Shri Ganeshothsava Samithi Bettampady

Contact information, map and directions, contact form, opening hours, services, ratings, photos, videos and announcements from Shri Ganeshothsava Samithi Bettampady, Community Organization, Shri Mahalingeshwara Temple Bettampady, Puttur.

05/04/2018

*ವಿವೇಕ ಯುವಕ ಮಂಡಲ ಬೆಟ್ಟಂಪಾಡಿ* ಇದರ ಸರ್ವಸದಸ್ಯರ ಮತ್ತು ಹಿತೈಷಿಗಳ *ಸಭೆಯನ್ನು ದಿನಾಂಕ 08-04-18ನೇ ಆದಿತ್ಯವಾರ ಸಾಯಂಕಾಲ ಘಂಟೆ 5.30ಕ್ಕೆ ಸರಿಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಬೆಟ್ಟಂಪಾಡಿ* ಯಲ್ಲಿ ಕರೆಯಲಾಗಿದೆ, ತಾವೆಲ್ಲರೂ ಈ ಸಭೆಯಲ್ಲಿ ‌ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸುವ. ಗೌರವಾಧ್ಯಕ್ಷರು, ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿ ಮತ್ತು ಸರ್ವಸದಸ್ಯರು ವಿವೇಕ ಯುವಕ ಮಂಡಲ ಬೆಟ್ಟಂಪಾಡಿ

21/02/2018
05/01/2018

*ಆರೋಗ್ಯವೇ ಭಾಗ್ಯ*
ಗ್ರಾಮ ವಿಕಾಸ ಸಮಿತಿ ಬೆಟ್ಟಂಪಾಡಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು, ಗ್ರಾಮ ಪಂಚಾಯತ್ ಬೆಟ್ಟಂಪಾಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ *ಉಚಿತ ಆರೋಗ್ಯ ತಪಾಸಣಾ ಶಿಬಿರ* ದಿನಾಂಕ *07-01-2018 ನೇ ಆದಿತ್ಯವಾರ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವಠಾರ*ದಲ್ಲಿ ನಡೆಯಲಿದೆ. ಈ ಶಿಬಿರದ ಪೂರ್ಣ ಸದುಪಯೋಗ ಪಡೆದುಕೊಳ್ಳುವರೇ ತಮೆಗೆಲ್ಲರಿಗೂ ಆತ್ಮೀಯ ಸ್ವಾಗತ...

06/11/2017

ಜಾತ್ರೋತ್ಸವದ ಸಂಭ್ರಮದಲ್ಲಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ

04/11/2017

Photos from Shri Ganeshothsava Samithi Bettampady's post

14/10/2017

ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಜಾತ್ರೋತ್ಸವಕ್ಕೆ ಆತ್ಮೀಯ ಸ್ವಾಗತ

11/10/2017

ಆತ್ಮೀಯ ಭಗವದ್ಬಕ್ತ ಬಂಧುಗಳೇ ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ವರ್ಷಾವಧಿ ಜಾತ್ರೋತ್ಸವವು ನವಂಬರ್ ತಿಂಗಳಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದ *ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ದಿನಾಂಕ 13-10-2017ನೇ ಶುಕ್ರವಾರ ಮಧ್ಯಾಹ್ನ ಘಂಟೆ 12 ಕ್ಕೆ ಸರಿಯಾಗಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ*ಯಲ್ಲಿ ನಡೆಸಲು ತೀರ್ಮಾನಿಸಿದ್ದು ಭಗವದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸುವ - ಅನುವಂಶಿಕ ಆಡಳಿತ ಮೊಕ್ತೇಸರರು ಮತ್ತು ಮೊಕ್ತೇಸರರು ಶ್ರೀ ಕ್ಷೇತ್ರ ಬೆಟ್ಟಂಪಾಡಿ

