Siddaganga Medical College & Research Institute
The only Super Specialty Hospital in Tumkur. Cardiology, Neurosurgery, Cancer Care (Oncology), Kidne
ಧನ್ಯವಾದಗಳು..!
ಐದು ವರ್ಷಗಳಿಂದ ನೀಡಿದ ನಿರಂತರ ಸೇವೆಗೆ ಸಹಕರಿಸಿದ ಎಲ್ಲಾ ಹೃನ್ಮನಗಳಿಗೆ..
Successful reconstruction of major vascular and soft tissue injury of neck
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ, ಗಂಗೋತ್ರಿ ನಗರ ನಾಗರಿಕ ಹಿತರಕ್ಷಣಾ ಸಮಿತಿ, ರೋಟರಿ, ಇನ್ನರ್ ವ್ಹೀಲ್ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಗಂಗೋತ್ರಿ ನಗರದ ಎಸ್ ಐಟಿ ಬಡಾವಣೆಯಲ್ಲಿ ಉಚಿತ ಮಧುಮೇಹ ತಪಾಸಣೆ ಹಾಗೂ ಅಭಿನಂದನಾ ಶಿಬಿರ ನಡೆಯಿತು. ಬಡಾವಣೆ 150 ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ನಗರ ಶಾಸಕ ಜ್ಯೋತಿಗಣೇಶ್, ಎಸ್ಎಂಸಿಆರ್ ಐ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಡಾ.ಶಿವಶಂಕರ್ ಕಾಡದೇವರಮಠ,
ಪಾಲಿಕೆ ಸದಸ್ಯ ಪುಟ್ಟರಾಜು, ಮಲ್ಲಿಕಾರ್ಜುನ್, ರೋಟರಿ ರೂ.ಶಿವಣ್ಣ ಮಲ್ಲಸಂದ್ರ,ಇನ್ನರ್ ವ್ಹೀಲ್ ನ ಪರಿಮಳ ಮಲ್ಲಿಕ್ ಹಾಗೂ ನಾಗರಿಕ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಕಾಂತರಾಜು ಆಸ್ಪತ್ರೆ ಬಗ್ಗೆ ಮಾಹಿತಿ ನೀಡಿದರೆ, ಡಯಟೀಶಿಯನ್ ಸಿದ್ಧರಾಜು ಆಹಾರಕ್ರಮದ ಅರಿವು ಮೂಡಿಸಿದರು.
"ಅತ್ಯಂತ ಕಡಿಮೆ ಶುಲ್ಕದಲ್ಲಿ ಸುರಕ್ಷಿತ ಹೆರಿಗೆ..ತಾಯಿ ಮಗು ಆರೋಗ್ಯದಿಂದಿದ್ದಾರೆ..''
ತುಮಕೂರಿನ ಶತಾಜ಼್ ರವರು ನಮ್ಮ ಸಿದ್ಧಗಂಗಾ ಮಡಿಕಲ್ ಕಾಲೇಜಿನ ಬಿ ವಿಭಾಗದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸುರಕ್ಷಿತ ಹರಿಗೆಗೆ ಒಳಪಟ್ಟರು. ಈ ಕುರಿತು ಶತಾಜ಼್ ಪತಿ ಜಾವೀದ್ ಆಸ್ಪತ್ರೆ ಸೇವೆಯ ಬಗ್ಗೆ ಹೃದಯತುಂಬಿ ಮಾತನಾಡಿದ್ದಾರೆ
Sree Siddaganga Math Sree Siddaganga Math
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ, ಗಂಗೋತ್ರಿ ನಗರ ನಾಗರಿಕ ಹಿತರಕ್ಷಣಾ ಸಮಿತಿ, ರೋಟರಿ, ಇನ್ನರ್ ವ್ಹೀಲ್ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಗಂಗೋತ್ರಿ ನಗರದ ಎಸ್ ಐಟಿ ಬಡಾವಣೆಯಲ್ಲಿ ಉಚಿತ ಮಧುಮೇಹ ತಪಾಸಣೆ ಹಾಗೂ ಅಭಿನಂದನಾ ಶಿಬಿರ ನಡೆಯಿತು. ಬಡಾವಣೆ 150 ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ನಗರ ಶಾಸಕ ಜ್ಯೋತಿಗಣೇಶ್, ಎಸ್ಎಂಸಿಆರ್ ಐ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಡಾ.ಶಿವಶಂಕರ್ ಕಾಡದೇವರಮಠ,
ಪಾಲಿಕೆ ಸದಸ್ಯ ಪುಟ್ಟರಾಜು, ಮಲ್ಲಿಕಾರ್ಜುನ್, ರೋಟರಿ ರೂ.ಶಿವಣ್ಣ ಮಲ್ಲಸಂದ್ರ,ಇನ್ನರ್ ವ್ಹೀಲ್ ನ ಪರಿಮಳ ಮಲ್ಲಿಕ್ ಹಾಗೂ ನಾಗರಿಕ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಕಾಂತರಾಜು ಆಸ್ಪತ್ರೆ ಬಗ್ಗೆ ಮಾಹಿತಿ ನೀಡಿದರೆ, ಡಯಟೀಶಿಯನ್ ಸಿದ್ಧರಾಜು ಆಹಾರಕ್ರಮದ ಅರಿವು ಮೂಡಿಸಿದರು.
