Dr T H Lavakumar

Actor ,Director and a playwright interested in literature art and music

14/04/2024

ಕವಿತೆ : ಭೀಮಯಾನ

ಈ ದೇಶದಲ್ಲಿ ಈಗೀಗ
ರಸ್ತೆ ಬದಿಯ ಹೂಗಳೆಲ್ಲ
ಮುಗುಳ್ನಗುತ್ತ ಶುಭಾಶಯ ತಿಳಿಸುತ್ತಿವೆ
ನೆಲಕ್ಕುರುಳಿದ ಮೊಗ್ಗುಗಳೆಲ್ಲ
ಇತಿಹಾಸದ ಆಕರಗಳಾಗುತ್ತಿವೆ
ನಿಧಾನಕ್ಕೆ ತಾಳೆ ಗರಿಗಳ ಪಿತೂರಿಗಳು
ಗರ್ಭಗುಡಿಯ ಮಸಲತ್ತುಗಳೆಲ್ಲ ಅರಿವಾಗತೊಡಗಿವೆ
ಅಂಬೇಡ್ಕರ್ ಅಂದರೆ ಸುಗಂಧ ಬೀರುವ ಹೂ

ಒಡನಾಡಿ ಪಡೆದ ತಿಳಿವು
ಅರಿವಾಗಿ ಬೆಳಕಾಗುವ ಸೋಜಿಗಕ್ಕೆ
ಮುಂಜಾನೆಯ ಮೋಡಗಳು ಆಪ್ತವೆನಿಸುತ್ತವೆ
ಪುಟ್ಟ ಮಗುವಿನ ತಟ್ಟೆಯ ಅನ್ನದಲ್ಲಿರುವ
ರಕ್ತದ ಕಲೆಗಳೂ ಅರಿವಾಗುತ್ತಿವೆ
ಅಂಬೇಡ್ಕರ್ ಅಂದರೆ ಬೆವರಿಂದ ಬೆಂದ ಅನ್ನ

ಯಾರದೋ ದುಃಖ ನನ್ನದೂ ಆಗುತ್ತದೆ
ನನ್ನವರು ಹೊಡೆದ ಕಲ್ಲು ನನಗೇ ತಾಗುತ್ತದೆ
ಹಾದಿ ಬೀದಿಗಳಲ್ಲಿ ಆಗುವ ಅವಮಾನಗಳಿಗೆ
ನಾನೂ ಹೊಣೆಗಾರನಲ್ಲವೆ ಅನ್ನಿಸುತ್ತದೆ
ಅಂಬೇಡ್ಕರ್ ಅಂದರೆ ಜವಾಬ್ದಾರಿ

ಎದುರಿರುವವನು ಅಸಡ್ಡೆ ತೋರಿದಾಗ
ನನ್ನ ದುಡಿಮೆಯನ್ನು ಅಲ್ಲ ಗಳೆದಾಗ
ಪ್ರತಿ ಕ್ಷಣ ನನ್ನನ್ನೇ ನಾನು ಪ್ರೂವ್ ಮಾಡಬೇಕಾದಾಗ
ಅವರ ಅಸಹಾಯಕತೆ ನೋಡಿ ನಕ್ಕುಬಿಡುತ್ತೇನೆ
ಅಂಬೇಡ್ಕರ್ ಎಂದರೆ ಸ್ವಾಭಿಮಾನ

ಬರೆಯುತ್ತೇನೆ ಹಾಡುತ್ತೇನೆ ಕುಣಿಯುತ್ತೇನೆ
ಹೊಟ್ಟೆ ಬಿರಿಯುವಷ್ಟು ಉಣ್ಣುತ್ತೇನೆ
ಆಗಸದಲ್ಲಿ ಹಾರಾಡುತ್ತೇನೆ
ನೆಲದಾಳಕ್ಕೂ ಇಳಿಯುತ್ತೇನೆ
ಅಳುತ್ತೇನೆ ನಗುತ್ತೇನೆ ಕೂಡಿ ಉಣ್ಣುತ್ತೇನೆ
ಯಾಕೆಂದರೆ ನಾನೀಗ ಭೀಮಭಾರತದ
ಹೆಮ್ಮೆಯ ಕೂಸು