21/09/2017

ಆತ್ಮೀಯರೇ ನಮ್ಮೂರ ಸಾವ೯ಜನಿಕ ಶ್ರೀ ಗಣೇಶೋತ್ಸವದ *ಮಹಾಸಭೆ*ಯನ್ನು *ದಿನಾಂಕ 24-09-2017ನೇ ಆದಿತ್ಯವಾರ ಸಾಯಂಕಾಲ ಘಂಟೆ 5.00 ಕ್ಕೆ* ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಕರೆಯಲಾಗಿದೆ. ತಾವೆಲ್ಲರೂ ಈ ಸಭೆಯಲ್ಲಿ ಭಾಗವಹಿಸಿ‌‌ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಯಶಸ್ವಿಗೊಳಿಸಬೇಕಾಗಿ ವಿನಂತಿಸುವ. ಗೌರವಾಧ್ಯಕ್ಷರು, ಅಧ್ಯಕ್ಷರು, ಪ್ರಧಾನ ಕಾಯ೯ದಶಿ೯, ಕೋಶಾಧಿಕಾರಿ ಮತ್ತು ಸವ೯ ಸದಸ್ಯರು ಸಾವ೯ಜನಿಕ ಶ್ರೀ ಗಣೇಶೋತ್ಸವ ಸಮಿತಿ‌ ಶ್ರೀ ಕ್ಷೇತ್ರ ಬೆಟ್ಟಂಪಾಡಿ.

09/09/2017

ರಂಗಪೂಜೆ

29/08/2017

Shri Ganeshothsava Samithi Bettampady's cover photo

28/08/2017

ಆತ್ಮಿಯರೇ,

ನಮ್ಮೂರ 32ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ವೈಭವದ ತೆರೆ ಬಿದ್ದಿದೆ. ಯಶಸ್ವಿ ಕಾರ್ಯಕ್ರಮಕ್ಕೆ ಸಹಕರಿಸಿದ ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಅನುವಂಶಿಕ ಆಡಳಿತ ಮೊಕ್ತೆಸರರಿಗೆ, ಆಡಳಿತ ಮೊಕ್ತೆಸರರಿಗೆ ಅರ್ಚಕ ವೃಂದಕ್ಕೆ, ಶ್ರೀ ಗಣೇಶ ಸ್ವಾಮಿಯ ಪ್ರತಿಷ್ಠಾದಿ ಪೂಜೆ ಕೈಂಕರ್ಯಗಳನ್ನು ನೆರವೇರಿಸಿದ ವೈದಿಕರಿಗೆ, ತನು ಮನ ಧನಗಳಿಂದ ಸಹಕರಿಸಿದ ಊರ ಪರವೂರ ಭಗವದ್ಭಕ್ತ ಬಂಧುಗಳಿಗೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿ ಅಭ್ಯಾಗತರುಗಳಿಗೆ, ಸಾಂಸ್ಕøತಿಕ ತಂಡಗಳಿಗೆ, ಊಟೋಪಚಾರದ ವ್ಯವಸ್ಥೆಯಲ್ಲಿ ಸಹಕರಿಸಿದವರಿಗೆ, ಸಭಾಂಗಣ, ವೇದಿಕೆ ನಿರ್ಮಾಣ,ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ಕೈ ಜೋಡಿಸಿದವರಿಗೆ, ವಿವಿಧ ಪ್ರಾಯೋಜಕತ್ವವನ್ನು ವಹಿಸಿಕೊಂಡವರಿಗೆ, ಶ್ರಮದಾನದಲ್ಲಿ ತೊಡಗಿಸಿಕೊಂಡ ಸ್ಥಳೀಯ ಯುವಕ ಮಂಡಲಗಳಿಗೆ ಎಲ್ಲಾ ಮಾಜಿ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳಿಗೆ, ಭದ್ರತೆಯನ್ನು ಒದಗಿಸಿದ ಆರಕ್ಷಕ ಸಿಬ್ಭಂದಿಗಳಿಗೆ, ಮಾಧ್ಯಮದ ಮಿತ್ರರಿಗೆ ಒಟ್ಟು ಕಾರ್ಯಕ್ರಮದ ಯಶಸ್ಸಿನಲ್ಲಿ ಹಗಲು ರಾತ್ರಿಯೆನ್ನದೆ ಶ್ರಮ ವಹಿಸಿ ದುಡಿದ ನಲ್ಮೆಯ ಕಾರ್ಯಕರ್ತ ಬಂಧುಗಳಿಗೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ತುಂಬು ಹೃದಯದ ಧನ್ಯವಾದಗಳೊಂದಿಗೆ. ಮುಂದಿನ ದಿನಗಳಲ್ಲಿಯೂ ನಿಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತಿದ್ದೇವೆ.

