Lakshmikanth Venkateshaiah
Nearby shops
Main Road
Main Road
No. 529, Next to Hotel Pai Vijay, 11th Main Road, 33rd Cross Street, 4th Block, Jayanagar, Bengaluru
You may also like
Kannada Books, Movies ,Music,T Shirts, Greetings,Clocks,Posters,Charts,etc. Everything related to Ka Altogether we have 2800 movies in VCDs and 750 movies DVDs.
Today we have more than 22,000 items in our catalogue, which covers Kannada DVDs, VCDs, Audio CDs, MP3s, Books, Kannada T-Shirts, Greeting Cards, Kannada Clocks, Watches, Flags, Shawls and Badges. We have New & Old Movies, New & Old Film Songs, Film Hits, Film Stories, etc. We have a huge collection of Kannada Folk Music, Light Music, Devotional, Dramas, Yakshagaana, Comedy, Children, Hari Kathe,
‘ಎರಡನೇ ದೇವರು’ ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು
ಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ. ಕಾದಂಬರಿಯು ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು ಎಂದಿದ್ದಾರೆ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಎರಡನೇ ದೇವರು ಕಾದಂಬರಿಯ ಕುರಿತು ಬರೆದ ಆಪ್ತ ಮಾತು ಇಲ್ಲಿವೆ.
ರಮೇಶರೇ,
ನಮಸ್ಕಾರ.
ನಿಮ್ಮ "ಎರಡನೇ ದೇವರು" ಕಾದಂಬರಿಯನ್ನು ಉಸಿರು ಬಿಗಿ ಹಿಡಿದು ಓದಿದ ಹಾಗೆ ಓದಿದೆ! ಅದು ಸಾಮಾಜಿಕ ವಸ್ತುವನ್ನು ಒಳಗೊಂಡಿದ್ದರೂ ಅದರ ನಡೆ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿಯದ್ದೇ. ಇಷ್ಟಕ್ಕೂ ಅದು ನಿಮಗೆ ಒಗ್ಗಿದ ಬರೆವಣಿಗೆಯ ರೀತಿಯೇ ಅಲ್ಲವೇ?
ವ್ಯಾಸಭಾರತದಲ್ಲಿ (ವಾಲ್ಮೀಕಿ ರಾಮಾಯಣದಲ್ಲಿ ಕೂಡಾ!) ಒಂದು ಶ್ಲೋಕ ಬರುತ್ತದೆ: ಯಥಾ ಕಾಷ್ಠಂಚ ಕಾಷ್ಠಂಚ...ಅಂತ! ಅಂದರೆ ಮಹಾ ಪ್ರವಾಹದಲ್ಲಿ ಎಲ್ಲಿಂದಲೋ ಬೇರೆ ಬೇರೆಯಾಗಿ ಬಂದ ಎರಡು ಮರದ ತುಂಡುಗಳು ಒಂದೆಡೆ ಜತೆಯಾಗುತ್ತಾ, ಮತ್ತೆ ಬೇರ್ಪಡುತ್ತಾ, ಜತೆಯಾಗುತ್ತಾ...ಸಾಗುತ್ತವೆ ಅಂತ! ನಮ್ಮ ಗಂಡು ಹೆಣ್ಣುಗಳ ಕಥೆಯೂ ಅದೇ ಅಲ್ಲವೇ?
ನಿಮ್ಮ ಕಾದಂಬರಿಯಲ್ಲಿ ಬರುವ ಪೂರ್ಣ ಹಾಗೂ ನೇತ್ರಾರ ಪಾತ್ರಗಳೂ ಇದೇ ರೀತಿ ಎಲ್ಲಿಂದಲೋ ಬಂದು ಜತೆಯಾಗುತ್ತಾ ಬೇರ್ಪಡುತ್ತಾ ಸಾಗಿದವರು. ನಡುವೆ ಅನೇಕ ತಿರುವುಗಳಲ್ಲಿ ನಡೆಯುವ ಅಘಟಿತ ಘಟನಾವಳಿಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ, ತಪ್ಪುಗಳನ್ನು ಮಾಡುತ್ತಲೇ, ಅದರಿಂದ ಪಾಠ ಕಲಿತು ತಮ್ಮನ್ನು ತಿದ್ದಿಕೊಳ್ಳುತ್ತಾ...ಆ ಪ್ರಕ್ರಿಯೆಯಲ್ಲೇ ಹದಗೊಂಡು ಮಾಗುತ್ತಾ ಹೋಗುವ ರೀತಿ ತುಂಬಾ ಕುತೂಹಲಕಾರಿಯೂ ಸೊಗಸಾದುದೂ ಆಗಿದೆ.
