನ ಬುಟ್ಟಿಯಲ್ಲಿ ಕಟ್ಟಿಟ್ಟುಕೊಳ್ಳುತ್ತಿದ್ದ ಕಾಲ, ಹೃದಯದ ಹಕ್ಕಿಗೆ ರೆಕ್ಕೆ ಕಟ್ಟಿ ಪ್ರೀತಿಯ ಬಾನಿನಲ್ಲಿ ಹಾರಿ ಬಿಡುತ್ತಿದ್ದ ಕಾಲ, ಚಿಕ್ಕ ಗೆಲುವಿನಲ್ಲೂ ದೊಡ್ಡ ಖುಷಿಯನ್ನು ಕಾಣುತ್ತಿದ್ದ ಕಾಲ. ಅಂದಿನ ಕಾಲದ ಪ್ರತಿಯೊಂದು ಸವಿನೆನಪಿನ ಹಿಂದೆ ಒಂದು ಭಾವವಿರುತ್ತದೆ, ಆ ಭಾವದ ಹಿಂದೆ ಒಂದು ಪ್ರೀತಿ ಇರುತ್ತದೆ, ಆ ಪ್ರೀತಿಯ ಹಿಂದೆ ಒಂದು ಕಥೆ ಇರುತ್ತದೆ. ಅಂತಹ ಒಂದಾನೊಂದು ಕಾಲದ ನವಿರಾದ ಕಥೆ, 'ಓಲ್ಡ್ ಟೌನ್ ಒಲವು', ಫೆಬ್ರವರಿ 26 ರಂದು ನಿಮ್ಮ ಮುಂದೆ.

The beauty of the good old days lay in appreciating and cherishing the little things. Back when freezing special moments in a frame was precious, love was a language that crafted magical poetry weaved into timeless memories. The memories of those simpler days, when a small act of love and kindness could light up hearts and bring out smiles all around, are gifts from the past that should be relished and celebrated forever.

'Old Town Olavu' is a revisit to one such timeless story, set to release on the 26th of February.

20/02/2023

The passing of veteran Kannada director, S K Bhagavan, has left us heartbroken. In 1956, as the world of colour in film was opening up, blockbuster movies like Kasturi Nivasa, Eradu Kanasu, and Bayalu Daari were released under his mesmerising direction along with the late Dorairaj. He popularised spy movies in Indian cinema through hits like Jedara Bale, Goa Dalli CID 999, and Operation Diamond Rocket. His accomplishment of producing 49 films along with Dorairaj has helped Kannada films reach great heights. Dr. Bhagwan, who directed the legendary Dr. Rajkumar in 32 films, will always be remembered for his dedication and contribution to the world of cinema. Bhagavan sir, you shall remain in the hearts of every Kannadiga as Dorai (King) of super hit directors.

19/02/2023

ಬಾಬು ಹಿರಣ್ಣಯ್ಯ ಹಾಗೂ ಮನಿನಿ ರಾವ್ ಅವರ ಜೊತೆ ನೆನಪಿನ ದೋಣಿಯಲ್ಲಿ ಒಂದು ಕಥೆಯನ್ನು ಆಲಿಸಲು ಸಿದ್ಧರಾಗಿ! ಸ್ವಲ್ಪ ಮಾತು, ಸ್ವಲ್ಪ ಮೌನ, ಸಮುದ್ರದ ಆಳದಷ್ಟು ಪ್ರೀತಿ ತುಂಬಿದ ಒಂದು ನವಿರಾದ ಕಥೆ 'ಓಲ್ಡ್ ಟೌನ್ ಒಲವು', ಶೀಘ್ರದಲ್ಲಿ.

Get ready to take a trip down the memory line with Baabu Hirannaiah and Manini Rao as they lead us on a nostalgic journey through 'Old Town Olavu'.
Join us on for a heartwarming tale of a bygone era, filled with simpler times and treasured moments! 'Old Town Olavu', coming soon.