ಗೌರವಾಧ್ಯಕ್ಷರು,ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ

25/08/2017

ಅಂತಿಮ ಹಂತದ ಸಿದ್ದತೆಯಲ್ಲಿ ಪ್ರಧಾನ ವೇದಿಕೆ

23/08/2017

*ಸಂಭ್ರಮದ ಸಮಾರಂಭಕ್ಕೆ ಸಾಕ್ಷಿಯಾಗಲು ಸಿದ್ಧಗೊಳ್ಳುತ್ತಿದೆ ಶ್ರೀ ಕ್ಷೇತ್ರ ಬೆಟ್ಟಂಪಾಡಿ*

ಲೋಕ ಮಾನ್ಯ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಪಸರಿಸುವ ಸಲುವಾಗಿ ಮನೆ ಮನೆಗಳಲ್ಲಿ ನಡೆಯುತ್ತಿದ್ದ ಗಣೇಶೋತ್ಸವಗಳನ್ನು ಸಾರ್ವಜನಿಕವಾಗಿ ಆಚರಿಸುವುದರೊಂದಿಗೆ ಸಂಘಟನಾತ್ಮಕವಾಗಿ ಬೆಳೆಸಿದರು.

ಇಂದು ದೇಶದ ಮೂಲೆ ಮೂಲೆಗಳಲ್ಲೂ ಸಾರ್ವಜನಿಕ ಗಣೇಶೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿದೆ. ಬೆಟ್ಟಂಪಾಡಿಯಲ್ಲಿ 31 ವರುಷಗಳ ಹಿಂದೆ ಯುವಕರ ತಂಡವೊಂದು ತೆಗೆದುಕೊಂಡ ನಿರ್ಣಯಕ್ಕೆ ಹಿರಿಯರ ಮಾರ್ಗದರ್ಶನ ಪ್ರೋತ್ಸಾಹದ ಫಲರೂಪವಾಗಿ ಇಂದು 32ನೇ ವರ್ಷಕ್ಕೆ ಪಾದಾರ್ಪಣೆಗೈಯಲು ಸಾಧ್ಯವಾಗಿದೆ.

ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಕಳೆದ 31 ವರ್ಷಗಳಿಂದ ವಿಜೃಂಭಣೆಯಿಂದ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಈ ವರ್ಷ 32ರ ಸಂಭ್ರಮ. ಈ ಸಂಭ್ರಮದ ಸಮಾರಂಭಕ್ಕೆ ಸಾಕ್ಷಿಯಾಗಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಳೆದ ಮೇ ತಿಂಗಳಿನಲ್ಲಿ ಸಭೆ ಕರೆದು ಕಾರ್ಯಕ್ರಮದ ರೂಪು ರೇಷೆಗಳನ್ನು ಸಿದ್ದಪಡಿಸಿ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆಮಂತ್ರಣ ಪತ್ರಿಕೆಯನ್ನು ಪ್ರತಿ ಮನೆಗೆ ತಲುಪಿಸುವಲ್ಲಿ ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಕಾರ್ಯಪ್ರವೃತ್ತಗೊಳಿಸಲಾಯಿತ್ತು. ಈಗಾಗಲೇ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಗಿದೆ.