ಸಿದ್ದಗಂಗಾ ಆಸ್ಪತ್ರೆಯ ಜನರಲ್ ಮೆಡಿಸನ್ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದ ಗಂಗಣ್ಣ ಅವರು ನಮ್ಮ ಆಸ್ಪತ್ರೆ, ಆಸ್ಪತ್ರೆಯ ವೈದ್ಯರು ವೈದ್ಯರು ಹಾಗೂ ಸಿಬ್ಬಂದಿ ಬಗ್ಗೆ ಮಾತನಾಡಿದ್ದಾರೆ
ಹೃದಯದ ಮಾತು ಭಾಗ - ೦೮
ಹೃದಯ ತಜ್ಞ ಡಾ. ಭಾನುಪ್ರಕಾಶ್ ಹೆಚ್. ಎಂ ರವರಿಂದ
ವಿಷಯ : ಜೀವನ ಶೈಲಿ ಹಾಗೂ ಹೃದಯ
A free health check camp was organized at the Police Training Center at Imangala, chitradurga Dist. The camp was conducted in association with police Training School by Siddaganga Hospital. More than 500 police personnel attended the camp. Dr.Ravi Chandra, Cardiothoracic Vascular Surgeon, Neurosurgeon Dr.Sankalp, Neurologist Dr.Amar and other specialists from siddaganga Hospital rendered thier services at the Camp.
ಸರಿಯಾದ ಆಯ್ಕೆಯೇ ಭವಿಷ್ಯದ ಮೊದಲ ಮೆಟ್ಟಿಲು..
ಪ್ಯಾರಾ ಮೆಡಿಕಲ್ ಕೋರ್ಸ್ ಹೀಗಾಗಲೇ ಆರಂಭವಾಗಿದ್ದು, ಸೀಮಿತ ಸೀಟುಗಳು ಮಾತ್ರ
Right choice is the first step to the future..
The para medical course has already started and only limited seats
Hurry up take your phone and 📱dial 0816 2602222 and 86181 16209
ಪ್ರಥಮ ವರ್ಷದ ಎಂಬಿಬಿಎಸ್ ತರಗತಿಗಳ ಉದ್ಘಾಟನಾ ಸಮಾರಂಭದ ಕುರಿತು
ರಾಜ್ಯ ಹಾಗೂ ಜಿಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು
#ಸಿದ್ಧಗಂಗಾಮಠ
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಪ್ರಥಮ ವರ್ಷದ ಎಂಬಿಬಿಎಸ್ ತರಗತಿಗಳಿಗೆ ಡಿಸೆಂಬರ್ 6 ರಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು. ರಾಜೀವ್ ಗಾಂಧಿ ವೈದ್ಯಕೀಯ ಮಹಾವಿದ್ಯಾಲಯದ ಕುಲಪತಿಗಳಾದ ಡಾ. ಎಂ.ಕೆ.ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ಹೃದ್ರೋಗ ತಜ್ಞ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಆಗಮಿಸಿದ್ದರು. ರಾಜೀವ್ ಗಾಂಧಿ ವೈದ್ಯಕೀಯ ಮಹಾ ವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ. ಎಸ್.