ರಚನೆ : ಡಾ.ಲವಕುಮಾರ್ ತಿಪ್ಪೂರು

Photos from Dr T H Lavakumar's post 01/03/2024

ನಾಳೆ ದಾರವಾಡದಲ್ಲಿ ಸಿಗೋಣ . . ಬಯಲು ಬಳಗ , ಶ್ರಮಣ ಸಂಸ್ಕೃತಿ ಟ್ರಸ್ಟ್ (ರಿ) ತಿಪ್ಪೂರು .ದೊಡ್ಡಬಳ್ಳಾಪುರ ತಾಲೂಕು ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದ ಈ ಶಿಭಿರ ಕೇವಲ ಸೀಮಿತ ಸಂಖ್ಯೆ ಆಗಿರೋದರಿಂದ ಮೊದಲು ರೆಜಿಸ್ಟರ್ ಮಾಡಿಸಿದವರಿಗೆ ಮಾತ್ರ ಅವಕಾಶ. ಆದರೆ ಇಲ್ಲಿನ ಮಾತುಕತೆ ನಮ್ನ ಯೂಟ್ಯೂಬಲ್ಲಿ ಸಿಗತ್ತೆ .

21/02/2024

ನನಗೆ ಅನೇಕರು ನಿಮ್ಮ ನಾಟಕತಂಡ ಹಶ್ಮಿ ಥಿಯೇಟರ್ ಫೋರಂ ಯುವಜನರನ್ನು ಸಭೆಗೆ , ಸಂಘಟನೆಗೆ ಅಥವಾ ರಾಜಕಾರಣಕ್ಕೆ ಕಳಿಸಲು ಕೇಳುತ್ತಾರೆ . ಆದರೆ ಅವರು ಅಪ್ಪಿ ತಪ್ಪಿಯೂ ನಾವು ಮಾಡುವ ಚಟುವಟಿಕೆಗಳಲ್ಲಿ ಭಾಗವಹಿಸಲ್ಲ.

ಬೆಂಗಳೂರಿನ ಯಾವುದೇ ಕ್ರಾಂತಿಕಾರಿ , ಪ್ರಗತಿಪರ ಅಥವಾ ಇನ್ನಿತರೇ ವಾದಿಗಳೂ ಸಾಹಿತಿಗಳು ಎಲ್ಲರೂ ಈ ವಿಚಾರದಲ್ಲಿ ಒಂದೇ . ಕೆಲವರು exception ಇರ್ತಾರೆ. ಒಮ್ಮೊಮ್ಮೆ ಇದು ಬೇಸರ ತರಿಸುತ್ತೆ ಆದರೆ ನಮ್ಮ ಯುವಜನರ ಪ್ರೀತಿ ನನ್ನನ್ನೂ ಮುನ್ನಡೆಸುತ್ತಲೇ ಇರುತ್ತದೆ.

21/02/2024

Today Today Today - Plat Woyzeck In SJCC pls do come . ಇವತ್ತು ಇಂಗ್ಲಿಷ್ ನಾಟಕ ' ಓಯ್ ಜೆಕ್' ಬನ್ನಿ

31/01/2024

ದಕ್ಷಿಣ ಏಷ್ಯಾ ಕಥೆಗಳು - ಸಿನಿಮಾ ಉತ್ಸವ

ಬಾಂಗ್ಲಾದೇಶ, ಭೂತಾನ, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗು ಶ್ರೀಲಂಕಾ ದೇಶಗಳ ಜನಬದುಕಿನ ಕಥೆ ಕೇಳಲು ಜೊತೆಯಾಗಿ .
ಶ್ರಮಣ ಸಂಸ್ಕೃತಿ ಟ್ರಸ್ಟ್ (ರಿ) ಇದರ ಭಾಗವಾಗಿ ಕೆಲಸ ಮಾಡ್ತಿದೆ .ನಿಮ್ಮ ಪ್ರೀತಿ ಇರಲಿ.