ಪ್ರಧಾನ ಕಾರ್ಯಕ್ರಮವು ದಿನಾಂಕ 25-08-2017 ಮತ್ತು 26-08-2017 ನೇ ಶುಕ್ರವಾರ ಶನಿವಾರ ಶ್ರೀ ಕ್ಷೇತ್ರದ ಆವರಣದಲ್ಲಿ ನಡೆಯಲಿದ್ದು ಇದಕ್ಕಾಗಿ ಸುಮಾರು 1500 ಆಸನ ವ್ಯವಸ್ಥೆಯುಳ್ಳ ಸುಸಜ್ಜಿತ ಸಭಾಂಗಣ ಸಿದ್ಧಗೊಂಡಿದೆ. ಅಲಂಕಾರದ ದೃಷ್ಟಿಯಿಂದ ರೆಂಜ ಪೇಟೆಯಿಂದ ಶ್ರೀ ಸನ್ನಿದಾನದವರೆಗೆ ಕೇಸರಿ ಧ್ವಜಗಳನ್ನು ಹಾಕಲಾಗಿದೆ. ಸ್ಥಳಿಯ ಯುವಕಮಂಡಲ ಮತ್ತು ವಿವಿಧ ಗಣ್ಯರುಗಳ ಶುಭಾಶಯ ಬ್ಯಾನರ್‍ಗಳು ಮೆರುಗನ್ನು ಹೆಚ್ಚಿಸಿದೆ.

ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಈಗಾಗಲೇ ಅದಕ್ಕೆ ಬೇಕಾದ ಸಿದ್ದತೆಗಳಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಧಾರ್ಮಿಕ ಸಭಾಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ಸಾಂಸ್ಕøತಿಕ ಕಾರ್ಯಮದ ಯಶಸ್ಸಿಗೆ ವಿವಿಧ ಪ್ರಾಯೋಜಕರ ಸಹಕಾರದೊಂದಿಗೆ ಯಕ್ಷ-ಗಾನ -ಹಾಸ್ಯ ವೈಭವ ತುಳು ನಾಟಕ ಮತ್ತು ಸಂಗೀತ ಕಾರ್ಯಕ್ರಮಗಳು ಹಾಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಯಕ್ಷಗಾನ ಸಂಘದಿಂದ ಕೂಡ ರಸದೌತಣ ದೊರೆಯಲಿದೆ. ಅನ್ನದಾನವನ್ನು ನಡೆಸುವ ಸಲುವಾಗಿ ನೂರಾರು ಭಕ್ತರು ಶ್ರೀ ಗಣೇಶ ಪ್ರಸಾದ ಅನ್ನದಾನ ಯೋಜನೆಯ ಮೂಲಕ ಸಹಕರಿಸುತ್ತಿದ್ದಾರೆ

ಇದೇ ಮೊದಲ ಬಾರಿಗೆ ಶ್ರೀ ಮಹಾಗಣಪತಿ ದೇವರಿಗೆ *ದಿನಾಂಕ 25-08-2017ರಂದು ರಾತ್ರಿ 8 ಗಂಟೆಗೆ ಸಂಕಲ್ಪ ಸಹಿತ ರಂಗಪೂಜೆ* ನಡೆಸಲು ತಿರ್ಮಾನಿಸಿದ್ದು ಭಗವದ್ಬಕ್ತರಿಗೆ ಈ ಸೇವೆಗೈಯಲು ಅವಕಾಶ ಮಾಡಿಕೊಡಲಾಗಿದೆ.

ದಿನಾಂಕ 26-08-2017ನೇ ಶನಿವಾರ ಶ್ರೀ ಕ್ಷೇತ್ರದಿಂದ ವೈಭವದ ಶೋಭಾಯಾತ್ರೆ ಹೊರಟು ಬೆಟ್ಟಂಪಾಡಿ ರೆಂಜ ಇರ್ದೆ ಬೈಲಾಡಿ ಉಪ್ಪಳಿಗೆ ಮಾರ್ಗವಾಗಿ ಸಂಚರಿಸಿ ಚೆಲ್ಯಡ್ಕ ಪುಣ್ಯ ನದಿಯ ತಟಕ್ಕೆ ತಲುಪಲಿದೆ, ಈ ಸಲದ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಕೇರಳದ ಪ್ರಸಿದ್ಧ ಕಲಾ ತಂಡದಿಂದ ಸಿಂಗಾರಿ ಮೇಳ, ಭಕ್ತಿ ಭಾವವನ್ನು ಮೇಳೈಸುವ ಪ್ರಸಿದ್ಧ ಭಜನಾ ತಂಡದಿಂದ ಭಜನಾ ಸಂಕೀರ್ತನೆ, ವಾದ್ಯ ಘೋಷಗಳ ಝೇಂಕಾರ, ಮತ್ತು ಅದ್ಬುತ ಶಬ್ದವನ್ನು ಮೂಡಿಸುವ ಡಿ ಜೆ ಇರಲಿವೆ. ಶ್ರೀ ಗಣಪತಿ ವಿಗ್ರಹದ ಜಲಸ್ತಂಭನಾ ಮಹೋತ್ಸವ ಮತ್ತು ಚೆಲ್ಯಡ್ಕದಲ್ಲಿ ನಡೆಯಲಿರುವ ಅನ್ನದಾನ ಯಶಸ್ವಿಯಾಗಿ ನಡೆಸಲು ಪ್ರತ್ಯೇಕ ಸಮಿತಿಯೊಂದು ಕಾರ್ಯಪ್ರವೃತ್ತವಾಗಿದೆ.