ನಿಮ್ಮ ನಿರೂಪಣಾ ವಿಧಾನ, ಬಳಸಿದ ನಮ್ಮ ಕಡೆಯ ಮಾತಿನ ಧಾಟಿ, ಚಕಚಕನೆ ಘಟನೆಗಳು ಸಂಭವಿಸುತ್ತಾ ಹೋಗುವ ರೀತಿಯು ನಿಮಗೇ ವಿಶಿಷ್ಟವಾದುದು. ಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ. ಕಾದಂಬರಿಯು ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು. ಅಭಿನಂದನೆಗಳು.
ನೀವು ಸಿಬಿಐ ಆಫೀಸಿನಲ್ಲಿ ಇರಬೇಕಾದವರು ತಪ್ಪಿ ಬೇರೆಡೆ ಉಳಿದು ಬಿಟ್ಟಿರಿ ಅಂತ ನನಗನ್ನಿಸುತ್ತದೆ! ಇಂಥದೇ ಇನ್ನಷ್ಟು ಕೃತಿಗಳನ್ನು ನನ್ನಂಥ ಬಡಪಾಯಿಯ ಓದಿಗೆ ಆಹಾರವಾಗಿ ನೀಡುತ್ತಾ ಇರಿ!
ನಮಸ್ಕಾರ,
ನಿಮ್ಮ,
ಸುಬ್ರಾಯ ಚೊಕ್ಕಾಡಿ
‘ಎರಡನೇ ದೇವರು’ ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!
https://www.youtube.com/watch?v=B6Uc9GjSe0I
ಏಪ್ರಿಲ್ 7 ರಂದು ಬಿಡುಗಡೆಯಾಗುತ್ತಿರುವ ರೋಚಕ ಕಾದಂಬರಿ "ಅಮೀಬಾ" ಪುಸ್ತಕದ ಆಯ್ದ ಸಂಗತಿಗಳು.. | Amoeba ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ.....
ಅಮೀಬಾ ಕಾದಂಬರಿ ಬಿಡುಗಡೆ
- ರೋಮಾಂಚಕ, ಪತ್ತೇದಾರಿ ಕಾದಂಬರಿ
ಮುಖ್ಯ ಅತಿಥಿಗಳು
ಜೋಗಿ
ಪ್ರಖ್ಯಾತ ಬರಹಗಾರರು, ಕನ್ನಡಪ್ರಭ ಪತ್ರಿಕೆಯ ಸಂಪಾದಕರು
ಅನಂತ ಚಿನಿವಾರ್
ಪತ್ರಕರ್ತರು, ಸಂಪಾದಕರು
ಯಶೋಮತಿ ರವಿಬೆಳಗೆರೆ
ಪತ್ರಕರ್ತರು, ಬರಹಗಾರರು
ಎ ಪಿ ಅರ್ಜುನ್
ಖ್ಯಾತ ನಿರ್ದೇಶಕರು
ವಿರಾಟ್
ನಾಯಕನಟರು
ಸಿಹಿಕಹಿ ಚಂದ್ರು
ನಟ, ನಿರ್ಮಾಪಕ, ನಿರ್ದೇಶಕ
ನೆನಪಿರಲಿ ಪ್ರೇಮ್
ಖ್ಯಾತ ನಟರು
ಕನ್ನಡ ಸಾಹಿತ್ಯ ಪರಿಷತ್ತು
ಪಂಪ ಮಹಾಕವಿ ರಸ್ತೆ
ಚಾಮರಾಜಪೇಟೆ
ಏಪ್ರಿಲ್ 7 , ಭಾನುವಾರ ಬೆಳಿಗ್ಗೆ 10:30 ಕ್ಕೆ
ಬೆಳಗಿನ ಉಪಾಹಾರ ನಮ್ಮೊಂದಿಗೆ
ನಿರೂಪಣೆ ಪ್ರಶಾಂತ್ ಅತ್ರಿ
ತಮಗೆಲ್ಲರಿಗೂ ಆತ್ಮೀಯ ಸ್ವಾಗತ
https://www.youtube.com/watch?v=BeTfLUXmeO8
ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ | Book Release Event | Book Brahma Live ರಜತ ರಂಗದ ಧ್ರುವತಾರೆ, ಎರಡನೇ ದೇವರು, ಪಟ್ಟಣದ ಕತೆಗಳು ಮತ್ತು ನನ್ನ ನಿನ್ನ ನಡುವೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಆಶ್ರಯ : ಟೋಟಲ್ ಕ.....