Southasian Stories: Bridging Boundaries of Nation and Gender

13th - 15th February 2024,
St Joseph’s College of Commerce, Brigade road, Bengaluru

The film festival interspersed with panel discussions believes that documentaries are a powerful medium that contribute immensely to prompting introspection and creative initiatives to bring about change at the local, national and regional level. Notions of belonging and nationhood, gender and identity, personal longing and societal taboos are the threads that weave the fabric of our region. The selected films will be both national and international documentaries that seek to entertain and educate, make us laugh and weep, question and hope.

Join us on a journey that transcends boundaries, challenges perspectives, and celebrates the diverse narratives of our shared human experience.

This is a non-ticketed event and will be open to the public.

Registration link in the bio

In collaboration with

19/01/2024

ಅಂಬೇಡ್ಕರ್ ವಾದ ಪತ್ರಿಕೆಯಲ್ಲಿ ನನ್ನದೊಂದು ಕವಿತೆ ಹಾಕಿದಾರೆ ನಮ್ಮ ಮಾಮ Ravikumar Bagi . Thank you Appi .

12/01/2024

ಬುದ್ದ , ಬಸವ , ವಿವೇಕಾನಂದ , ಗಾಂಧಿ , ಅಂಬೇಡ್ಕರ್ ಒಂದೇ ಮರದ ಆದರೆ ಹಲವು ವೈವಿದ್ಯಗಳ ಹೂಗಳು . ಅವರನ್ನು ನಾನು ಎಂದೂ ಕಿತ್ತು ದೇವರಿಗೆ ಅರ್ಪಿಸುವುದಿಲ್ಲ ಆದರೆ ನನ್ನೊಳಗೆ ನೆನಪಾಗಿ , ಅರಿವಾಗಿ ಇಟ್ಟುಕೊಳ್ಳುತ್ತೇನೆ.

ನಾನು ಎಡವಿದಾಗ ಅವರು ತಾವೇ ಸ್ವತಃ ಬಂದು ನನ್ನ ಮುನ್ನಡೆಸುತ್ತಾರೆ ಅವರು ವಿಚಾರ ಮತ್ತು ಬದುಕಿನಿಂದ.
ಎಲ್ಲರಿಗೂ ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳು .

Photos from Dr T H Lavakumar's post 10/01/2024

ಬಯಲು ಬಳಗ ಮತ್ತು ಶ್ರಮಣ ಸಂಸ್ಕೃತಿ ಟ್ರಸ್ಟ್ (ರಿ) ನಡೆಸುತ್ತಿರುವ ವಿಚಾರ ಸಂಕಿರಣದ ಆಮಂತ್ರಣ . ಈ ರೀತಿಯ ನಿರಂತರ ಶಿಭಿರಗಳು ಈ ವರ್ಷದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಮಾಡುತ್ತಿದ್ದೇವೆ . ಸದ್ಯ ಇದು ಮೈಸೂರು ಭಾಗದ ಕಾರ್ಯಕ್ರಮ . ಕರ್ನಾಟಕದಲ್ಲಿ ಪ್ರಗತಿಪರ ಆಲೋಚನೆ ಇರುವ ಮತ್ತು ಸಕ್ರಿಯವಾಗಿ ಚಟುವಟಿಕೆ ಮಾಡುತ್ತಿರುವ ಅನೇಕರನ್ನು ಒಳಗೊಂಡು ಕಾರ್ಯಕ್ರಮ ರೂಪಿಸೋಣ ಜತೆ ಇರಿ .ಮತ್ತು ಮುಂದಿನ ಚಟುವಟಿಕೆಗಳಿಗೆ ನಿಮ್ಮ ಮಾರ್ಗದರ್ಶನ ಇರಲಿ.