ಸಚ್ಚಿದಾನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಐ.ಟಿ. ನಿರ್ದೇಶಕ ಡಾ. ಎಂ.ಎನ್. ಚನ್ನಬಸಪ್ಪನವರು , ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಶ್ರೀಯುತ ಟಿ.ಕೆ.ನಂಜುಂಡಪ್ಪನವರು, ಪ್ರಾಜೆಕ್ಟ್ ಕೋ ಆರ್ಡಿನೇಟರ್ ಟಿ.ಎನ್.ಸ್ವಾಮಿಯವರು, ಎಸ್ಐಟಿ ಸಿಇಓ ಶಿವಕುಮಾರಯ್ಯನವರು, ಶಾಂತರಾಜು, ಕೋರಿಮಂಜುನಾಥ್, ಸಿದ್ಧಗಂಗಾ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಡಾ.ಎಸ್.ಪರಮೇಶ್ ಹಾಗೂ ಪ್ರಾಂಶುಪಾಲರಾದ ಡಾ.ಶಾಲಿನಿ.ಎಂ., ಮೆಡಿಕಲ್ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಶ್ರೀದೇವಿ ಸಂಸ್ಥೆಯ ಮುಖ್ಯಸ್ಥರಾದ ಮಾಜಿ ಎಂಎಲ್ ಸಿ ಹುಲಿನಾಯ್ಕರ್, ಮೇಯರ್ ಪ್ರಭಾವತೀ ಸುಧೀಶ್ವರ್, ಪಾಲಿಕೆ ಆಯುಕ್ತ ಯೋಗಾನಂದ್ , ಪಾಲಿಕೆ ಸದಸ್ಯೆ ಮಂಜುಳಾ ಆದರ್ಶ್ ಮುಂತಾದವರಿದ್ದರು
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಬೆಳಗುಂಬದ ಡಿ.ಸಿ. ಗೌರಿಶಂಕರ್ ಅಭಿಮಾನಿ ಬಳಗ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಬೆಳಗುಂಬದ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಿತು. ಪ್ರಜಾಪ್ರಗತಿ ಸಂಪಾದಕ ಹಾಗೂ ರೆಡ್ ಕ್ರಾಸ್ ನಿರ್ದೇಶಕ ಎಸ್.ನಾಗಣ್ಣ, ಸಿದ್ಧಗಂಗಾ ಮೆಡಿಕಲ್ ಕಾಲೇಜು ಮೇಲ್ವಿಚಾರಕ ಡಾ.ನಿರಂಜನ್ ಮೂರ್ತಿ,
ಟಿಹೆಚ್ ಎಸ್ ಆಸ್ಪತ್ರೆ ಸುರೇಶ್ ಬಾಬು,ಬೆಳಗುಂಬ ಗ್ರಾಪಂ ಅಧ್ಯಕ್ಷ ಬಿ.ಎನ್.ಮಂಜುನಾಥ್ ಮುಂತಾದವರಿದ್ದರು.
ವಕೀಲರ ದಿನಾಚರಣೆ ಅಂಗವಾಗಿ ಸಿದ್ಧಗಂಗಾ ಮೆಡಿಕಲ್ ಕಾಲೇಜು ಹಾಗೂ ತುಮಕೂರು ಜಿಲ್ಲಾ ವಕೀಲರ ಸಂಘ ಸಹಯೋಗದೊಂದಿಗೆ ನಗರದ ವಕೀಲರ ಸಂಘದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ನರರೋಗ ಸಮಸ್ಯೆಗಳ ಕುರಿತ ಸಂವಾದ ಕಾರ್ಯಕ್ರಮ ನಡೆಯಿತು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಗೋಪಾಲಕೃಷ್ಣ ಗೌಡರು,ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಹಿಮಾನಂದ್, ಪ್ರೊ.ನಳಿನಾ ಹಾಗೂ ನ್ಯೂರೋಸರ್ಜನ್ ಡಾ.ಸಂಕಲ್ಪ್ ಮುಂತಾದವರು ಉಪಸ್ಥಿತರಿದ್ದರು.
ಸುರಕ್ಷತೆಯ ಹೆರಿಗೆಗಾಗಿ..ಅತ್ಯಾಧುನಿಕ ಸೌಕರ್ಯಗಳು ಹಾಗೂ ನುರಿತ ವೈದ್ಯಕೀಯ ಸಿಬ್ಬಂಧಿ ಹೊಂದಿದೆ ನಮ್ಮ ಪ್ರಸೂತಿ ವಿಭಾಗ.. ಬನ್ನಿ.. ತಾಯ್ತನವನ್ನು ನಮ್ಮ ಅತಿ ಕಡಿಮೆ ದರದ ಪ್ಯಾಕೇಜ್ ನೊಂದಿಗೆ ಆರಂಭಿಸಿ...
