Ramakrishna - Vivekananda Ashrama, Tumakuru
Ramakrishna - Vivekananda Ashrama, Tumakuru
#ಆರೋಹಣ
ಇಂದು ಸಂಜೆ ಆಶ್ರಮದಲ್ಲಿ *ಪೂಜ್ಯ ಸ್ವಾಮಿ ಧೀರಾನಂದಜೀ* ಅವರಿಂದ ಪ್ರವಚನ.
#ಶಾರದಾನಿನಾದ
https://youtube.com/live/CP5fyW1ZOVs?feature=share
Ramakrishna-Vivekananda Ashrama, Tumakuru Live Stream ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದುಷಿ ಮಾಧುರಿ ಕೌಸೀಕ್ವಿದುಷಿ ಶ್ರುತಿ ಸಿ ವಿ (ವಯೋಲಿನ್)ವಿದ್ವಾನ್ ರಕ್ಷಿತ್ ಶರ್ಮ (ಮೃದಂಗ...
*ಆಶ್ರಮದಲ್ಲಿ ನಾಳೆ ಶ್ರೀರಾಮನವಮಿ ಪ್ರಯುಕ್ತ ವಿಶೇಷ ಸತ್ಸಂಗ*
ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಭಗವಾನ್ ಶ್ರೀರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದಲ್ಲಿ ನಾಳೆ *ಸಂಜೆ 6 ಗಂಟೆಗೆ* ಶ್ರೀರಾಮನವಮಿ ಪ್ರಯುಕ್ತ ವಿಶೇಷ ಸತ್ಸಂಗವನ್ನು ಆಯೋಜಿಸಲಾಗಿದೆ. *6 ರಿಂದ 6.30 ರವರೆಗೆ* ಶ್ರೀವಿಷ್ಣುಸಹಸ್ರನಾಮ ಪಠಣ, *6.30 ರಿಂದ 8 ಗಂಟೆಯವರೆಗೆ ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀಯವರಿಂದ* ಶ್ರೀರಾಮನಾಮ ಸಂಕೀರ್ತನೆ ಹಾಗು ಪ್ರವಚನ ನೆರವೇರಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
*ಆಶ್ರಮದಲ್ಲಿ ಪ್ರತಿ ಭಾನುವಾರ ಸ್ವಾಮಿ ವಿವೇಕಾನಂದರನ್ನು ಕುರಿತ ಪ್ರವಚನ*
ಇದೇ *ಏಪ್ರಿಲ್ 14, ಭಾನುವಾರದಿಂದ* ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳ ಕುರಿತಾದ ಪ್ರವಚನವನ್ನು ತುಮಕೂರು ರಾಮಕೃಷ್ಣ - ವಿವೇಕಾನಂದ ಆಶ್ರಮದ *ಸ್ವಾಮಿ ವೀರೇಶಾನಂದ ಸರಸ್ವತೀಯವರು* ಆಶ್ರಮದಲ್ಲಿ ನೆರವೇರಿಸುವರು.
ಸಂಜೆ 5.30 ರಿಂದ 6 ಗಂಟೆಯ ವರೆಗೆ ಶ್ರೀ ಶ್ರೀ ಲಲಿತಾಸಹಸ್ರನಾಮ ಪಠಣ, 6 ರಿಂದ 6.30 ರವರೆಗೆ ಆರಾತ್ರಿಕ, 6.30 ರಿಂದ ಪೂಜ್ಯ ಸ್ವಾಮೀಜಿಯವರಿಂದ ಪ್ರವಚನ ನೆರವೇರಲಿದೆ.
*ಪ್ರತಿ ಭಾನುವಾರ ನೆರವೇರುವ ಈ ಪ್ರವಚನ ಮಾಲಿಕೆಗೆ ಎಲ್ಲ ಭಕ್ತರಿಗೂ ಹೃತ್ಪೂರ್ವಕ ಸ್ವಾಗತವಿದೆ.*
*ಯುಗಾದಿಯಂದು ಆಶ್ರಮದಲ್ಲಿ ಗಾನಪ್ರವಚನ*
ತುಮಕೂರಿನ ರಾಮಕೃಷ್ಣ- ವಿವೇಕಾನಂದ ಆಶ್ರಮದಲ್ಲಿ *ಇದೇ 2024ರ ಏಪ್ರಿಲ್ 9, ಮಂಗಳವಾರ* ಚಾಂದ್ರಮಾನ ಯುಗಾದಿಯಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
*ಸಂಜೆ 5.30 ರಿಂದ 8 ಗಂಟೆಯವರೆಗೆ* ಶ್ರೀಲಲಿತಾಸಹಸ್ರನಾಮ ಪಾರಾಯಣ, ಆರಾತ್ರಿಕ, ಹಾಗೂ ಆಶ್ರಮದ ಅಧ್ಯಕ್ಷರಾದ *ಪೂಜ್ಯ ಸ್ವಾಮಿ ವೀರೇಶಾನಂದ ಸರಸ್ವತೀ* ರವರಿಂದ *ವಿಶೇಷ ಗಾನಪ್ರವಚನ* ಮೂಡಿಬರಲಿದೆ.
ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಸ್ವಾಮಿ ವೀರೇಶಾನಂದ ಸರಸ್ವತೀಯವರು ಕೋರಿದ್ದಾರೆ.
*ಮಸ್ಕತ್ ನಲ್ಲಿ ವಿಶೇಷ ಸತ್ಸಂಗ*
ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ *ಸ್ವಾಮಿ ವೀರೇಶಾನಂದ ಸರಸ್ವತೀ ಹಾಗು ಸ್ವಾಮಿ ಪರಮಾನಂದಜೀ* ಯವರು ಓಮನ್-ಕರ್ನಾಟಕ ಆರಾಧನಾ ಸಮಿತಿಯ ಆಹ್ವಾನದ ಮೇರೆಗೆ ಅರಬ್ ರಾಷ್ಟ್ರಗಳಲ್ಲಿ ಒಂದಾದ ಓಮನ್ ದೇಶದ ರಾಜಧಾನಿ ಮಸ್ಕತ್ ಗೆ ವಿಶೇಷ ಸತ್ಸಂಗ ನಡೆಸಿಕೊಡಲು ತೆರೆಳಿದ್ದಾರೆ. ಮಸ್ಕತ್ ನ ಶ್ರೀಕೃಷ್ಣ ಸಭಾಂಗಣದಲ್ಲಿ ನಾಳೆ ಅಂದರೆ *ಮಾರ್ಚ್ 15, ಶುಕ್ರವಾರ ಸಂಜೆ 5.30ಕ್ಕೆ* ಆಯೋಜಿಸಲಾಗಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಸ್ವಾಮಿ ವೀರೇಶಾನಂದಜೀ *ಸನಾತನ ಸಂಸ್ಕೃತಿ - ಧರ್ಮವೋ ? ವಿಜ್ಞಾನವೋ ?* ವಿಷಯದ ಕುರಿತು ವಿಶೇಷ ಪ್ರವಚನ ನೀಡಲಿದ್ದು ಉಪನ್ಯಾಸದ ನಂತರ ಯತಿದ್ವಯರು ಪ್ರಶ್ನೋತ್ತರ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ತದನಂತರ *ಶಾರ್ಜಾಹ್, ಅಬುಧಾಬಿ ಮತ್ತು ದುಬೈ ನಗರ* ಗಳಲ್ಲಿ ವಿಶೇಷ ಸತ್ಸಂಗ ಕಾರ್ಯಕ್ರಮಗಳು ನೆರವೇರಲಿವೆ.
*ನಾಳೆ ಆಶ್ರಮದಲ್ಲಿ ಶ್ರೀರಾಮಕೃಷ್ಣ ಜಯಂತಿ*
ಆಶ್ರಮದಲ್ಲಿ ಭಗವಾನ್ ಶ್ರೀ ರಾಮಕೃಷ್ಣರ 189ನೇ ಜನ್ಮದಿನೋತ್ಸವವನ್ನು ನಾಳೆ (*ಮಾರ್ಚ್ 12, ಮಂಗಳವಾರ*) ಆಚರಿಸಲಾಗುವುದು.
ಬೆಳಗ್ಗೆ 6 ಗಂಟೆಗೆ *ಉಷಃಕೀರ್ತನೆ*, 10 ರಿಂದ 12.30ರವರೆಗೆ *ಶ್ರೀವಿಷ್ಣುಸಹಸ್ರನಾಮ ಪಠಣ*, *ಶ್ರೀರಾಮಕೃಷ್ಣ ಹೋಮ* ಮತ್ತು *ಸಂಕೀರ್ತನೆ* ನೆರವೇರಲಿದೆ.
ಸಂಜೆ 5.30 ರಿಂದ *ಶ್ರೀಲಲಿತಾಸಹಸ್ರನಾಮ ಪಠಣ, ಸಂಕೀರ್ತನೆ ಮತ್ತು ಪ್ರವಚನವು* ನೆರವೇರಲಿದೆ.
*ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಾನ್ ಶ್ರೀರಾಮಕೃಷ್ಣರ ಕೃಪಾಶೀರ್ವಾದ ಪಡೆಯಲು ಕೋರುತ್ತಿದ್ದೇನೆ.*
ಇಂತಿ
ಭಗವತ್ಸೇವೆಯಲ್ಲಿ
*ಸ್ವಾಮಿ ವೀರೇಶಾನಂದ ಸರಸ್ವತೀ*
*ಆಶ್ರಮದಲ್ಲಿ ನಾಳೆ ಶಿವರಾತ್ರಿ ಸತ್ಸಂಗ*
ಆಶ್ರಮದಲ್ಲಿ ಇದೇ *2024ರ ಮಾರ್ಚ್ 8, ಶುಕ್ರವಾರ* ದಂದು ಮಹಾಶಿವರಾತ್ರಿಯ ಪ್ರಯುಕ್ತ ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಂಜೆ *4.00 ಗಂಟೆಯಿಂದ 6.20* ರವರೆಗೆ ವೇದಬ್ರಹ್ಮ ಶ್ರೀ ಶ್ರೀಹರಿಶರ್ಮ ಹಾಗೂ ಶ್ರೀ ಪ್ರಶಾಂತ್ ಶರ್ಮರವರು *ಏಕವಾರ ರುದ್ರಾಭಿಷೇಕ* ವನ್ನು ನೆರವೇರಿಸಿಕೊಡಲಿದ್ದಾರೆ.
*6.30ರಿಂದ 7.00* ರವರೆಗೆ *ಆರಾತ್ರಿಕ ಭಜನೆ* ಹಾಗೂ *7.00ರಿಂದ 8.30* ರವರೆಗೆ *ಶ್ರೀ ಶಿವನಾಮ ಸಂಕೀರ್ತನೆ* ಯನ್ನು ಏರ್ಪಡಿಸಲಾಗಿದೆ.
*ಸಾರ್ವಜನಿಕರು ಈ ವಿಶೇಷ ಸತ್ಸಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರುತ್ತೇನೆ.*
*ಸ್ವಾಮಿ ವೀರೇಶಾನಂದ ಸರಸ್ವತೀ*
#ಹೊಂಬೆಳಕು
*ಆಶ್ರಮದಲ್ಲಿ ನಾಳೆ ಸ್ವಾಮಿ ವಿವೇಕಾನಂದರ ಜಯಂತಿ*
ಆತ್ಮೀಯ ಆಧ್ಯಾತ್ಮಿಕ ಬಂಧುಗಳೇ,
ಆಶ್ರಮದಲ್ಲಿ *ನಾಳೆ ಫೆಬ್ರವರಿ 2, ಶುಕ್ರವಾರದಂದು ಸ್ವಾಮಿ ವಿವೇಕಾನಂದರ 162ನೇ ಜಯಂತಿ* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
*ಬೆಳಗ್ಗೆ 6.00 ರಿಂದ 7.00* : ಉಷಃಕೀರ್ತನೆ.
*ಸಂಜೆ 5.30 ರಿಂದ 6.00* : ಶ್ರೀಶ್ರೀ ಲಲಿತಾಸಹಸ್ರನಾಮ ಪಾರಾಯಣ
*6.00 ರಿಂದ 7.15* : ಆರಾತ್ರಿಕ ಭಜನೆ ಮತ್ತು ಭಗವನ್ನಾಮ ಸಂಕೀರ್ತನೆ.