ಟೋಟಲ್ ಕನ್ನಡ ವತಿಯಿಂದ ವಿ. ಶ್ರೀಧರ್ ಅವರ ‘ರಜತ ರಂಗದ ಧ್ರುವತಾರೆ’ ಜೀವನಚರಿತ್ರೆ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ‘ಎರಡನೇ ದೇವರು’ ಕಾದಂಬರಿ, ಪುಂಡಲ್ಲೀಕ ಕಲ್ಲಿಗನೂರು ಅವರ ‘ಪಟ್ಟಣದ ಕತೆಗಳು’ ಕಥಾ ಸಂಕಲನ, ನರೇಂದ್ರ ಕಬ್ಬಿನಾಲೆ ಅವರ ‘ನನ್ನ ನಿನ್ನ ನಡುವೆ’ ಕೃತಿಗಳ ಲೋಕಾರ್ಪಣಾ ಸಮಾರಂಭವು 2024 ಮಾರ್ಚ್ 10ರ ಭಾನುವಾರಂದು ಬೆಂಗಳೂರಿನ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆಯಿತು.
ಕೃತಿಗಳನ್ನು ಲೋಕರ್ಪಾಣೆಗೊಳಿಸಿ ಮಾತನಾಡಿದ ಖ್ಯಾತ ನಟ ಹಾಗೂ ನಿರ್ಮಾಪಕ ಶ್ರೀನಾಥ್, “ಕನ್ನಡ ರಂಗದ ಧ್ರುವತಾರೆ ಕಲ್ಪನಾ ನಮ್ಮೊಂದಿಗೆ ಬೆಳೆದು, ಹಲವನ್ನು ನಮಗೆ ತಿಳಿಸಿ, ಕಲಿಸಿ ಅವರೊಂದಿಗೆ ನಮ್ಮನ್ನು ಕೂಡ ಬೆಳೆಸಿದರು. ಅವರ ವ್ಯಕ್ತಿತ್ವ ಒಂದು ಪುಸ್ತಕ ಓದಿದಾಗ, ಸಿನಿಮಾ ನೋಡಿದಾಗ ಅಥವಾ ಅವರ ಕುರಿತು ಯಾರಾದರೂ ಮಾತನಾಡಿದಾಗ ಮಾತ್ರ ನೆನಪಿಗೆ ಬರುವುದಲ್ಲ,” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಉಪನ್ಯಾಸಕಿ ಭಾನುಮತಿ ಡಿ ಶೆಟ್ಟಿಗಾರ್ ಮಾತನಾಡಿ, “ಎರಡನೇ ದೇವರು ನಾಯಕಿ ಪ್ರಧಾನವಾದ ಕಾದಂಬರಿ. ತನ್ನನ್ನು ಒಬ್ಬ ಯಶಸ್ವಿ ಮಹಿಳೆಯಾಗಿಸಿಕೊಳ್ಳಬೇಕು ಎಂಬುವಂತಹ ಆಶಯದೊಂದಿಗೆ ಈ ಕೃತಿಯು ಸಾಗುತ್ತದೆ. ಇನ್ನು ಆ ಪಾತ್ರಧಾರಿ ಪಡುವ ಶ್ರಮ. ಮಾನಸಿಕ ತುಮುಲ, ಕಟ್ಟುಪಾಡುವಿನ ನಡುವಿನ ತೊಳಲಾಟ ಅನಿಯಂತ್ರಿತ ವಸ್ತು ಸ್ಥಿತಿ ಇಲ್ಲಿ ಮನಮುಟ್ಟುವಂತೆ ಮುದ್ರಿತವಾಗಿದೆ. ಕಾದಂಬರಿಯ ಕೆಲವೊಂದೊಡೆ ಕುತೂಹಲಭರಿತ ವ್ಯಕ್ತಿತ್ವಗಳನ್ನು ಕಾಣಬಹುದು. ಇನ್ನು ಕರಾವಳಿ ಭಾಗದ ನಂಬಿಕೆ ಆಚಾರಗಳನ್ನು ಸ್ಥೂಲವಾಗಿ ಚಿತ್ರಸಲಾಗಿದೆ.
‘ನನ್ನ ನಿನ್ನ ನಡುವೆ’ ಇಲ್ಲಿನ ಶೀಷಿಕೆಯೇ ಓದುಗನಿಗೆ ಕೌತಕ. ಪ್ರತಿಯೊಬ್ಬರ ದಿನನಿತ್ಯದ ಬದುಕಿನೊಂದಿಗೆ ಅವರೊಂದಿಗೆ ಒಡನಾಡುವವರ ವಸ್ತು ವಿಚಾರಗಳೇ ಶೀರ್ಷಿಕೆಯಾಗಿ ಓದುಗರಲ್ಲಿ ಕಾತುರವನ್ನು ಹುಟ್ಟಿಸುತ್ತದೆ. ಸಾಮಾನ್ಯವೆನ್ನಿಸುವ ವಿಚಾರಗಳು ಕೂಡ ಇಲ್ಲಿ ಕವಿಗೆ ವಿಶೇಷವಾಗಿ ಕಂಡಿದೆ. ಮನಸ್ಸಿಗೆ ತಟ್ಟಿದ ವಿಚಾರಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ, ಮನದಾಳದಲ್ಲಿ ಅಚ್ಚೊತ್ತುವ ಹಾಗೆ ಮಾಡುವಲ್ಲಿ ನರೇಂದ್ರ ಕಬ್ಬಿನಾಲೆ ಅವರು ಯಶಸ್ವಿಯಾಗಿದ್ದಾರೆ,’ ಎಂದರು.
ಹಿರಿಯ ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್ ಮಾತನಾಡಿ, “ಕಾವ್ಯದಲ್ಲಿ ಕಥಾರೂಪಕಗಳು ಬಹಳ ಗಟ್ಟಿಯಾಗಿವೆ. ಕತೆ ಅನ್ನುವಂತಹ ರೂಪಕಕ್ಕೆ ನಾವು ಗದ್ಯದ ರೂಪಕವನ್ನು ಕೊಟ್ಟಿದ್ದೇವೆ ಅಷ್ಟೇ. ಕಥಾ ಪರಂಪರೇ ಅನ್ನುವಂತಹದ್ದೇ ಬಹಳ ದೊಡ್ಡದು. ಪಟ್ಟಣದ ಕತೆಗಳನ್ನು ಓದುತ್ತಾ ಹೋದರೆ ಬಹಳ ಅರ್ಥಪೂರ್ಣವಾದ ಸಂದೇಶವನ್ನು ನೀಡುತ್ತದೆ. ಸಂಭಾಷಣೆಯೇ ಇದರ ಜೀವಾಳ. ಬದುಕು ಸಹನೀಯವಾದ ಸಂದರ್ಭವನ್ನು ಇಲ್ಲಿನ ಕತೆಗಳು ಸೃಷ್ಟಿಸುತ್ತವೆ. ನಮ್ಮವೇ ಪಾತ್ರಗಳು ಅನ್ನಿಸುವಷ್ಟು ಇಲ್ಲಿನ ಕತೆಗಳು ಕಾಡುತ್ತವೆ,” ಎಂದು ತಿಳಿಸಿದರು.