04/01/2024

ಶನಿವಾರ ಬನ್ನಿ

03/01/2024

****ಮಾಟಗಾತಿ ಸಾವಿತ್ರಿ****

ಅಲ್ಲೆಲ್ಲೋ ಮೂಲೆಯಲಿ ಬಿದ್ದಿದ್ದ
ಸ್ವರ ವ್ಯಂಜನಗಳ ಕೂಡಿಸಿ ಅಕ್ಷರವ ಮಾಡಿದೆ.

ಬೀದಿ ರೌಡಿಗಳಿಂದ ಅವನ್ನು ಜತನ ಮಾಡಿ
ಕಾವು ಕೊಟ್ಟು ಪದ ಮಾಡಿದೆ

ಕತ್ತಲಲ್ಲಿ ಮುದುಡಿ ಕೂತ ಹಕ್ಕಿ ಪಕ್ಷಿಗಳಿಗೆ
ಪದ ಪದ ಸೇರಿಸಿ ಹಾಡು ಕಟ್ಟುವುದ ಕಲಿಸಿದೆ

ಈಗ ಕೇಳು ....
ಕೊರಳುಗಳು ಮಾತ್ರವಲ್ಲ
ರೆಂಬೆಕೊಂಬೆಗಳಲ್ಲೂ , ಎಲೆ ಎಲೆಗಳಲ್ಲೂ
ಸ್ವಾತಂತ್ರದ ಹಾಡು ಕೇಳಿಸುತ್ತಿದೆ.

ನನಗೀಗ ಅರ್ಥವಾಗುತ್ತಿದೆ ಅವರೇಕೆ
ನೀನು ನಡೆವ ದಾರಿಗೆ ಮುಳ್ಳಾಕುತ್ತಿದ್ದರು
ಮರೆಯಲ್ಲಿ ನಿಂತು ಅಕ್ಷರದ ಬುಟ್ಟಿಗೆ ಕಲ್ಲಾಕುತ್ತಿದ್ದರೆಂದು.

ಚಲಗಾತಿ ನೀನು ಅಳುತ್ತಾ ಬುಟ್ಟಿ ಇಳಿಸಲಿಲ್ಲ
ಕೂಗಾಡಿ ರಂಪಮಾಡಿ ಉದ್ದೇಶ ಬಿಡಲಿಲ್ಲ.

ಕಾಳು ಕಡಿ ಅನ್ನ ಬಟ್ಟೆ ಮಾತ್ರ ನೋಡದೆ
ಮಕ್ಕಳಿಗೆ ಹಾರಲು ಹಾಡಲು ಕಲಿಸಿದೆ.

ಈಗ ನೋಡು .....
ನೂರು ದಿಕ್ಕುಗಳಿಂದ ಬೆಳಕು ಸ್ವತಃ ಅರಸಿಕೊಂಡು ಬರುತ್ತಿದೆ
ಬೀದಿನಾಯಿಗಳಿಗೂ ಅವರು ಹೆದರುವ ಸ್ಥಿತಿ ಬಂದಿದೆ.

ಎಲ್ಲರಿಗೂ ಗೊತ್ತಾಗುತ್ತಿದೆ ಈಗ
ಅವರೇಕೆ ಭಜನೆ ಮಾಡಿಸುತ್ತಿದ್ದರು
ಭಕ್ತಿಯ ಉನ್ಮತ್ತತೆ ಹತ್ತಿಸುತ್ತಿದ್ದರೆಂದು.

ಮಾಟಗಾತಿ ನೀನು ದಂಡವನ್ನು ಬಿಡಲಿಲ್ಲ
ಅನಗತ್ಯ ಕಾಲಹರಣ ಮಾಡಲಿಲ್ಲ.

ಅ ಆ ಇ ಈಗಳ ಮಂತ್ರಗಳನ್ನು
ಎದೆಗಳೊಳಗೆ ನಾಟಿ ಮಾಡಿದೆ.