*7.15 ರಿಂದ 8.00* : ವಿಶೇಷ ಪ್ರವಚನ : *ಸ್ವಾಮಿ ವೀರೇಶಾನಂದ ಸರಸ್ವತೀ*
ನೀವುಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
ಶ್ರೀರಾಮಕೃಷ್ಣ ಸ್ಮರಣೆಗಳೊಂದಿಗೆ,
*ಸ್ವಾಮಿ ವೀರೇಶಾನಂದ ಸರಸ್ವತೀ*
*ಆಶ್ರಮದಲ್ಲಿ ನಾಳೆ ಶ್ರೀರಾಮ ಜ್ಯೋತಿ ಸತ್ಸಂಗ*
ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ *ನಾಳೆ ಶ್ರೀರಾಮ ಜ್ಯೋತಿ ಸತ್ಸಂಗ ಕಾರ್ಯಕ್ರಮವನ್ನು* ಹಮ್ಮಿಕೊಳ್ಳಲಾಗಿದೆ. ಭಾರತೀಯರ ಪರಮ ಪವಿತ್ರ ತೀರ್ಥಕ್ಷೇತ್ರವಾದ ಅಯೋಧ್ಯಾ ನಗರದಲ್ಲಿ ಭಗವಾನ್ ಶ್ರೀರಾಮಚಂದ್ರನ ಮೂರ್ತಿಪ್ರತಿಷ್ಠಾಪನೆಗೊಳ್ಳುತ್ತಿರುವ ಐತಿಹಾಸಿಕ ಸನ್ನಿವೇಶವದಲ್ಲಿ ಈ ಸತ್ಸಂಗವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು *ಸೋಮವಾರ ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಗಿ 11.30 ಕ್ಕೆ ಮುಕ್ತಾಯಗೊಳ್ಳುತ್ತದೆ.*
ಕಾರ್ಯಕ್ರಮದಲ್ಲಿ *ಶ್ರೀರಾಮನಾಮ ಸಂಕೀರ್ತನೆ, ಶ್ರೀರಾಮ ಜ್ಯೋತಿ ಪ್ರಜ್ವಲನ ಮತ್ತು ಶ್ರೀರಾಮ ಮಂತ್ರದ ಸಾಮೂಹಿಕ ಪಠಣವು* ಮೂಡಿಬರಲಿವೆ.
ಆಸ್ತಿಕ ಮಹಾಶಯರು ಈ ಸತ್ಸಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದ ಸರಸ್ವತೀ ಕೋರಿದ್ದಾರೆ.
Udayavani
ವಿವೇಕಾನಂದರ ಶಾಂತಿ ಸಂದೇಶ ಸಾರ್ವಕಾಲಿಕ: ಸ್ವಾಮಿ ವೀರೇಶಾನಂದ ಸರಸ್ವತಿ ಅಭಿಮತ ಮೈಸೂರು: ಅಮೆರಿಕದ ಷಿಕಾಗೋಗೆ ತೆರಳುವ ಮುನ್ನ ಸ್ವಾಮಿ ವಿವೇಕಾನಂದರು ಮೈಸೂರು ರಾಜರ ಆತಿಥ್ಯ ಸ್ವೀಕರಿಸಿದ್ದರು. ಅದರ ಕುರುಹು ಈಗ ವಿವೇ.....
Click here to claim your Sponsored Listing.
Contact the place of worship
Telephone
Address
Ramakrishna Nagar
Tumkur
572105
Opening Hours
Monday | 6:30am - 12pm |
4pm - 8pm | |
Tuesday | 6:30am - 12pm |
4pm - 8pm | |
Wednesday | 6:30am - 12pm |
4pm - 8pm | |
Thursday | 6:30am - 12pm |
4pm - 8pm | |
Friday | 6:30am - 12pm |
4pm - 8pm | |
Saturday | 6:30am - 12pm |
4pm - 8pm | |
Sunday | 6:30am - 12pm |
4pm - 8pm |
Https://goo. Gl/maps/vyaFj5jwTbuXjDs8A
Tumkur, 572101
Assalamu alaikum. We are looking for donations for our Masjid in Tumkur, India. Please contact Muhammed Haris Whatsapp 6380399952 Jamia Anas Ibne Malik Masjid, Tumkur
10th Cross, Mata Vaishnodevi Road, Upparahalli Main Road
Tumkur, 572101
Temple of Mata Vaishno Devi
C B Nagar Upparahalli Tumkur 2
Tumkur, 572102
This temple was built by cholas, An very old temple of Veerabhadraswamy. Every year during Navaratri, ratothsava and Aginakonda will be performed here. Every Amavasya and full moon...
Dargah Baadshah E Dakkan Hazrath Sayyid Shah Muhammad Momin Baadesha Quadri Al Hasani Wal Hussaini Al Baghdadi (RA)Kesarmudu Shariff
Tumkur, 572104
Baadshah e Dakhan Ma’adan e Anwaar e ilaahi Kaashif e asraar e maanavi
Masjid E Askari Karimpur, Holavanahalli, Koratagere (TQ)
Tumkur, 572121
A diverse Shia Ithna-Asheri Muslims are residing in Kareempur (Holavanahalli) over past 150+ years. The community owns minimum amminities such as Masjid (Re construction in progres...
T Gollahalli Bellavi Hobli Tumkur Taluk And District
Tumkur, 572107
ಶ್ರೀ ರಂಗನಾಥ ಸ್ವಾಮಿ ಟಿ . ಗೊಲ್ಲಹಳ್ಳಿ
M G Road
Tumkur, 572102
Sanskar Vatika is a Jain based educational system It is a medium through which moral, social, ethical