ಹಾಸ್ಯೋತ್ತರ ಖ್ಯಾತಿಯ ವಾಗ್ಮಿ ವೈ.ವಿ. ಗುಂಡುರಾವ್ ಮಾತನಾಡಿ, “ಎರಡನೇ ದೇವರು ಕೃತಿಯು ಹೆಜ್ಜೆ ಹೆಜ್ಜೆಗೂ ಕೂತೂಹಲ, ಭಯಾನಕ, ರೋಚಕವಾಗಿ ಮೂಡಿಬಂದಿದೆ. ಇಲ್ಲಿನ ಕಥಾನಾಯಕಿ ಎಲ್ಲರಿಗೂ ಭಿನ್ನವಾಗಿ ಕಾಣಿಸುತ್ತಾಳೆ. ಇನ್ನು ಕೃತಿಯ ಶೀರ್ಷಿಕೆಯಂತೆಯೇ ಇಡೀ ಕೃತಿ ಎರಡನೇ ದೇವರು ಯಾರು ಎಂಬುವುದನ್ನೇ ತಿಳಿಸುತ್ತಾ ಹೋಗುತ್ತದೆ. ಒಟ್ಟಾರೆಯಾಗಿ ನಾನು ಈ ಕೃತಿಯನ್ನು ಓದುತ್ತಾ ಹೋದಂತೆ ನನಗೆ ಸಿನಿಮಾ ನೋಡಿದ ಹಾಗೆಯೇ ಭಾಸವಾಯಿತು,” ಎಂದರು.
ಖ್ಯಾತ ಕನ್ನಡ ಮತ್ತು ತುಳು ಸಾಹಿತಿ ಶಾಂತಾರಾಮ್ ಶೆಟ್ಟಿ ಮಾತನಾಡಿ, “ಎರಡನೇ ದೇವರೆಂದು ನಾವೆಲ್ಲರೂ ಕೂಡ ತಾಯಿಯನ್ನು ಪೂಜಿಸುತ್ತೇವೆ. ಈ ‘ಎರಡನೇ ದೇವರು’ ಕಾದಂಬರಿಯೂ ಕೂಡ ಹೆಣ್ಣೊಬ್ಬಳ ಕಥನವನ್ನೇ ಹೇಳುತ್ತದೆ. ಇನ್ನು ಈ ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲರೂ ಕೂಡ ನನ್ನ ಕಣ್ಣಿಗೆ ದೇವರಂತೆಯೇ ಕಾಣುತ್ತಾರೆ. ಕಾರಣ ಅವರು ಸಾರಸ್ವತ ಲೋಕಕ್ಕೆ ಕೊಡುಗೆಯನ್ನು ನೀಡಿದವರು. ಆದ ಕಾರಣ ಅವರನ್ನು ಕೂಡ ದೇವರೆಂದು ನಾನು ಕರೆಯಲು ಬಯಸುತ್ತೇನೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಲ್ಕು ಕೃತಿಗಳ ಲೇಖಕರಾದ ವಿ. ಶ್ರೀಧರ್, ರಮೇಶ್ ಶೆಟ್ಟಿಗಾರ್ ಮಂಜೇಶ್ವರ, ಪುಂಡಲೀಕ ಕಲ್ಲಿಗನೂರು, ನರೇಂದ್ರ ಕಬ್ಬಿನಾಲೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಧೀಂದ್ರ ಅವರು ನಿರೂಪಿಸಿದರು.
Kannada, Karnataka Mementos from Total Kannada
https://totalkannada.com/catalogue/37e7aa65-4dac-4132-9f06-a6bca04fa5fa.html?product-list-name=Momentos-Trophies&ref=breadcrumb
Total Kannadiga - 10 Kannada Products Pack
1 Kannada T Shirt
1 Kannada Watch
1 Kannada Cap
3 Kannada Badges
1 Kannada Muffler
1 Wrist Band
1 Kannada Magnet
1 Kannada Flag
1 Karnataka Key Chain
3 Kannada Stickers
1 Karnataka Peta
https://www.totalkannada.com/products/c5f6c463-7494-42a1-aa0f-e524b320a136.html?ref=homepage&product-name=Total%20Kannadiga%20-%2010%20Kannada%20Products%20Pack%20(Shirt,Watch,Cap,Badge,etc)
ನಮಸ್ತೆ,
ಭೈರಪ್ಪನವರ ( 50 ಪುಸ್ತಕಗಳು ಮತ್ತು 11 ಡಿ.ವಿ.ಡಿ.ಗಳ) ವಿಶೇಷ ಸೆಟ್. ಟೋಟಲ್ ಕನ್ನಡದಲ್ಲಿ ಮಾತ್ರ.