2 ದಿನಗಳ ಕಾಲ ಬೆಟ್ಟಂಪಾಡಿ ಪರಿಸರದಲ್ಲಿ ನಡೆಯಲಿರುವ ವಿಜೃಂಭಣೆಯ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಸಾವಿರಾರು ಭಗವದ್ಬಕ್ತರ ಆಗಮನದ ನೀರಿಕ್ಷೆಯಲ್ಲಿದ್ದಾರೆ. ಊರ ಪರವೂರ ಭಗವದ್ಬಕ್ತರ ತನು ಮನ ಧನದ ಸಹಕಾರದೊಂದಿಗೆ ನಡೆಯುವ ವೈಭವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ತಾವು ಶ್ರೀ ಕ್ಷೇತ್ರ ಬೆಟ್ಟಂಪಾಡಿಗೆ ಬನ್ನಿ…

✍🏻 ಶಿವ ತಲೆಪ್ಪಾಡಿ

20/08/2017

ಸಾಂಸ್ಕೃತಿಕ ಸ್ಪರ್ಧೆ

18/08/2017

ಅಂತಿಮ‌ ಹಂತಕ್ಕೆ ಸಮೀಪಿಸಿದ ಸಭಾಂಗಣದ ಕೆಲಸ ಕಾರ್ಯಗಳು

18/08/2017

ಆತ್ಮೀಯರೇ ನಮ್ಮೂರ 32 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ‌ ಅಂಗವಾಗಿ ವಿವಿಧ *ಸಾಂಸ್ಕೃತಿಕ ಸ್ಪರ್ಧೆಗಳು* *ದಿನಾಂಕ 20-08-2017ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 9.30ರಿಂದ ಶ್ರೀ ಕ್ಷೇತ್ರ ಬೆಟ್ಟಂಪಾಡಿ*ಯಲ್ಲಿ ‌ನಡೆಯಲಿದೆ ತಾವೆಲ್ಲರೂ ಕ್ಲಪ್ತ ಸಮಯದಲ್ಲಿ ಹಾಜರಿದ್ದು ಯಶಸ್ವಿಗೊಳಿಸಬೇಕಾಗಿ ವಿನಂತಿಸುವ - ಗೌರವಾಧ್ಯಕ್ಷರು,ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಸರ್ವಸದಸ್ಯರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ

16/08/2017

ನಮ್ಮೂರ 32ನೇ ವರ್ಷದ ಶ್ರೀ ಗಣೇಶೋತ್ಸವಕ್ಕೆ ಸಿದ್ದಗೊಳ್ಳುತ್ತಿದೆ ಆಕರ್ಷಕ ಸಭಾಂಗಣ

11/08/2017

ಆತ್ಮೀಯರೇ ನಮ್ಮೂರ 32 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ‌ ಅಂಗವಾಗಿ ವಿವಿಧ *ಕ್ರೀಡಾ ಸ್ಪರ್ಧೆಗಳು* *ದಿನಾಂಕ 13-08-2017ನೇ ಆದಿತ್ಯವಾರ ಪೂರ್ವಾಹ್ನ ಗಂಟೆ 9.30ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಟಂಪಾಡಿ*ಯಲ್ಲಿ ‌ನಡೆಯಲಿದೆ ತಾವೆಲ್ಲರೂ ಕ್ಲಪ್ತ ಸಮಯದಲ್ಲಿ ಹಾಜರಿದ್ದು ಯಶಸ್ವಿಗೊಳಿಸಬೇಕಾಗಿ ವಿನಂತಿಸುವ - ಗೌರವಾಧ್ಯಕ್ಷರು,ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಸರ್ವಸದಸ್ಯರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ

27/07/2017

ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ನಡೆದ ನಾಗರ ಪಂಚಮಿ ಉತ್ಸವ...click by Shri Hari studio Renja

20/07/2017

ಕಾರ್ಯಕ್ರಮಕ್ಕೆ ಶುಭ ಹಾರೈಸಿದ ‌ಶಿವಾಜಿ ಪ್ರೆಂಡ್ಸ್ ಬೆಂದ್ರ್ ತೀರ್ಥ ಇರ್ದೆಯ ಪದಾಧಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ಅಭಿವಂದನೆಗಳು

17/07/2017

Timeline Photos

14/07/2017

ಆತ್ಮಿಯರೇ, ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಮ್

ಶ್ರೀ ಸಂಸ್ಥಾನಮ್ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠ ಪರಮೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶಯದಂತೆ ಉಪ್ಪಿನಂಗಡಿ ಮಂಡಲ - ಬೆಟ್ಟಂಪಾಡಿ ವಲಯದ ನೇತೃತ್ವದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇವರ ಸಹಯೋಗದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ, ವಿವೇಕ ಯುವಕ ಮಂಡಲ ಬೆಟ್ಟಂಪಾಡಿ, ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಇವರ ಸಹಕಾರದೊಂದಿಗೆ ದಿನಾಂಕ 16-07-2017ನೇ ಆದಿತ್ಯವಾರ ಪೂರ್ವಾಹ್ನ ಘಂಟೆ 9 ರಿಂದ ಮಧ್ಯಾಹ್ನ ಘಂಟೆ 1 ರವೆರಗೆ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಠಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರಗಲಿರುವುದು. ಬನ್ನಿ ರಕ್ತದಾನ ಮಾಡಿ... – ಇನ್ನೊಬ್ಬರ ಜೀವ ಉಳಿಸಿ...

--

01/07/2017

ಕಾರ್ಯಕ್ರಮಕ್ಕೆ ಆಹ್ವಾನಿಸಿ ಸ್ಥಳೀಯ ಸಂಘಸಂಸ್ಥೆಗಳಿಂದ ಬ್ಯಾನರ್ ಗಳು ಎಲ್ಲಾ ಸಂಘಸಂಸ್ಥೆಗಳ ಪದಾಧಿಕಾರಿಗಳಿಗೂ ಧನ್ಯವಾದಗಳು

01/07/2017

ಕಳೆದ 31 ವರುಷಗಳಿಂದ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ಸಾರ್ವಜನಿಕ ಶ್ರೀ ಗಣೇಶೋತ್ಸವ ತಮ್ಮೆಲ್ಲರ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದ್ದು 32 ನೇ ವರುಷದ ಸಂಭ್ರಮದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಬರುವ ಆಗಸ್ಟ್ ತಿಂಗಳ 25 ಮತ್ತು 26ರಂದು ನಡೆಸಲು ತೀರ್ಮಾನಿಸಿದ್ದು ಈಗಾಗಲೇ ಆಮಂತ್ರಣ ಪತ್ರಿಕೆ ಸಿದ್ದಗೊಂಡಿರುತ್ತದೆ. ಊರ ಪರವೂರ ಭಗವದ್ಬಕ್ತರನೆಲ್ಲಾ ಈ ವಿಜೃಂಭಣೆಯ ಕಾರ್ಯಕ್ರಮಕ್ಕೆ ಆಹ್ವಾನಿಸುವುದರ ಮುಖೇನ ತನು ಮನ ಧನಗಳ ಸಹಾಯವನ್ನು ಯಾಚಿಸುವ ಸಲುವಾಗಿ *ಆಮಂತ್ರಣ ಪತ್ರಿಕೆ ಹಂಚಿಕೆ ಅಭಿಯಾನವು* ನಾಳೆ ( *ದಿನಾಂಕ 02-07-2017ಆದಿತ್ಯವಾರ)ಬೆಳಿಗ್ಗೆ 9.30ಕ್ಕೆ ಶ್ರೀ ಕ್ಷೇತ್ರ ಬೆಟ್ಟಂಪಾಡಿಯಿಂದ* ಆರಂಭಿಸುವುದೆಂದು ನಿರ್ಣಯಿಸಿರುತ್ತೇವೆ. ತಾವೆಲ್ಲರೂ ಕ್ಲಪ್ತ ಸಮಯಕ್ಕೆ ಹಾಜರಿದ್ದು ಶ್ರೀ ಗಣೇಶ ಸ್ವಾಮಿಯ ಸೇವೆಯಲ್ಲಿ ತೊಡಗಿಸಿಕೊಳ್ಳುವರೇ ತಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ

ಶ್ರೀ ಮನಮೋಹನ ರೈ ಚೆಲ್ಯಡ್ಕ
ಗೌರವಾಧ್ಯಕ್ಷರು,
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀಕ್ಷೇತ್ರ ಬೆಟ್ಟಂಪಾಡಿ

01/07/2017

ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ ಶ್ರೀ ವಿಷ್ಣು ಬಯಲಾಟ ಸೇವಾ ಸಮಿತಿ ಇರ್ದೆ ಇದರ ಗೌರವಾಧ್ಯಕ್ಷರಿಗೆ ಅಧ್ಯಕ್ಷರಿಗೆ, ಪ್ರಧಾನ ಕಾರ್ಯದರ್ಶಿಯವರಿಗೆ ಹಾಗೂ ಸರ್ವಸದಸ್ಯರುಗಳಿಗೆ ಧನ್ಯವಾದಗಳು.

29/06/2017

ನಮ್ಮೂರ ವಿಜೃಂಭಣೆಯ ಕಾರ್ಯಕ್ರಮಕ್ಕೆ ಶ್ರೀ ಕ್ಷೇತಕ್ಕೆ ಆತ್ಮೀಯ ಸ್ವಾಗತ....

Want your organization to be the top-listed Non Profit Organization in Puttur?
Click here to claim your Sponsored Listing.

Videos (show all)

ರಂಗಪೂಜೆ

Telephone

Website

Address


Shri Mahalingeshwara Temple Bettampady
Puttur
574259

Other Community Organizations in Puttur (show all)
Udpf Udpf
Vepagunta
Puttur

united dhalith people federation

Team NSS GFGC Bettampady Team NSS GFGC Bettampady
Puttur

Not me, but you

AK Reasearch MEDIA Ujirbettu AK Reasearch MEDIA Ujirbettu
Uppinangady To Kakyapadav Road, Neelagiri, Ujirbettu
Puttur, 574326

PFI Puttur PFI Puttur
Puttur, 574201

Naya Karavan Naya Hindustan

Mogera sampada-ಮೊಗೇರ ಸಂಪದ Mogera sampada-ಮೊಗೇರ ಸಂಪದ
Puttur, 574221

ಮೊಗೇರ ಸಂಪದ ಮಾಧ್ಯಮವು ಮೊಗೇರ ಸಮುದಾಯದ ಏಕೈಕ ಜಾಲತಾಣವಾಗಿದೆ. https://mogerasampada.in

Indian Medical Association - Puttur Indian Medical Association - Puttur
Sharada Nethralaya
Puttur, 574201

The Indian Medical Association (IMA), the trade union of Doctors - Puttur Branch

Sietk Ece LE's Unity Club Sietk Ece LE's Unity Club
Siddarth Institute Of Ingineering And Technology
Puttur

hii frnds.. this our letaral entry(LE) unity club. this is our page. idi mana adda

SSF Puttur Town unit SSF Puttur Town unit
Puttur, 574201

Sunni Students' federation is a pioneer Islamic student's organization in southern India

ABVP Puttur ABVP Puttur
Puttur

ABVP-worlds largest student organization

Rotaract RI District 3181 Rotaract RI District 3181
Puttur

Rotaract District 3181 covering the revenue districts like Mangalore, Coorg, Mysuru and Chamarajanagar. The district has 4 zones Chamundi, Kaveri, Canara & Karavali Zone which toge...