18/02/2023

ಉಪವಾಸ, ಜಾಗರಣೆ, ಯೋಗ, ಧ್ಯಾನ, ಜಪ ಎಂದೊಡನೆ ನೆನಪಾಗುವುದು ಪರಶಿವನ ಮಹಾ ರಾತ್ರಿ - ಶಿವರಾತ್ರಿ. ಜಾತ್ರೆಗಳು ನಡೆಯುವ ದಿನಗಳಲ್ಲಿ ಬರುವ ಶಿವರಾತ್ರಿಯಂದು ಉಪವಾಸ ವ್ರತ ಮಾಡುವುದು, ಶಿವನಾಮ ಜಪ ಮಾಡುವುದು, ಶಿವಮಂದಿರಗಳಿಗೆ ಹೋಗುವುದೇ ಒಂದು ವಿಶೇಷ. ರಾತ್ರಿಯೆಲ್ಲಾ ಜಾಗರಣೆ ಮಾಡಿ, ಆಧ್ಯಾತ್ಮಿಕ ಶಕ್ತಿಯನ್ನು ಮೈಗೂಡಿಸಿಕೊಳ್ಳುವ ಈ ಆಚರಣೆಗೆ ತನ್ನದೇ ಆದ ಒಂದು ವಿಶಿಷ್ಟ ಖ್ಯಾತಿ ಇದೆ. ಈ ಮಹಾಶಿವರಾತ್ರಿಯಂದು ತಮ್ಮ ಪ್ರಾರ್ಥನೆಗಳಿಗೆ ಪರಮಾತ್ಮನ ಆಶೀರ್ವಾದ ಸಿಗಲಿ ಎಂದು ಆಶಿಸುತ್ತಾ, ತಮ್ಮೆಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು!

Mahashivaratri, the great night of Shiva, fills the heart with unique spiritual aura. On this special occasion, the planets align in the northern hemisphere to elevate human energy, and nature beckons us to reach our spiritual zenith. Mahashivaratri is a divine opportunity to experience the great nothingness that resides within every person, the very source of all creation. Let this auspicious night fill your life with positivity and dispel all darkness and problems that surround you. Shri Sagar CTR wishes you a glorious MahaShivaratri.

14/02/2023

"ಹಾಡು ಹಳೆಯದಾದರೇನು? ಭಾವ ನವನವೀನ"
ಹೊಸತೇನೇ ಬಂದರೂ ಹಳೆಯದರಲ್ಲೇ ಒಂದು ನವಿರಾದ ಸುಖವಿದೆ,

ಎಂದೋ ಬರೆದು ಕೊಡದೇ ಮಡಚಿಟ್ಟ ಪ್ರೇಮ ಪತ್ರ, ಎಲ್ಲಿಂದಲೋ ಕೇಳಿಬಂದ ಪಿಸುಮಾತು, ಜೋಡಿಸಿಟ್ಟ ಕ್ಯಾಸೆಟ್ಟುಗಳು, ಜೊತೆಯಲ್ಲಿ ನಡೆದ ನಾಲ್ಕು ಹೆಜ್ಜೆ ಇದೇ ರೀತಿ ಸಾವಿರ ನೆನಪುಗಳು, ಒಂದೇ ಭಾವನೆ - ಪ್ರೀತಿ.
ಕಣ್ಣು ಹಾಯಿಸಿದ ಕಡೆಯೆಲ್ಲಾ ಪ್ರೀತಿಯೇ ಕಾಣಸಿಗುವ ಈ ಪ್ರೇಮಿಗಳ ದಿನವನ್ನು ಸಂಭ್ರಮಿಸಲು ನಮ್ಮಿಂದಲೂ ಒಂದು ಉಡುಗೊರೆ ಸಿದ್ಧವಿದೆ..
'ಮಲ್ಲೇಶ್ವರ ಡೇಸ್ ' ಪುಟಗಳಿಂದ ಒಂದು ನಲ್ಮೆಯ ಕಥೆ 'ಓಲ್ಡ್ ಟೌನ್ ಒಲವು' ಶೀಘ್ರದಲ್ಲಿ ನಿಮ್ಮ ಮುಂದೆ!

There is something beautiful about all things old.
A handwritten letter, a cassette that plays a special track, a memorable long walk, an unannounced visit - it ships you in time, etches a story and leaves a lasting impression. These little acts tug our heartstrings and color the air with the most timeless feeling - Love.
An emotion that holds us together, a profound experience that knows no boundaries.

This Valentine's day, as romance blooms around us, we're proud to bring to you a story that celebrates love in all its glory.
Presenting you ‘Old Town Olavu’, one of many timeless stories from ‘Malleshwara Days’ - COMING SOON!

Want your restaurant to be the top-listed Restaurant in Bangalore?
Click here to claim your Sponsored Listing.