*ಎಸ್ ಎಲ್ ಭೈರಪ್ಪನವರು ಬರೆದಿರುವ ಎಲ್ಲಾ 33 ಪುಸ್ತಕಗಳ ಒಟ್ಟು ಬೆಲೆ ರೂ 11,999*
https://tinyurl.com/3r47722m
*ಎಸ್ ಎಲ್ ಭೈರಪ್ಪನವರು ಮತ್ತು ಅವರ ಕೃತಿಗಳ ಬಗ್ಗೆ ಬರೆದಿರುವ ಎಲ್ಲಾ 17 ಪುಸ್ತಕಗಳ ಒಟ್ಟು ಬೆಲೆ ರೂ 4,999*
https://tinyurl.com/mtfu2x25
*ಎಸ್ ಎಲ್ ಭೈರಪ್ಪನವರ ಪುಸ್ತಕ ಆಧಾರಿತ ಗೃಹಭಂಗ ಧಾರಾವಾಹಿ (6 ಡಿ.ವಿ.ಡಿ. ಗಳ) ಸೆಟ್, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ನಾಯಿ ನೆರಳು, ಮತದಾನ ಚಲನಚಿತ್ರಗಳ ಡಿ.ವಿ.ಡಿ.ಗಳು ಮತ್ತು ಅವರ ಕುರಿತ ಸಾಕ್ಷ್ಯಚಿತ್ರದ ಡಿ.ವಿ.ಡಿ . ಒಟ್ಟು 11 DVDs ಬೆಲೆ ರೂ 1,399*
https://tinyurl.com/yc32ecvs
*33 + 17 + 11 = 50 ಪುಸ್ತಕಗಳು ಮತ್ತು 11 ಡಿ.ವಿ.ಡಿ.ಗಳ ಒಟ್ಟು ವಿಶೇಷ ರಿಯಾಯಿತಿ ಬೆಲೆ ರೂ 17,777*
https://tinyurl.com/3mcdzudp
ಧನ್ಯವಾದಗಳು,
ಲಕ್ಷ್ಮೀಕಾಂತ್
Total Kannada - Largest Kannada Book Shop Kannada Books Kannada Literature Books Kannada T Shirts Kannada TEE Shirts Kannada Clocks Kannada DVDs Kannada VCDs Kannada Greeting Cards Kannada Watches Kannada Flags Kannada Wrist Bands Karnataka Rajyothsava Jnaanapeeta Kannada Audio CDs Kannada MP3s Kannada Shalyas Kannada Peta Karnataka Peta My...
Total Kannada - Largest Kannada Book Shop Kannada Books Kannada Literature Books Kannada T Shirts Kannada TEE Shirts Kannada Clocks Kannada DVDs Kannada VCDs Kannada Greeting Cards Kannada Watches Kannada Flags Kannada Wrist Bands Karnataka Rajyothsava Jnaanapeeta Kannada Audio CDs Kannada MP3s Kannada Shalyas Kannada Peta Karnataka Peta My...
ನಮಸ್ತೆ,
ಟೋಟಲ್ ಕನ್ನಡ ಪುಸ್ತಕ ಮಳಿಗೆಯಿಂದ ನಿಮಗೆ ಆತ್ಮೀಯ ವಂದನೆಗಳು. ನಿಮಗೆ ತಿಳಿದಿರುವಂತೆ "ಟೋಟಲ್ ಕನ್ನಡ" ಸತತ 23 ವರ್ಷಗಳಿಂದಲೂ ಕನ್ನಡಕ್ಕೆ ಸಂಬಂಧಿಸಿದ ಎಲ್ಲಾ ವಿಧಗಳಲ್ಲೂ ಅಂದರೆ ಪುಸ್ತಕ ಮಾರಾಟ, ಪ್ರಕಟಣೆ, ಸೀ.ಡಿ, ಟೇ ಶರ್ಟ್ಸ್, ಗ್ರೀಟಿಂಗ್ಸ್, ಕನ್ನಡ ಇ-ಪುಸ್ತಕಗಳು, ಕನ್ನಡ ಆಡಿಯೋ ಪುಸ್ತಕಗಳು, ಕನ್ನಡ ಬಾವುಟ, ಶಲ್ಯ, ಕನ್ನಡ ಗಡಿಯಾರ, ಯೂಟ್ಯೂಬ್ ಮಾಧ್ಯಮ, ಚಲನಚಿತ್ರ ನಿರ್ಮಾಣ, ವಿತರಣೆ, ಬಿಡುಗಡೆ ಮತ್ತಿತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಲೇ ಬಂದಿದ್ದೇವೆ.