Siddaganga Medical College & Research Institute The only Super Specialty Hospital in Tumkur. Cardiology, Neurosurgery, Cancer Care (Oncology), Kidne
ಬಿಳಿ ರಕ್ತ ಕಣಗಳ ಕೊರತೆಯಿಂದ ನಮ್ಮ ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗಕ್ಕೆ ದಾಖಲಾಗಿದ್ದ ೫೫ ವರ್ಷದ ಶ್ರೀಮತಿ ಜಯಲಕ್ಷ್ಮಿರವರು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಆಯುರ್ವೇದ ವೈದ್ಯರಾದ ಡಾ.ನಂಜುಂಡಸ್ವಾಮಿಯವರು ಹೃದಯದ ಸಮಸ್ಯೆಯಿಂದ ನಮ್ಮ ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ವಿಭಾಗಕ್ಕೆ ದಾಖಲಾದರು.. ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ರವರ ಚಿಕಿತ್ಸೆಯ ಪರಿಣಾಮ ಚೇತರಿಕೆ ಹೊಂದಿದ್ದಾರೆ.
ಎದೆನೋವು ಕಾಣಿಸಿಕೊಂಡಾಗ ಗ್ಯಾಸ್ಟ್ರಿಕ್ ನಿಂದ ಉಂಟಾಗಿದೆ ಅಂತ ನಿರ್ಲಕ್ಷ್ಯವಹಿಸೋರು ಇವರ ಮಾತು ಕೇಳಿ..!
ತೀವ್ರ ಎದೆನೋವಿನಿಂದ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿದ್ದ 22 ವರ್ಷದ ಯುವಕನಿಗೆ ಹೃದ್ರೋಗ ಕಾರಣಕ್ಕಾಗಿ ಆಂಜಿಯೋಪ್ಲ್ಯಾಸ್ಟಿ ಮಾಡಲಾಯಿತು. ಈ ಕುರಿತು ಯುವಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಇಎಸ್ ಐ ಸೇವೆ ಲಭ್ಯತೆಯ ಕುರಿತು ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು.
ಸಿದ್ಧಗಂಗಾ ಆಸ್ಪತ್ರೆ ಇಎಸ್‌ಐ(ESI) ಸೇವೆಗೆ ಸಿದ್ಧಗಂಗಾ ಮಠಾಧ್ಯಕ್ಷರಾದ ಪೂಜ್ಯ ಶ್ರೀ.ಶ್ರೀ.ಸಿದ್ಧಲಿಂಗ ಮಹಾಸ್ವಾಮೀಜಿ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಪೂಜ್ಯರು ಈಗಾಗಲೇ ಸರ್ಕಾರದ ಆರೋಗ್ಯ ಯೋಜನೆಗಳಾದ ಆಯುಷ್ಮಾನ್ ಭಾರತ್,ಜ್ಯೋತಿಸಂಜೀವಿನಿ, ಸಂಪೂರ್ಣ ಸುರಕ್ಷಾ ಆರೋಗ್ಯ, ಎಬಿವೈ ಸೇವೆಗಳು ಲಭ್ಯವಿದ್ದು ಸಿದ್ಧಗಂಗಾ ಮೆಡಿಕಲ್ ಕಾಲೇಜಿನಲ್ಲಿ ಸದ್ಯ ಲಭ್ಯವಾಗುತ್ತಿರುವ ಉಚಿತ ಸೇವೆಗಳೊಂದಿಗೆ, ಈ ಯೋಜನೆಗಳು ದುಡಿಯುವ ವರ್ಗಕ್ಕೆ ಆರೋಗ್ಯ ಸಂಜೀವಿನಿಯಾಗಲಿವೆ ಎಂದರು.ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಸಿದ್ದಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ. ಶಾಲಿನಿ, ಮೆಡಿಕಲ್ ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಸಿಇಓ ಸಂಜೀವ್ ಕುಮಾರ್, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ ಮುಂತಾದವರಿದ್ದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಪೂಜ್ಯ ಶಿವಕುಮಾರ ಶ್ರೀಗಳ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಸ್ಪೈರ್ ಕ್ಲೀನಿಕ್ ಹಾಗೂ ಸುಮಿತ್ರಾ ಮಹದೇವಪ್ಪ ಚಾರಿಟಬಲ್ ಟ್ರಸ್ಟ್(ರಿ) ಸಹಯೋಗದಲ್ಲಿ ನಡೆದ ಮಂಡಿ ಮರುಜೋಡಣಾ ಶಿಬಿರದಲ್ಲಿ ಚಿಕಿತ್ಸೆ ಪಡೆದ ಸಂಧ್ಯಾ ರವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ
ಧಾನ್ ಫೌಂಡೇಶನ್ ಹಾಗೂ ಅಕ್ಷಯ ಮಹಿಳಾ ಕಳಂಜಿಯಂ ಸಹಯೋಗದೊಂದಿಗೆ ಸಿದ್ಧಗಂಗಾ ಮೆಡಿಕಲ್ ಕಾಲೇಜು ವತಿಯಿಂದ ತುಮಕೂರಿನ ಎರಡನೇ ವಾರ್ಡ್ ಹೌಸಿಂಗ್ ಬೋರ್ಡ್ ನಲ್ಲಿ ನವೆಂಬರ್ 22 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಪಾಲಿಕೆ ಸದಸ್ಯ ನರಸಿಂಹರಾಜು ಹಾಗೂ ಧಾನ್ ಫೌಂಡೇಶನ್ ನ ತ್ರಿವೇಣಿ ಮತ್ತಿತರರು ಉಪಸ್ಥಿತರಿದ್ದರು.
ದಿನಾಂಕ 20 ನವೆಂಬರ್ ಭಾನುವಾರದಂದು ಮಾರುತಿ ನಗರ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸಿದ್ದಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ನಾಗರಿಕರಿಗೆ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಕಾರ್ಯಕ್ರಮ ಮಾಡಲಾಯಿತು,
Making our workforce healthier !!
ESI facilities now available at Siddaganga Hospital
ಕಾರ್ಮಿಕರ ಆರೋಗ್ಯ ಕಾಳಜಿಗಾಗಿ ಇನ್ಮುಂದೆ ಇಎಸ್‌ಐನ ಸುರಕ್ಷಾ ಕವಚ..!!
ತೆರೆದ ಹೃದಯ ಯಶಸ್ವಿ ಶಸ್ತ್ರಚಿಕಿತ್ಸೆ ಬಗ್ಗೆ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು.
ಯಶಸ್ವಿ ಹಾರ್ಟ್ ವಾಲ್ವ್ ರೀಪ್ಲೇಸ್ಮೆಂಟ್ ಸರ್ಜರಿ
ತುಮಕೂರು: ರಕ್ತ ಸಂಚಲನೆಗೆ ಸಹಾಯವಾಗುವ ಎದೆಯ ಕವಾಟ(ಹಾರ್ಟ್ ವಾಲ್ವ್) ಸರಿಯಾಗಿ ತೆರೆದುಕೊಳ್ಳದೆ ತೀವ್ರ ಎದೆನೋವು,ಉಬ್ಬಸ,ಸುಸ್ತು ಹಾಗೂ ತಲೆಸುತ್ತಿನಿಂದ ಬಳಲುತ್ತಿದ್ದ ಪಾವಗಡ ಮೂಲದ 60 ವರ್ಷದ ರಂಗಪ್ಪ ಎನ್ನುವವರಿಗೆ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ವಾಲ್ವ್ ರೀಪ್ಲೇಸ್ಮೆಂಟ್ ನಡೆಸಲಾಗಿದೆ.
ಈ ಕುರಿತು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಸಂತಸ ಹಂಚಿಕೊಂಡ ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಮೈಲಿಗಲ್ಲು ಸಾಧಿಸಿದ್ದು ಹೆಮ್ಮೆಯನಿಸಿದೆ. ಸಿದ್ಧಗಂಗಾ ಶ್ರೀವರ್ಯರ ಆಶೀರ್ವಾದದ ಫಲವೇ ಈ ಯಶಸ್ಸಿಗೆ ಕಾರಣ ಎಂದರು.
ಹಿರಿಯ ಹೃದ್ರೋಗ ತಜ್ಞ ಹಾಗೂ ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಡಾ.ಭಾನುಪ್ರಕಾಶ್ ಹೆಚ್.ಎಂ.ಹೃದಯ ತಜ್ಞ ಡಾ.ಶರತ್ ಕುಮಾರ್ ಜೆ.ವಿ.