ನೋಡು ನೋಡದೋ ಎಲ್ಲೆಲ್ಲೂ ಅಕ್ಷರ ಸಂಕ್ರಾಂತಿ
ಪ್ರತಿ ಎದೆಗಳಲ್ಲೂ ಉರಿಕಂಡಾಯ.

--- ಡಾ.ಲವಕುಮಾರ್ ತಿಪ್ಪೂರು

ದೇಶದ ಮೊದಲ ಶಿಕ್ಷಕಿ ಮಾತೆ ಸಾವಿತ್ರಿ ಬಾಪುಲೆ .ಇಂದು ಆ ಮಾತಾಯಿಯ ಹುಟ್ಟು ಹಬ್ಬ OBC ರೈತಾಪಿ ಮಾಲಿ ಸಮುದಾಯದಲ್ಲಿ ಹುಟ್ಟಿ .ಅಕ್ಷರ ಕಲಿತು ಜ್ಯೋತಿಬಾ ಪುಲೆಯ ಆಶಯವನ್ನು ಮುಂದುವರೆಸಿದೆ ಮಹಾಮಾತೆ . ಇಂದು ಅವಳ ಜನುಮ ದಿನ .

28/08/2023

ಆಣೆ ಪ್ರಮಾಣಗಳ ಭರಾಟೆಯಲ್ಲಿ ಸತ್ಯ ಕಾಣೆಯಾಗದಿರಲಿ . ಕಾನೂನು ಬಲಗೊಳ್ಳಲಿ .ಸೌಜನ್ತಾಗೆ ನಾ್ಯಾಯ ಸಿಗಲಿ.

22/08/2023

ನಾಳಿನ ಈ ಮಹತ್ವದ ಸಭೆಗೆ ಬನ್ನಿ.ನಾಡಿನ ಭವಿಷ್ಯದ ಕುರಿತು ಮಾತಾಡೋಣ.

20/08/2023

ನಾಡಿನ ಭವಿಷ್ಯ ರೂಪಿಸುವ ಮಹಾಮನೆ ನಮ್ಮ ಶಾಲೆ. ಸಮಸಮಾಜ ನಿರ್ಮಾಣ ಸಮಾನ ಶಿಕ್ಷಣದಿಂದಲೇ ಶುರುವಾಗಬೇಕು. ಬನ್ನಿ ನಾಡಿನ ಶೈಕ್ಷಣಿಕ ಆರೋಗ್ಯ ಕುರಿತು ಮಾತಾಡೋಣ ಬನ್ನಿ.

15/08/2023
Photos from Dr T H Lavakumar's post 05/08/2023

ಹಶ್ಮಿ ಥಿಯೇಟರ್ ಫೋರಂನ ಯುವಜನರ ಜೊತೆ ಈ ವರ್ಷದ ಪಯಣ ಶುರು. ನಮ್ಮ ಜತೆ ಇದ್ದು ಯುವಜನರ ಸಕ್ರಿಯ ಬದುಕು ಮತ್ತು ವೈಚಾರಿಕ ಚಿಂತನೆಯ ಮಹತ್ವದ ಕುರಿತು ಅದ್ಬುತವಾಗಿ ಮಾತಾಡಿದ ಸೌಮ್ಯಾ ರೆಡ್ಡಿ ಅವರು ನಮ್ಮ ಜತೆಯಾಗಿದ್ದು ಇವತ್ತಿನ ವಿಶೇಷ .

Top three contenders of Deccan Herald Inter-Collegiate Theatre Fete 2017 06/01/2023

Hashmi In Deccan Herald fest few years ago

Top three contenders of Deccan Herald Inter-Collegiate Theatre Fete 2017 In a spectacular show of talent, three colleges were selected from the audition round of the DH Inter-Collegiate Theatre Fete. St Joseph's College of Commerc...