ಇತ್ತೀಚೆಗೆ, ಕನ್ನಡ ಅಂಗಿಗಳಿಗಾಗಿಯೇ totalteez.com ಎಂಬ ಅಂತರ್ಜಾಲ ಮಳಿಗೆಯನ್ನು ತೆರೆದಿದ್ದೇವೆ. ಹಾಗೂ ಎಂದಿನಂತೆಯೇ ನಮ್ಮಲ್ಲಿ ಎಲ್ಲಾ ತರಹದ (ಎಡ,ಬಲ ಭೇದವಿಲ್ಲದ) ಹೊಸ ಪುಸ್ತಕಗಳ ಸಂಗ್ರಹ ಬೆಳೆಯುತ್ತಲೇ ಇದೆ. ಎಲ್ಲಾ ರೀತಿಯ ಪುಸ್ತಗಳನ್ನು ನೀವಿರುವ ಯಾವುದೇ ದೇಶ, ಯಾವುದೇ ಸ್ಥಳಕ್ಕೆ (ಸದ್ಯಕ್ಕೆ ಭೂಮಿ ಗ್ರಹ ಮಾತ್ರ) ತಲುಪಿಸವ ವ್ಯವಸ್ಥೆ ( ಇಂಡಿಯಾ ಪೋಸ್ಟ್ ಅಥವ ಗರುಡಾವೇಗ ಮೂಲಕ) ಇದೆ. ಎಲ್ಲ ಪುಸ್ತಕಗಳ ಪಟ್ಟಿ ಇಲ್ಲಿದೆ - totalkannada.com .
ಜೊತೆಗೆ ಸರ್ಕಾರಿ ಶಾಲೆಗಳಿಗೆ ಕನ್ನಡ ಪುಸ್ತಕಗಳ ಭಂಡಾರ (ಗ್ರಂಥಾಲಯ) ವನ್ನು ನಿರ್ಮಿಸಿಕೊಡುವ ಕೆಲಸವನ್ನು ಸಹ ಮಾಡುತ್ತಿದ್ದೇವೆ. ಈ ವರ್ಷ ೧೦೦೦ ಶಾಲೆಗಳಿಗೆ ಮಕ್ಕಳಿಗೆ ಬೇಕಾಗುವ ಕನ್ನಡ ಪುಸ್ತಕಗಳನ್ನು ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಈಗಾಗಲೇ ೧೦೦ಕ್ಕೂ ಅಧಿಕ ಶಾಲೆಗಳಿಗೆ ಪುಸ್ತಕ ನೀಡಿದ್ದೇವೆ. (ಕೆಲವು ಸ್ನೇಹಿತರ ಸಹಕಾರದೊಂದಿಗೆ).
"ನನ್ನ ಶಾಲೆಗೆ ನನ್ನ ಉಡುಗೊರೆ" ಎಂಬ ಯೋಜನೆಯಡಿ ನೀವು ಸಹ ನೀವು ಓದಿದ ಶಾಲೆಗೆ, ನಿಮ್ಮ ಹಳ್ಳಿಯ, ಊರಿನಲ್ಲಿರುವ ಶಾಲೆಗೆ ಪುಸ್ತಕ ಸಂಗ್ರಹದ ಕೊಡುಗೆಯ ಮೂಲಕ ಶಾಲೆಯನ್ನು ನೆನೆಯಬಹುದು. ಪ್ರಾಥಮಿಕ, ಪ್ರೌಢ ಶಾಲೆಗೆ ತಕ್ಕಂತೆ ಸಾಕಷ್ಟು ವೈವಿಧ್ಯಮಯ ಪುಸ್ತಕಗಳ ಸಂಗ್ರಹವನ್ನು ಸಿದ್ದಪಡಿಸಿದ್ದೇವೆ. ಅವುಗಳ ವಿವರ ಈ ಕೆಳಕಂಡಂತಿದೆ. ಪುಸ್ತಕ ಪ್ರೇಮಿಗಳಾಗಿ, ಕೊಡುಗೈ ದಾನಿಗಳಾಗಿ.