ಕಾರ್ಡೀಯೋಥೊರಾಸಿಕ್ ಸರ್ಜನ್ ಡಾ.ರವಿಚಂದ್ರ,
ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವ್ ಕುಮಾರ್ ಮುಂತಾದವರಿದ್ದರು.
ಸಿದ್ದಗಂಗಾ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದಲ್ಲಿ ಚಿಕಿತ್ಸೆ ಪಡೆದ ನಾಗೇಂದ್ರ ಅವರು ನಮ್ಮ ಆಸ್ಪತ್ರೆಯ ಬಗ್ಗೆ ಮಾತನಾಡಿದ್ದಾರೆ,
ತುಮಕೂರು ಜಿಲ್ಲಾ ರೈತರ ಮತ್ತು ಎಪಿಎಂಸಿ ನೌಕರ ಹಾಗೂ ಸಾಮಾನ್ಯ ಕಲ್ಯಾಣ ಟ್ರಸ್ಟ್, ಹಾಗೂ ಸಿದ್ದಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಗುಬ್ಬಿ ತಾಲೂಕಿನ ಜಿ. ಹೊಸಹಳ್ಳಿಯ ಶಾಲಾ ಆವರಣದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು, ಶಿಬಿರದಲ್ಲಿ 7೦೦ ಕ್ಕೂ ಹೆಚ್ಚು ಮಂದಿಗೆ ಬಿಪಿ, ಶುಗರ್, ನೇತ್ರ ತಪಾಸಣೆ, ಕೀಲು ಮತ್ತು ಮೂಳೆ, ಹೃದಯ ಸಂಬಂಧಿ ಹಾಗೂ ಇನ್ನಿತರ ಕಾಯಿಲೆಗಳ ತಪಾಸಣೆ ನಡೆಸಿ ಔಷಧಿ ನೀಡಲಾಯಿತು,
Click here to claim your Sponsored Listing.
Videos (show all)
Category
Contact the practice
Telephone
Website
Address
BH Road
Tumkur
572102
SSMC & H, B H Road, Agalakote
Tumkur, 572107
Hospitality
Shri Venkateshwara Complex, 80ft Road, Mahalakshmi Nagara
Tumkur, 572103
Chinmaya Hospital and Fertility Centre is a full fledged IVF centre & Hospital.
2nd Main, Opp. District Hospital, Beside Siddaganga Women's College, Gandhinagar
Tumkur, 572102
Unique centre of excellence in Infertility Management, IVF & Gynaec Endoscopy in non-metro city
B. H Road, Near Shivakumara Swamiji Circle
Tumkur, 572102
Established with the blessings of his holiness Dr. Sri Sri Shivakumara Swamiji
S. S. Puram Main Road
Tumkur, 572102
⭐One of the best multi-specialty hospital in Tumkur, offering services in Obstetrics & Gynecology, Pediatrics, Mother & Child Care, Urology, Laparoscopic Surgery, Orthopedics & Eme...
Site No. 23, Survey No. 177/1, 2&3, Beside Raja Clay Works, Heggere, India. PIN: 572107
Tumkur, 572102
Omaha Ayurveda treats all challenging diseases globally with ancient ayurveda medicines and treatment for Stress Obesity Cancer BP Diabetes Vericose S*x...
Kesarumadu
Tumkur, 572102
ಶ್ರೀ ರಾಮ ಆಂಬುಲೆನ್ಸ್ ಸೇವೆಯನ್ನು ಪಡೆಯಲು ದಿನದ ಇಪ್ಪತ್ನಾಲ್ಕು ಗಂಟೆಗಳ ಸೇವೆ ಕರೆ ಮಾಡಿ 8880075750
Dr S Radhakrishna Road, S. S Puram
Tumkur, 572102
Aruna hospital, established in Tumkur since 3 decades catering to the healthcare needs of the people
173, 2nd Cross, 4th Main, Sharadhadevinagar
Tumkur, 572103
http://www.bhuviayurveda.com
Nandi Arcade, 1 St Floor, Opp. NEPS, Shankarapuram, B. H Road
Tumkur, 572101
We at CG Kidney Care and Dialysis Centre strive to provide the best renal care possible in a cost ef