About Shri Sagar CTR

Located in the beautiful city of North-West Bangalore, Central Tiffin Room is a restaurant well known for its ‘Masala Dosas’. The restaurant is located on the 7th cross Road Corner and is often found crowded with an amazing aroma of South Indian delicacies welcoming the guests. The restaurant, owing to its flavoured recipe has won the Times Food Guide ‘Best Benne Masala Dosa in Bangalore’. But this place has its origin rooted to the old times of Bangalore.

The hotel was started in 1920 by Y.V. Subramanyam and his bothers Y.V. Krishna Iyer, Y.V. Ramachandran and Y.V. Srikanteshwaran. The brothers hailed from Yelagobdana Halli village, Mulbagal Taluk of Kolar district. Y.V. Ramchandran was the smallest of the brothers and was a freedom fighter. Y.V. Subramanyam was the founder President of the Bangalore Hoteliers Association, which was later renamed as the Karnataka Hotel Owner Association.

The brothers had a history in cooking and were famous for their chef skills. It is recorded that when the Maharaja of Mysore visited the village, Y.V. Subramanyam served a traditional breakfast in traditional attire. The brothers also opened another restaurant in Krishna Building, Avenue Road. This place went on to be a favourite place for writers and artists in the late 40’s and 50’s. The hotel also has been mentioned in many books and articles.

The brothers have a huge role in nurturing of the CTR alongside the other owners. It is said that the brothers passed on the recipes and the tips of the preparations to other owners alongside other advice on how to treat the workers and not to over-burden them. The hotel still has that vintage look from the 1920’s with a vintage clock and rosewood furniture decorating the interiors of the dining area.

Videos (show all)

ಹಿಂದಿದ್ದೆಲ್ಲವ ಮಗಚು ಹಾಕಿ, ಶುರು ಮಾಡೋಣ ಈ ಹೊಸ ಸಂತಸದ ವರ್ಷ... ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ✨Let the bygones be, and flip the p...
ಹಿಂದಿದ್ದೆಲ್ಲವ ಮಗಚು ಹಾಕಿ, ಶುರು ಮಾಡೋಣ ಈ ಹೊಸ ಸಂತಸದ ವರ್ಷ... ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ✨Let the bygones be, and flip the p...

Telephone

Address


#152, 7th Cross 3rd Main, Margosa Road, Malleshwaram, Bangaluru
Bangalore
560003

Other South Indian Restaurants in Bangalore (show all)
SHIV SAGAR Banaswadi road SHIV SAGAR Banaswadi road
Bangalore, 560033

SHIV SAGAR VEG RESTAURENT

Sri Udupi Sannidhi Sri Udupi Sannidhi
Kamadhenu Nagar, B Narayanapura, Mahadevapura
Bangalore, 560016

We are from Udupi serve all type of south Indian, North Indian, Chinese dishes, Juice, chats and Ice

Visveswvaraa's Biryani Visveswvaraa's Biryani
Carmelaram Road
Bangalore, 560035

We are Specialists in making of Rich, Flavorful and Diverse of Biryani with Chicken, Mutton and Praw

Dindigul Biriyaani Dindigul Biriyaani
Bangalore, 560068

Home Made & Home Delindigul mnbivery. (11am to 11pm) Authentic Dindigul Chicken biriyaani

malnad_donne_biriyani_mdb malnad_donne_biriyani_mdb
60/3 Ganesh Towers Kaveri Nagar Kodichikanahalli Main Road BOMNAHALLI
Bangalore, 560068

We are here to serve

PADDU Centre PADDU Centre
Bangalore, 560002

One of the reputed hotels in the neat by locality who's intention is to provide quality food at affordable prices. Since 2012

Hennur Donne Biryani Hennur Donne Biryani
14, 4th Main, 4th Block, HBR Layout, Hennur
Bangalore, 560043

Our goal is to offer great homemade food at a reasonable price while maintaining great quality and service.

South Ruchis Balepete South Ruchis Balepete
No 78 Balepet Main Road Next To Syndicate Bank
Bangalore, 560053

Where taste touches the soul

Dakshina Swaadha Dakshina Swaadha
Bangalore, 560068

The traditional flavours of South Indian cooking is bought near you from all five Southern States C

Namma Bambooh Biryani Namma Bambooh Biryani
East End Road , Jayanagar
Bangalore, 560026

we serve Authentic Naati style Bamboo chicken and Mutton biryani.

THALAPPAKATTI RESTAURANT THALAPPAKATTI RESTAURANT
88, Opp More Megastore, Outer Ring Road, Maratha Halli
Bangalore, 560037

Udupi Upahar RT Nagar Udupi Upahar RT Nagar
Dinnur Main Road
Bangalore, 560032