My Gift to My School - Rs 25000 (Small Budge)
https://totalkannada.com/products/1b05120c-34df-4573-a855-896ca742f86d.html?product-name=Gift%20Set%20to%20Your%20School%20%20(Small%20Budget)&ref=search
My Gift to My School - Rs 50000 (Medium Budget)
https://totalkannada.com/products/1f74b510-a25d-43ed-8917-6f5495e17056.html?product-name=Gift%20Set%20to%20Your%20School%20%20(Medium%20Budget)&ref=search
My Gift to My School - Rs 75000 (High Budget)
https://totalkannada.com/products/c66c5bbb-eced-439e-bea3-033cac03132e.html?product-name=Gift%20Set%20to%20Your%20School%20%20(High%20Budget)&ref=search
My Gift to My School - Rs 100000 (Mega Budget)
https://totalkannada.com/products/24f50bbb-9654-4bb5-94ae-1195d962b55a.html?product-name=Gift%20Set%20to%20Your%20School%20%20(Mega%20Budget)&ref=search
ಮತ್ತಷ್ಟು ವಿವರಗಳು ಬೇಕಿದ್ದರೆ ಇ-ಮೇಲ್ ಮೂಲಕ ಅಥವ ಸನಿಹವಾಣಿಯ ಮೂಲಕ ಸಂಪರ್ಕಿಸಿ. ಕರೆ ಮಾಡಿ, ಕ್ಲಿಕ್ ಮಾಡಿ ಅಥವ ಭೇಟಿ ನೀಡಿ ನಮ್ಮ ಜಯನಗರ ಮಳಿಗೆಗೆ.
ಧನ್ಯವಾದಗಳು,
ಲಕ್ಷ್ಮೀಕಾಂತ್.ವಿ (ಕಾಲವಿ)
99862 22402
080 - 4146 0325
Radha Searching Ramana Missing Movie Public Review | Raghav| Sanjana Burli | Navanith Chari Radha Searching Ramana Missing Movie Public Review | Raghav| Sanjana Burli | Navanith Chari Kanlish Media ! ...
Radha Searching Ramana Missing Movie Public Review | Raghav N | M N Srikanth | Sanjana Burli Radha Searching Ramana Missing Movie Public Review | Raghav N | M N Srikanth | Sanjana Burli ...
Radha Searching Ramana Missing Public Review | Raghav| Sanjana Burli | First Day First Show Kannada Searching Ramana Missing Public Review | Raghav| Sanjana Burli | First Day First Show KannadaThanks for watchingFOLLOW us on F...
Radha searching Ramana Missing - Running Successfully
Click here to claim your Sponsored Listing.
Videos (show all)
Category
Contact the business
Telephone
Website
Address
Jayanagar
Bangalore
560011
Opening Hours
Monday | 9:30am - 9:30pm |
Tuesday | 9:30am - 9:30pm |
Wednesday | 9:30am - 9:30pm |
Thursday | 9:30am - 9:30pm |
Friday | 9:30am - 9:30pm |
Saturday | 9:30am - 9:30pm |
Sunday | 9:30am - 9:30pm |
11 Church Street
Bangalore, 560001
Goobes Book Republic, avant-garde indie bookstore in Bangalore.
Roohani Shifa Khana Hazrat Babu Sha Wali Dargah Dommasandra
Bangalore, 562125
A'hamdulillah We Treat Black Magic,Bad Spirits,Ghost & Bad Omen,House or Shop Bandish & Marriage Or
#70 2nd Floor SUBBARAMA CHETTY ROAD BAYYARS COFFEE NEAR NETTAKALAPPA Circle BASAVANAGUDI
Bangalore
ಪುಸ್ತಕ ಮಳಿಗೆ
3rd Cross, 1st Block, Opp. ESAF Bank, HRBR Layout, Nr. Sri Shakthikalyana Mahaganapathi Temple, Kalyan Nagar
Bangalore, 560043
Christian Book Store
Internet World
Bangalore, 560008
BestBooksMustRead exists in this internet world to help you find the best books that you must read, because in a world filled with many, many books - the ones that are the best are...
Balepete Main Road
Bangalore, 560023
Janata Bookhouse is a place where you can find a variety of categories of kannada and other books li
#113 LIG, 2nd Stage, 6th Cross, KHB Colony, Bsaveshwarnagar
Bangalore, 560079
We are from Vishwa Trading Corp we are persons deals with all kinds of stationary materials, Drawing
Shop No. 4, 2nd Floor (L2), Whitefield Main Road, Mahadevpura
Bangalore, 560048