26/06/2021

*Call for Actors*
*ಶ್ರಮಣ ಸಂಸ್ಕೃತಿ* ರಂಗ ತಂಡದ ವತಿಯಿಂದ
ಬೆಂಗಳೂರು ನಗರದಲ್ಲಿ *ಕೋವಿಡ್ vaccine* ಕುರಿತ ಅರಿವಿನ ಜಾಥಾ ಮಾಡಲು ಯೋಜಿಸುತ್ತಿದ್ದೇವೆ . ಆಸಕ್ತಿ ಇರುವ ಕಲಾವಿದರು ಸಂಪರ್ಕಿಸಿ .
ರೈಗಾ ಥಾಮಸ್ : +919632340682
ಡಾ.ಲವಕುಮಾರ್ ತಿಪ್ಪೂರು 9902100881. [email protected]

Dr T H Lavakumar Send a message to learn more

Crazy Dance for Moody Kids 01/06/2021

Crazy Dance for Moody Kids Crazy Dance for Moody Kids . No school , No going out ..Don't worry let's Dance

04/01/2020

Let's meet up for the release of books by Manjunatha Adde sir and mine
Tomorrow at 5 PM in Nayana Auditorium ,Next to Ravindra Kalakshetra near townhall on 5th Jan

Want your establishment to be the top-listed Arts & Entertainment in Bangalore?
Click here to claim your Sponsored Listing.

Category

Website

Address


Bangalore
560002

Other Theaters in Bangalore (show all)
William Joseph International Academy of Performing Arts William Joseph International Academy of Performing Arts
# 6 3rd Cross Behind Ashoka Residency 6th Block Koramangala
Bangalore, 560034

Dedicated to the education, performance and promotion of the Performing Arts - Music, Dance & Theatr

RANGASHANKARA RANGASHANKARA
36/2 8th Cross II Phase J P Nagar
Bangalore, 560078

Welcome to the official Ranga Shankara space on Facebook. THEATRE ALIVE! www.rangashankara.org

Being With Us Entertainment Being With Us Entertainment
1752, 9th Main, 4th D Cross, HAL 3rd Stage
Bangalore, 560075

Stage Bengaluru Stage Bengaluru
Vijayanagar
Bangalore, 560040

Theatre and Arts for Genuine Entertainment ��

Talab Talab
Bannerghatta Main Road
Bangalore

Talab, a not-for-profit theatre company, is committed to promoting theatre originals with varied emotions and principles and developing engaging Indian stories that connect with a ...

A Bagful Of Creators A Bagful Of Creators
Bangalore

This is a festival showcases the creative ambition of artists from a diverse range of genres and pro

mallu jamkhandi comedy mallu jamkhandi comedy
Mugalkhod
Bangalore, 591235

criater

Utthita KalaaTanda - ಉತ್ಥಿತ ಕಲಾತಂಡ Utthita KalaaTanda - ಉತ್ಥಿತ ಕಲಾತಂಡ
Bangalore

After being immersed in the theatre for many years and even while being involved in the small and big screen, a team built by friends without cutting the ties with the theatre is U...

Arjun Sajnani Arjun Sajnani
Bangalore, 5600025

Arjun Sajnani is a reputed director of theatre and film.

Bengaluru Short Play Festival Bengaluru Short Play Festival
No 10, 24th Main, Opposite Sri Vathsalya Girinagar T Block
Bangalore, 560085

Bengaluru Short Play Festival (BSPF) was started to set up a platform to stage short yet impactful plays and bring in the theatre fraternity together. BSPF is organized by Pravara...

Theatre For All Theatre For All
No: 18, Victoria Street, 4th Main
Bangalore, 560047

The objectives of Stage drama training for school children are to help them lose inhibitions and dev

Helen O' Grady International- NAVARASA,North Bengaluru Helen O' Grady International- NAVARASA,North Bengaluru
No. 11, Third Floor, 18th Cross, 11th Main Road, Raghavendra Layout, Kammagondanahalli, Jalahalli West
Bangalore, 560015

We offer personal development programmes for children, adolescents and adults, furthering the follow